ಬೆಂಗಳೂರು, ಫೆ.3: ಫೆ.15ರಂದು ಭಾರತ ವಿರುದ್ಧ ಶ್ರೀಲಂಕಾದ ಕೊಲಂಬೊದಲ್ಲಿ ನಿಗದಿಯಾಗಿರುವ ಟಿ20 ವಿಶ್ವಕಪ್(T20 World Cup) ಪಂದ್ಯವನ್ನು ಬಹಿಷ್ಕರಿಸುವುದಾಗಿ ಪಾಕಿಸ್ತಾನ ಘೋಷಿಸಿದೆ. ಪಾಕ್ ಸರ್ಕಾರ, ವಿಶ್ವಕಪ್‌ನಲ್ಲಿ ಆಡಲು ತಂಡಕ್ಕೆ ಅನುಮತಿ ನೀಡಿದೆ. ಆದರೆ ಫೆ.15ರಂದು ನಡೆಯಬೇಕಿದ್ದ ಭಾರತ ವಿರುದ್ಧ ಪಂದ್ಯದಲ್ಲಿ ಕಣಕ್ಕಿಳಿಯುವುದಿಲ್ಲ ಎಂದಿದೆ. ಇದರೊಂದಿಗೆ ಭಾರತ-ಪಾಕ್ ರದ್ದುಗೊಂಡಿದೆ. ಆದರೆ, ಐಸಿಸಿ ಟೂರ್ನಿಯಲ್ಲಿ ಪಂದ್ಯ ಬಹಿಷ್ಕಾರ ಇದೇ ಮೊದಲಲ್ಲ.
ಭದ್ರತೆ ಮತ್ತು ರಾಜಕೀಯ ಕಾರಣಗಳಿಂದಾಗಿ ಹಲವಾರು ಐಸಿಸಿ ಪಂದ್ಯಗಳನ್ನು ಬಹಿಷ್ಕರಿಸಿದ ನಿದರ್ಶನಗಳಿಗೆ. ಈ ನಿರ್ಧಾರಗಳು ಪಂದ್ಯಾವಳಿಯ ಫಲಿತಾಂಶಗಳ ಮೇಲೆ ಶಾಶ್ವತ ಪರಿಣಾಮ ಬೀರಿದ್ದವು. ಇದುವರೆಗೆ ನಡೆದ ಪಂದ್ಯ ಬಹಿಷ್ಕಾರದ ಕಿರು ವರದಿ ಇಲ್ಲಿದೆ.
ಆಸ್ಟ್ರೇಲಿಯಾ, ವೆಸ್ಟ್ ಇಂಡೀಸ್; ಶ್ರೀಲಂಕಾ ಪ್ರಯಾಣ ನಿರಾಕರಣೆ
ಐಸಿಸಿ ಟೂರ್ನಿಯಲ್ಲಿ ತಂಡಗಳು ಪಂದ್ಯಗಳನ್ನು ಕಳೆದುಕೊಂಡ ಮೊದಲ ನಿದರ್ಶನ 1996 ರಲ್ಲಿ ಆಗಿತ್ತು. ಆಗ ಕೇವಲ ಒಂದು ತಂಡವಲ್ಲ, ಆಸ್ಟ್ರೇಲಿಯಾ ಮತ್ತು ವೆಸ್ಟ್ ಇಂಡೀಸ್ ಯುದ್ಧಪೀಡಿತ ಶ್ರೀಲಂಕಾದಲ್ಲಿ ಆಡಲು ನಿರಾಕರಿಸಿದ್ದವು. ಆಗ ಐಸಿಸಿ ಪಂದ್ಯಗಳ ಅಂಕವನ್ನು ಶ್ರೀಲಂಕಾಕ್ಕೆ ನೀಡಿತ್ತು. ಆದರೆ ಫೈನಲ್‌ನಲ್ಲಿ ಆಸ್ಟ್ರೇಲಿಯಾ ಮತ್ತು ಶ್ರೀಲಂಕಾ ಮುಖಾಮುಖಿಯಾದವು. ಅಲ್ಲಿ ಶ್ರೀಲಂಕಾ ತಂಡ ಆಸೀಸ್ ಸೋಲಿಸಿ ತಮ್ಮ ಮೊದಲ ಮತ್ತು ಏಕೈಕ ಐಸಿಸಿ ಕ್ರಿಕೆಟ್ ವಿಶ್ವಕಪ್ ಟ್ರೋಫಿಯನ್ನು ಗೆದ್ದಿತು.
2003ರಲ್ಲಿ
2003 ರಲ್ಲಿ ದಕ್ಷಿಣ ಆಫ್ರಿಕಾ, ಜಿಂಬಾಬ್ವೆ ಮತ್ತು ಕೀನ್ಯಾ ಜಂಟಿಯಾಗಿ ಆಯೋಜಿಸಿದ್ದ ಕ್ರಿಕೆಟ್ ವಿಶ್ವಕಪ್ ಸಮಯದಲ್ಲಿ ಎರಡನೇ ಬಾರಿಗೆ ತಂಡಗಳು ಪಂದ್ಯವನ್ನು ಬಹಿಷ್ಕರಿಸಿತ್ತು. ಎರಡೂ ದೇಶಗಳ ನಡುವಿನ ರಾಜಕೀಯ ಉದ್ವಿಗ್ನತೆಯಿಂದಾಗಿ ಇಂಗ್ಲೆಂಡ್ ತಂಡವು ಜಿಂಬಾಬ್ವೆ ವಿರುದ್ಧದ ಪಂದ್ಯವನ್ನು ಆಡದಿರಲು ನಿರ್ಧರಿಸಿತು. ಇನ್ನೊಂದೆಡೆ ಪಂದ್ಯದ ದಿನಾಂಕಕ್ಕೆ ತಿಂಗಳುಗಳು ಬಾಕಿ ಇರುವಾಗ ಮೊಂಬಾಸಾ ನಗರದಲ್ಲಿ ಬಾಂಬ್ ಸ್ಫೋಟದ ಕಾರಣ ನ್ಯೂಜಿಲೆಂಡ್ ತಂಡ ಕೀನ್ಯಾಕ್ಕೆ ಪ್ರಯಾಣಿಸಲು ನಿರಾಕರಿಸಿತು. ಎರಡೂ ತಂಡಗಳು ತಮ್ಮ ಪಂದ್ಯಗಳನ್ನು ತಟಸ್ಥ ಸ್ಥಳದಲ್ಲಿ ಆಡಲು ಬಯಸಿದ್ದವು, ಆದರೆ ಐಸಿಸಿ ಅವರ ವಿನಂತಿಯನ್ನು ನಿರಾಕರಿಸಿತು ಮತ್ತು ಜಿಂಬಾಬ್ವೆ ಮತ್ತು ಕೀನ್ಯಾಗೆ ವಾಕ್‌ಓವರ್ ಗೆಲುವುಗಳನ್ನು ನೀಡಿತು.
2006 ರಲ್ಲಿ, ಆಸ್ಟ್ರೇಲಿಯಾವು ಬಾಂಗ್ಲಾದೇಶ ಆಯೋಜಿಸುತ್ತಿದ್ದ ಐಸಿಸಿ ಯು-19 ವಿಶ್ವಕಪ್‌ನಿಂದ ಭದ್ರತಾ ಕಾರಣಗಳಿಂದ ಹಿಂದೆ ಸರಿಯಿತು. ಮತ್ತು ಬದಲಿಯಾಗಿ ಸ್ಕಾಟ್ಲೆಂಡ್ ಆಡಿತ್ತು. ಇದೀಗ 2026ರ ಟಿ20 ವಿಶ್ವಕಪ್‌ನಲ್ಲಿ ಬಾಂಗ್ಲಾದೇಶವು ಭದ್ರತಾ ಕಾರಣಗಳಿಂದ ಭಾರತದಲ್ಲಿ ತಮ್ಮ ಪಂದ್ಯಗಳನ್ನು ಆಡಲು ನಿರಾಕರಿಸಿ ಟೂರ್ನಿಯಿಂದ ಹಿಂದೆ ಸರಿಯಿತು. ಮತ್ತು ಬದಲಿಯಾಗಿ ಸ್ಕಾಟ್ಲೆಂಡ್ ಅವಕಾಶ ಪಡೆಯಿತು.
ಟಿ20 ವಿಶ್ವಕಪ್‌ಗೆ ಆಸ್ಟ್ರೇಲಿಯಾ ಅಂತಿಮ ತಂಡ ಪ್ರಕಟ; ಪ್ಯಾಟ್ ಕಮ್ಮಿನ್ಸ್ ಔಟ್
2025ರಲ್ಲಿ ಚಾಂಪಿಯನ್ಸ್ ಟ್ರೋಫಿಯಲ್ಲಿ ಭಾರತ ತಂಡ ಪಾಕಿಸ್ತಾನದಲ್ಲಿ ಆಡಲು ನಿರಾಕರಿಸಿತ್ತು. ಹೀಗಾಗಿ ಪಂದ್ಯವನ್ನು ತಟಸ್ಥ ತಾಣವಾದ ದುಬೈನಲ್ಲಿ ನಡೆಸಲಾಗಿತ್ತು. ಇದೀಗ ಪಾಕಿಸ್ತಾನ ಭಾರತ ವಿರುದ್ಧದ ಗುಂಪು ಪಂದ್ಯವನ್ನು ಆಡಲು ನಿರಾಕರಿಸಿದೆ. ಆದರೆ ನಾಕೌಟ್‌ನಲ್ಲಿ ಆಡಲಿದೆಯಾ ಎಂದು ಕಾದು ನೋಡಬೇಕಿದೆ.