Prakash Shesharaghavachar Column: ಖರ್ಗೆಯವರೇ, ಸಂವಿಧಾನರಹಿತ ಕ್ರಮ ಸಾಧ್ಯವಿಲ್ಲ
ಎರಡೂವರೆ ವರ್ಷದಲ್ಲಿ ಭ್ರಷ್ಟಾಚಾರ ರಹಿತ ಜನಪರ ಆಡಳಿತ ನೀಡಲು ವಿಫಲವಾಗಿ, ಜನರ ಗಮನ ವನ್ನು ಬೇರೆಡೆ ಸೆಳೆಯಲು ಸಂಘದ ವಿರುದ್ಧ ವಿಷ ಕಕ್ಕುತ್ತಿದ್ದಾರೆ. ಮುಖ್ಯಮಂತ್ರಿಗಳಿಗೆ ಖರ್ಗೆಯವರು ಬರೆದಿರುವ ಪತ್ರದಲ್ಲಿ ಆರೆಸ್ಸೆಸ್ ಮೇಲೆ ಮಾಡಿರುವ ಗಂಭೀರ ಆರೋಪಗಳಿಗೆ ಗುಲಗಂಜಿಯಷ್ಟೂ ಆಧಾರವನ್ನು ಒದಗಿಸಲು ಸಾಧ್ಯವಾಗಿಲ್ಲ.

-

ಪ್ರಕಾಶಪಥ
ಪ್ರಕಾಶ್ ಶೇಷರಾಘವಾಚಾರ್
ಸಂವಿಧಾನದ ಹೆಸರಲ್ಲಿ ಸಂವಿಧಾನಬಾಹಿರ ಕೃತ್ಯ ನಡೆಸುವುದು ಕಾಂಗ್ರೆಸ್ ನಾಯಕರಿಗೆ ಹೊಸ ದೇನೂ ಅಲ್ಲ. ‘ನಾವೇ ಸಂವಿಧಾನದ ರಕ್ಷಕರು’ ಎಂದು ಬಡಾಯಿ ಕೊಚ್ಚಿಕೊಳ್ಳುವ ಕಾಂಗ್ರೆಸ್ ನಾಯಕರ ವರ್ತನೆಯು, ‘ನಾನು ಹೇಳಿದಂತೆ ಮಾಡು, ನಾನು ಮಾಡುವಂತೆ ಅಲ್ಲ’ ಎಂಬಂತೆ ಇದೆ.
ಕಾಂಗ್ರೆಸ್ ನಾಯಕರು ತಮಗೆ ಒಗ್ಗದ ವಿಚಾರಗಳ ಮತ್ತು ಸಂಘಟನೆಗಳ ಮೇಲೆ ಸಂವಿಧಾನ ವಿರೋಧಿ ಕ್ರಮವನ್ನು ಕೈಗೊಳ್ಳಲು ಹಾತೊರೆಯುತ್ತಾರೆ. ಈಗ, ಸಚಿವ ಪ್ರಿಯಾಂಕ್ ಖರ್ಗೆಯವರು ಮುಖ್ಯಮಂತ್ರಿಗಳಿಗೆ ಪತ್ರ ಬರೆದು, ರಾಜ್ಯದ ಸಾರ್ವಜನಿಕ ಸ್ಥಳಗಳಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರೆಸ್ಸೆಸ್) ಚಟುವಟಿಕೆಯನ್ನು ನಡೆಸದಂತೆ ನಿಷೇಧ ಹೇರಲು ಕೋರಿ ಹೊಸ ವಿವಾದ ವನ್ನು ಹುಟ್ಟು ಹಾಕಿದ್ದಾರೆ.
ಅವರು ಮುಂದುವರಿದು, “ನನಗೆ ಅಧಿಕಾರವಿದ್ದಿದ್ದರೆ ಆರೆಸ್ಸೆಸ್‌ನ ಮೇಲೆ ಎಂದೋ ನಿಷೇಧವನ್ನು ಹೇರುತ್ತಿದ್ದೆ" ಎಂದು ಉತ್ತರಕುಮಾರನ ಪೌರುಷವನ್ನೂ ಪ್ರದರ್ಶಿಸಿದ್ದಾರೆ. ಆರೆಸ್ಸೆಸ್ ತನ್ನ ಸ್ಥಾಪನೆಗೆ ನೂರು ವರ್ಷ ತುಂಬಿದ್ದರ ಸಂಭ್ರಮವನ್ನು ಆಚರಿಸುತ್ತಿರುವ ಸಂದರ್ಭದಲ್ಲಿ ರಾಜ್ಯ ಕಾಂಗ್ರೆಸ್ ನಾಯಕರು ಅದರ ವಿರುದ್ಧ ತಮ್ಮ ವಾಗ್ದಾಳಿಯನ್ನು ಕೇಂದ್ರೀಕರಿಸಿದ್ದಾರೆ.
ಎರಡೂವರೆ ವರ್ಷದಲ್ಲಿ ಭ್ರಷ್ಟಾಚಾರ ರಹಿತ ಜನಪರ ಆಡಳಿತ ನೀಡಲು ವಿಫಲವಾಗಿ, ಜನರ ಗಮನವನ್ನು ಬೇರೆಡೆ ಸೆಳೆಯಲು ಸಂಘದ ವಿರುದ್ಧ ವಿಷ ಕಕ್ಕುತ್ತಿದ್ದಾರೆ. ಮುಖ್ಯಮಂತ್ರಿಗಳಿಗೆ ಖರ್ಗೆಯವರು ಬರೆದಿರುವ ಪತ್ರದಲ್ಲಿ ಆರೆಸ್ಸೆಸ್ ಮೇಲೆ ಮಾಡಿರುವ ಗಂಭೀರ ಆರೋಪಗಳಿಗೆ ಗುಲಗಂಜಿಯಷ್ಟೂ ಆಧಾರವನ್ನು ಒದಗಿಸಲು ಸಾಧ್ಯವಾಗಿಲ್ಲ. ಕೇವಲ ಆರೆಸ್ಸೆಸ್ ಮೇಲೆ ತಮಗಿ ರುವ ಅಲರ್ಜಿಯನ್ನು ಆಧಾರವಾಗಿಟ್ಟುಕೊಂಡು ಮನಸ್ಸಿಗೆ ತೋಚಿದ ಆರೋಪವನ್ನು ಮಾಡಿ ದ್ದಾರೆ.
ಇದನ್ನೂ ಓದಿ:
ಆರೆಸ್ಸೆಸ್ ತನ್ನ ನೂರು ವರ್ಷದ ಇತಿಹಾಸದಲ್ಲಿ ಮೂರು ಬಾರಿ ಕಾಂಗ್ರೆಸ್ ಆಡಳಿತದ ಕೇಂದ್ರ ಸರಕಾರದಿಂದ ನಿಷೇಧವನ್ನು ಎದುರಿಸಿದೆ. ಪ್ರತಿ ಬಾರಿಯೂ ಪುಟವಿಟ್ಟ ಚಿನ್ನದಂತೆ ಪುಟಿದು ನಿಂತಿದೆ. ನೆಹರು, ಸರ್ದಾರ್ ಪಟೇಲ್‌ರಂಥ ದಿಗ್ಗಜರ ಕಾಲದಲ್ಲಿ ಗಾಂಧಿ ಹತ್ಯೆಯ ಮಿಥ್ಯಾರೋಪ ವನ್ನು ಎದುರಿಸಿ ನ್ಯಾಯಾಲಯದ ಮೂಲಕ ಆರೆಸ್ಸೆಸ್ ಕಳಂಕಮುಕ್ತವಾದ ಮೇಲೆ, ಸರಕಾರವು ನಿಷೇಧವನ್ನು ಹಿಂತೆಗೆದುಕೊಳ್ಳುವುದು ಅನಿವಾರ್ಯವಾಯಿತು.
1975ರಲ್ಲಿ ಇಂದಿರಾ ಗಾಂಧಿಯವರು ತಮ್ಮ ಕುರ್ಚಿಯ ಉಳಿವಿಗಾಗಿ ಸಂವಿಧಾನಬಾಹಿರವಾಗಿ ದೇಶಾದ್ಯಂತ ತುರ್ತುಪರಿಸ್ಥಿತಿಯನ್ನು ಹೇರಿ, ಕಾನೂನು, ನ್ಯಾಯಾಂಗದ ಸದ್ದಡಗಿಸಿದ ಕಾಲಘಟ್ಟ ದಲ್ಲಿ ಅಧಿಕಾರ ದುರುಪಯೋಗಪಡಿಸಿಕೊಂಡು ಆರೆಸ್ಸೆಸ್ ಮೇಲೆ ನಿಷೇಧ ಹೇರಿದರು. 1977ರಲ್ಲಿ ಚುನಾವಣೆಯಲ್ಲಿ ಪರಾಭವಗೊಂಡ ನಂತರ ಸಂಘದ ಮೇಲಿನ ನಿಷೇಧ ತೆರವಾಯಿತು.
1992ರ ಡಿಸೆಂಬರ್ 6ರಂದು ಅಯೋಧ್ಯೆಯಲ್ಲಿ ರಾಮಜನ್ಮ ಭೂಮಿಯಲ್ಲಿದ್ದ ವಿವಾದಿತ ಕಟ್ಟಡವು ನೆಲಸಮವಾದಾಗ ಮೂರನೆಯ ಬಾರಿ ಸಂಘದ ಮೇಲೆ ನಿಷೇಧ ಹೇರಲಾಯಿತು. ಆದರೆ ಕೇಂದ್ರ ಸರಕಾರ ತಾನು ಹೇರಿದ್ದ ನಿಷೇಧವನ್ನು ಟ್ರಿಬ್ಯುನಲ್ ಮುಂದೆ ಸಮರ್ಥಿಸಿಕೊಳ್ಳಲು ಸಾಧ್ಯವಾಗ ದಿದ್ದಾಗ ತೆಪ್ಪಗೆ ನಿಷೇಧವನ್ನು ತೆರವುಗೊಳಿಸಿತು. ಕೇಂದ್ರದಲ್ಲಿ ಮೂರು ಬಾರಿ ಕಾಂಗ್ರೆಸ್‌ನ ಅಧಿಕಾರವಿದ್ದಾಗ, ಆರೆಸ್ಸೆಸ್ ಮೇಲೆ ನಿಷೇಧ ಹೇರಿ ಕೈಸುಟ್ಟುಕೊಂಡಿದ್ದರೂ ಕಾಂಗ್ರೆಸ್ ನಾಯಕರಿಗೆ ವಿವೇಕ ಮೂಡಿದ ಹಾಗೆ ಕಾಣುತ್ತಿಲ್ಲ.
ಕಾನೂನಿಗೆ ವಿರುದ್ಧವಾಗಿ ಬ್ಯಾನ್ ಮಾಡಲು ಸಾಧ್ಯವಿಲ್ಲ ಎಂಬ ಪ್ರಾಥಮಿಕ eನದ ಕೊರತೆ ಯಿಂದಲೋ ಅಥವಾ ಯಾರನ್ನೋ ಓಲೈಸಲೆಂದೋ ಅವರು ಸಂಘವನ್ನು ‘ಪಂಚಿಂಗ್ ಬ್ಯಾಗ್’ ಹಾಗೆ ಪದೇ ಪದೆ ಬಳಸಿಕೊಳ್ಳುತ್ತಿದ್ದಾರೆ.
ಸೈದ್ಧಾಂತಿಕವಾಗಿ ಆರೆಸ್ಸೆಸ್ ಅನ್ನು ಎದುರಿಸಲು ಅಥವಾ ಅದರ ವಿರುದ್ಧ ಯಾವುದೇ ಕಾನೂ ನಾತ್ಮಕ ಕ್ರಮ ಜರುಗಿಸಲು ಅಸಹಾಯಕರಾಗಿದ್ದಾರೆ ಕಾಂಗ್ರೆಸ್ಸಿಗರು ಮತ್ತು ಎಡಪಂಥೀಯರು; ನಿಷೇಧದ ಪ್ರಸ್ತಾವನೆಯ ಮೂಲಕ ಮಸಿ ಬಳಿಯುವುದು ಇವರ ಏಕೈಕ ದುರುದ್ದೇಶವಾಗಿದೆ. ನೆರೆಯ ರಾಜ್ಯ ತಮಿಳುನಾಡಿನ ಡಿಎಂಕೆ ಸರಕಾರವು ಸಂಘದ ಮೇಲೆ ಕೆಂಡ ಕಾರುವುದು ನಡೆಯುತ್ತಲೇ ಇದೆ.
ಸಂಘದ ರೂಟ್ ಮಾರ್ಚ್ ಮತ್ತು ಸಾರ್ವಜನಿಕ ಕಾರ್ಯಕ್ರಮಗಳಿಗೆ ಅದು ಅನುಮತಿ ನಿರಾಕರಿಸಿ ದಾಗ, ಮದ್ರಾಸ್ ಹೈಕೋರ್ಟ್ ಇದನ್ನು ತಳ್ಳಿ ಹಾಕಿ ರೂಟ್ ಮಾರ್ಚ್‌ಗೆ ಅನುಮತಿ ನೀಡಲು ನಿರ್ದೇಶಿಸಿತು. ಸೈದ್ಧಾಂತಿಕ ಆಧಾರದ ಮೇಲೆ ಅನುಮತಿ ನಿರಾಕರಿಸಿದ್ದಕ್ಕಾಗಿ ರಾಜ್ಯ ಸರಕಾರವನ್ನು ತರಾಟೆಗೆ ತೆಗೆದುಕೊಂಡಿತು. ರಾಜ್ಯ ಸರಕಾರವು ತನ್ನ ನಿರ್ಧಾರಗಳನ್ನು ಸಾರ್ವಜನಿಕ ಹಿತಾಸಕ್ತಿಯ ಆಧಾರದ ಮೇಲೆ ತೆಗೆದುಕೊಳ್ಳಬೇಕೇ ವಿನಾ, ರಾಜಕೀಯ ಅಥವಾ ಸೈದ್ಧಾಂತಿಕ ಪರಿಗಣನೆಗಳ ಆಧಾರದ ಮೇಲೆ ಅಲ್ಲ ಎಂದು ನ್ಯಾಯಾಲಯ ಛೀಮಾರಿ ಹಾಕಿತು.
ಭಾರತದ ನಾಗರಿಕರು ಸಂಘಟನೆಗಳಲ್ಲಿ ಅಥವಾ ಸಂಘಗಳಲ್ಲಿ ಸೇರಿಕೊಳ್ಳುವ ಹಕ್ಕನ್ನು ‘ಆರ್ಟಿಕಲ್ 19’ ನೀಡಿದೆ. ರಾಜ್ಯಗಳು ಸಂಘಗಳ ಚಟುವಟಿಕೆಗಳಿಗೆ ನಿರ್ಬಂಧ ಹೇರಬಹುದು, ಆದರೆ ಅದು ಕಾನೂನು ಆಧಾರಿತವಾಗಿರಬೇಕು, ಸಾರ್ವಜನಿಕ ಹಿತಾನುಗುಣವಾಗಿ ಇರಬೇಕು. ಸರಕಾರದ ಅಧಿಕಾರವು ಕಲಂ 162ರ ಅಡಿಯಲ್ಲಿ ಸಂವಿಧಾನದ ಮಿತಿಯೊಳಗಿರಬೇಕು, ಅದನ್ನು ಮೀರಿ ಹೋಗಬಾರದು ಎಂದು ಸ್ಪಷ್ಟವಾಗಿದೆ.
ಆಡಳಿತಗಾರರ ಸರ್ವಾಧಿಕಾರ ಹಾಗೂ ಕಾನೂನುಬಾಹಿರ ಕೃತ್ಯಗಳಿಗೆ ಕಡಿವಾಣ ಹಾಕಲು ಸಂವಿಧಾನವನ್ನು ರೂಪಿಸುವಾಗಲೇ ಡಾ.ಅಂಬೇಡ್ಕರ್‌ರವರು ಮುನ್ನೆಚ್ಚರಿಕೆಯನ್ನು ತೆಗೆದು ಕೊಂಡಿದ್ದರು. 2007ರಲ್ಲಿ ನಡೆದ ಸಂಝೋತಾ ಎಕ್ಸ್ ಪ್ರೆಸ್ ಸ್ಫೋಟ ಮತ್ತು 2008ರ ಮಾಲೇಗಾಂವ್ ಬಾಂಬ್ ಸ್ಫೋಟದ ತರುವಾಯ, ಈ ಘಟನೆಗಳಿಗೆ ಹಿಂದೂಗಳು ಕಾರಣ ಎಂದು ಆರೋಪಿಸಿ ‘ಕೇಸರಿ ಭಯೋತ್ಪಾದನೆ’ಯ ಹೆಸರಲ್ಲಿ ಹಿಂದೂಗಳಿಗೆ ಭಯೋತ್ಪಾದಕರ ಹಣೆಪಟ್ಟಿ ಕಟ್ಟಲಾಗಿತ್ತು.
ಬಾಂಬ್ ಸ್ಫೋಟದ ಆರೋಪದ ಮೇಲೆ ಬಂಧಿತರಾಗಿದ್ದ ಪ್ರಗ್ಯಾ ಸಿಂಗ್ ಠಾಕೂರ್‌ರವರಿಗೆ ಚಿತ್ರಹಿಂಸೆ ನೀಡಿ ಮೋಹನ್ ಭಾಗವತ್‌ರ ಹೆಸರು ಹೇಳಲು ಒತ್ತಾಯಿಸಿದ್ದರು ಎಂದು ಅವರು ಬಯಲು ಮಾಡಿದ್ದಾರೆ. 2009ರಲ್ಲಿಯೇ ಬಾಂಬ್ ಸೋಟದ ಪ್ರಕರಣದಲ್ಲಿ ಆರೆಸ್ಸೆಸ್ ಹೆಸರು ಸೇರಿಸಿ ಅದನ್ನು ನಿಷೇಧಿಸುವ ಷಡ್ಯಂತ್ರವನ್ನು ಕಾಂಗ್ರೆಸ್ಸಿಗರು ರೂಪಿಸಿ ಮುಖಭಂಗಿತರಾಗಿದ್ದರು.
ಕರ್ನಾಟಕದಲ್ಲಿ, ಇಸ್ಲಾಂ ಮೂಲಭೂತವಾದದ ಮೂಲಕ ಉಗ್ರಗಾಮಿ ಚಟುವಟಿಕೆಯನ್ನು ಕೈಗೊಳ್ಳುತ್ತಿದ್ದ ಪಿಎಫ್ಐ ಸಂಸ್ಥೆಯನ್ನು ಕಾಂಗ್ರೆಸ್ ಸರಕಾರವು ಹತ್ತಿಕ್ಕುವ ಕೆಲಸ ಮಾಡದೆ ಆ ಸಂಘಟನೆಯ ಸದಸ್ಯರ ಮೇಲೆ ಇದ್ದ ನೂರಾರು ಮೊಕದ್ದಮೆಗಳನ್ನು ಹಿಂಪಡೆಯುವ ಆಘಾತಕಾರಿ ಕ್ರಮ ಕೈಗೊಂಡಿತು.
ಡಿಜೆ ಹಳ್ಳಿ, ಕೆಜಿ ಹಳ್ಳಿ ಮತ್ತು ಹಳೇ ಹುಬ್ಬಳ್ಳಿಯಲ್ಲಿ ಪೊಲೀಸ್ ಠಾಣೆಗೆ ಬೆಂಕಿ ಹಚ್ಚಿದ ಸಮಾಜ ಘಾತುಕರ ಮೇಲಿನ ಮೊಕದ್ದಮೆ ಹಿಂಪಡೆಯಲು ಸರಕಾರ ಮುಂದಾಗುತ್ತದೆ. ಮಂಗಳೂರಿನಲ್ಲಿ ಕುಕ್ಕರ್ ಬಾಂಬ್ ಸ್ಫೋಟದ ಆರೋಪಿಯನ್ನು ‘ಬ್ರದರ್’ ಎಂದು ಕರೆದು ಭಯೋತ್ಪಾದನೆಗೆ ಕುಮ್ಮಕ್ಕು ನೀಡಲಾಗುತ್ತದೆ.
ರಾಜ್ಯದ ಜನತೆಯ ಸುರಕ್ಷತೆಯೊಂದಿಗೆ ರಾಜಿ ಮಾಡಿಕೊಂಡು ಸಮಾಜದ ಸ್ವಾಸ್ಥ್ಯಕ್ಕೆ ಅಪಾಯ ವಾದರೂ, ಓಲೈಕೆ ರಾಜಕಾರಣ ಮಾಡುವುದು ಕಾಂಗ್ರೆಸ್‌ನ ನೀತಿಯಾಗಿದೆ. ಆರೆಸ್ಸೆಸ್, ಕಳೆದ ನೂರು ವರ್ಷದಿಂದ ಹಿಂದೂಗಳನ್ನು ಸಂಘಟಿಸುವ ಮೂಲಕ ರಾಷ್ಟ್ರಭಕ್ತರ ನಿರ್ಮಾಣ ಮಾಡುತ್ತಿರು ವುದು ಇವರಿಗೆ ಸಮಾಜ ವಿರೋಧಯಾಗಿ ಕಾಣುತ್ತದೆ.
ಕಪೋಲಕಲ್ಪಿತ ಆರೋಪಗಳ ಮೂಲಕ ಸೇಡಿನ ಭಾವನೆಯಿಂದ ಸಂಘದ ಚಟುವಟಿಕೆಯನ್ನು ನಿಷೇಧಿಸಬೇಕು ಎಂದು ಸಂವಿಧಾನ ವಿರೋಧಿ ಕ್ರಮಕ್ಕೆ ಇವರು ಮುಂದಾಗುತ್ತಾರೆ. ಯಾವುದೇ ಜಾತಿ, ಪ್ರಾಂತ ಮತ್ತು ಭಾಷಾ ಭೇಧವಿಲ್ಲದೆ ಕಳೆದ ನೂರು ವರ್ಷದಿಂದ ಸಮಾಜದ ಸಾಮರಸ್ಯಕ್ಕಾಗಿ ತನ್ನನ್ನು ತೊಡಗಿಸಿಕೊಂಡಿರುವ ಸಂಘದ ಕಾರ್ಯವು ಸ್ವತಃ ಬಾಬಾ ಸಾಹೇಬ್ ಅಂಬೇಡ್ಕರ್‌ರವರ ಪ್ರಶಂಸೆಗೆ ಪಾತ್ರವಾಗಿತ್ತು.
1939ರ ಮೇ 12ರಂದು ಪುಣೆಯಲ್ಲಿ ನಡೆಯುತ್ತಿದ್ದ ಸಂಘದ ಶಿಬಿರಕ್ಕೆ ಭೇಟಿ ಕೊಟ್ಟ ನಂತರ ಅಂಬೇಡ್ಕರ್, “ಎ ಸಮುದಾಯಗಳ ಯುವಕರು ಶಿಸ್ತಿನಿಂದ, ಸಹೋದರ ತ್ವದಿಂದ ಒಟ್ಟಿಗೆ ವಾಸ ಮಾಡುತ್ತಿರುವುದನ್ನು ಕಂಡೆನು. ನನಗೆ ಒಂದು ಸುಸಂಘಟಿತ ಸಮಾಜವನ್ನು ಇದು ನೆನಪಿಸಿತು" ಎಂದು ಮುಕ್ತಕಂಠದಿಂದ ಪ್ರಶಂಸಿಸುತ್ತಾರೆ, ಡಾ. ಹೆಡ್ಗೆವಾರ್‌ರವರನ್ನು ಅಭಿನಂದಿಸುತ್ತಾರೆ.
ಪ್ರಿಯಾಂಕ್ ಖರ್ಗೆಯವರು ಜವಾಬ್ದಾರಿಯುತ ಸಚಿವರು; ಸರಕಾರದ ಆಡಳಿತವು ತಮ್ಮ ಇಚ್ಛೆಗನು ಗುಣವಾಗಿ ಕುಣಿಯುವ ಆಟಿಕೆಯಲ್ಲ ಎಂಬುದನ್ನು ಅವರು ಮರೆತಿದ್ದಾರೆ. ಸಂಘದ ಚಟುವಟಿಕೆ ಯನ್ನು ನಿರ್ಬಂಧಿಸುವಂತೆ ತಾವು ಸರಕಾರಕ್ಕೆ ಮಾಡಿರುವ ಬೇಡಿಕೆಗೆ ಸೂಕ್ತ ಕಾರಣ ಮತ್ತು ಸಾಕ್ಷ್ಯವನ್ನು ಒದಗಿಸಬೇಕಾಗುತ್ತದೆ ಎಂಬ ವಿವೇಚನೆಯಿಲ್ಲದೆ ಅವರು ಕುರುಡು ದ್ವೇಷದಿಂದ ಪತ್ರ ಬರೆದು ತಮ್ಮ ಬೇಜವಾಬ್ದಾರಿತನವನ್ನು ತೋರಿದ್ದಾರೆ.
ರಾಜ್ಯ ಸರಕಾರವು ಯಾವುದೇ ವ್ಯಕ್ತಿ ಅಥವಾ ಸಂಸ್ಥೆಯ ಮೇಲೆ ಕ್ರಮ ಜರುಗಿಸಿದಾಗ ಅದು ನ್ಯಾಯಾಲಯದಲ್ಲಿ ಪ್ರಶ್ನಿಸಲ್ಪಟ್ಟರೆ, ಸರಕಾರವು ತನ್ನ ಕ್ರಮವನ್ನು ಸೂಕ್ತ ದಾಖಲೆ ಸಮೇತ ಸಮರ್ಥಿಸಿಕೊಳ್ಳಬೇಕು, ಇಲ್ಲವಾದರೆ ಕೋರ್ಟಿನಲ್ಲಿ ಮುಖಭಂಗ ಗ್ಯಾರಂಟಿ. ‘ಕೈಲಾಗದವನು ಮೈಯೆ ಪರಚಿಕೊಂಡ’ ಎಂಬಂತಾಗಿದೆ ಖರ್ಗೆಯವರ ಪರಿಸ್ಥಿತಿ. ಇವರ ಪಕ್ಷವು ದೇಶಾದ್ಯಂತ ಜನರಿಂದ ತಿರಸ್ಕೃತವಾಗಿ ಅದರ ಭವಿಷ್ಯ ಮಂಕಾಗಿದೆ.
ರಾಜ್ಯದಲ್ಲಿ ನಾಯಕತ್ವದ ಗೊಂದಲದ ಕಾರಣ ನಡೆ ಯುತ್ತಿರುವ ಆಂತರಿಕ ಹಗ್ಗಜಗ್ಗಾಟವು ಸರಕಾರದ ಅಡಿಪಾಯವನ್ನು ಅಲ್ಲಾಡಿಸುತ್ತಿದೆ. ಅಳತೆ ಮೀರಿ ನೀಡಿರುವ ಆಶ್ವಾಸನೆಗಳ ಪರಿಣಾಮ ಅಭಿವೃದ್ಧಿಯು ಕುಂಠಿತವಾಗಿ ಜನರು ಭ್ರಮನಿರಸನಗೊಂಡಿರುವುದು ಕಾಂಗ್ರೆಸ್ ನಾಯಕರಲ್ಲಿ ತಲ್ಲಣವನ್ನು ಸೃಷ್ಟಿಸಿದೆ.
ಗುತ್ತಿಗೆದಾರರು ಮಾಡಿದ್ದ 40 ಪರ್ಸೆಂಟ್ ಕಮಿಷನ್ ಆರೋಪದ ಬಂಡವಾಳದ ಮೇಲೆ ಅಧಿಕಾರ ಹಿಡಿದವರ ಮೇಲೆಯೇ ಈಗ ಅದೇ ಗುತ್ತಿಗೆದಾರರ ಸಂಘದವರು ‘ಶೇ.60ರಷ್ಟು ಕಮಿಷನ್ ವಸೂಲಿ ಯಾಗುತ್ತಿದೆ’ ಎಂದು ಆರೋಪ ಮಾಡಿದ್ದಾರೆ.
ಶಾಸಕ ವೀರೇಂದ್ರ ಪಪ್ಪಿಯವರ ಬಳಿಯಿದ್ದ ನೂರಾರು ಕೋಟಿ ರು. ಹಣ ಮತ್ತು ಚಿನ್ನ ಜಪ್ತಿಯಾಗಿ, ಸರಕಾರದ ಭ್ರಷ್ಟಾಚಾರದ ಆಳಕ್ಕೆ ಕನ್ನಡಿ ಹಿಡಿದಿದೆ. ವಾಲ್ಮೀಕಿ ನಿಗಮದ ನೂರಾರು ಕೋಟಿ ರು. ಹಗರಣ, ಬೋವಿ ನಿಗಮದ ಶೇ.60ರಷ್ಟು ಕಮಿಷನ್ ಹಗರಣ ಸರಕಾರವನ್ನು ಅಡಿಸುತ್ತಿವೆ.
ಸಂಪುಟದ ಸಚಿವರಾಗಿ ಸರಕಾರದ ಲೋಪದೋಷಗಳ ಬಗ್ಗೆ ಆತ್ಮಾವಲೋಕನ ಮಾಡಿಕೊಳ್ಳು ವುದು ದೂರದ ಮಾತು. ಬಲೂನು ಮಾರಲು ಬಂದಿದ್ದ ತಮ್ಮದೇ ಜಿಯ ಅಪ್ರಾಪ್ತ ಬಾಲಕಿಯ ಮೇಲೆ ಮೈಸೂರಿನಲ್ಲಿ ಅಮಾನುಷವಾಗಿ ಅತ್ಯಾಚಾರವಾಗಿ ಹತ್ಯೆಯಾದರೂ, ಅವರ ಕುಟುಂಬ ದವರ ಕಣ್ಣೀರು ಒರೆಸಲು ಖರ್ಗೆಯವರಿಗೆ ಸಮಯವಿಲ್ಲ!
ಸಜ್ಜನಶಕ್ತಿಯಾದ ಆರೆಸ್ಸೆಸ್ ಮೇಲೆ ಪ್ರಿಯಾಂಕ್ ಖರ್ಗೆಯವರು ತಮ್ಮ ವಕ್ರದೃಷ್ಟಿ ಬೀರಿ, ಕಾಂಗ್ರೆಸ್ಸಿ ನಲ್ಲಿ ಸಿದ್ದರಾಮಯ್ಯನವರಿಗೆ ತಾವೊಬ್ಬ ಪರ್ಯಾಯ ನಾಯಕನಾಗಿ ರೂಪಿಸಿಕೊಳ್ಳಲು ಕಸರತ್ತು ನಡೆಸುತ್ತಿದ್ದರೂ ಆಶ್ಚರ್ಯವಿಲ್ಲ.
(ಲೇಖಕರು ಬಿಜೆಪಿಯ ವಕ್ತಾರರು)Prakash Shesharaghavachar Column: ಅರಾಜಕತೆಯ ಕಿಚ್ಚನ್ನು ಭಾರತಕ್ಕೂ ಹಬ್ಬಿಸಲು ಸಂಚು