IND vs AUS: ಆಸ್ಟ್ರೇಲಿಯಾದ ಜನತೆಗೆ ರೋಹಿತ್-ಕೊಹ್ಲಿ ನೋಡಲು ಇದು ಕೊನೆಯ ಅವಕಾಶ: ಪ್ಯಾಟ್ ಕಮ್ಮಿನ್ಸ್
ಬೆನ್ನುನೋವಿನಿಂದಾಗಿ ತಂಡದಿಂದ ಹೊರಗುಳಿದಿರುವ 32 ವರ್ಷದ ಕಮ್ಮಿನ್ಸ್, ಕ್ರೀಡಾಂಗಣದಿಂದ ಪಂದ್ಯ ವೀಕ್ಷಿಸಲಿದ್ದಾರೆ. ಅಕ್ಟೋಬರ್ 19 ರಂದು ಪರ್ತ್‌ನಲ್ಲಿ ಪ್ರಾರಂಭವಾಗುವ ಆಸ್ಟ್ರೇಲಿಯಾ ವಿರುದ್ಧದ ಮೂರು ಪಂದ್ಯಗಳ ಏಕದಿನ ಸರಣಿಗೆ ರೋಹಿತ್ ಮತ್ತು ಕೊಹ್ಲಿ ಅವರನ್ನು ಭಾರತ ತಂಡದಲ್ಲಿ ಹೆಸರಿಸಲಾಗಿದೆ.

-

ಸಿಡ್ನಿ: ಭಾನುವಾರ ಪರ್ತ್‌ನಲ್ಲಿ ಆರಂಭವಾಗಲಿರುವ ಭಾರತ ವಿರುದ್ಧದ ಏಕದಿನ(Pat Cummins) ಸರಣಿಯನ್ನು ಆಸ್ಟ್ರೇಲಿಯಾ ನಾಯಕ ಪ್ಯಾಟ್ ಕಮ್ಮಿನ್ಸ್(Pat Cummins) ವಿಶೇಷ ಎಂದು ಬಣ್ಣಿಸಿದ್ದು, ಸೂಪರ್‌ಸ್ಟಾರ್‌ಗಳಾದ ವಿರಾಟ್ ಕೊಹ್ಲಿ(Virat Kohli) ಮತ್ತು ರೋಹಿತ್ ಶರ್ಮಾ(Rohit Sharma) ಅವರನ್ನು ಈ ದೇಶದಲ್ಲಿ ವೀಕ್ಷಿಸಲು ಅಭಿಮಾನಿಗಳಿಗೆ ಕೊನೆಯ ಅವಕಾಶ ಇದಾಗಿರಬಹುದು ಎಂದು ಹೇಳಿದ್ದಾರೆ.
ಬೆನ್ನುನೋವಿನಿಂದಾಗಿ ತಂಡದಿಂದ ಹೊರಗುಳಿದಿರುವ 32 ವರ್ಷದ ಕಮ್ಮಿನ್ಸ್, ಕ್ರೀಡಾಂಗಣದಿಂದ ಪಂದ್ಯ ವೀಕ್ಷಿಸಲಿದ್ದಾರೆ. ಅಕ್ಟೋಬರ್ 19 ರಂದು ಪರ್ತ್‌ನಲ್ಲಿ ಪ್ರಾರಂಭವಾಗುವ ಆಸ್ಟ್ರೇಲಿಯಾ ವಿರುದ್ಧದ ಮೂರು ಪಂದ್ಯಗಳ ಏಕದಿನ ಸರಣಿಗೆ ರೋಹಿತ್ ಮತ್ತು ಕೊಹ್ಲಿ ಅವರನ್ನು ಭಾರತ ತಂಡದಲ್ಲಿ ಹೆಸರಿಸಲಾಗಿದೆ.
"ವಿರಾಟ್ ಮತ್ತು ರೋಹಿತ್ ಕಳೆದ 15 ವರ್ಷಗಳಿಂದ ಬಹುತೇಕ ಎಲ್ಲಾ ಭಾರತೀಯ ತಂಡದ ಭಾಗವಾಗಿದ್ದರು. ಆದ್ದರಿಂದ ಆಸ್ಟ್ರೇಲಿಯಾದ ಸಾರ್ವಜನಿಕರಿಗೆ ಅವರು ಇಲ್ಲಿ ಆಡುವುದನ್ನು ನೋಡಲು ಇದು ಕೊನೆಯ ಅವಕಾಶವಾಗಿರಬಹುದು" ಎಂದು ಕಮ್ಮಿನ್ಸ್ ಜಿಯೋಹಾಟ್‌ಸ್ಟಾರ್‌ಗೆ ತಿಳಿಸಿದರು.
"ಉಭಯ ಆಟಗಾರರು ಆಡಿದಾಗಲೆಲ್ಲಾ ಜನಸಂದಣಿ ಜೋರಾಗುತ್ತದೆ. ಭಾರತ ವಿರುದ್ಧದ ವೈಟ್-ಬಾಲ್ ಸರಣಿಯನ್ನು ತಪ್ಪಿಸಿಕೊಂಡಿರುವುದು ನಿಜಕೂ ಬೇಸರ ಮೂಡಿದೆ. ಆಸ್ಟ್ರೇಲಿಯಾದಲ್ಲಿ ಈಗಾಗಲೇ ಸಾಕಷ್ಟು ಉತ್ಸಾಹ ಮನೆಮಾಡಿದೆ" ಎಂದು ಕಮಿನ್ಸ್ ಹೇಳಿದರು.
ಭಾರತ ತಂಡದ ಆಟಗಾರರು(India ODI Squad) ಬುಧವಾರ ಬೆಳಗ್ಗೆ(ಅಕ್ಟೋಬರ್ 15) ನವದೆಹಲಿಯಿಂದ ಪ್ರಯಾಣ ಬೆಳೆಸಿದರು. ವಿರಾಟ್ ಕೊಹ್ಲಿ, ರೋಹಿತ್ ಶರ್ಮ, ಶುಭಮನ್ ಗಿಲ್, ಶ್ರೇಯಸ್ ಅಯ್ಯರ್, ಅರ್ಶ್‌ದೀಪ್ ಸಿಂಗ್, ಕೆ.ಎಲ್ ರಾಹುಲ್ ಮೊದಲ ಬ್ಯಾಚ್‌ನಲ್ಲಿ ಪ್ರಯಾಣ ಬೆಳೆಸಿದರು.
ಭಾರತ ಏಕದಿನ ತಂಡ
ಶುಭಮನ್ ಗಿಲ್ (ನಾಯಕ), ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್ (ಉಪನಾಯಕ), ಅಕ್ಸರ್ ಪಟೇಲ್, ಕೆಎಲ್ ರಾಹುಲ್ (ವಿ.ಕೀ.), ನಿತೀಶ್ ಕುಮಾರ್ ರೆಡ್ಡಿ, ವಾಷಿಂಗ್ಟನ್ ಸುಂದರ್, ಕುಲದೀಪ್ ಯಾದವ್, ಹರ್ಷಿತ್ ರಾಣಾ, ಮೊಹಮ್ಮದ್. ಸಿರಾಜ್, ಅರ್ಷದೀಪ್ ಸಿಂಗ್, ಪ್ರಸಿದ್ಧ್ ಕೃಷ್ಣ, ಧ್ರುವ್ ಜುರೆಲ್ (ವಿ.ಕೀ.), ಯಶಸ್ವಿ ಜೈಸ್ವಾಲ್.