ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Kuldeep Yadav: 68 ವರ್ಷಗಳ ಹಳೆಯ ದಾಖಲೆಯನ್ನು ಸರಿಗಟ್ಟಿದ ಕುಲದೀಪ್ ಯಾದವ್

ವೆಸ್ಟ್ ಇಂಡೀಸ್ ವಿರುದ್ಧ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಕುಲ್ದೀಪ್ ಒಟ್ಟು 69 ವಿಕೆಟ್‌ಗಳನ್ನು ಕಬಳಿಸಿದ್ದಾರೆ. ಅವರು ನಾಲ್ಕು ಟೆಸ್ಟ್‌ಗಳಲ್ಲಿ 19 ಕೆರಿಬಿಯನ್ ಬ್ಯಾಟ್ಸ್‌ಮನ್‌ಗಳನ್ನು, 19 ಏಕದಿನ ಪಂದ್ಯಗಳಲ್ಲಿ 33 ಮತ್ತು ಒಂಬತ್ತು ಟಿ20 ಪಂದ್ಯಗಳಲ್ಲಿ 17 ವಿಕೆಟ್‌ಗಳನ್ನು ಕಬಳಿಸಿದ್ದಾರೆ.

68 ವರ್ಷಗಳ ಹಳೆಯ ದಾಖಲೆಯನ್ನು ಸರಿಗಟ್ಟಿದ ಕುಲದೀಪ್

-

Abhilash BC Abhilash BC Oct 12, 2025 2:56 PM

ನವದೆಹಲಿ: ವೆಸ್ಟ್ ಇಂಡೀಸ್ ವಿರುದ್ಧ ನಡೆಯುತ್ತಿರುವ ಎರಡನೇ ಟೆಸ್ಟ್(IND vs WI Test) ಪಂದ್ಯದ ಮೊದಲ ಇನ್ನಿಂಗ್ಸ್‌ನಲ್ಲಿ ಭಾರತ ಪರ ಕುಲ್ದೀಪ್ ಯಾದವ್(Kuldeep Yadav) ಐದು ವಿಕೆಟ್‌ಗಳನ್ನು ಕಬಳಿಸುವ ಮೂಲಕ 68 ವರ್ಷಗಳ ಹಿಂದಿನ ದಾಖಲೆಯನ್ನು ಸರಿಗಟ್ಟಿದ್ದಾರೆ.

ಎಡಗೈ ಮಣಿಕಟ್ಟಿನ ಸ್ಪಿನ್ನರ್ ಆಗಿ ಟೆಸ್ಟ್‌ನಲ್ಲಿ ಅತಿ ಹೆಚ್ಚು ಐದು ವಿಕೆಟ್‌ಗಳನ್ನು ಗಳಿಸಿದ ಇಂಗ್ಲೆಂಡ್‌ನ ಜಾನಿ ವಾರ್ಡ್ಲೆ ಅವರ ದಾಖಲೆಯನ್ನು ಸರಿಗಟ್ಟಿದರು. ಉಭಯ ಆಟಗಾರರು ಒಟ್ಟು 5 ಬಾರಿ 5 ವಿಕೆಟ್‌ ಗೊಂಚಲು ಪಡೆದಿದ್ದಾರೆ. ಕುಲ್‌ದೀಪ್‌ 15 ಪಂದ್ಯಗಳಿಂದ ಈ ಮೈಲುಗಲ್ಲು ತಲುಪಿದರೆ, ಜಾನಿ ವಾರ್ಡ್ಲೆ 28 ಪಂದ್ಯಗಳಿಂದ ಈ ಸಾಧನೆ ಮಾಡಿದ್ದರು. ದಕ್ಷಿಣ ಆಫ್ರಿಕಾದ ಪಾಲ್ ಆಡಮ್ಸ್(4) ಎರಡನೇ ಸ್ಥಾನದಲ್ಲಿದ್ದಾರೆ.

ವೆಸ್ಟ್ ಇಂಡೀಸ್ ವಿರುದ್ಧ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಕುಲ್ದೀಪ್ ಒಟ್ಟು 69 ವಿಕೆಟ್‌ಗಳನ್ನು ಕಬಳಿಸಿದ್ದಾರೆ. ಅವರು ನಾಲ್ಕು ಟೆಸ್ಟ್‌ಗಳಲ್ಲಿ 19 ಕೆರಿಬಿಯನ್ ಬ್ಯಾಟ್ಸ್‌ಮನ್‌ಗಳನ್ನು, 19 ಏಕದಿನ ಪಂದ್ಯಗಳಲ್ಲಿ 33 ಮತ್ತು ಒಂಬತ್ತು ಟಿ20 ಪಂದ್ಯಗಳಲ್ಲಿ 17 ವಿಕೆಟ್‌ಗಳನ್ನು ಕಬಳಿಸಿದ್ದಾರೆ.

ಇದನ್ನೂ ಓದಿ IND vs WI: ಶುಭಮನ್‌ ಗಿಲ್‌ ದಾಖಲೆಯ ಶತಕ, ಎರಡನೇ ದಿನವೂ ಪ್ರಾಬಲ್ಯ ಸಾಧಿಸಿದ ಭಾರತ!

ಫಾಲೋಆನ್‌ ಹೇರಿದ ಭಾರತ

2ನೇ ಟೆಸ್ಟ್‌ ಮೇಲೆ ಭಾರತ ಬಿಗಿ ಹಿಡಿತ ಸಾಧಿಸಿದೆ. ಭಾರತದ 518 ರನ್‌ ಬೆನ್ನಟ್ಟಿದ ವಿಂಡೀಸ್‌ 248 ರನ್‌ಗೆ ಆಲೌಟ್‌ ಆಯಿತು. ಆ ಮೂಲಕ ವಿಂಡೀಸ್ 270 ರನ್ ಗಳ ಹಿನ್ನಡೆಯಲ್ಲಿದ್ದು ಭಾರತ ಫಾಲೋಆನ್ ಹೇರಿದೆ. ಎರಡನೇ ದಿನದ ಅಂತ್ಯಕ್ಕೆ ವಿಂಡೀಸ್ 140ಕ್ಕೆ ನಾಲ್ಕು ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿತ್ತು. ಮೂರನೇ ದಿನ ಆಲೌಟ್‌ ಆಯಿತು.