ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

IPL Viral Video ಕೃಣಾಲ್‌ ಪಾಂಡ್ಯ ಬೌನ್ಸರ್‌ ಕಂಡು ರೊಚ್ಚಿಗೆದ್ದ ಸನ್‌ರೈಸರ್ಸ್‌ ಮಾಲಕಿ ಕಾವ್ಯ ಮಾರನ್‌

IPL 2026: 33ರ ಹರೆಯದ ಕಾವ್ಯಾ ತನ್ನ ಅದ್ಭುತ ನೋಟ ಮತ್ತು ಆಟದ ಮೇಲಿನ ಅಪಾರ ಉತ್ಸಾಹಕ್ಕೆ ಹೆಸರುವಾಸಿಯಾಗಿದ್ದಾರೆ. ಪಂದ್ಯ ಸೋತಾಗ ಮತ್ತು ಗೆದ್ದಾಗ ಅವರು ವಿಭಿನ್ನವಾಗಿ ಕಂಡುಬರುತ್ತಾರೆ. ಕ್ಯಾಮೆರಾ ಮೆನ್​ಗಳು ಕೂಡ ಪಂದ್ಯದ ವೇಳೆ ಇವರ ಮೇಲೆ ವಿಶೇಷ ನಿಗಾ ಇರಿಸಿರುತ್ತಾರೆ.

Kavya Maran

ಹೈದರಾಬಾದ್‌, ಮೇ 23: ಶುಕ್ರವಾರ ರಾತ್ರಿ ನಡೆದಿದ್ದ ಇಂಡಿಯನ್‌ ಪ್ರೀಮಿಯರ್‌ ಲೀಗ್‌(IPL 2026)ನ ಪಂದ್ಯದಲ್ಲಿ ಆತಥೇಯ ಸನ್‌ರೈಸರ್ಸ್‌ ಹೈದರಾಬಾದ್‌(SRH vs RCB) ತಂಡ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ವಿರುದ್ಧ 55 ರನ್‌ ಅಂತರದ ಗೆಲುವು ಸಾಧಿಸಿತು. ಆದರೆ ಈ ಪಂದ್ಯದಲ್ಲಿ ಸ್ಪಿನ್ನರ್‌ ಕೃಣಾಲ್‌ ಪಾಂಡ್ಯ(Krunal Pandya) ಎಸೆತ ಬೌನ್ಸರ್‌ ಎಸೆತ ಕಂಡು ರೊಚ್ಚಿಗೆದ್ದ ಸನ್‌ರೈಸರ್ಸ್‌ ತಂಡದ ಮಾಲಕಿ ಕಾವ್ಯ ಮಾರನ್‌(Kavya Maran), ಗ್ಯಾಲರಿಯಲ್ಲಿ ಸಹ ಸಿಬ್ಬಂದಿಗಳೊಂದಿಗೆ ಆಕ್ಷೇಪ ವ್ಯಕ್ತಪಡಿಸುತ್ತಿರುವ ವಿಡಿಯೊ ವೈರಲ್(viral video)​ ಆಗಿದೆ.

ಪ್ರಸಕ್ತ ಸಾಲಿನ ಐಪಿಎಲ್ ಟೂರ್ನಿಯಲ್ಲಿ ತಮ್ಮ ಬೌನ್ಸರ್ ಎಸೆತದ ಮೂಲಕವೇ ಕೃಣಾಲ್‌ ಪಾಂಡ್ಯ ವಿಭಿನ್ನತೆಗೆ ಕಾರಣರಾಗಿದ್ದಾರೆ. ಈಗಾಗಲೇ ಇವರ ಬೌಲಿಂಗ್‌ ಬಗ್ಗೆ ದಿಗ್ಗಜ ಸ್ಪಿನ್ನರ್‌ಗಳಾದ ಆರ್‌.ಅಶ್ವಿನ್‌ ಸೇರಿ ಹಲವರು ಆಕ್ಷೇಪ ವ್ಯಕ್ತಪಡಿಸಿದ್ದರು. ಅವರ ಬೌಲಿಂಗ್‌ ಶೈಲಿಯನ್ನು ಪರೀಕ್ಷೆಗೆ ಒಳಪಡಿಸಬೇಕು ಎಂದು ಹೇಳಿದ್ದರು.

ಸ್ಪಿನ್ನರ್ ಆಗಿದ್ದರೂ ಸಹ ಗಂಟೆಗೆ 120-130 ಕಿ.ಮೀ ವೇಗದಲ್ಲಿ ಬೌನ್ಸರ್‌ಗಳನ್ನು ಎಸೆಯುತ್ತಿದ್ದಾರೆ. ಹೈದರಾಬಾದ್‌ ಎದುರಿನ ಪಂದ್ಯದಲ್ಲಿಯೂ ಕೃಣಾಲ್‌ ಸತತ ಎರಡು ಎಸೆತಗಳನ್ನು ಬೌನ್ಸರ್‌ ಎಸೆದರು. ಈ ವೇಳೆ ಗ್ಯಾಲರಿಯಲ್ಲಿದ್ದ ಕಾವ್ಯ ಮಾರನ್‌, ಕೃಣಾಲ್‌ ಸರಿಯಾದ ಬೌಲಿಂಗ್‌ ಮಾಡುತ್ತಿಲ್ಲ. ಆತ ಚೆಂಡನ್ನು ಎಸೆಯುತ್ತಿದ್ದಾನೆ ಎನ್ನುವ ಸನ್ನೆಯೊಂದಿಗೆ ಸಹ ಸಿಬ್ಬಂದಿಗಳ ಜತೆ ಮಾತುಕತೆ ನಡೆಸಿದರು. ಈ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ಈಗ ವೈರಲ್‌ ಆಗಿದೆ. ಕೆಲ ನೆಟ್ಟಿಗರು ಕೂಡ ಕಾವ್ಯ ಅವರಿಗೆ ಬೆಂಬಲ ಸೂಚಿಸಿದ್ದಾರೆ.

ಕ್ವಾಲಿಫೈಯರ್ 1ರಲ್ಲಿ ಆರ್‌ಸಿಬಿ ಸೋತರೆ ಏನು ಗತಿ? ಇನ್ನೊಂದು ಅವಕಾಶ ಇದೆಯೇ?

33ರ ಹರೆಯದ ಕಾವ್ಯಾ ತನ್ನ ಅದ್ಭುತ ನೋಟ ಮತ್ತು ಆಟದ ಮೇಲಿನ ಅಪಾರ ಉತ್ಸಾಹಕ್ಕೆ ಹೆಸರುವಾಸಿಯಾಗಿದ್ದಾರೆ. ಪಂದ್ಯ ಸೋತಾಗ ಮತ್ತು ಗೆದ್ದಾಗ ಅವರು ವಿಭಿನ್ನವಾಗಿ ಕಂಡುಬರುತ್ತಾರೆ. ಕ್ಯಾಮೆರಾ ಮೆನ್​ಗಳು ಕೂಡ ಪಂದ್ಯದ ವೇಳೆ ಇವರ ಮೇಲೆ ವಿಶೇಷ ನಿಗಾ ಇರಿಸಿರುತ್ತಾರೆ. ಪಂದ್ಯ ಸೋತಾಗ ಅತಿಯಾದ ಬೇಸರಿಂದ ಸಪ್ಪೆ ಮೋರೆ ಹಾಕಿ ಕುಳಿತಿದ್ದ ಮತ್ತು ಪಂದ್ಯ ಗೆದ್ದಾಗ ಕುಣಿದು ಕುಪ್ಪಳಿಸಿದ ವಿಡಿಯೊ ಮತ್ತು ಫೋಟೊಗಳು ಕೂಡ ಹಲವು ಬಾರಿ ವೈರಲ್​ ಆಗಿತ್ತು.



ಪಂದ್ಯದ ಬಗ್ಗೆ ಹೇಳುವುದಾದರೆ, ರಾಜೀವಗಾಂಧಿ ಕ್ರಿಕೆಟ್ ಕ್ರೀಡಾಂಗಣದಲ್ಲಿ ಶುಕ್ರವಾರ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್‌ ಮಾಡಿದ ಸನ್‌ರೈಸರ್ಸ್‌ ತಂಡದ ಬ್ಯಾಟರ್‌ ಅಭಿಷೇಕ್ ಶರ್ಮಾ (56 ರನ್), ಇಶಾನ್ ಕಿಶನ್ (79 ರನ್) ಮತ್ತು ಹೆನ್ರಿಚ್ ಕ್ಲಾಸೆನ್ (51 ರನ್) ಅವರು ಅಬ್ಬರದ ಅರ್ಧಶತಕ ದಾಖಲಿಸಿದರು. ಇದರಿಂದಾಗಿ ತಂಡವು 4 ವಿಕೆಟ್‌ಗಳಿಗೆ 255 ರನ್‌ಗಳ ದೊಡ್ಡ ಮೊತ್ತ ಪೇರಿಸಿತು.

ಗುರಿ ಬೆನ್ನಟ್ಟಿದ ಆರ್‌ಸಿಬಿ ವೆಂಕಟೇಶ್‌ ಅಯ್ಯರ್‌ಸ್ಫೋಟಕ ಆರಂಭವನ್ನು ಒದಗಿಸಿಕೊಟ್ಟರೂ, ಇತರ ಬ್ಯಾಟರ್‌ಗಳಿಂದ ಸೂಕ್ತ ಬೆಂಬಲ ಸಿಗದ ಕಾರಣ ತಂಡವು 4 ವಿಕೆಟ್‌ಗೆ 200 ರನ್‌ ಗಳಿಸಲಷ್ಟೇ ಶಕ್ತವಾಯಿತು. ವಿರಾಟ್‌ ಕೊಹ್ಲಿ(15), ದೇವದತ್‌ ಪಡಿಕ್ಕಲ್‌(15) ವಿಫಲರಾದರು. ನಾಯಕ ರಜತ್‌ ಪಾಟೀದಾರ್‌(39 ಎಸೆತಕ್ಕೆ 56), ಕೃನಾಲ್‌ ಪಾಂಡ್ಯ(31 ಎಸೆತಕ್ಕೆ ಔಟಾಗದೆ 41) ಗಳಿಸಿದರು. ವೆಂಕಟೇಶ್‌ ಅಯ್ಯರ್‌ 19 ಎಸೆತಕ್ಕೆ 44 ರನ್‌ ಸಿಡಿಸಿದರು.