ಕೋಲ್ಕತಾ, ಡಿ. 12: ಇಂಡಿಯನ್ ಪ್ರೀಮಿಯರ್ ಲೀಗ್ ಸೀಸನ್-19ರ ಮಿನಿ ಹರಾಜಿ(IPL 2026 auction)ಗೆ ದಿನಗಣನೆ ಶುರುವಾಗಿದೆ. ಈಗಾಗಲೇ ಬಿಸಿಸಿಐ 359 ಆಟಗಾರರ ಅಂತಿಮ ಪಟ್ಟಿ ಪೈನಲ್ ಮಾಡಿದ್ದು, ಎಲ್ಲಾ ಫ್ರಾಂಚೈಸಿಗಳು ಹರಾಜಿಗೆ ಸಿದ್ಧತೆ ನಡೆಸುತ್ತಿವೆ. ಹರಾಜಿನಲ್ಲಿ ಅತಿ ಹೆಚ್ಚು ಹಣದೊಂದಿಗೆ ಭಾಗವಹಿಸುತ್ತಿರುವ ಕೊಲ್ಕತ್ತಾ ನೈಟ್ ರೈಡರ್ಸ್(Kolkata Knight Riders) ತಂಡ ಬಲಿಷ್ಠ ತಂಡವನ್ನು ಕಟ್ಟಲು ಎದುರು ನೋಡುತ್ತಿದೆ. ಕೆಕೆಆರ್ ತಂಡ ಈ ಬಾರಿ ವೆಂಕಟೇಶ ಅಯ್ಯರ್ ಸೇರಿದಂತೆ 6 ಜನ ಆಟಗಾರರನ್ನು ಬಿಡುಗಡೆ ಮಾಡಿದೆ. ತಂಡಕ್ಕೆ ಇನ್ನೂ 6 ವಿದೇಶಿ ಆಟಗಾರರು ಸೇರಿದಂತೆ ಒಟ್ಟು 13 ಜನ ಆಟಗಾರರನ್ನು ಕೊಂಡುಕೊಳ್ಳಲು ಅವಕಾಶವಿದೆ. ಕೆಕೆಆರ್ ಫ್ರಾಂಚೈಸಿ ಬಳಿ ಉಳಿದಿರುವ ಪರ್ಸ್ ಮೊತ್ತ 64.3 ಕೋಟಿ.
ಕೊಲ್ಕತ್ತಾ ತಂಡ ಮುಖ್ಯವಾಗಿ ವಿಕೆಟ್ ಕೀಪಿಂಗ್ ಆರಂಭಿಕ ಬ್ಯಾಟ್ಸ್‌ಮನ್ ಹುಡುಕುತ್ತಿದೆ. ಈ ಕುರಿತು ಕನ್ನಡಿಗ ಕೆಎಲ್ ರಾಹುಲ್ ಅವರ ಜೊತೆ ಒಪ್ಪಂದ ಮಾಡಿಕೊಳ್ಳುವ ಸಾಧ್ಯತೆಯಿತ್ತು ಆದರೆ, ಅವರು ಡೆಲ್ಲಿ ತಂಡದಲ್ಲಿಯೇ ಉಳಿದುಕೊಂಡರು. ಇನ್ನು ಬೌಲಿಂಗ್ ವಿಭಾಗವನ್ನು ಬಲಿಷ್ಠಗೊಳಿಸಲು ಅನುಭವಿ ವಿದೇಶಿ ವೇಗಿಗಳನ್ನು ಹುಡುಕುತ್ತಿದೆ. ಪ್ರಸ್ತುತ ವೇಗದ ಬೌಲಿಂಗ್‌ನಲ್ಲಿ ಹರ್ಷಿತ್ ರಾಣಾ, ವೈಭವ್ ಅರೋರಾ, ಮತ್ತು ಉಮ್ರಾನ್ ಮಲಿಕ್ ಇದ್ದಾರೆ. ಡೆತ್ ಓವರ್ ಸ್ಪೆಷಲಿಸ್ಟ್‌ಗಳನ್ನು ಖರೀದಿಸುವ ಸಾಧ್ಯತೆಯಿದೆ.
ತಂಡದ ಸ್ಟಾರ್ ಆಲ್‌ರೌಂಡರ್ ಆಂಡ್ರೆ ರಸೆಲ್ ಐಪಿಎಲ್‌ಗೆ ವಿದಾಯ ಹೇಳಿರುವುದರಿಂದ ಅವರ ಅನುಪಸ್ಥಿತಿ ಕೊಲ್ಕತ್ತಾ ತಂಡಕ್ಕೆ ಕಾಡಲಿದೆ. ಆದ್ದರಿಂದ ಅಗ್ರ ನಾಲ್ಕರ ಕ್ರಮಾಂಕದಲ್ಲಿ ಬ್ಯಾಟ್ ಬೀಸುವ ಆಲ್‌ರೌಂಡ್‌ರನ್ನು ಖರೀದಿಸಬಹುದು. ಆದಾಗ್ಯೂ, ರಿಂಕು ಸಿಂಗ್, ರಮಣದೀಪ್ ಸಿಂಗ್ ಮತ್ತು ರೋವ್‌ಮನ್ ಪೊವೆಲ್ ಈ ಜವಬ್ದಾರಿಯನ್ನು ನಿಭಾಯಿಸಬಹುದು.
ಇದನ್ನೂ ಓದಿ 2026ರ ಟಿ20 ವಿಶ್ವಕಪ್ ಟೂರ್ನಿಯ ಟಿಕೆಟ್ ಎಲ್ಲಿ ಸಿಗುತ್ತೆ? ಕೇವಲ 100 ರು.ಗೆ ಟಿಕೆಟ್!
ಕೆಕೆಆರ್ ಖರೀದಿ ಮಾಡಲು ಎದುರು ನೋಡುತ್ತಿರುವ ಆಟಗಾರರೆಂದರೆ ಜೇಮಿ ಸ್ಮಿತ್, ಮ್ಯಾಟ್ ಹೆನ್ರಿ, ಮಥೀಶ ಪತಿರಾನ, ಪೃಥ್ವಿ ಶಾ, ಕ್ಯಾಮರೂನ್ ಗ್ರೀನ್.
ಕೆಕೆಆರ್ ಉಳಿಸಿಕೊಂಡ ಆಟಗಾರರು
ಅಜಿಂಕ್ಯ ರಹಾನೆ, ಅಂಗ್ ಕ್ರಿಶ್ ರಘುವಂಶಿ, ಅನುಕುಲ್ ರಾಯ್, ಹರ್ಷಿತ್ ರಾಣಾ, ಮನೀಶ್ ಪಾಂಡೆ, ರಮಣದೀಪ್ ಸಿಂಗ್, ರಿಂಕು ಸಿಂಗ್, ರೋವ್‌ಮನ್ ಪೊವೆಲ್, ಸುನೀಲ್ ನರೈನ್, ಉಮ್ರಾನ್ ಮಲಿಕ್, ವೈಭವ್ ಅರೋರಾ, ವರುಣ್ ಚಕ್ರವರ್ತಿ.
ಬಿಡುಗಡೆಯಾದ ಆಟಗಾರರು: ಮಯಾಂಕ್ ಮಾರ್ಕಂಡೆ, ಆಂಡ್ರೆ ರಸ್ಸೆಲ್, ವೆಂಕಟೇಶ್ ಅಯ್ಯರ್, ಕ್ವಿಂಟನ್ ಡಿಕಾಕ್, ಅನ್ರಿಚ್ ನೋಕಿಯಾ, ಸಿಸೋಡಿಯಾ, ರಹಮತುಲ್ಲಾ ಗುರ್ಬಾಜ್, ಮೋಯಿನ್ ಅಲಿ.