ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಚೆನ್ನೈ ಸೂಪರ್ ಕಿಂಗ್ಸ್‌ಗೆ ಧೋನಿ ಮುಖ್ಯ ಕೋಚ್?

ಐಪಿಎಲ್‌ನಲ್ಲಿ ಧೋನಿ 278 ಪಂದ್ಯಗಳನ್ನು ಆಡಿದ್ದು, 5439 ರನ್ ಗಳಿಸಿದ್ದಾರೆ. ಭಾರತದ ಮಾಜಿ ನಾಯಕ, 2024 ರ ಋತುವಿಗೆ ಮುಂಚಿತವಾಗಿ ನಾಯಕತ್ವ ತ್ಯಜಿಸುವ ಮೊದಲು ಫ್ರಾಂಚೈಸಿಯನ್ನು ಐದು ಬಾರಿ ಚಾಂಪಿಯನ್‌ ಮಾಡಿದ್ದರು. ಕಳೆದ ಆವೃತ್ತಿಯಲ್ಲಿ ಗಾಯದ ಕಾರಣದಿಂದಾಗಿ ಒಂದೂ ಪಂದ್ಯವನ್ನು ಆಡರಲಿಲ್ಲ.

ಚೆನ್ನೈ ಸೂಪರ್ ಕಿಂಗ್ಸ್‌ಗೆ ಧೋನಿ ಮುಖ್ಯ ಕೋಚ್?

MS Dhoni -

Abhilash BC
Abhilash BC Jul 15, 2026 11:34 PM

ನವದೆಹಲಿ, ಜು.15: ಐದು ಬಾರಿಯ ಐಪಿಎಲ್‌ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್(ಸಿಎಸ್‌ಕೆ)ತಂಡವು ಮುಂಬರುವ ಟೂರ್ನಿಗೂ ಮುನ್ನವೇ ತಂಡದ ಮುಖ್ಯ ಕೋಚ್ ಆಗಿದ್ದ ಸ್ಟೀಫನ್ ಫ್ಲೆಮಿಂಗ್ ಅವರಿಂದ ಬೇರ್ಪಟ್ಟಿದ್ದು ಫ್ರಾಂಚೈಸಿ ಹೊಸ ಕೋಚ್‌ಗಾಗಿ ಹುಡುಕಾಟ ನಡೆಸುತ್ತಿದೆ. ನೂತನ ಕೋಚ್ ಆಗಲು ಕೇಳಿಬರುತ್ತಿರುವ ಅತ್ಯಂತ ಪ್ರಬಲ ಹೆಸರು ಎಂದರೆ ಅದು ಭಾರತೀಯ ಕ್ರಿಕೆಟ್‌ನ ದಿಗ್ಗಜ ಹಾಗೂ ಸಿಎಸ್‌ಕೆ ತಂಡದ ಮಹೇಂದ್ರ ಸಿಂಗ್‌ ಧೋನಿ.

ಧೋನಿ ಐಪಿಎಲ್‌ಗೆ ಇದುವರೆಗೂ ವಿದಾಯ ಹೇಳಿಲ್ಲ. ಮುಂಬರುವ ಆವೃತ್ತಿಗೂ ಮುನ್ನ ಅವರು ನಿವೃತ್ತಿ ಹೇಳುವ ಸಾಧ್ಯತೆ ಅಧಿಕವಾಗಿದೆ. ಈ ಮಧ್ಯೆ ಅಭಿಮಾನಿಗಳು ಸಾಮಾಜಿಕ ಮಾಧ್ಯಮದಲ್ಲಿ ಧೋನಿ ಅವರನ್ನು ಸಿಎಸ್‌ಕೆ ತಂಡದ ಮಾರ್ಗದರ್ಶಕರನ್ನಾಗಿ ಮಾಡುವಂತೆ ಒತ್ತಾಯಿಸಲಾರಂಭಿಸಿದ್ದಾರೆ.

ಎನ್. ಶ್ರೀನಿವಾಸನ್ ಪುತ್ರಿ ರೂಪಾ ಗುರುನಾಥ್ ಹಾಗೂ ಚೆನ್ನೈ ಸೂಪರ್ ಕಿಂಗ್ಸ್ ಕ್ರಿಕೆಟ್ ಲಿಮಿಟೆಡ್‌ನ ಪೂರ್ಣಕಾಲಿಕ ನಿರ್ದೇಶಕರು ಪ್ರಮುಖ ನಿರ್ಧಾರಗಳ ಮೇಲ್ವಿಚಾರಣೆ ನಡೆಸಲಿದ್ದಾರೆ.ಕ್ರಿಕೆಟ್‌ಗೆ ಸಂಬಂಧಿಸಿದ ಚರ್ಚೆಗಳು ಮುಂದುವರಿದಿದೆ.

ಐಪಿಎಲ್‌ನಲ್ಲಿ ಧೋನಿ 278 ಪಂದ್ಯಗಳನ್ನು ಆಡಿದ್ದು, 5439 ರನ್ ಗಳಿಸಿದ್ದಾರೆ. ಭಾರತದ ಮಾಜಿ ನಾಯಕ, 2024 ರ ಋತುವಿಗೆ ಮುಂಚಿತವಾಗಿ ನಾಯಕತ್ವ ತ್ಯಜಿಸುವ ಮೊದಲು ಫ್ರಾಂಚೈಸಿಯನ್ನು ಐದು ಬಾರಿ ಚಾಂಪಿಯನ್‌ ಮಾಡಿದ್ದರು. ಕಳೆದ ಆವೃತ್ತಿಯಲ್ಲಿ ಗಾಯದ ಕಾರಣದಿಂದಾಗಿ ಒಂದೂ ಪಂದ್ಯವನ್ನು ಆಡರಲಿಲ್ಲ.

ಗಿಲ್ ಔಟ್, ಇಶಾನ್ ಕಿಶನ್ ಇನ್?; ಇಂಗ್ಲೆಂಡ್ ವಿರುದ್ಧದ ಎರಡನೇ ಏಕದಿನ ಪಂದ್ಯಕ್ಕೆ ಭಾರತದ ಸಂಭಾವ್ಯ XI

ಅಂತಾರಾಷ್ಟ್ರೀಯ ಕ್ರಿಕೆಟ್‌ ನಿವೃತ್ತಿ ಹೇಳಿ ಅಷ್ಟಾಗಿ ಸಾರ್ವಜನಿಕವಾಗಿ ಕಾಣಿಸಿಕೊಳ್ಳ ಧೋನಿ ಇದಗ ಭಾರತ ತಂಡದ ಪಂದ್ಯಗಳನ್ನು ವೀಕ್ಷಿಸಲು ಮೈದಾನಗಳಿಗೆ ಬರಲಾರಂಭಿಸಿದ್ದಾರೆ. ಇಂಗ್ಲೆಂಡ್‌ನಲ್ಲಿ ನಡೆಯುತ್ತಿರುವ ಭಾರತ ಸರಣಿಯಲ್ಲಿ ಧೋನಿ ಹಾಜರಾಗಿದ್ದಾರೆ. ಟಿ20 ಹಾಗೂ ಮೊದಲ ಏಕದಿನ ಪಂದ್ಯದಲ್ಲಿ ಧೋನಿ ಪಂದ್ಯ ವೀಕ್ಷಿಸಿದ್ದರು.

ಧೋನಿ ಹೊರತುಪಡಿಸಿ ಭಾರತದ ಮಾಜಿ ಕ್ರಿಕೆಟಿಗ ಹೇಮಂಗ್ ಬದಾನಿ ಹೆಸರು ಕೂಡ ಬಲವಾಗಿ ಕೇಳಿಬಂದಿದೆ. ಬದಾನಿ ಕಳೆದ ಎರಡು ಋತುಗಳಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಮುಖ್ಯ ಕೋಚ್ ಆಗಿದ್ದರು. ಇದೀಗ ಸಿಎಸ್‌ಕೆ ತಂಡ ಸೇರುವ ವಿಶ್ವಾಸದಲ್ಲಿದ್ದಾರೆ. ಬದಾನಿ ಮಾರ್ಗದರ್ಶನದಲ್ಲಿ ಡೆಲ್ಲಿ ತಂಡವು 2025 ಹಾಗೂ 2026ರ ಆವೃತ್ತಿಗಳ ಐಪಿಎಲ್‌ನಲ್ಲಿ ಕ್ರಮವಾಗಿ ಐದನೇ ಹಾಗೂ ಆರನೇ ಸ್ಥಾನ ಪಡೆದಿತ್ತು. ದಿಗ್ಗಜ ರಾಹುಲ್‌ ದ್ರಾವಿಡ್‌ ಅವರ ಹೆಸರು ಕೂಡ ಕೇಳಿಬಂದಿದೆ.

ಫ್ಲೆಮಿಂಗ್ ಮಾರ್ಗದರ್ಶನದಲ್ಲಿ ಸಿಎಸ್‌ಕೆ ತಂಡವು ಐಪಿಎಲ್‌ನಲ್ಲಿ 10 ಬಾರಿ ಫೈನಲ್‌ಗೆ ತಲುಪಿದೆ. ಐದು ಬಾರಿ ಪ್ರಶಸ್ತಿ ಜಯಿಸಿದೆ. ಒಂದು ಬಾರಿ ಚಾಂಪಿಯನ್ಸ್ ಲೀಗ್ ಗೆದ್ದಿತ್ತು.