ಬಿಗ್​ಬಾಸ್ ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Virat Kohli: 'ಭಾರತೀಯನಾಗಿ ಇದಕ್ಕಿಂತ ಹೆಮ್ಮೆಪಡಲು ಸಾಧ್ಯವಿಲ್ಲ'; ಮಹಿಳಾ ತಂಡದ ವಿಶ್ವಕಪ್‌ ಗೆಲುವು ಸಂಭ್ರಮಿಸಿದ ಕೊಹ್ಲಿ

ಮೂರನೇ ಪ್ರಯತ್ನದಲ್ಲಿ ಭಾರತ ತಂಡ ವಿಶ್ವಕಪ್‌ ತನ್ನದಾಗಿಸಿಕೊಂಡಿತು. ಈ ಹಿಂದೆ 2005 ಮತ್ತು 2017ರಲ್ಲಿ ಫೈನಲ್‌ನಲ್ಲಿ ಸೋಲು ಕಂಡಿತ್ತು. ಅಂದು ತಂಡದಲ್ಲಿದ್ದ ದಿಗ್ಗಜ ಆಟಗಾರ್ತಿಯರಾದ ಮಿಥಾಲಿ ರಾಜ್‌ ಮತ್ತು ಜೋಲನ್‌ ಗೋಸ್ವಾಮಿ ಟೀಮ್‌ ಇಂಡಿಯಾ ಗೆಲುವಿನಲ್ಲಿ ಭಾಗಿಯಾಗಿ ತಾವೂ ಕೂಡ ಟ್ರೋಫಿ ಎತ್ತಿ ಸಂಭ್ರಮಿಸಿದರು.ಫೈನಲ್‌ ಪಂದ್ಯದ ವೇಳೆ ರೋಹಿತ್‌ ಶರ್ಮ, ಸಚಿನ್‌ ತೆಂಡೂಲ್ಕರ್‌ ಹಾಜರಿದ್ದರು. ತಂಡ ಗೆಲ್ಲುತ್ತಿದ್ದಂತೆ ರೋಹಿತ್‌ ಶರ್ಮ ಭಾವುಕರಾದರು.

ವಿರಾಟ್‌ ಕೊಹ್ಲಿ

ನವಿ ಮುಂಬೈ: ಭಾರತ ಮಹಿಳಾ ತಂಡವು 13ನೇ ಆವೃತ್ತಿಯ ಐಸಿಸಿ ಮಹಿಳಾ ಏಕದಿನ ವಿಶ್ವಕಪ್(Women's World Cup) ಟೂರ್ನಿಯಲ್ಲಿ ಚಾಂಪಿಯನ್ ಆಗಿ ಹೊರಹೊಮ್ಮುವ ಮೂಲ ಇತಿಹಾಸ ನಿರ್ಮಿಸಿದೆ. ಭಾನುವಾರ ತಡರಾತ್ರಿ ನಡೆದ ಫೈನಲ್‌ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ಎದುರು 52 ರನ್ ಅಂತರದ ಗೆಲುವು ಸಾಧಿಸಿ ಚೊಚ್ಚಲ ಬಾರಿಗೆ ಏಕದಿನ ವಿಶ್ವಕಪ್ ಮುಡಿಗೇರಿಸಿಕೊಂಡಿದೆ. ಈ ಮೂಲಕ ಐಸಿಸಿ ಟ್ರೋಫಿ ಬರ ನೀಗಿಸಿಕೊಂಡಿದೆ. ಭಾರತೀಯ ಮಹಿಳಾ ತಂಡದ ಈ ಐತಿಹಾಸಿಕ ಸಾಧನ್ನು ವಿರಾಟ್‌ ಕೊಹ್ಲಿ(Virat Kohli) ಕೊಂಡಾಡಿದ್ದಾರೆ.

ಇನ್‌ಸ್ಟಾಗ್ರಾಮ್‌ನಲ್ಲಿ ಸುದೀರ್ಘ ಪತ್ರದ ಮೂಲಕ ಮಹಿಳಾ ತಂಡದ ಸಾಧನೆಗೆ ಮೆಚ್ಚುಗೆ ಸೂಚಿಸಿರುವ ಕೊಹ್ಲಿ, "ಹುಡುಗಿಯರು ಇತಿಹಾಸ ಸೃಷ್ಟಿಸಿದ್ದಾರೆ ಮತ್ತು ಇಷ್ಟು ವರ್ಷಗಳ ಕಠಿಣ ಪರಿಶ್ರಮ ಅಂತಿಮವಾಗಿ ಜೀವಂತವಾಗಿರುವುದನ್ನು ನೋಡಲು ಭಾರತೀಯನಾಗಿ ನನಗೆ ಹೆಮ್ಮೆಯಿದೆ. ಈ ಐತಿಹಾಸಿಕ ಸಾಧನೆಗಾಗಿ ಹರ್ಮನ್ ಮತ್ತು ಇಡೀ ತಂಡಕ್ಕೆ ಎಲ್ಲರ ಚಪ್ಪಾಳೆ ಮತ್ತು ದೊಡ್ಡ ಅಭಿನಂದನೆಗಳು ಅರ್ಹವಾಗಿವೆ. ಪರದೆಯ ಹಿಂದಿನ ಕೆಲಸಕ್ಕಾಗಿ ಇಡೀ ತಂಡ ಮತ್ತು ನಿರ್ವಹಣೆಗೆ ಅಭಿನಂದನೆಗಳು. ಭಾರತಕ್ಕೆ ಅಭಿನಂದನೆಗಳು. ಈ ಕ್ಷಣವನ್ನು ಸಂಪೂರ್ಣವಾಗಿ ಆನಂದಿಸಿ. ಇದು ನಮ್ಮ ದೇಶದಲ್ಲಿ ಕ್ರೀಡೆಯನ್ನು ಕೈಗೆತ್ತಿಕೊಳ್ಳಲು ಹುಡುಗಿಯರ ಪೀಳಿಗೆಗೆ ಸ್ಫೂರ್ತಿ ನೀಡುತ್ತದೆ. ಜೈ ಹಿಂದ್," ಎಂದು ಕೊಹ್ಲಿ ಹೇಳಿದರು.



ಭಾರತ ಮಹಿಳಾ ತಂಡ ತನ್ನ ಮೂರನೇ ಪ್ರಯತ್ನದಲ್ಲಿ ವಿಶ್ವಕಪ್‌ ತನ್ನದಾಗಿಸಿಕೊಂಡಿತು. ಈ ಹಿಂದೆ 2005 ಮತ್ತು 2017ರಲ್ಲಿ ಫೈನಲ್‌ನಲ್ಲಿ ಸೋಲು ಕಂಡಿತ್ತು. ಅಂದು ತಂಡದಲ್ಲಿದ್ದ ದಿಗ್ಗಜ ಆಟಗಾರ್ತಿಯರಾದ ಮಿಥಾಲಿ ರಾಜ್‌ ಮತ್ತು ಜೋಲನ್‌ ಗೋಸ್ವಾಮಿ ಟೀಮ್‌ ಇಂಡಿಯಾ ಗೆಲುವಿನಲ್ಲಿ ಭಾಗಿಯಾಗಿ ತಾವೂ ಕೂಡ ಟ್ರೋಫಿ ಎತ್ತಿ ಸಂಭ್ರಮಿಸಿದರು.ಫೈನಲ್‌ ಪಂದ್ಯದ ವೇಳೆ ರೋಹಿತ್‌ ಶರ್ಮ, ಸಚಿನ್‌ ತೆಂಡೂಲ್ಕರ್‌ ಹಾಜರಿದ್ದರು. ತಂಡ ಗೆಲ್ಲುತ್ತಿದ್ದಂತೆ ರೋಹಿತ್‌ ಶರ್ಮ ಭಾವುಕರಾದರು.

ಇದನ್ನೂ ಓದಿ ಚೊಚ್ಚಲ ಮಹಿಳಾ ವಿಶ್ವಕಪ್‌ ಗೆದ್ದ ಭಾರತ ತಂಡಕ್ಕೆ ಸಿಕ್ಕ ನಗದು ಬಹುಮಾನದ ವಿವರ!

ಪಂದ್ಯದಲ್ಲಿ ಮೊದಲು ಬ್ಯಾಟಿಂಗ್‌ ನಡೆಸಿದ ಭಾರತ 7 ವಿಕೆಟ್‌ಗೆ 298 ರನ್‌ ಬಾರಿಸಿತು. ಗುರಿ ಬೆನ್ನಟ್ಟಿದ ದಕ್ಷಿಣ ಆಫ್ರಿಕಾ 45.3 ಓವರ್‌ಗಳಲ್ಲಿ 246 ರನ್‌ ಗಳಿಶಲಷ್ಟೇ ಶಕ್ತವಾಗಿ ಸೋಲೊಪ್ಪಿಕೊಂಡಿತು. ಭಾರತ ಪರ ಶಿಸ್ತು ಬದ್ದ ದಾಳಿ ನಡೆಸಿದ ಆಲ್ರೌಂಡರ್ ದೀಪ್ತಿ ಶರ್ಮಾ 39 ರನ್ ನೀಡಿ 5 ವಿಕೆಟ್ ಪಡೆದರು. ಬ್ಯಾಟಂಗ್‌ನಲ್ಲಿಯೂ ಮಿಂಚಿದ ಅವರು ಅರ್ಧಶತಕ ಸಿಡಿಸಿದರು.