ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಲಕ್ನೋ ಸೂಪರ್ ಜೈಂಟ್ಸ್ vs ಡೆಲ್ಲಿ ಕ್ಯಾಪಿಟಲ್ಸ್‌ ತಂಡದ ಐಪಿಎಲ್‌ ದಾಖಲೆ ಹೇಗಿದೆ?

LSG vs DC IPL 2026: ಡೆಲ್ಲಿ ತಂಡವು ಈ ಬಾರಿ ಉತ್ತಮ ಆಟಗಾರರಿಂದ ಸಮತೋಲನವಾಗಿದೆ. ಸ್ಪಿನ್ನರ್ ಮತ್ತು ನಾಯಕ ಅಕ್ಷರ್ ಪಟೇಲ್ ನೇತೃತ್ವದ ಡೆಲ್ಲಿ ತಂಡಕ್ಕೆ ಕನ್ನಡಿಗ ಕೆ.ಎಲ್. ರಾಹುಲ್ ಅವರ ಬಲ ಇದೆ. ರಣಜಿ ಟ್ರೋಫಿ ವಿಜೇತ ಜಮ್ಮು–ಕಾಶ್ಮೀರ ತಂಡದ ‘ಹೀರೊ’ ವೇಗದ ಬೌಲರ್ ಅಕೀಬ್ ನಬಿ ದಾರ್ ಅವರ ಮೇಲೆ ತಂಡವು ಅಪಾರ ನಿರೀಕ್ಷೆ ಇಟ್ಟುಕೊಂಡಿದೆ.

rishabh pant and axar patel

ಲಕ್ನೋ, ಎ.1: ಇಂದು(ಬುಧವಾರ) ಲಕ್ನೋದ ಏಕಾನಾ ಕ್ರೀಡಾಂಗಣದಲ್ಲಿ ಮುಖಾಮುಖಿಯಾಗಲಿರುವ ಲಕ್ನೋ ಸೂಪರ್ ಜೈಂಟ್ಸ್(Lucknow Super Giants) ಮತ್ತು ಡೆಲ್ಲಿ ಕ್ಯಾಪಿಟಲ್ಸ್(Delhi Capitals) ತಂಡಗಳು ಐಪಿಎಲ್ 2026ರ(IPL 2026) ಅಭಿಯಾನವನ್ನು ಪ್ರಾರಂಭಿಸುವ ಕೊನೆಯ ಎರಡು ತಂಡಗಳಾಗಿವೆ. 2025 ರಲ್ಲಿಯೂ ಉಭಯ ತಂಡಗಳು ಮುಖಾಮುಖಿಯಾಗುವ ಮೂಲಕ ತಮ್ಮ ಐಪಿಎಲ್ ಅಭಿಯಾನ ಆರಂಭಿಸಿದ್ದವು.

ವಿಶಾಖಪಟ್ಟಣದಲ್ಲಿ ನಡೆದ ಅಂದಿನ ಪಂದ್ಯದಲ್ಲಿ 210 ರನ್‌ಗಳ ಗುರಿಯನ್ನು ಬೆನ್ನಟ್ಟಿದ ಡೆಲ್ಲಿ ಕ್ಯಾಪಿಟಲ್ಸ್‌ ಅಶುತೋಷ್ ಶರ್ಮಾ ಅವರ ಅಸಾಮಾನ್ಯ 66* ರನ್ ಬ್ಯಾಟಿಂಗ್‌ ಬಲದಿಂದ ಡೆಲ್ಲಿ ಕ್ಯಾಪಿಟಲ್ಸ್ ಒಂದು ವಿಕೆಟ್ ಅಂತರದ ರೋಚಕ ಜಯ ಸಾಧಿಸಿತ್ತು. ಇತ್ತಂಡಗಳ ಈ ಬಾರಿಯ ಮೊದಲ ಮುಖಾಮುಖಿಯಲ್ಲಿ ಯಾರು ಮೇಲುಗೈ ಸಾಧಿಸಲಿದ್ದಾರೆ ಎಂದು ಕಾದು ನೋಡಬೇಕಿದೆ.

LSG vs DC ಮುಖಾಮುಖಿ ದಾಖಲೆ

ಆಡಿರುವ ಪಂದ್ಯಗಳು: 7

ಲಕ್ನೋ ಸೂಪರ್ ಜೈಂಟ್ಸ್ ಗೆಲುವು: 3

ದೆಹಲಿ ಕ್ಯಾಪಿಟಲ್ಸ್ ಗೆಲುವು: 4

ಎಲ್‌ಎಸ್‌ಜಿ vs ಡಿಸಿ ಪಂದ್ಯಗಳಲ್ಲಿ ಅತಿ ಹೆಚ್ಚು ರನ್‌ಗಳು

ಕೆ.ಎಲ್ ರಾಹುಲ್ 210 ರನ್

ನಿಕೋಲಸ್ ಪೂರನ್ 181‌ ರನ್

ರಿಷಬ್ ಪಂತ್ 157‌ ರನ್

ಮಿಚೆಲ್ ಮಾರ್ಷ್ 154‌ ರನ್

ಕ್ವಿಂಟನ್ ಡಿ ಕಾಕ್ 134‌ ರನ್‌

ಎಲ್‌ಎಸ್‌ಜಿ vs ಡಿಸಿ ಪಂದ್ಯಗಳಲ್ಲಿ ಅತಿ ಹೆಚ್ಚು ವಿಕೆಟ್‌ಗಳು

ರವಿ ಬಿಷ್ಣೋಯ್- 10 ವಿಕೆಟ್‌

ಕುಲದೀಪ್ ಯಾದವ್- 9 ವಿಕೆಟ್‌

ಮುಖೇಶ್ ಕುಮಾರ್- 7 ವಿಕೆಟ್‌

ಶಾರ್ದೂಲ್ ಠಾಕೂರ್- 6 ವಿಕೆಟ್‌

ಮಾರ್ಕ್ ವುಡ್- 5 ವಿಕೆಟ್‌

PBKS vs GT: ಕೊನೊಲಿ ಸಿಕ್ಸರ್‌ ಕಂಡು ದಂಗಾದ ವಿಶ್ವದ ನಂ.1 ಟಿ20 ಬೌಲರ್‌ ರಶೀದ್‌ ಖಾನ್‌; ವಿಡಿಯೊ ವೈರಲ್‌

ಡೆಲ್ಲಿ ತಂಡವು ಈ ಬಾರಿ ಉತ್ತಮ ಆಟಗಾರರಿಂದ ಸಮತೋಲನವಾಗಿದೆ. ಸ್ಪಿನ್ನರ್ ಮತ್ತು ನಾಯಕ ಅಕ್ಷರ್ ಪಟೇಲ್ ನೇತೃತ್ವದ ಡೆಲ್ಲಿ ತಂಡಕ್ಕೆ ಕನ್ನಡಿಗ ಕೆ.ಎಲ್. ರಾಹುಲ್ ಅವರ ಬಲ ಇದೆ. ರಣಜಿ ಟ್ರೋಫಿ ವಿಜೇತ ಜಮ್ಮು–ಕಾಶ್ಮೀರ ತಂಡದ ‘ಹೀರೊ’ ವೇಗದ ಬೌಲರ್ ಅಕೀಬ್ ನಬಿ ದಾರ್ ಅವರ ಮೇಲೆ ತಂಡವು ಅಪಾರ ನಿರೀಕ್ಷೆ ಇಟ್ಟುಕೊಂಡಿದೆ. ಉಳಿದಂತೆ ಕೈಲ್ ಜೆಮಿಸನ್, ಟಿ. ನಟರಾಜ್, ಮುಕೇಶ್ ಕುಮಾರ್ ಮತ್ತು ಕುಲದೀಪ್ ಯಾದವ್ ತಂಡದಲ್ಲಿರುವ ಸ್ಟಾರ್‌ ಬೌಲರ್‌ಗಳಾಗಿದ್ದಾರೆ.

ಸಂಭಾವ್ಯ ಆಡುವ ಬಳಗ

ಲಕ್ನೋ ಸೂಪರ್‌ ಜೈಂಟ್ಸ್‌: ಮಿಚೆಲ್ ಮಾರ್ಷ್, ಐಡೆನ್ ಮಾರ್ಕ್ರಾಮ್, ರಿಷಭ್ ಪಂತ್ (ನಾಯಕ ಮತ್ತು ವಿ.ಕೀ.), ನಿಕೋಲಸ್ ಪೂರನ್, ಆಯುಷ್ ಬಡೋನಿ, ಅಬ್ದುಲ್ ಸಮದ್, ಅನ್ರಿಚ್ ನಾರ್ಟ್ಜೆ, ಮೊಹಮ್ಮದ್ ಶಮಿ, ಅವೇಶ್ ಖಾನ್, ಮಯಾಂಕ್ ಯಾದವ್, ದಿಗ್ವೇಶ್ ರಾಠಿ.

ಡೆಲ್ಲಿ ಕ್ಯಾಪಿಟಲ್ಸ್‌: ಪಾತುಮ್ ನಿಸ್ಸಾಂಕ, ಕೆ.ಎಲ್ ರಾಹುಲ್ (ವಿ.ಕೀ.), ನಿತೀಶ್ ರಾಣಾ, ಟ್ರಿಸ್ಟಾನ್ ಸ್ಟಬ್ಸ್, ಡೇವಿಡ್ ಮಿಲ್ಲರ್, ಅಕ್ಷರ್‌ ಪಟೇಲ್ (ನಾಯಕ), ಅಶುತೋಷ್ ಶರ್ಮಾ, ವಿಪ್ರಜ್ ನಿಗಮ್, ಔಕಿಬ್ ನಬಿ, ಕುಲದೀಪ್ ಯಾದವ್, ಲುಂಗಿ ಎನ್‌ಗಿಡಿ.