ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ವಿಜಯ್ ಹಜಾರೆ ಕರ್ನಾಟಕ ತಂಡದಲ್ಲಿ ಸ್ಥಾನ ಪಡೆದ ರಾಹುಲ್, ಪ್ರಸಿದ್ಧ್‌ ಕೃಷ್ಣ

Karnataka squad for Vijay Hazare Trophy: ಕರ್ನಾಟಕ ತಂಡವನ್ನು ಮಯಂಕ್ ಅಗರ್ವಾಲ್‌ ಮುನ್ನಡೆಸುವರು. ಕರುಣ್‌ ನಾಯರ್‌ ಉಪನಾಯಕನಾಗಿದ್ದಾರೆ. ಅನುಭವಿ ಆಟಗಾರ ಕರುಣ್ ನಾಯರ್ ಉಪನಾಯಕರಾಗಿದ್ದಾರೆ. ಇಬ್ಬರು ವಿಕೆಟ್‌ಕೀಪರ್‌ಗಳಾದ ಕೆ.ಎಲ್. ಶ್ರೀಜಿತ್ ಮತ್ತು ಬಿ.ಆರ್. ಶರತ್ ಅವರಿಗೂ ಸ್ಥಾನ ನೀಡಲಾಗಿದೆ.

ವಿಜಯ್ ಹಜಾರೆ ಟ್ರೋಫಿ ಆಡಲಿರುವ ರಾಹುಲ್, ಪ್ರಸಿದ್ಧ್‌ ಕೃಷ್ಣ

KL Rahul -

Abhilash BC
Abhilash BC Dec 18, 2025 9:12 AM

ಬೆಂಗಳೂರು, ಡಿ.18: ಅಂತರರಾಷ್ಟ್ರೀಯ ಪಂದ್ಯಗಳು ಇಲ್ಲದ ಸಂದರ್ಭದಲ್ಲಿ ದೇಶಿ ಟೂರ್ನಿಗಳಲ್ಲಿ ಆಡುವುದನ್ನು ಭಾರತ ತಂಡದ ಆಟಗಾರರಿಗೆ ಬಿಸಿಸಿಐ ಕಡ್ಡಾಯಗೊಳಿಸಿದ ಬೆನ್ನಲ್ಲೇ ಕೆ.ಎಲ್. ರಾಹುಲ್(KL Rahul) ಮತ್ತು ವೇಗಿ ಪ್ರಸಿದ್ಧ್‌ ಕೃಷ್ಣ(Prasidh Krishna) ವಿಜಯ್ ಹಜಾರೆ ಟ್ರೋಫಿ(Vijay Hazare Trophy) ಏಕದಿನ ಕ್ರಿಕೆಟ್ ಟೂರ್ನಿಯಲ್ಲಿ ಆಡಲು ನಿರ್ಧರಿಸಿದ್ದಾರೆ. ಅಹಮದಾಬಾದಿನಲ್ಲಿ ಇದೇ 24ರಿಂದ ಆರಂಭವಾಗಲಿರುವ ಟೂರ್ನಿಯ ಕರ್ನಾಟಕ ತಂಡದಲ್ಲಿ ಸ್ಥಾನ ಪಡೆದಿದ್ದಾರೆ.

ಉಭಯ ಆಟಗಾರರು ಇತ್ತೀಚೆಗಷ್ಟೇ ದಕ್ಷಿಣ ಆಫ್ರಿಕಾ ಎದುರಿನ ಏಕದಿನ ಸರಣಿಯಲ್ಲಿ ಭಾರತ ತಂಡದಲ್ಲಿ ಆಡಿದ್ದರು. ವಿಜಯ್ ಹಜಾರೆಯ ಕೆಲವು ಪಂದ್ಯಗಳಿಗೆ ಲಭ್ಯರಾಗುವ ಸಾಧ್ಯತೆ ಇದೆ. ಕರ್ನಾಟಕ ತಂಡವನ್ನು ಮಯಂಕ್ ಅಗರ್ವಾಲ್‌ ಮುನ್ನಡೆಸುವರು. ಕರುಣ್‌ ನಾಯರ್‌ ಉಪನಾಯಕನಾಗಿದ್ದಾರೆ. ಅನುಭವಿ ಆಟಗಾರ ಕರುಣ್ ನಾಯರ್ ಉಪನಾಯಕರಾಗಿದ್ದಾರೆ. ಇಬ್ಬರು ವಿಕೆಟ್‌ಕೀಪರ್‌ಗಳಾದ ಕೆ.ಎಲ್. ಶ್ರೀಜಿತ್ ಮತ್ತು ಬಿ.ಆರ್. ಶರತ್ ಅವರಿಗೂ ಸ್ಥಾನ ನೀಡಲಾಗಿದೆ.

ಈ ವರ್ಷದ ಆರಂಭದಲ್ಲಿ ಆಸ್ಟ್ರೇಲಿಯಾದಲ್ಲಿ ಭಾರತ ತಂಡವು ನಿರಾಶಾದಾಯಕ ಟೆಸ್ಟ್ ಸರಣಿಯನ್ನು ಸೋತ ನಂತರ ನಡೆಸಿದ ಪರಿಶೀಲನೆಯ ಶಿಫಾರಸುಗಳೊಂದಿಗೆ ಈ ಕ್ರಮವು ಹೊಂದಿಕೆಯಾಗುತ್ತದೆ. ಆಟಗಾರರು ಉತ್ತಮ ಸ್ಥಿತಿಯಲ್ಲಿರುವುದನ್ನು ಖಚಿತಪಡಿಸಿಕೊಳ್ಳಲು ಎಲ್ಲಾ ಸ್ವರೂಪಗಳ ದೇಶೀಯ ಕ್ರಿಕೆಟ್‌ಗೆ ಹೆಚ್ಚಿನ ಒತ್ತು ನೀಡುವ ಮಹತ್ವವನ್ನು ವಿಮರ್ಶೆಯು ಒತ್ತಿಹೇಳಿತ್ತು.

ಇದನ್ನೂ ಓದಿ IND vs SA: ನಾಲ್ಕನೇ ಟಿ20ಐ ಪಂದ್ಯದಿಂದ ಶುಭಮನ್‌ ಗಿಲ್‌ ಔಟ್‌! ಕಾರಣ ಇಲ್ಲಿದೆ ನೋಡಿ..

ಕರ್ನಾಟಕ ತಂಡ

ಮಯಂಕ್ ಅಗರ್ವಾಲ್‌ (ನಾಯಕ), ಕರುಣ್ ನಾಯರ್ (ಉಪನಾಯಕ), ದೇವದತ್ತ ಪಡಿಕ್ಕಲ್, ಆರ್. ಸ್ಮರಣ್, ಕೆ.ಎಲ್. ಶ್ರೀಜಿತ್ (ವಿಕೆಟ್‌ಕೀಪರ್), ಅಭಿನವ್ ಮನೋಹರ್, ಶ್ರೇಯಸ್ ಗೋಪಾಲ್, ವೈಶಾಖ ವಿಜಯಕುಮಾರ್, ಎಲ್. ಮನ್ವಂತ್ ಕುಮಾರ್, ಶ್ರೀಶಾ ಎಸ್ ಆಚಾರ್, ಅಭಿಲಾಶ್ ಶೆಟ್ಟಿ, ಬಿ.ಆರ್. ಶರತ್ (ವಿಕೆಟ್‌ಕೀಪರ್), ಹರ್ಷಿಲ್ ಧಮಾನಿ, ಧ್ರುವ ಪ್ರಭಾಕರ್, ಕೆ.ಎಲ್.ರಾಹುಲ್, ಪ್ರಸಿದ್ಧ್‌ ಕೃಷ್ಣ.

ಕೆ. ಯರೇಗೌಡ (ಕೋಚ್), ಮನ್ಸೂರ್ ಅಲಿ ಖಾನ್ (ಬೌಲಿಂಗ್ ಕೋಚ್), ಶಬರೀಶ್ ಮೋಹನ್ (ಫೀಲ್ಡಿಂಗ್ ಕೋಚ್), ಪಿ.ವಿ. ಸುಮಂತ್ (ಮ್ಯಾನೇಜರ್), ಇರ್ಫಾನುಲ್ಲಾ ಖಾನ್ (ಸ್ಟ್ರೆಂಥ್–ಕಂಡಿಷನಿಂಗ್ ಕೋಚ್), ಅಭಿಷೇಕ್ ಕುಲಕರ್ಣಿ (ಫಿಸಿಯೊಥೆರಪಿಸ್ಟ್), ಗಿರಿಪ್ರಸಾದ್ (ಪರ್ಫಾರ್ಮೆನ್ಸ್ ಅನಾಲಿಸ್ಟ್), ಸಿ.ಎಂ. ಸೋಮಸುಂದರ್ (ಮಸಾಜ್ ತಜ್ಞ).

ಕೊಹ್ಲಿ-ರೋಹಿತ್‌ ಕೂಡ ಲಭ್ಯ

ಅನುಭವಿ ಆಟಗಾರರಾದ ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ಈಗಾಗಲೇ ಪಂದ್ಯಾವಳಿಗೆ ಲಭ್ಯತೆಯನ್ನು ದೃಢಪಡಿಸಿದ್ದಾರೆ. ಶುಭಮನ್ ಗಿಲ್, ಜಸ್ಪ್ರೀತ್ ಬುಮ್ರಾ, ಕೆಎಲ್ ರಾಹುಲ್, ಹಾರ್ದಿಕ್ ಪಾಂಡ್ಯ ಮತ್ತು ಸೂರ್ಯಕುಮಾರ್ ಯಾದವ್ ಸೇರಿದಂತೆ ಇತರ ಹಿರಿಯ ಆಟಗಾರರಿಗೆ ತಮ್ಮ ರಾಜ್ಯ ತಂಡಗಳ ಪರ ಕನಿಷ್ಠ ಎರಡು ಪಂದ್ಯಗಳನ್ನಾಡಲು ಸೂಚನೆ ನೀಡಲಾಗಿದೆ. ಶ್ರೇಯಸ್ ಅಯ್ಯರ್ ಪೂರ್ಣ ಫಿಟ್ನೆಸ್ ಪಡೆಯಲು ಹೆಚ್ಚು ಸಮಯ ತೆಗೆದುಕೊಳ್ಳುವ ನಿರೀಕ್ಷೆಯಿದೆ.