ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಕ್ವಾಲಿಫೈಯರ್ 1ರಲ್ಲಿ ಆರ್‌ಸಿಬಿ ಸೋತರೆ ಏನು ಗತಿ? ಇನ್ನೊಂದು ಅವಕಾಶ ಇದೆಯೇ?

Qualifier 1 for IPL 2026: 3ನೇ ಸ್ಥಾನ ಪಡೆದಿರುವ ಸನ್‌ರೈಸರ್ಸ್‌, 4ನೇ ಸ್ಥಾನ ಪಡೆಯಲಿರುವ ತಂಡದ ವಿರುದ್ಧ ಮೇ 27ರಂದು ಎಲಿಮಿನೇಟರ್‌ನಲ್ಲಿ ಮತ್ತೊಂದು ಪಂದ್ಯ ಆಡಲಿದೆ. ಅದರಲ್ಲಿ ಗೆದ್ದ ತಂಡ ಹಾಗೂ ಕ್ವಾಲಿಫೈಯರ್‌-1ರಲ್ಲಿ ಸೋತ ತಂಡ ಮೇ 29ರಂದು ಕ್ವಾಲಿಫೈಯರ್‌-2ರಲ್ಲಿ ಮುಖಾಮುಖಿಯಾಗಲಿವೆ. ಅದರಲ್ಲಿ ಗೆದ್ದ ತಂಡ ಫೈನಲ್‌ ತಲುಪಲಿದೆ. ಮೇ 31ಕ್ಕೆ ಫೈನಲ್‌ ನಡೆಯಲಿದೆ.

ಆರ್‌ಸಿಬಿ vs ಗುಜರಾತ್‌ ಕ್ವಾಲಿಫೈಯರ್ 1 ಪಂದ್ಯ ಯಾವಾಗ?

rcb vs gt -

Abhilash BC
Abhilash BC May 23, 2026 9:59 AM

ಧರ್ಮಶಾಲಾ, ಮೇ 23: 19ನೇ ಆವೃತ್ತಿಯ ಇಂಡಿಯನ್‌ ಪ್ರೀಮಿಯರ್‌ ಲೀಗ್‌(IPL 2026)ನ ಮೊದಲ ಕ್ವಾಲಿಫೈಯರ್ 1(Qualifier 1 for IPL 2026) ಸೆಣಸಾಟಕ್ಕೆ ವೇದಿಕೆ ಸಿದ್ಧವಾಗಿದೆ. ಅಂಕಪಟ್ಟಿಯಲ್ಲಿ ಅಗ್ರಸ್ಥಾನ ಪಡೆದ ಹಾಲಿ ಚಾಂಪಿಯನ್‌ ಆರ್‌ಸಿಬಿ ಹಾಗೂ 2ನೇ ಸ್ಥಾನ ಪಡೆದ ಗುಜರಾತ್‌ ತಂಡಗಳು ಮೇ 26ರಂದು ಧರ್ಮಶಾಲಾದಲ್ಲಿ ಕಾದಾಟ ನಡೆಸಲಿದೆ. ಇದರಲ್ಲಿ ಗೆಲ್ಲುವ ತಂಡ ಫೈನಲ್‌ ಪ್ರವೇಶಿಸಲಿದೆ.

ಸೋತ ತಂಡಕ್ಕೆ ಇನ್ನೊಂದು ಅವಕಾಶ

ಅಗ್ರ ಎರಡು ಸ್ಥಾನ ಪಡೆದ ತಂಡಗಳಿಗೆ ಕ್ವಾಲಿಫೈಯರ್ 1ರಲ್ಲಿ ಸೋತರೂ ಮತ್ತೊಂದು ಪಂದ್ಯವನ್ನಾಡುವ ಅವಕಾಶ ಸಿಗಲಿದೆ. 3ನೇ ಸ್ಥಾನ ಪಡೆದಿರುವ ಸನ್‌ರೈಸರ್ಸ್‌, 4ನೇ ಸ್ಥಾನ ಪಡೆಯಲಿರುವ ತಂಡದ ವಿರುದ್ಧ ಮೇ 27ರಂದು ಎಲಿಮಿನೇಟರ್‌ನಲ್ಲಿ ಮತ್ತೊಂದು ಪಂದ್ಯ ಆಡಲಿದೆ. ಅದರಲ್ಲಿ ಗೆದ್ದ ತಂಡ ಹಾಗೂ ಕ್ವಾಲಿಫೈಯರ್‌-1ರಲ್ಲಿ ಸೋತ ತಂಡ ಮೇ 29ರಂದು ಕ್ವಾಲಿಫೈಯರ್‌-2ರಲ್ಲಿ ಮುಖಾಮುಖಿಯಾಗಲಿವೆ. ಅದರಲ್ಲಿ ಗೆದ್ದ ತಂಡ ಫೈನಲ್‌ ತಲುಪಲಿದೆ. ಮೇ 31ಕ್ಕೆ ಫೈನಲ್‌ ನಡೆಯಲಿದೆ.

ರಾಜೀವಗಾಂಧಿ ಕ್ರಿಕೆಟ್ ಕ್ರೀಡಾಂಗಣದಲ್ಲಿ ಶುಕ್ರವಾರ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್‌ ಮಾಡಿದ ಸನ್‌ರೈಸರ್ಸ್‌ ತಂಡದ ಬ್ಯಾಟರ್‌ ಅಭಿಷೇಕ್ ಶರ್ಮಾ (56 ರನ್), ಇಶಾನ್ ಕಿಶನ್ (79 ರನ್) ಮತ್ತು ಹೆನ್ರಿಚ್ ಕ್ಲಾಸೆನ್ (51 ರನ್) ಅವರು ಅಬ್ಬರದ ಅರ್ಧಶತಕ ದಾಖಲಿಸಿದರು. ಇದರಿಂದಾಗಿ ತಂಡವು 4 ವಿಕೆಟ್‌ಗಳಿಗೆ 255 ರನ್‌ಗಳ ದೊಡ್ಡ ಮೊತ್ತ ಪೇರಿಸಿತು.

ಗುರಿ ಬೆನ್ನಟ್ಟಿದ ಆರ್‌ಸಿಬಿ ವೆಂಕಟೇಶ್‌ ಅಯ್ಯರ್‌ಸ್ಫೋಟಕ ಆರಂಭವನ್ನು ಒದಗಿಸಿಕೊಟ್ಟರೂ, ಇತರ ಬ್ಯಾಟರ್‌ಗಳಿಂದ ಸೂಕ್ತ ಬೆಂಬಲ ಸಿಗಲಿಲ್ಲ. ಆರಂಭಿಕನಾಗಿ ಆಡಿದ ವೆಂಕಟೇಶ್‌ 19 ಎಸೆತಕ್ಕೆ 44 ರನ್‌ ಸಿಡಿಸಿದರು. ಆದರೆ ವಿರಾಟ್‌ ಕೊಹ್ಲಿ(15), ದೇವದತ್‌ ಪಡಿಕ್ಕಲ್‌(15) ವಿಫಲರಾದರು. ನಾಯಕ ರಜತ್‌ ಪಾಟೀದಾರ್‌(39 ಎಸೆತಕ್ಕೆ 56), ಕೃನಾಲ್‌ ಪಾಂಡ್ಯ(31 ಎಸೆತಕ್ಕೆ ಔಟಾಗದೆ 41) ಸೋಲಿನ ಅಂತರ ತಗ್ಗಿಸಲಷ್ಟೇ ಶಕ್ತರಾದರು. ತಂಡವು 4 ವಿಕೆಟ್‌ಗೆ 200 ರನ್‌ ಗಳಿಸಿ ಓವರ್‌ಗಳನ್ನು ಮುಗಿಸಿತು.

ದಿಗ್ಗಜ ಆಟಗಾರನಾದರೂ ಕ್ರೀಡಾಸ್ಫೂರ್ತಿ ಮರೆತ ವಿರಾಟ್‌ ಕೊಹ್ಲಿ; ನೆಟ್ಟಿಗರ ಟೀಕೆ

ಸನ್‌ರೈಸರ್ಸ್‌ ಪರ ಅಭಿಷೇಕ್‌ ಶರ್ಮಾ 22 ಎಸೆತಕ್ಕೆ 56, ಟ್ರ್ಯಾವಿಸ್‌ ಹೆಡ್‌ 26, ಹೆನ್ರಿಚ್‌ ಕ್ಲಾಸೆನ್‌ 24 ಎಸೆತಕ್ಕೆ 51, ಇಶಾನ್‌ ಕಿಶನ್‌ 46 ಎಸೆತಕ್ಕೆ 79 ರನ್‌ ಸಿಡಿಸಿದರು. ನಿತೀಶ್‌ ಕುಮಾರ್‌ 12 ಎಸೆತಗಳಲ್ಲಿ ಔಟಾಗದೆ 29 ರನ್‌ ಬಾರಿಸಿದರು.

ಸಂಕ್ಷಿಪ್ತ ಸ್ಕೋರ್‌: ಸನ್‌ರೈಸರ್ಸ್‌ 20 ಓವರ್‌ನಲ್ಲಿ 255/4 (ಇಶಾನ್‌ 79, ಅಭಿಷೇಕ್‌ 56, ಕ್ಲಾಸೆನ್‌ 51, ರಸಿಕ್‌ 2-52), ಆರ್‌ಸಿಬಿ 20 ಓವರ್‌ನಲ್ಲಿ 200/4 (ರಜತ್‌ 56, ವೆಂಕಟೇಶ್‌ 44, ಎಶಾನ್‌ 2-33).