2026ರ ಟಿ20 ವಿಶ್ವಕಪ್ ಟೂರ್ನಿಯ ಟಿಕೆಟ್ ಎಲ್ಲಿ ಸಿಗುತ್ತೆ? ಕೇವಲ 100 ರು.ಗೆ ಟಿಕೆಟ್!
ICC T20 World Cup Tickets: ಮುಂದಿನ ವರ್ಷ ಭಾರತ ಹಾಗೂ ಶ್ರೀಲಂಕಾ ಜಂಟಿ ಆತಿಥ್ಯದಲ್ಲಿ ನಡೆಯುವ 2026ರ ಐಸಿಸಿ ಟಿ20 ವಿಶ್ವಕಪ್ ಟೂರ್ನಿಗೆ ಟಿಕೆಟ್‌ಗಳನ್ನು ಬಿಡುಗಡೆ ಮಾಡಲಾಗಿದೆ. ಭಾರತದಲ್ಲಿ ಆರಂಭಿಕ ಟಿಕೆಟ್ ಬೆಲೆ 100 ರು. ನಿಗದಿ ಮಾಡಲಾಗಿದೆ ಹಾಗೂ ಶ್ರೀಲಂಕಾದಲ್ಲಿ 1000 ರು ನಿಗದಿ ಮಾಡಲಾಗಿದೆ ಎಂದು ಐಸಿಸಿ ತಿಳಿಸಿದೆ.
2026ರ ಟಿ20 ವಿಶ್ವಕಪ್ ಟಿಕೆಟ್‌ಗಳ ಮಾರಾಟ ಆರಂಭ. -
ನವದೆಹಲಿ: ಅಂತಾರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ ಡಿಸೆಂಬರ್ 11 ರಂದು ಗುರುವಾರ 2026ರ ಐಸಿಸಿ ಪುರುಷರ ಟಿ20 ವಿಶ್ವಕಪ್ ಟೂರ್ನಿಯ (ICC T20 World Cup 2026) ಟಿಕೆಟ್ ಮಾರಾಟವನ್ನು ಪ್ರಾರಂಭಿಸಿದೆ. ಕ್ರಿಕೆಟ್ ಪ್ರಿಯರನ್ನು ಗರಿಷ್ಠ ಸಂಖ್ಯೆಯಲ್ಲಿ ಆಕರ್ಷಿಸಲು ಹಾಗೂ ಚುಟುಕು ವಿಶ್ವಕಪ್ ಟೂರ್ನಿಯನ್ನು ಜಾಗತಿಕ ಮಟ್ಟದಲ್ಲಿ ಖ್ಯಾತಿಯನ್ನು ಗಳಿಸಲು ಐಸಿಸಿ ಟಿಕೆಟ್ ದರವನ್ನು ಮಿತಿಗೊಳಿಸಿದೆ. 10ನೇ ಆವೃತ್ತಿಯ ಟಿ20 ವಿಶ್ವಕಪ್ ಟೂರ್ನಿಯು 2026ರ ಫೆಬ್ರವರಿ 7 ರಿಂದ ಮಾರ್ಚ್ 8 ರವರೆಗೆ ಭಾರತ ಹಾಗೂ ಶ್ರೀಲಂಕಾ ಜಂಟಿ ಆತಿಥ್ಯದಲ್ಲಿ ನಡೆಯಲಿದೆ.
ಪ್ರಶಸ್ತಿಗಾಗಿ ಒಟ್ಟು 20 ತಂಡಗಳು 55 ಪಂದ್ಯಗಳಲ್ಲಿ ಕಾದಾಟ ನಡೆಸಲಿವೆ. ಟಿಕೆಟ್ ಮಾರಾಟ ಡಿಸೆಂಬರ್ 11 ರಂದು ಸಂಜೆ 6:45 ಕ್ಕೆ ಅಧಿಕೃತ ವೆಬ್‌ಸೈಟ್ https://tickets.cricketworldcup.com/ ನಲ್ಲಿ ಪ್ರಾರಂಭವಾಯಿತು. ಆರಂಭಿಕ ಹಂತದ ಟಿಕೆಟ್ ಬೆಲೆಗಳು ಭಾರತದಲ್ಲಿ 100 ರು ಮತ್ತು ಶ್ರೀಲಂಕಾದಲ್ಲಿ 1000 ರು ಗಳಿಂದ ಪ್ರಾರಂಭವಾಗುತ್ತವೆ. ಕ್ರೀಡಾಂಗಣದಲ್ಲಿ ಕ್ರಿಕೆಟ್ ವೀಕ್ಷಣೆಯ ಅನುಭವವನ್ನು ಹೆಚ್ಚಿಸುವ ಗುರಿಯನ್ನು ಹೊಂದಿರುವ ಐಸಿಸಿ ಮೊದಲ ಹಂತದಲ್ಲಿ 2 ದಶಲಕ್ಷ ಟಿಕೆಟ್‌ಗಳನ್ನು ಮಾರಾಟಕ್ಕೆ ಇಟ್ಟಿದೆ.
T20 World Cup: 2026ರ ಐಸಿಸಿ ಟಿ20 ವಿಶ್ವಕಪ್ ವೇಳಾಪಟ್ಟಿ ಪ್ರಕಟ, ಫೆ 15ಕ್ಕೆ ಭಾರತ vs ಪಾಕಿಸ್ತಾನ ಪಂದ್ಯ!
ಈ ಟೂರ್ನಿಯ ಪಂದ್ಯಗಳು ಎರಡೂ ದೇಶಗಳ ಎಂಟು ಸ್ಥಳಗಳಲ್ಲಿ ನಡೆಯಲಿದೆ. ಕೊಲಂಬೊದಲ್ಲಿ ಪಾಕಿಸ್ತಾನ ಮತ್ತು ನೆದರ್ಲೆಂಡ್ಸ್ ನಡುವಿನ ಪಂದ್ಯದೊಂದಿಗೆ ಟೂರ್ನಿ ಆರಂಭವಾಗಲಿದ್ದು, ನಂತರ ಕೋಲ್ಕತ್ತಾದಲ್ಲಿ ವೆಸ್ಟ್ ಇಂಡೀಸ್ ಮತ್ತು ಬಾಂಗ್ಲಾದೇಶ ನಡುವಿನ ಪಂದ್ಯ ನಡೆಯಲಿದೆ. ಭಾರತ ತಂಡ, ಮುಂಬೈನಲ್ಲಿ ಯುಎಸ್ಎ ವಿರುದ್ಧ ತನ್ನ ಮೊದಲ ಪಂದ್ಯವನ್ನು ಆಡಲಿದೆ. ಭಾರತದಲ್ಲಿ ನರೇಂದ್ರ ಮೋದಿ ಕ್ರೀಡಾಂಗಣ (ಅಹಮದಾಬಾದ್), ಎಂಎ ಚಿದಂಬರಂ ಕ್ರೀಡಾಂಗಣ (ಚೆನ್ನೈ), ಅರುಣ್ ಜೇಟ್ಲಿ ಕ್ರೀಡಾಂಗಣ (ನವದೆಹಲಿ), ವಾಂಖೆಡೆ ಕ್ರೀಡಾಂಗಣ (ಮುಂಬೈ) ಮತ್ತು ಈಡನ್ ಗಾರ್ಡನ್ಸ್ (ಕೋಲ್ಕತ್ತಾ) ಸೇರಿವೆ. ಶ್ರೀಲಂಕಾದಲ್ಲಿ ಪಂದ್ಯಗಳು ಆರ್. ಪ್ರೇಮದಾಸ ಕ್ರೀಡಾಂಗಣ (ಕೊಲಂಬೊ), ಸಿಂಹಳೀಸ್ ಸ್ಪೋರ್ಟ್ಸ್ ಕ್ಲಬ್ ಕ್ರಿಕೆಟ್ ಮೈದಾನ (ಕೊಲಂಬೊ) ಮತ್ತು ಪಲ್ಲೆಕೆಲೆ ಅಂತಾರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣ (ಕ್ಯಾಂಡಿ)ದಲ್ಲಿ ನಡೆಯಲಿವೆ.
𝗧𝗛𝗘 𝗧𝗜𝗖𝗞𝗘𝗧𝗦 𝗔𝗥𝗘 𝗢𝗨𝗧 🎟️
— ICC (@ICC) December 11, 2025
At historic low entry-level prices, witness the world’s best in action at the ICC Men's #T20WorldCup 2026 in India and Sri Lanka ➡️ https://t.co/MSLEQzcObb pic.twitter.com/iMBPdpixMf
ಐಸಿಸಿ ಮತ್ತು ಬಿಸಿಸಿಐ ಅಧಿಕಾರಿಗಳು ಏನು ಹೇಳಿದರು?
"ಇದುವರೆಗೆ ಅತ್ಯಂತ ಸುಲಭವಾಗಿ ಮತ್ತು ಜಾಗತಿಕವಾಗಿ ಐಸಿಸಿ ಟೂರ್ನಿಯನ್ನು ಆಯೋಜಿಸುವ ನಮ್ಮ ಪ್ರಯಾಣದಲ್ಲಿ ಟಿಕೆಟ್ ಮಾರಾಟದ ಮೊದಲ ಹಂತವು ಒಂದು ಪ್ರಮುಖ ಮೈಲುಗಲ್ಲು. 2026ರ ಐಸಿಸಿ ಪುರುಷರ ಟಿ20 ವಿಶ್ವಕಪ್ ಟೂರ್ನಿಗಾಗಿ ನಮ್ಮ ದೃಷ್ಟಿಕೋನ ಸ್ಪಷ್ಟವಾಗಿದೆ: ಹಿನ್ನೆಲೆ, ಭೌಗೋಳಿಕತೆ ಅಥವಾ ಆರ್ಥಿಕ ವಿಧಾನಗಳನ್ನು ಲೆಕ್ಕಿಸದೆ, ಪ್ರತಿಯೊಬ್ಬ ಅಭಿಮಾನಿಯೂ ವಿಶ್ವ ದರ್ಜೆಯ ಚುಟುಕು ಪಂದ್ಯಗಳನ್ನು ವೀಕ್ಷಿಸುವ ಮೂಲಕ ಕ್ರೀಡಾಂಗಣದ ಅನುಭವವನ್ನು ಪಡೆಯುವ ಅವಕಾಶವನ್ನು ಕಲ್ಪಿಸುವುದಾಗಿದೆ," ಎಂದು ಐಸಿಸಿ ಸಿಇಒ ಸಂಜೋಗ್ ಗುಪ್ತಾ ತಿಳಿಸಿದ್ದಾರೆ.
The schedule for ICC Men’s @T20WorldCup 2026 is here! 📅
— ICC (@ICC) November 25, 2025
The matches and groups were unveiled at a gala event in Mumbai led by ICC Chairman @JayShah, and with new tournament ambassador @ImRo45 and Indian team captains @surya_14kumar and Harmanpreet Kaur in attendance.
✍️:… pic.twitter.com/fsjESpJPlE
ಬಿಸಿಸಿಐ ಕಾರ್ಯದರ್ಶಿ ದೇವಜಿತ್ ಸೈಕಿಯಾ ಈ ಬಗ್ಗೆ ಸಂತೋಷವನ್ನು ವ್ಯಕ್ತಪಡಿಸಿದ್ದು, 100 ರು ಗಿಂತ ಕಡಿಮೆ ಟಿಕೆಟ್ ಬೆಲೆಗಳು ಟೂರ್ನಿಯ ಸುತ್ತಲಿನ ಉತ್ಸಾಹವನ್ನು ತೀವ್ರವಾಗಿ ಹೆಚ್ಚಿಸಿವೆ ಎಂದು ಹೇಳಿದರು. ಭಾರತದ ಕ್ರಿಕೆಟ್ ಮೇಲಿನ ಉತ್ಸಾಹವನ್ನು ಅವರು ಒಪ್ಪಿಕೊಂಡರು ಮತ್ತು ಪಂದ್ಯದ ದಿನದ ಅತ್ಯುತ್ತಮ ಅನುಭವವನ್ನು ನೀಡುವುದಾಗಿ ಭರವಸೆ ನೀಡಿದರು. ಶ್ರೀಲಂಕಾ ಕ್ರಿಕೆಟ್ ಸಿಇಒ ಆಶ್ಲೇ ಡಿ ಸಿಲ್ವಾ ಕೂಡ ಈ ಕಾರ್ಯಕ್ರಮದ ಬಗ್ಗೆ ಹೆಮ್ಮೆ ವ್ಯಕ್ತಪಡಿಸಿದರು ಮತ್ತು ಅಭಿಮಾನಿಗಳು ತಮ್ಮ ಸ್ಥಾನಗಳನ್ನು ಆದಷ್ಟು ಬೇಗ ಪಡೆದುಕೊಳ್ಳುವಂತೆ ಒತ್ತಾಯಿಸಿದರು. ಟೂರ್ನಿಯು ರೋಮಾಂಚಕವಾಗಿರಲಿದೆ ಎಂದು ಹೇಳಿದರು.