PBKS vs GT: ಕೊನೊಲಿ ಸಿಕ್ಸರ್ ಕಂಡು ದಂಗಾದ ವಿಶ್ವದ ನಂ.1 ಟಿ20 ಬೌಲರ್ ರಶೀದ್ ಖಾನ್; ವಿಡಿಯೊ ವೈರಲ್
Rashid Khan's Stunned Reaction: ಎಡಗೈ ವೇಗಿ ಅರ್ಶ್‌ದೀಪ್ ಸಿಂಗ್ ಈ ಪಂದ್ಯದಲ್ಲಿ ದುಬಾರಿ ಬೌಲಿಂಗ್ ನಡೆಸಿದರು. 11 ಎಸೆತಗಳ ಓವರ್ ಎಸೆಯುವ ಮೂಲಕ ಅನಗತ್ಯ ಪಟ್ಟಿಯಲ್ಲಿ ತಮ್ಮ ಹೆಸರನ್ನು ಸೇರಿಸಿಕೊಂಡರು. ಇನಿಂಗ್ಸ್‌ನ ಅಂತಿಮ ಓವರ್‌ನಲ್ಲಿ ಅರ್ಷದೀಪ್ ಸಿಂಗ್ ಒಟ್ಟು 11ಎಸೆತ ಹಾಕಿದರು. ಇದರಲ್ಲಿ ಅವರು ನಾಲ್ಕು ವೈಡ್‌ಗಳು ಮತ್ತು ಒಂದು ನೋ-ಬಾಲ್ ಎಸೆದರು.
Cooper Connolly -
ಮುಲ್ಲನ್‌ಪುರ, ಎ.1: ಮಂಗಳವಾರ (ಮಾರ್ಚ್ 31) ಮುಲ್ಲನ್‌ಪುರದಲ್ಲಿ ಗುಜರಾತ್ ಟೈಟಾನ್ಸ್(PBKS vs GT) ವಿರುದ್ಧ ಐಪಿಎಲ್(IPL 2026)ನಲ್ಲಿ ಪದಾರ್ಪಣೆ ಮಾಡಿದ ಆಸ್ಟ್ರೇಲಿಯಾದ 22 ವರ್ಷದ ಆಲ್‌ರೌಂಡರ್ ಕೂಪರ್ ಕೊನೊಲಿ(Cooper Connolly) ಅವರು ವಿಶ್ವದ ನಂ.1 ಬೌಲರ್ ರಶೀದ್ ಖಾನ್ ಓವರ್‌ನಲ್ಲಿ ಬಾರಿಸಿದ ಒಂದು ಸಿಕ್ಸರ್ 103 ಮೀ ದೂರ ಕ್ರಮಿಸಿದೆ. ಈ ಸಿಕ್ಸರ್ ಕಂಡು ರಶೀದ್ ಖಾನ್ ಒಂದು ಕ್ಷಣ(Rashid Khan's Stunned Reaction) ದಂಗಾದರು. ಈ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದೆ.
163 ರನ್‌ಗಳ ಗುರಿ ಬೆನ್ನಟ್ಟುವಿಕೆಯಲ್ಲಿ ಮೂರನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ನೆಡೆಸಿದ ಕೊನೊಲಿ ತಲಾ 5 ಸಿಕ್ಸರ್ ಮತ್ತು ಬೌಂಡರಿ ಬಾರಿಸಿ ಅಜೇಯ 72 ರನ್ ಗಳಿಸಿ ತಂಡವನ್ನು ಗೆಲುವಿನ ದಡ ಸೇರಿಸಿದರು. ಗುಜರಾತ್ ಬೌಲಿಂಗ್ ಇನಿಂಗ್ಸ್‌ನ 8ನೇ ಓವರ್ ರಶೀದ್ ಖಾನ್ ಎಸೆದರು. ಈ ಓವರ್‌ನ ಎರಡನೇ ಎಸೆತವನ್ನು ಕೊನೊಲಿ ಸಿಕ್ಸರ್ ಬಾರಿಸಿದರು. ಸಿಕ್ಸರ್ ಬಾರಿಸಿದ ನಂತರ, ರಶೀದ್ ಮೂಕವಿಸ್ಮಿತರಾದರು ಮತ್ತು ಅವರ ದಿಗ್ಭ್ರಮೆಗೊಂಡ ಪ್ರತಿಕ್ರಿಯೆ ಈಗ ಅಂತರ್ಜಾಲದಲ್ಲಿ ವೈರಲ್ ಆಗುತ್ತಿದೆ.
𝟏𝟎𝟑 𝐌𝐄𝐓𝐑𝐄𝐒 𝐨𝐟 𝐦𝐚𝐲𝐡𝐞𝐦 🤯
— Star Sports (@StarSportsIndia) March 31, 2026
Cooper Connolly rocks back, frees the arms and sends it soaring into the second tier 🚀#TATAIPL 2026 | #PBKSvGT | LIVE NOW 👉 https://t.co/8O2J6XJtcm pic.twitter.com/jXyDDu3Ohs
ಆಸ್ಟ್ರೇಲಿಯಾ ಪರ ಮೂರು ಸ್ವರೂಪಗಳಲ್ಲಿ ಆಡಿರುವ ಕೊನೊಲಿ, ವಿಕೆಟ್‌ಕೀಪರ್–ಬ್ಯಾಟರ್ ಪ್ರಭಸಿಮ್ರನ್ ಸಿಂಗ್ ಜೊತೆಗೂಡಿ 47 ಎಸೆತಗಳಲ್ಲಿ 76 ರನ್ ಸೂರೆ ಮಾಡಿದರು. ಕಳೆದ ಋತುವಿನಲ್ಲಿ ಪಿಬಿಕೆಎಸ್ ಪರ 500 ಕ್ಕೂ ಹೆಚ್ಚು ರನ್ ಗಳಿಸಿದ್ದ ಪ್ರಭಸಿಮ್ರನ್ 24 ಎಸೆತಗಳಲ್ಲಿ 37 ರನ್ ಗಳಿಸಿದರು. ಅವರು ಒಂದು ಬೌಂಡರಿ ಮತ್ತು ನಾಲ್ಕು ಸಿಕ್ಸರ್‌ಗಳನ್ನು ಬಾರಿಸಿದರು. ಅವುಗಳಲ್ಲಿ ಎರಡು ಕಗಿಸೊ ರಬಾಡ ಅವರ ಓವರ್‌ನಲ್ಲಿ ಸತತ ಎಸೆತಗಳಲ್ಲಿ ಬಂದವು.
ಅರ್ಶ್‌ದೀಪ್ ವಿಫಲ ಪ್ರದರ್ಶನ
ಎಡಗೈ ವೇಗಿ ಅರ್ಶ್‌ದೀಪ್ ಸಿಂಗ್ ಈ ಪಂದ್ಯದಲ್ಲಿ ದುಬಾರಿ ಬೌಲಿಂಗ್ ನಡೆಸಿದರು. 11 ಎಸೆತಗಳ ಓವರ್ ಎಸೆಯುವ ಮೂಲಕ ಅನಗತ್ಯ ಪಟ್ಟಿಯಲ್ಲಿ ತಮ್ಮ ಹೆಸರನ್ನು ಸೇರಿಸಿಕೊಂಡರು. ಇನಿಂಗ್ಸ್‌ನ ಅಂತಿಮ ಓವರ್‌ನಲ್ಲಿ ಅರ್ಷದೀಪ್ ಸಿಂಗ್ ಒಟ್ಟು 11ಎಸೆತ ಹಾಕಿದರು. ಇದರಲ್ಲಿ ಅವರು ನಾಲ್ಕು ವೈಡ್‌ಗಳು ಮತ್ತು ಒಂದು ನೋ-ಬಾಲ್ ಎಸೆದರು.
PBKS vs GT: ಚೊಚ್ಚಲ ಐಪಿಎಲ್ ಪಂದ್ಯದಲ್ಲೇ ಅರ್ಧಶತಕ ಬಾರಿಸಿದ ಕೂಪರ್ ಕೊನೊಲಿ ಯಾರು?
ಪಂದ್ಯದ ಬಗ್ಗೆ ಹೇಳುವುದಾದರೆ ಮೊದಲು ಬ್ಯಾಟಿಂಗ್ ನಡೆಸಿದ ಗುಜರಾತ್ ಟೈಟಾನ್ಸ್, ನಿಗದಿತ 20 ಓವರ್ ಗಳಲ್ಲಿ ಆರು ವಿಕೆಟ್ ನಷ್ಟಕ್ಕೆ 162 ರನ್ ಗಳಿಸಿತು. ಗೆಲ್ಲಲು 163 ರನ್ ಗುರಿ ಬೆನ್ನಟ್ಟಿದ ಪಂಜಾಬ್ ತಂಡ 19.1 ಓವರ್ ಗಳಲ್ಲಿ ಏಳು ವಿಕೆಟ್ ನಷ್ಟಕ್ಕೆ 165 ರನ್ ಗಳಿಸಿತು.