ಅರ್ಧಶತಕ ಬಾರಿಸಿ ಸಚಿನ್ ವಿಶ್ವ ದಾಖಲೆ ಸನಿಹ ಬಂದ ಜೋ ರೂಟ್
Joe Root: ರೂಟ್ ಈ ಟೆಸ್ಟ್ ಪಂದ್ಯದಲ್ಲಿ ಕನಿಷ್ಠ 151 ರನ್ ಗಳಿಸುವಲ್ಲಿ ಯಶಸ್ವಿಯಾದರೆ, ಟೆಸ್ಟ್‌ನಲ್ಲಿ 14,000 ರನ್ ಗಳಿಸಿದ ವಿಶ್ವದ ಎರಡನೇ ಬ್ಯಾಟ್ಸ್‌ಮನ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಲಿದ್ದಾರೆ. ಇಲ್ಲಿಯವರೆಗೆ, ಟೆಸ್ಟ್‌ನಲ್ಲಿ 14,000 ಕ್ಕೂ ಹೆಚ್ಚು ರನ್ ಗಳಿಸಿದ ವಿಶ್ವದ ಏಕೈಕ ಕ್ರಿಕೆಟಿಗ ತೆಂಡೂಲ್ಕರ್ ಮಾತ್ರ.
Joe Root -
ಸಿಡ್ನಿ. ಜ.4: ಆಸ್ಟ್ರೇಲಿಯಾ ವಿರುದ್ಧದ ಐದನೇ ಹಾಗೂ ಅಂತಿಮ ಟೆಸ್ಟ್ ಪಂದ್ಯದ ಮೊದಲ ದಿನದಾಟದಲ್ಲಿ ಅರ್ಧಶತಕ ಬಾರಿಸಿದ ಇಂಗ್ಲೆಂಡ್ ತಂಡದ ಜೋ ರೂಟ್(Joe Root) ಅವರು ದಿಗ್ಗಜ ಸಚಿನ್ ತೆಂಡೂಲ್ಕರ್(Sachin Tendulkar) ಅವರ ದಾಖಲೆಯೊಂದನ್ನು ಮುರಿಯವ ಸನಿಹಕ್ಕೆ ಬಂದು ನಿಂತಿದ್ದಾರೆ.
ಇಂಗ್ಲೆಂಡ್ ಪರ ಟೆಸ್ಟ್ ಕ್ರಿಕೆಟ್‌ನಲ್ಲಿ 67 ನೇ ಅರ್ಧಶತಕ ದಾಖಲಿಸಿದ ಜೋ ರೂಟ್ ಟೆಸ್ಟ್ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ಅರ್ಧಶತಕ ಗಳಿಸಿದ ಬ್ಯಾಟ್ಸ್‌ಮನ್‌ಗಳ ಪಟ್ಟಿಯಲ್ಲಿ 2 ನೇ ಸ್ಥಾನ್ಕೇರಿದರು. ಭಾರತದ ದಂತಕಥೆ ಸಚಿನ್ ತೆಂಡೂಲ್ಕರ್ ಅಗ್ರಸ್ಥಾನದಲ್ಲಿದ್ದಾರೆ.
ನವೆಂಬರ್ 1989 ರಿಂದ ನವೆಂಬರ್ 2013 ರವರೆಗೆ ಭಾರತ ಪರ 200 ಟೆಸ್ಟ್ ಪಂದ್ಯಗಳನ್ನು ಆಡಿರುವ ಸಚಿನ್, 51 ಶತಕಗಳ ಜೊತೆಗೆ 68 ಅರ್ಧಶತಕಗಳನ್ನು ಬಾರಿಸಿದ್ದಾರೆ. ಮತ್ತೊಂದೆಡೆ, ರೂಟ್ ಈಗ 163 ಟೆಸ್ಟ್ ಪಂದ್ಯಗಳಲ್ಲಿ 67 ಅರ್ಧಶತಕ ಮತ್ತು 40 ಶತಕಗಳನ್ನು ಗಳಿಸಿದ್ದಾರೆ. ಇನ್ನೊಂದು ಅರ್ಧಶತಕ ಬಾರಿಸಿದರೆ ಸಚಿನ್ ದಾಖಲೆ ಸರಿಗಟ್ಟಲಿದ್ದಾರೆ.
ರೂಟ್ ಈ ಟೆಸ್ಟ್ ಪಂದ್ಯದಲ್ಲಿ ಕನಿಷ್ಠ 151 ರನ್ ಗಳಿಸುವಲ್ಲಿ ಯಶಸ್ವಿಯಾದರೆ, ಟೆಸ್ಟ್‌ನಲ್ಲಿ 14,000 ರನ್ ಗಳಿಸಿದ ವಿಶ್ವದ ಎರಡನೇ ಬ್ಯಾಟ್ಸ್‌ಮನ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಲಿದ್ದಾರೆ. ಇಲ್ಲಿಯವರೆಗೆ, ಟೆಸ್ಟ್‌ನಲ್ಲಿ 14,000 ಕ್ಕೂ ಹೆಚ್ಚು ರನ್ ಗಳಿಸಿದ ವಿಶ್ವದ ಏಕೈಕ ಕ್ರಿಕೆಟಿಗ ತೆಂಡೂಲ್ಕರ್ ಮಾತ್ರ.
ಸಿಡ್ನಿಯಲ್ಲಿ ನಡೆದ 2025-26ರ ಆಶಸ್ ಸರಣಿಯ ಐದನೇ ಮತ್ತು ಅಂತಿಮ ಟೆಸ್ಟ್ ಪಂದ್ಯದ 1ನೇ ದಿನದಂದು ಇಂಗ್ಲೆಂಡ್ ಟೆಸ್ಟ್ ನಾಯಕ ಬೆನ್ ಸ್ಟೋಕ್ಸ್ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ನಂತರ ರೂಟ್ ಇಂಗ್ಲೆಂಡ್ ಪರ 4ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಲು ಬಂದರು. 92 ಎಸೆತಗಳಲ್ಲಿ 78 ರನ್ ಗಳಿಸಿ ಬ್ಯಾಟಿಂಗ್ ಮಾಡುತ್ತಿರುವ ಹ್ಯಾರಿ ಬ್ರೂಕ್ ಅವರೊಂದಿಗೆ ನಾಲ್ಕನೇ ವಿಕೆಟ್‌ಗೆ 192 ಎಸೆತಗಳಲ್ಲಿ 154 ರನ್ ಸೇರಿಸಿದ್ದಾರೆ. ರೂಟ್ ಅಜೇಯ 72 ರನ್ ಗಳಿಸಿದ್ದಾರೆ.
ರೂಟ್, ಬ್ರೂಕ್ ಅರ್ಧಶತಕ; ಮೊದಲ ದಿನವೇ ಹಿಡಿತ ಸಾಧಿಸಿದ ಇಂಗ್ಲೆಂಡ್
ಆಸ್ಟ್ರೇಲಿಯಾದ ಆಲ್-ಪೇಸ್ ದಾಳಿಯನ್ನು ಸಮರ್ಥವಾಗಿ ಎದುರಿಸಿದ ವಿಶ್ವದ ಅಗ್ರ ಎರಡು ಶ್ರೇಯಾಂಕಿತ ಬ್ಯಾಟ್ಸ್‌ಮನ್‌ಗಳಾದ ರೂಟ್ ಮತ್ತು ಬ್ರೂಕ್ ಇಂಗ್ಲೆಂಡ್ ತಂಡವನ್ನು ರಕ್ಷಿಸಿದರು ಮತ್ತು ಮೇಲುಗೈ ಸಾಧಿಸಿದರು. ಉಭಯ ಆಟಗಾರರು ಅರ್ಧಶತಕ ಬಾರಿಸಿ ದ್ವಿತೀಯ ದಿನಕ್ಕೆ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ.