ʼ2 ದಿನ ಆಹಾರ ತ್ಯಜಿಸಿದ್ದೆʼ; ಚಿನ್ನ ಗೆದ್ದ ಬಳಿಕ ಭಾವುಕರಾದ ಮೀರಾಬಾಯಿ ಚಾನು
Mirabai Chanu: ಚಿನ್ನದ ಪದಕ ಸ್ವೀಕರಿಸಿದ ನಂತರ ರಾಷ್ಟ್ರಗೀತೆಯ ಸಂದರ್ಭದಲ್ಲಿ ಮೀರಾಬಾಯಿ ಚಾನು ಭಾವುಕರಾಗಿ ಕಣ್ಣೀರು ಹಾಕಿದರು. ಇನ್ನೆರಡು ತಿಂಗಳುಗಳ ನಂತರ ನಡೆಯಲಿರುವ ಏಷ್ಯನ್ ಕ್ರೀಡಾಕೂಟದಲ್ಲಿ ಸ್ಪರ್ಧಿಸಲಿರುವ ಮೀರಾ ಮತ್ತೊಂದು ಪದಕದ ಮೇಲೆ ಕಣ್ಣಿಟ್ಟಿದ್ದಾರೆ.
Mirabai Chanu -
ಗ್ಲಾಸ್ಗೊ, ಜು.27: ಮಣಿಪುರದ ಛಲಗಾತಿ ಸಾಯಿಕೋಮ್ ಮೀರಾಬಾಯಿ ಚಾನು ಭಾನುವಾರ ನಡೆದಿದ್ದ ಕಾಮನ್‌ವೆಲ್ತ್ ಕ್ರೀಡಾಕೂಟದ ಮಹಿಳೆಯರ 48 ಕೆ.ಜಿ. ವಿಭಾಗದಲ್ಲಿ ಚಿನ್ನದ ಪದಕ ಗೆದ್ದ ಸಾಧನೆ ಮಾಡಿದ್ದರು. ಇದೀಗ ಅವರು ಪದಕ ಗೆಲ್ಲುವ ಮೊದಲು ಎರಡು ದಿನಗಳ ಕಾಲ ಊಟ ಮಾಡಿರಲಿಲ್ಲ ಎಂಬ ಸತ್ಯವನ್ನು ಬಹಿರಂಗಪಡಿಸಿದ್ದಾರೆ.
ಟೋಕಿಯೊ ಒಲಿಂಪಿಕ್ ಬೆಳ್ಳಿ ಪದಕ ವಿಜೇತೆ ಚಾನು, ಸ್ನ್ಯಾಚ್, ಕ್ಲೀನ್ ಮತ್ತು ಜರ್ಕ್ ಎರಡರಲ್ಲೂ ಆರಂಭಿಕ ಪ್ರಯತ್ನದಲ್ಲಿ ವಿಫಲರಾದರೂ, ಧೃತಿಗೆಡದೆ ಒಟ್ಟು 190 ಕೆ.ಜಿ. ಭಾರ ಎತ್ತಿದ ಸಾಧನೆ ಮಾಡಿದರು. 2018ರಲ್ಲಿ ಗೋಲ್ಡ್‌ಕೋಸ್ಟ್ ಮತ್ತು 2022ರಲ್ಲಿ ಬರ್ಮಿಂಗ್‌ಹ್ಯಾಮ್‌ನಲ್ಲಿ ನಡೆದಿದ್ದ ಕಾಮನ್‌ವೆಲ್ತ್ ಕೂಟದಲ್ಲಿ ಚಿನ್ನದ ಸಾಧನೆ ಮಾಡಿದ್ದರು.
ಪದಕ ಸ್ವೀಕರಿಸಿದ ನಂತರ ರಾಷ್ಟ್ರಗೀತೆಯ ಸಂದರ್ಭದಲ್ಲಿ ಮೀರಾಬಾಯಿ ಚಾನು ಭಾವುಕರಾಗಿ ಕಣ್ಣೀರು ಹಾಕಿದರು. ಇನ್ನೆರಡು ತಿಂಗಳುಗಳ ನಂತರ ನಡೆಯಲಿರುವ ಏಷ್ಯನ್ ಕ್ರೀಡಾಕೂಟದಲ್ಲಿ ಸ್ಪರ್ಧಿಸಲಿರುವ ಮೀರಾ ಮತ್ತೊಂದು ಪದಕದ ಮೇಲೆ ಕಣ್ಣಿಟ್ಟಿದ್ದಾರೆ.
ವೇಟ್‌ಲಿಫ್ಟಿಂಗ್‌ನಲ್ಲಿ ಭಾರತಕ್ಕೆ ಮತ್ತೊಂದು ಪದಕ; ಬೆಳ್ಳಿ ಗೆದ್ದ ರಾಜಾ ಮುತ್ತುಪಾಂಡಿ
ಪದಕ ಸ್ವೀಕರಿಸಿದ ಬಳಿಕ ಪತ್ರಕರ್ತರು, ಸಂದರ್ಶನ ಮಾಡಲು ಮುಂದಾದ ವೇಳೆ "ಜಲ್ದಿ ಜಲ್ದಿ ಕರೋ, ಮೈನೆ ಕುಚ್ ಖಾಯಾ ನಹಿ ಹೈ ದೋ ದಿನ್ ಸೆ (ದಯವಿಟ್ಟು ಇದನ್ನು ಬೇಗ ಮಾಡಿ, ನಾನು ಎರಡು ದಿನಗಳಿಂದ ಊಟ ಮಾಡಿಲ್ಲ) ಎಂದು" ಮೀರಾಬಾಯಿ ನಗುತ್ತಾ ಹೇಳಿದರು. ಬಳಿಕ ತಮ್ಮ ಕುಟುಂಬ ಮತ್ತು ದೀರ್ಘಕಾಲದ ತರಬೇತುದಾರ ವಿಜಯ್ ಶರ್ಮಾ ಅವರಿಂದ ಪಡೆದ ಬೆಂಬಲದ ಬಗ್ಗೆ ಮಾತನಾಡುವಾಗ ಭಾವುಕರಾದರು.
Calm. Composed. Record-breaking. 🏋️♂️
— Sony Sports Network (@SonySportsNetwk) July 26, 2026
Mirabai Chanu lifts 85 kg to set a new Commonwealth Games snatch record 🙌
Watch the Commonwealth Games LIVE NOW exclusively on Sony Sports Network TV channels and Sony LIV.#SonySportsNetwork #SonyLIV #Glasgow2026 #GlasgowMeinTiranga… pic.twitter.com/iMrBXx3Sv1
"ಅವರು ನನಗೆ ಕಷ್ಟದ ಸಮಯದಲ್ಲಿ ಬೆಂಬಲ ನೀಡಿದ್ದಾರೆ. ನಾನು ಕುಟುಂಬ ಮತ್ತು ಸ್ನೇಹಿತರಿಂದ ಸಾಕಷ್ಟು ಒತ್ತಡಕ್ಕೆ ಒಳಗಾಗಿದ್ದೆ, ಭಾರತಕ್ಕಾಗಿ ಮೂರನೇ ಚಿನ್ನ ಗೆದ್ದಿದ್ದಕ್ಕೆ ತುಂಬಾ ಸಂತೋಷವಾಯಿತು" ಎಂದರು.
ವಿಶೇಷವಾಗಿ ಏಷ್ಯನ್ ಕ್ರೀಡಾಕೂಟಕ್ಕೆ ಎರಡು ತಿಂಗಳಿಗಿಂತ ಕಡಿಮೆ ಸಮಯ ಬಾಕಿ ಇರುವಾಗ ಗ್ಲ್ಯಾಸ್ಗೋದಲ್ಲಿ ತನ್ನನ್ನು ತಾನು ಹೆಚ್ಚು ಶ್ರಮಿಸುವ ಉದ್ದೇಶ ಹೊಂದಿರಲಿಲ್ಲ ಎಂದು ಮೀರಾಬಾಯಿ ಬಹಿರಂಗಪಡಿಸಿದರು.
"ಈ ಕ್ರೀಡಾಕೂಟಗಳಲ್ಲಿ ನಾನು ಹೆಚ್ಚು ಶ್ರಮಿಸಲು ಹೋಗುತ್ತಿರಲಿಲ್ಲ ಆದರೆ ನಾನು ನನ್ನ ಮೊದಲ ಪ್ರಯತ್ನದಲ್ಲಿ ವಿಫಲನಾದೆ. ನಾನು ಮತ್ತು ಕೋಚ್ ತಲಾ ಎರಡು ಲಿಫ್ಟ್‌ಗಳನ್ನು ಮಾಡುತ್ತೇನೆ ಎಂದು ಭಾವಿಸಿದ್ದೆ" ಎಂದರು.