2025ರಲ್ಲಿ ಟೆಸ್ಟ್‌ನಲ್ಲಿ ಗರಿಷ್ಠ ವಿಕೆಟ್: ನಂ.1 ಸ್ಥಾನಕ್ಕೇರಿದ ಸಿರಾಜ್
121 ರನ್ ಗುರಿ ಪಡೆದ ಭಾರತ, 2ನೇ ಓವರಲ್ಲೇ ಜೈಸ್ವಾಲ್ (8) ವಿಕೆಟ್ ಕಳೆದುಕೊಂಡಿತು. ಬಳಿಕ ರಾಹುಲ್ (25*) ಹಾಗೂ ಸಾಯಿ ಸುದರ್ಶನ್ (30*) ದಿನದಾಟದಲ್ಲಿ ಮತ್ತೊಂದು ವಿಕೆಟ್ ಬೀಳದಂತೆ ಎಚ್ಚರ ವಹಿಸಿದರು. ಮಂಗಳವಾರ ಮೊದಲ ಅವಧಿಯಲ್ಲೇ ಬಾಕಿ ಇರುವ 58 ರನ್ ಗಳಿಸಿ, ಸರಣಿಯನ್ನು 2-0ಯಲ್ಲಿ ವಶಪಡಿಸಿಕೊಳ್ಳಲು ಭಾರತ ಎದುರು ನೋಡುತ್ತಿದೆ.

-

ನವದೆಹಲಿ: ಭಾರತ ಹಾಗೂ ವೆಸ್ಟ್‌ಇಂಡೀಸ್ ನಡುವಿನ 2ನೇ ಟೆಸ್ಟ್(India vs West Indies 2nd Test) ಕ್ಲೈಮ್ಯಾಕ್ಸ್ ಹಂತಕ್ಕೆ ಬಂದು ನಿಂತಿದೆ. ಇಂದು ಅಂತಿಮ ದಿನದಾಟ ಗೆಲುವಿಗೆ ಗಿಲ್ ಪಡೆಗೆ 58 ರನ್ ಬಾರಿಸಬೇಕಿದೆ. ಪಂದ್ಯದಲ್ಲಿ ಒಟ್ಟು ಮೂರು ವಿಕೆಟ್ ಕಿತ್ತ ಮೊಹಮ್ಮದ್ ಸಿರಾಜ್(Mohammed Siraj) ದಾಖಲೆಯೊಂದನ್ನು ಬರೆದಿದ್ದಾರೆ.
ಈ ವರ್ಷ ಟೆಸ್ಟ್‌ನಲ್ಲಿ ಸಿರಾಜ್ ಅತಿಹೆಚ್ಚು ವಿಕೆಟ್ ಪಡೆದ ಬೌಲರ್‌ಗಳ ಪಟ್ಟಿಯಲ್ಲಿ ಮೊದಲ ಸ್ಥಾನಕ್ಕೇರಿದ್ದಾರೆ. 8 ಪಂದ್ಯಗಳಲ್ಲಿ 37 ವಿಕೆಟ್ ಕಬಳಿಸಿರುವ ಸಿರಾಜ್, ಜಿಂಬಾಬ್ವೆಯ ಬ್ಲೆಸಿಂಗ್ ಮಜುರ್‌ಬಾನಿಯನ್ನು ಹಿಂದಿಕ್ಕಿದ್ದಾರೆ. ಬ್ಲೆಸಿಂಗ್ 9 ಪಂದ್ಯದಲ್ಲಿ 36 ವಿಕೆಟ್ ಪಡೆದು 2ನೇ ಸ್ಥಾನದಲ್ಲಿದ್ದಾರೆ. ಆಸ್ಟ್ರೇಲಿಯಾದ ಮಿಚೆಲ್ ಸ್ಟಾರ್ಕ್ 7 ಪಂದ್ಯದಲ್ಲಿ 29 ವಿಕೆಟ್‌ಗಳೊಂದಿಗೆ 3ನೇ ಸ್ಥಾನದಲ್ಲಿದ್ದಾರೆ.
121 ರನ್ ಗುರಿ ಪಡೆದ ಭಾರತ, 2ನೇ ಓವರಲ್ಲೇ ಜೈಸ್ವಾಲ್ (8) ವಿಕೆಟ್ ಕಳೆದುಕೊಂಡಿತು. ಬಳಿಕ ರಾಹುಲ್ (25*) ಹಾಗೂ ಸಾಯಿ ಸುದರ್ಶನ್ (30*) ದಿನದಾಟದಲ್ಲಿ ಮತ್ತೊಂದು ವಿಕೆಟ್ ಬೀಳದಂತೆ ಎಚ್ಚರ ವಹಿಸಿದರು. ಮಂಗಳವಾರ ಮೊದಲ ಅವಧಿಯಲ್ಲೇ ಬಾಕಿ ಇರುವ 58 ರನ್ ಗಳಿಸಿ, ಸರಣಿಯನ್ನು 2-0ಯಲ್ಲಿ ವಶಪಡಿಸಿಕೊಳ್ಳಲು ಭಾರತ ಎದುರು ನೋಡುತ್ತಿದೆ.
ಇದನ್ನೂ ಓದಿ IND vs WI: ದಕ್ಷಿಣ ಆಫ್ರಿಕಾ ವಿರುದ್ದದ ಟೆಸ್ಟ್ ಸರಣಿಗೂ ಮುನ್ನ ಭಾರತಕ್ಕೆ ಆಕಾಶ್ ಚೋಪ್ರಾ!
ಎರಡನೇ ಟೆಸ್ಟ್ ಪಂದ್ಯದ ದ್ವಿತೀಯ ಇನಿಂಗ್ಸ್‌ನಲ್ಲಿ ಕುಲ್ದೀಪ್ ಯಾದವ್ 104 ರನ್ ಬಿಟ್ಟು ಕೊಟ್ಟು ಅನಗತ್ಯ ದಾಖಲೆಯನು ಹೆಗಲೇರಿಸಿಕೊಂಡಿದ್ದಾರೆ. ಇವರು ತಮ್ಮ ವೃತ್ತಿ ಜೀವನದಲ್ಲಿ ಇದೇ ಮೊದಲ ಬಾರ ಮೂರಂಕಿ ರನ್‌ಗಳನ್ನು ಬಿಟ್ಟುಕೊಟ್ಟಿದ್ದಾರೆ.
ಪ್ರಥಮ ಇನಿಂಗ್ಸ್‌ನಲ್ಲಿ 85 ರನ್ ಬಿಟ್ಟು ಕೊಟ್ಟು 5 ವಿಕೆಟ್ ಕಬಳಿಸಿದ್ದರು. ಆ ಮೂಲಕ ಭಾರತ ತಂಡ ಫಾಲೋ-ಆನ್ ಜಾರಿಗೊಳಿಸಿತ್ತು. ಆದರೆ ಎಡಗೈ ಸ್ಪಿನ್ನರ್ ದ್ವಿತೀಯ ಇನಿಂಗ್ಸ್‌ನಲ್ಲಿ ನಿರಾಶದಾಯಕ ಬೌಲಿಂಗ್ ಪ್ರದರ್ಶನ ತೋರಿದರು.