ಫೋಟೋ ಗ್ಯಾಲರಿ ಆಪರೇಷನ್​ ಸಿಂಧೂರ ಐಪಿಎಲ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

RCB vs LSG: ರಿಷಭ್‌ ಪಂತ್‌ಗೆ 30 ಲಕ್ಷ ರೂ. ದಂಡ; ಅವರು ಮಾಡಿದ ತಪ್ಪೇನು?

ಹಿಂದಿನ ಆವೃತ್ತಿಯಲ್ಲಿ 3 ಬಾರಿ ನಿಧಾನಗತಿಯ ಓವರ್ ರೇಟ್ ಕಾಯ್ದುಕೊಂಡರೆ ನಾಯಕನಿಗೆ 30 ಲಕ್ಷ ರೂ. ದಂಡದ ಜತೆಗೆ, ಒಂದು ಪಂದ್ಯದ ನಿಷೇಧ ಹೇರಲಾಗುತ್ತಿತ್ತು. ಮುಂಬೈ ತಂಡದ ನಾಯಕ ಹಾರ್ದಿಕ್‌ ಪಾಂಡ್ಯ ಈ ಶಿಕ್ಷೆಗೆ ಗುರಿಯಾಗಿದ್ದರು. ಹಾಲಿ ಆವೃತ್ತಿಯ ಐಪಿಎಲ್‌ನಿಂದ ಈ ನಿಯಮ ಕೈಬಿಟ್ಟ ಕಾರಣ ಪಂತ್‌ ನಿಷೇಧ ಶಿಕ್ಷೆಯಿಂದ ಪಾರಾದರು.

ಲಕ್ನೋ ನಾಯಕ ರಿಷಭ್‌ ಪಂತ್‌ಗೆ 30 ಲಕ್ಷ ರೂ. ದಂಡ

Profile Abhilash BC May 28, 2025 1:22 PM

ಲಕ್ನೋ: ಮಂಗಳವಾರ ನಡೆದಿದ್ದ ಐಪಿಎಲ್‌(IPL 2025)ನ ರಾಯಲ್ ಚಾಲೆಂಜರ್ಸ್ ಬೆಂಗಳೂರು(RCB vs LSG) ವಿರುದ್ಧದ ಪಂದ್ಯದಲ್ಲಿ ಲಕ್ನೋ ಸೂಪರ್ ಜೈಂಟ್ಸ್ ತಂಡದ ನಾಯಕ ರಿಷಭ್ ಪಂತ್(Rishabh Pant) ನಿಧಾನಗತಿಯ ಓವರ್ ರೇಟ್ ಕಾಯ್ದುಕೊಂಡಿದ್ದಕ್ಕಾಗಿ ಅವರಿಗೆ 30 ಲಕ್ಷ ರೂಪಾಯಿ ದಂಡ ವಿಧಿಸಲಾಗಿದೆ. ಇದು ಲಕ್ನೋ ತಂಡದ ಈ ಋತುವಿನ ಮೂರನೇ ಓವರ್ ರೇಟ್ ಅಪರಾಧವಾಗಿದೆ. ಹೀಗಾಗಿ ದಂಡದ ಮೊತ್ತ ದ್ವಿಗುಣಗೊಂಡಿತು. ನಾಯಕ ಪಂತ್‌ಗೆ 30 ಲಕ್ಷ, ಜತೆಗೆ ತಂಡದ ಇನ್ನುಳಿದ ಆಟಗಾರರಿಗೆ ತಲಾ 12 ಲಕ್ಷ ರೂ. ಅಥವಾ ಪಂದ್ಯ ಶುಲ್ಕದ ಶೇ. 50ರಷ್ಟು ದಂಡವನ್ನು ವಿಧಿಸಲಾಗಿದೆ ಎಂದು ಐಪಿಎಲ್‌ ಅಧಿಕೃತ ಪ್ರಕಟಣೆಯಲ್ಲಿ ತಿಳಿಸಿದೆ.

ಹಿಂದಿನ ಆವೃತ್ತಿಯಲ್ಲಿ 3 ಬಾರಿ ನಿಧಾನಗತಿಯ ಓವರ್ ರೇಟ್ ಕಾಯ್ದುಕೊಂಡರೆ ನಾಯಕನಿಗೆ 30 ಲಕ್ಷ ರೂ. ದಂಡದ ಜತೆಗೆ, ಒಂದು ಪಂದ್ಯದ ನಿಷೇಧ ಹೇರಲಾಗುತ್ತಿತ್ತು. ಮುಂಬೈ ತಂಡದ ನಾಯಕ ಹಾರ್ದಿಕ್‌ ಪಾಂಡ್ಯ ಈ ಶಿಕ್ಷೆಗೆ ಗುರಿಯಾಗಿದ್ದರು. ಹಾಲಿ ಆವೃತ್ತಿಯ ಐಪಿಎಲ್‌ನಿಂದ ಈ ನಿಯಮ ಕೈಬಿಟ್ಟ ಕಾರಣ ಪಂತ್‌ ನಿಷೇಧ ಶಿಕ್ಷೆಯಿಂದ ಪಾರಾದರು.

ಹೊಸ ನಿಯಮದ ಪ್ರಕಾರ ತಂಡವೊಂದು 3 ಪಂದ್ಯಗಳಲ್ಲಿ ನಿಧಾನಗತಿ ಬೌಲಿಂಗ್‌ ಮಾಡಿದರೆ ನಾಯಕರಿಗೆ ದಂಡ ವಿಧಿಸಿ, ಡಿಮೆರಿಟ್‌ ಅಂಕ ನೀಡಲಾಗುತ್ತದೆ. ಡಿಮೆರಿಟ್‌ ಅಂಕದ ಅವಧಿ 3 ವರ್ಷ ಇರಲಿದ್ದು, ಈ ಅವಧಿಯಲ್ಲಿ 4 ಡಿಮೆರಿಟ್‌ ಅಂಕ ಪಡೆದರೆ ನಾಯಕನಿಗೆ ಪಂದ್ಯದ ಸಂಭಾವನೆಯ ಶೇ.100ರಷ್ಟು ದಂಡ ವಿಧಿಸಲಾಗುತ್ತದೆ.

ಇದನ್ನೂ ಓದಿ IPL 2025: ಗೆಲುವಿನೊಂದಿಗೆ ನೂತನ ದಾಖಲೆ ಬರೆದ ಆರ್‌ಸಿಬಿ

ಹಾಲಿ ಆವೃತ್ತಿಯ ಐಪಿಎಲ್‌ನಲ್ಲಿ ಘೋರ ಬ್ಯಾಟಿಂಗ್‌ ವೈಫಲ್ಯ ಕಂಡಿದ್ದ ರಿಷಭ್‌ ಪಂತ್‌ ಭಾರೀ ಟೀಕೆಗೆ ಗುರಿಯಾಗಿದ್ದರು. 27 ಕೋಟಿ ಮೊತ್ತ ಪಡೆದರೂ 27 ರನ್‌ ಗಳಿಸಲು ಸಾಧ್ಯವಾಗಲಿಲ್ಲ ಎಂದು ನೆಟ್ಟಿಗರು ಅವರನ್ನು ಟ್ರೋಲ್‌ ಮಾಡಿದ್ದರು. ಆದರೆ ಪಂತ್‌ ಕೊನೆಯ ಪಂದ್ಯದಲ್ಲಿ ಭರ್ಜರಿ ಬ್ಯಾಟಿಂಗ್‌ ಮೂಲಕ ಶತಕ ಸಿಡಿಸಿ ಎಲ್ಲ ಟೀಕೆಗೆ ಉತ್ತರ ನೀಡಿದರು. 61 ಎಸೆತಗಳಿಂದ ಅಜೇಯ 118 ರನ್‌ ಹೊಡೆದರು. 11 ಬೌಂಡರಿ, 8 ಸಿಕ್ಸರ್‌ ಸಿಡಿಸಿ ತವರಿನ ಅಭಿಮಾನಿಗಳಿಗೆ ಭರಪೂರ ರಂಜನೆ ಒದಗಿಸಿದರು. ಆದರೆ ಪಂದ್ಯ ಸೋತ ಕಾರಣ ಇವರ ಶತಕ ವ್ಯರ್ಥವಾಯಿತು.