ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಕೊನೆಯ ಕ್ಷಣದಲ್ಲಿ ಇಂಗ್ಲೆಂಡ್‌ಗೆ ಆಘಾತವಿಕ್ಕಿ ಫೈನಲ್‌ಗೆ ಲಗ್ಗೆಯಿಟ್ಟ ಅರ್ಜೆಂಟೀನಾ

FIFA World Cup: ಮೊದಲಾರ್ಧದಲ್ಲಿ ಉಭಯ ತಂಡಗಳ ಆಟಗಾರರು ತೀವ್ರ ಆಕ್ರಮಣಕಾರಿ ಆಟಕ್ಕೆ ಮುಂದಾಗಿದ್ದರಿಂದ ಒಟ್ಟು 19 ಫೌಲ್‌ಗಳು ದಾಖಲಾದವು. ಪಂದ್ಯವನ್ನು ನಿಯಂತ್ರಿಸಲು ರೆಫರಿ ಇಸ್ಮಾಯಿಲ್ ಎಲ್ಫಾತ್ ಹರಸಾಹಸ ಪಡಬೇಕಾಯಿತು. ಜಾನ್ ಸ್ಟೋನ್ಸ್ ಅವರ ಹೆಡರ್ ಇಂಗ್ಲೆಂಡ್‌ ನ ಮೊದಲ ಅವಕಾಶವಾಗಿದ್ದರೆ, ಮೆಸ್ಸಿ ಮೇಲಿನ ಫೌಲ್‌ ಗೆ ಎಲಿಯಟ್ ಆಂಡರ್ಸನ್ ಮೊದಲ ಯೆಲ್ಲೋ ಕಾರ್ಡ್ ಪಡೆದರು.

Lionel Messi

ಅಟ್ಲಾಂಟಾ, ಜು.16: ಅಂತಿಮ ಕ್ಷಣಗಳಲ್ಲಿ ಅಸಾಧಾರಣ ಪ್ರದರ್ಶನ ತೋರುವ ಮೂಲಕ ಬಾರಿಸಿದ ಎರಡು ಗೋಲುಗಳ ನೆರವಿನಿಂದ ಅರ್ಜೆಂಟೀನಾ ತಂಡ ಫಿಫಾ ವಿಶ್ವಕಪ್ ಸೆಮಿಫೈನಲ್‌ನಲ್ಲಿ ಬದ್ದ ಎದುರಾಳಿ ಇಂಗ್ಲೆಂಡ್ ವಿರುದ್ಧ 2–1 ಗೋಲುಗಳಿಂದ ರೋಚಕ ಗೆಲುವು ಸಾಧಿಸಿ ಫೈನಲ್‌ ಪ್ರವೇಶಿಸಿತು.

21 ವರ್ಷಗಳ ಬಳಿಕ ಅರ್ಜೆಂಟೀನಾ ಮತ್ತು ಇಂಗ್ಲೆಂಡ್ ತಂಡಗಳು ಮುಖಾಮುಖಿಯಾಗಿದ್ದವು. ಹೀಗಾಗಿ ಪಂದ್ಯ ಭಾರೀ ಕುತೂಲಕ ಕೆರಳಿಸಿತ್ತು. ಪಂದ್ಯ ಆರಂಭದಿಂದಲೇ ಎರಡೂ ತಂಡಗಳ ನಡುವೆ ತೀವ್ರ ದೈಹಿಕ ಪೈಪೋಟಿ ನಡೆಯಿತು. ಕಠಿಣ ಟ್ಯಾಕಲ್‌ ಗಳು ಮತ್ತು ಫೌಲ್‌ ಗಳಿಂದ ಮೊದಲಾರ್ಧ ಗೋಲುರಹಿತವಾಗಿ ಅಂತ್ಯಗೊಂಡಿತು.

ಆದರೆ ಮೊದಲಾರ್ಧದಲ್ಲಿ ಉಭಯ ತಂಡಗಳ ಆಟಗಾರರು ತೀವ್ರ ಆಕ್ರಮಣಕಾರಿ ಆಟಕ್ಕೆ ಮುಂದಾಗಿದ್ದರಿಂದ ಒಟ್ಟು 19 ಫೌಲ್‌ಗಳು ದಾಖಲಾದವು. ಪಂದ್ಯವನ್ನು ನಿಯಂತ್ರಿಸಲು ರೆಫರಿ ಇಸ್ಮಾಯಿಲ್ ಎಲ್ಫಾತ್ ಹರಸಾಹಸ ಪಡಬೇಕಾಯಿತು. ಜಾನ್ ಸ್ಟೋನ್ಸ್ ಅವರ ಹೆಡರ್ ಇಂಗ್ಲೆಂಡ್‌ ನ ಮೊದಲ ಅವಕಾಶವಾಗಿದ್ದರೆ, ಮೆಸ್ಸಿ ಮೇಲಿನ ಫೌಲ್‌ ಗೆ ಎಲಿಯಟ್ ಆಂಡರ್ಸನ್ ಮೊದಲ ಯೆಲ್ಲೋ ಕಾರ್ಡ್ ಪಡೆದರು.



ದ್ವಿತೀಯಾರ್ಧ ಆರಂಭದಲ್ಲೇ ಜೂಲಿಯನ್ ಅಲ್ವಾರೆಝ್ ಸತತ ಎರಡು ಪ್ರಯತ್ನಗಳಿಂದ ಇಂಗ್ಲೆಂಡ್ ಗೋಲ್‌ಕೀಪರ್ ಜೋರ್ಡನ್ ಪಿಕ್‌ಫೋರ್ಡ್ ಅವರನ್ನು ಪರೀಕ್ಷಿಸಿದರು. ಆದರೆ 55ನೇ ನಿಮಿಷದಲ್ಲಿ ಪಂದ್ಯಕ್ಕೆ ತಿರುವು ಸಿಕ್ಕಿತು. ಮಾರ್ಗನ್ ರೋಜರ್ಸ್ ನೀಡಿದ ನಿಖರ ಕ್ರಾಸ್ ಅನ್ನು ಆಂಥೋನಿ ಗಾರ್ಡನ್ ಗೋಲಾಗಿ ಪರಿವರ್ತಿಸಿ ಇಂಗ್ಲೆಂಡ್‌ ಗೆ 1–0 ಮುನ್ನಡೆ ತಂದುಕೊಟ್ಟರು. ಆದರೆ ಪಂದ್ಯ ಅಂತ್ಯದ ಕ್ಷಣಗಳಲ್ಲಿ ಅರ್ಜೆಂಟೀನಾ ಅದ್ಭುತ ಪುನರಾಗಮನ ನಡೆಸಿತು. 87ನೇ ನಿಮಿಷದಲ್ಲಿ ಎಂಜೊ ಫೆರ್ನಾಂಡಿಸ್ ಬಲಿಷ್ಠ ಹೊಡೆತದ ಮೂಲಕ ಸಮಬಲದ ಗೋಲು ದಾಖಲಿಸಿದರು. ನಂತರ ಹೆಚ್ಚುವರಿ ಸಮಯದಲ್ಲಿ ಮೆಸ್ಸಿ ನೀಡಿದ ನಿಖರ ಪಾಸ್ ಅನ್ನು ಲೌಟಾರೊ ಮಾರ್ಟಿನೆಜ್ ಗೋಲಾಗಿ ಪರಿವರ್ತಿಸಿ ಅರ್ಜೆಂಟೀನಾಕ್ಕೆ 2–1ರ ಮುನ್ನಡೆ ಹಾಗೂ ಫೈನಲ್ ಪ್ರವೇಶ ಖಚಿತಪಡಿಸಿದರು.

ಚೆನ್ನೈ ಸೂಪರ್ ಕಿಂಗ್ಸ್‌ಗೆ ಧೋನಿ ಮುಖ್ಯ ಕೋಚ್?

ಮೂರನೇ ಸ್ಥಾನಕ್ಕಾಗಿ ನಡೆಯಲಿರುವ ಪಂದ್ಯದಲ್ಲಿ ಇಂಗ್ಲೆಂಡ್‌ ತಂಡ ಫ್ರಾನ್ಸ್ ತಂಡವನ್ನು ಎದುರಿಸಲಿದೆ. ಮತ್ತೊಂದೆಡೆ, ಅರ್ಜೆಂಟೀನಾ ಭಾನುವಾರ ನಡೆಯಲಿರುವ ಫೈನಲ್‌ನಲ್ಲಿ ಸ್ಪೇನ್ ವಿರುದ್ಧ ಪ್ರಶಸ್ತಿ ಉಳಿಸಿಕೊಳ್ಳಲು ಹೋರಾಡಲಿದೆ.