ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

ಟಿ20 ವಿಶ್ವಕಪ್‌ಗೆ ಆಸ್ಟ್ರೇಲಿಯಾ ಅಂತಿಮ ತಂಡ ಪ್ರಕಟ; ಪ್ಯಾಟ್ ಕಮ್ಮಿನ್ಸ್ ಔಟ್

Australia squad for T20 World Cup: ಆಸ್ಟ್ರೇಲಿಯಾ, ಫೆಬ್ರವರಿ 11 ರಂದು ಕೊಲಂಬೊದ ಆರ್. ಪ್ರೇಮದಾಸ ಕ್ರೀಡಾಂಗಣದಲ್ಲಿ ಐರ್ಲೆಂಡ್ ವಿರುದ್ಧ ಟಿ20 ವಿಶ್ವಕಪ್ 2026 ರಲ್ಲಿ ತನ್ನ ಅಭಿಯಾನವನ್ನು ಆರಂಭಿಸಲಿದೆ. ಆಸೀಸ್‌ ಎಲ್ಲ ಲೀಗ್‌ ಪಂದ್ಯವನ್ನು ಲಂಕಾದಲ್ಲಿ ಆಡಲಿದೆ.

ಟಿ20 ವಿಶ್ವಕಪ್‌ಗೆ ಆಸ್ಟ್ರೇಲಿಯಾ ಅಂತಿಮ ತಂಡ ಪ್ರಕಟ; ಕಮ್ಮಿನ್ಸ್ ಔಟ್

Pat Cummins -

Abhilash BC
Abhilash BC Jan 31, 2026 3:00 PM

ಸಿಡ್ನಿ, ಜ.31: ಮುಂದಿನ ವಾರದಿಂದ ಭಾರತ ಮತ್ತು ಶ್ರೀಲಂಕಾದಲ್ಲಿ ನಡೆಯಲಿರುವ ಐಸಿಸಿ ಪುರುಷರ ಟಿ20 ವಿಶ್ವಕಪ್‌(T20 World Cup 2026)ಗಾಗಿ ಆಸ್ಟ್ರೇಲಿಯಾ ಶನಿವಾರ ತನ್ನ 15 ಸದಸ್ಯರ ತಂಡವನ್ನು ಪ್ರಕಟಿಸಿದೆ. ಪ್ರಧಾನ ವೇಗಿ, ಟೆಸ್ಟ್‌ ತಂಡದ ನಾಯಕ ಪ್ಯಾಟ್ ಕಮ್ಮಿನ್ಸ್(Pat Cummins) ಬೆನ್ನುನೋವಿನಿಂದಾಗಿ ಪಂದ್ಯಾವಳಿಯಿಂದ ಹೊರಗುಳಿಯಲಿದ್ದಾರೆ. ಅವರ ಬದಲು ವೇಗಿ ಬೆನ್ ದ್ವಾರಶುಯಿಸ್ ಸ್ಥಾನ ಪಡೆದಿದ್ದಾರೆ.

ಈ ಹಿಂದೆ ಪ್ರಕಟಿಸಿದ್ದ ತಾತ್ಕಾಲಿಕ ತಂಡದಲ್ಲಿ ಪ್ಯಾಟ್‌ ಕಮಿನ್ಸ್‌ ಅವರನ್ನೂ ಆಯ್ಕೆ ಮಾಡಲಾಗಿತ್ತು. ಆದರೆ ಅವರು ಸಂಪೂರ್ಣವಾಗಿ ಗುಣಮುಖರಾಗದ ಕಾರಣ ಅವರನ್ನು ಅಂತಿಮ ತಂಡದಿಂದ ಕೈಬಿಡಲಾಗಿದೆ. ಇದಲ್ಲದೆ, ತಾತ್ಕಾಲಿಕ ತಂಡದಲ್ಲಿದ್ದ ಮ್ಯಾಟ್ ಶಾರ್ಟ್ ಅವರನ್ನು ಕೈಬಿಡಲಾಗಿದ್ದು, ಅವರ ಸ್ಥಾನದಲ್ಲಿ ಮ್ಯಾಟ್ ರೆನ್‌ಶಾ ಅವರನ್ನು ಆಯ್ಕೆ ಮಾಡಲಾಗಿದೆ. ಅನುಭವಿ ಬ್ಯಾಟ್ಸ್‌ಮನ್ ಸ್ಟೀವ್ ಸ್ಮಿತ್ ತಂಡದಲ್ಲಿ ಸ್ಥಾನ ಪಡೆಯಲು ಸಾಧ್ಯವಾಗಲಿಲ್ಲ. ತಂಡವನ್ನು ಮಿಚೆಲ್‌ ಮಾರ್ಷ್‌ ಮುನ್ನಡೆಸಲಿದ್ದಾರೆ.

"ಬೆನ್ನಿನ ಗಾಯದಿಂದ ಚೇತರಿಸಿಕೊಳ್ಳಲು ಪ್ಯಾಟ್‌ಗೆ ಹೆಚ್ಚಿನ ಸಮಯ ಬೇಕಾಗಿರುವುದರಿಂದ, ಅವರ ಬದಲಿಗೆ ದ್ವಾರಶುಯಿಸ್‌ಗೆ ಅವಕಾಶ ನೀಡಲಾಗಿದೆ. ಅವರು ಎಡಗೈ ವೇಗದ ಬೌಲರ್ ಆಗಿದ್ದು, ಕ್ರಿಯಾತ್ಮಕ ಫೀಲ್ಡಿಂಗ್ ಮತ್ತು ಬ್ಯಾಟಿಂಗ್‌ ಸಾಮರ್ಥ್ಯವನ್ನು ಹೊಂದಿದ್ದಾರೆ. ಉತ್ತಮ ವೇಗದಲ್ಲಿ ಚೆಂಡನ್ನು ಸ್ವಿಂಗ್ ಮಾಡುವ ಅವರ ಸಾಮರ್ಥ್ಯ ತಂಡದ ಒಟ್ಟಾರೆ ರಚನೆಗೆ ಸೂಕ್ತವಾಗಿರುತ್ತದೆ ಎಂದು ನಾವು ನಂಬುತ್ತೇವೆ" ಎಂದು ಆಸ್ಟ್ರೇಲಿಯಾದ ಆಯ್ಕೆದಾರ ಟೋನಿ ಡೋಡೆಮೈಡ್ ಹೇಳಿದರು.

T20 World Cup 2026: ಟಿ20 ವಿಶ್ವಕಪ್‌ ಟೂರ್ನಿಗೆ ಅಂಪೈರ್‌ಗಳನ್ನು ಪ್ರಕಟಿಸಿದ ಐಸಿಸಿ!

ಆಸ್ಟ್ರೇಲಿಯಾ, ಫೆಬ್ರವರಿ 11 ರಂದು ಕೊಲಂಬೊದ ಆರ್. ಪ್ರೇಮದಾಸ ಕ್ರೀಡಾಂಗಣದಲ್ಲಿ ಐರ್ಲೆಂಡ್ ವಿರುದ್ಧ ಟಿ20 ವಿಶ್ವಕಪ್ 2026 ರಲ್ಲಿ ತನ್ನ ಅಭಿಯಾನವನ್ನು ಆರಂಭಿಸಲಿದೆ. ಆಸೀಸ್‌ ಎಲ್ಲ ಲೀಗ್‌ ಪಂದ್ಯವನ್ನು ಲಂಕಾದಲ್ಲಿ ಆಡಲಿದೆ.

ಆಸ್ಟ್ರೇಲಿಯಾ ತಂಡ

ಮಿಚೆಲ್ ಮಾರ್ಷ್ (ನಾಯಕ), ಕ್ಸೇವಿಯರ್ ಬಾರ್ಟ್ಲೆಟ್, ಕೂಪರ್ ಕಾನೊಲಿ, ಟಿಮ್ ಡೇವಿಡ್, ಬೆನ್ ದ್ವಾರ್ಶುಯಿಸ್, ಕ್ಯಾಮರೂನ್ ಗ್ರೀನ್, ನಾಥನ್ ಎಲ್ಲಿಸ್, ಜೋಶ್ ಹ್ಯಾಜಲ್‌ವುಡ್, ಟ್ರಾವಿಸ್ ಹೆಡ್, ಜೋಶ್ ಇಂಗ್ಲಿಸ್, ಮ್ಯಾಥ್ಯೂ ಕುಹ್ನೆಮನ್, ಗ್ಲೆನ್ ಮ್ಯಾಕ್ಸ್‌ವೆಲ್, ಮ್ಯಾಥ್ಯೂ ರೆನ್‌ಶಾ, ಮಾರ್ಕಸ್ ಸ್ಟೊಯಿನಿಸ್, ಆಡಮ್ ಜಂಪಾ.