ಚೌತಿ ಹಬ್ಬ ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Lionel Messi: 2026ರ ವಿಶ್ವಕಪ್‌ನಲ್ಲಿ ಮೆಸ್ಸಿ ಆಡುವುದು ಅನುಮಾನ!

2026 World Cup; 38 ವರ್ಷದ ಮೆಸ್ಸಿ ಮಾತುಗಳನ್ನು ಕೇಳುವಾಗ ಅವರು, 2026 ವಿಶ್ವಕಪ್‌ ಆಡುವುದು ಅನುಮಾನ ಎನ್ನಲಾಗಿದೆ. 2022 ರಲ್ಲಿ ಕತಾರ್‌ನಲ್ಲಿ ನಡೆದಿದ್ದ ಫಿಫಾ ವಿಶ್ವಕಪ್‌ನಲ್ಲಿ ಮೆಸ್ಸಿ ಸಾರಥ್ಯದಲ್ಲಿ ಅರ್ಜೆಂಟೀನಾ ತಂಡ ಫ್ರಾನ್ಸ್‌ ತಂಡವನ್ನು ಮಣಿಸಿ ಚಾಂಪಿಯನ್‌ ಪಟ್ಟ ಅಲಂಕರಿಸಿತ್ತು.

2026ರ ವಿಶ್ವಕಪ್‌ನಲ್ಲಿ ಮೆಸ್ಸಿ ಆಡುವುದು ಅನುಮಾನ!

-

Abhilash BC Abhilash BC Sep 6, 2025 12:06 PM

ಬ್ಯೂನೊ ಏರ್ಸ್‌: ದಿಗ್ಗಜ ಆಟಗಾರ ಲಿಯೋನೆಲ್ ಮೆಸ್ಸಿ(Lionel Messi) ಅವರು ಮುಂದಿನ ವರ್ಷ(2026) ಜೂನ್ 11ರಿಂದ ಜುಲೈ 19ರವರೆಗೆ ನಡೆಯಲಿರುವ ಫಿಫಾ ವಿಶ್ವಕಪ್‌ನಲ್ಲಿ ಆಡುವುದು ಅನುಮಾನ ಎನ್ನಲಾಗಿದೆ. ವಿಶ್ವಕಪ್‌ ಪಂದ್ಯಾವಳಿ ಅಮೆರಿಕ, ಕೆನಡಾ ಮತ್ತು ಮೆಕ್ಸಿಕೊ ದೇಶಗಳಲ್ಲಿ ಜಂಟಿ ಆತಿಥ್ಯದಲ್ಲಿ ನಡೆಯಲಿದೆ.

ವಿಶ್ವಕಪ್ ಅರ್ಹತಾ ಸುತ್ತಿನ ಪಂದ್ಯದಲ್ಲಿ ಅರ್ಜೆಂಟೀನಾ ತಂಡ ವೆನೆಜುವೆಲಾ ವಿರುದ್ಧ 3–0 ಗೋಲುಗಳಿಂದ ಜಯಗಳಿಸಿತು. ಇದರಲ್ಲಿ ಮೆಸ್ಸಿ ಎರಡು ಗೋಲುಗಳನ್ನು ಬಾರಿಸಿದ್ದರು. ಇದು ತವರಿನಲ್ಲಿ ಅರ್ಜೆಂಟೀನಾ ತಂಡದ ಪರ ಮೆಸ್ಸಿ ಆಡಿದ ಕೊನೆಯ ಪಂದ್ಯವಾಗಿತ್ತು. ಪಂದ್ಯದ ಬಳಿಕ ಮಾತನಾಡಿದ್ದ ಮೆಸ್ಸಿ, 'ತವರಿನಲ್ಲಿ ಈ ರೀತಿಯಲ್ಲಿ ವೃತ್ತಿಜೀವನ ಕೊನೆಗೊಳಿಸುವುದು ನನ್ನ ಕನಸಾಗಿತ್ತು' ಎಂದು ಹೇಳಿದರು.

"ಹಿಂದೆ, ನಾನು ಹೇಳಿದ್ದೆ, ತಾರ್ಕಿಕವಾಗಿ, ನಾನು 39 ನೇ ವಯಸ್ಸಿನಲ್ಲಿ ವಿಶ್ವಕಪ್‌ನಲ್ಲಿ ಆಡುವ ಸಾಧ್ಯತೆ ಇಲ್ಲ. ಇದು ಒಂಬತ್ತು ತಿಂಗಳು ದೂರದಲ್ಲಿದೆ, ಅದು ಹತ್ತಿರದಲ್ಲಿದೆ, ಆದರೆ ಇದು ಬಹಳ ಸಮಯವೂ ಆಗಿದೆ. ನಗೆ ಆಟವಾಡುವುದು ತುಂಬಾ ಇಷ್ಟ, ಮತ್ತು ಇದು ಎಂದಿಗೂ ಕೊನೆಗೊಳ್ಳಬಾರದು ಎಂದು ನಾನು ಬಯಸುವುದಿಲ್ಲ. ಆದರೆ ಆ ಕ್ಷಣ ಬರುತ್ತಿದೆ. ಅದು ಸಂಭವಿಸಬೇಕಾದಾಗ ಸಂಭವಿಸುತ್ತದೆ ಎಂದು ನನಗೆ ತಿಳಿದಿದೆ" ಎಂದು ಮೆಸ್ಸಿ ಸುದ್ದಿಗಾರರಿಗೆ ತಿಳಿಸಿದರು.

38 ವರ್ಷದ ಮೆಸ್ಸಿ ಮಾತುಗಳನ್ನು ಕೇಳುವಾಗ ಅವರು, 2026 ವಿಶ್ವಕಪ್‌ ಆಡುವುದು ಅನುಮಾನ ಎನ್ನಲಾಗಿದೆ. 2022 ರಲ್ಲಿ ಕತಾರ್‌ನಲ್ಲಿ ನಡೆದಿದ್ದ ಫಿಫಾ ವಿಶ್ವಕಪ್‌ನಲ್ಲಿ ಮೆಸ್ಸಿ ಸಾರಥ್ಯದಲ್ಲಿ ಅರ್ಜೆಂಟೀನಾ ತಂಡ ಫ್ರಾನ್ಸ್‌ ತಂಡವನ್ನು ಮಣಿಸಿ ಚಾಂಪಿಯನ್‌ ಪಟ್ಟ ಅಲಂಕರಿಸಿತ್ತು.

ಇದನ್ನೂ ಓದಿ ಕೇರಳಕ್ಕೆ 'ಓಣಂ ಉಡುಗೊರೆ'; ನವೆಂಬರ್‌ನಲ್ಲಿ ಮೆಸ್ಸಿ ಭೇಟಿ; ಸೌಹಾರ್ದ ಪಂದ್ಯದಲ್ಲಿ ಆಟ