ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Mohsin Naqvi: ಗುಪ್ತ ಸ್ಥಳವೊಂದರಲ್ಲಿ ಏಷ್ಯಾಕಪ್‌ ಟ್ರೋಫಿ ಅಡಗಿಸಿಟ್ಟ ಮೊಹ್ಸಿನ್ ನಖ್ವಿ

ಕಳೆದ ಶನಿವಾರ ಬಿಸಿಸಿಐ ಇ-ಮೇಲ್‌ ಮೂಲಕ ಏಷ್ಯಾಕಪ್ ಟ್ರೋಫಿ ನೀಡುವಂತೆ ಮತ್ತು, ಉತ್ತರಕ್ಕಾಗಿ ಕಾಯುತ್ತಿದ್ದೇವೆ ಎಂದು ಮೊಹ್ಸಿನ್ ನಖ್ವಿಗೆ ಹೇಳಿತ್ತು. ಇದಕ್ಕೆ ಉತ್ತರಿಸಿದ ನಖ್ವಿ, ಬಿಸಿಸಿಐ ಭಾರತ ತಂಡದ ಯಾರಾದರೂ ಒಬ್ಬ ಆಟಗಾರನನ್ನು ಕಳುಹಿಸಿದರೆ ಅವರ ಕೈಗೆ ಟ್ರೋಫಿ ಕೊಡಬಹುದು ಎಂದಿದ್ದರು.

ದುಬೈ: ಏಷ್ಯಾಕಪ್‌ ಟ್ರೋಫಿ(Asia Cup 2025) ವಿವಾದ ಸದ್ಯಕ್ಕೆ ಬಗೆಹರಿಯುವ ಲಕ್ಷಣಗಳೂ ಕಾಣಿಸುತ್ತಿಲ್ಲ. ಏಷ್ಯನ್‌ ಕೌನ್ಸಿಲ್‌ ಅಧ್ಯಕ್ಷ ಮೊಹ್ಸಿನ್ ನಖ್ವಿ(Mohsin Naqvi) ತನ್ನ ಉದ್ದಟತನದ ವರ್ತನೆಯನ್ನು ಮುಂದುವರಿಸಿದ್ದು, ದುಬೈನ ಎಸಿಸಿ ಮುಖ್ಯ ಕಚೇರಿಯಲ್ಲಿದ್ದ ಏಷ್ಯಾಕಪ್‌ ಟ್ರೋಫಿಯನ್ನು ಅಬುಧಾಬಿಯ ಗುಪ್ತ ಸ್ಥಳವೊಂದರಲ್ಲಿ ಅಡಗಿಸಿಟ್ಟಿದಾರೆ.

ಏಷ್ಯಾಕಪ್‌ ಫೈನಲ್‌ ಗೆದ್ದ ಬಳಿಕ ಭಾರತ ತಂಡ ನಖ್ವಿ ಕೈಯಿಂದ ಟ್ರೋಫಿ ಸ್ವೀಕರಿಸದಿರಲು ನಿರ್ಧರಿಸಿತ್ತು. ಗಂಟೆಗಳ ಕಾಲ ನಡೆದ ನಾಟಕೀಯ ಬೆಳವಣಿಗೆ ಬಳಿಕ ನಖ್ವಿ ಹೋಟೆಲ್‌ಗೆ ತೆರಳಿದ್ದರು. ಜೊತೆಗೆ ಸಿಬ್ಬಂದಿ ಜತೆ ಟ್ರೋಫಿಯನ್ನು ತೆಗೆದುಕೊಂಡು ಹೋಗಿದ್ದರು. ನಂತರ ಅದನ್ನು ಎಸಿಸಿ ಕಚೇರಿಯಲ್ಲಿ ಲಾಕ್‌ ಮಾಡಿಟ್ಟಿದ್ದರು. ಮತ್ತು ತನ್ನ ಅನುಮತಿ ಇಲ್ಲದೆ ಯಾರಿಗೂ ಅದನ್ನು ಹಸ್ತಾಂತರಿಸದಂತೆ ಸಿಬ್ಬಂದಿಗೆ ಸೂಚಿಸಿದ್ದರು.

ಕಳೆದ ಶನಿವಾರ ಬಿಸಿಸಿಐ ಇ-ಮೇಲ್‌ ಮೂಲಕ ಏಷ್ಯಾಕಪ್ ಟ್ರೋಫಿ ನೀಡುವಂತೆ ಮತ್ತು, ಉತ್ತರಕ್ಕಾಗಿ ಕಾಯುತ್ತಿದ್ದೇವೆ ಎಂದು ಮೊಹ್ಸಿನ್ ನಖ್ವಿಗೆ ಹೇಳಿತ್ತು. ಇದಕ್ಕೆ ಉತ್ತರಿಸಿದ ನಖ್ವಿ, ಬಿಸಿಸಿಐ ಭಾರತ ತಂಡದ ಯಾರಾದರೂ ಒಬ್ಬ ಆಟಗಾರನನ್ನು ಕಳುಹಿಸಿದರೆ ಅವರ ಕೈಗೆ ಟ್ರೋಫಿ ಕೊಡಬಹುದು ಎಂದಿದ್ದರು.

ಇದನ್ನೂ ಓದಿ Asia Cup 2025: ಭಾರತ ತಂಡಕ್ಕೆ ಏಷ್ಯಾ ಕಪ್‌ ಟ್ರೋಫಿ ನೀಡಲು ತಿರಸ್ಕರಿಸಿದ ಮೊಹ್ಸಿನ್‌ ನಖ್ವಿ!

ಬಿಸಿಸಿಐ ಚವಿರುದ್ಧ ಐಸಿಸಿಗೆ ದೂರು ನೀಡುವುದಾಗಿ ತಿಳಿಸಿದ ಬೆನ್ನಲ್ಲೇ ಇದೀಗ ನಖ್ವಿ ಎಸಿಸಿ ಮುಖ್ಯ ಕಚೇರಿಯಲ್ಲಿದ್ದ ಏಷ್ಯಾಕಪ್‌ ಟ್ರೋಫಿಯನ್ನು ಅಲ್ಲಿಂದ ಬೇರೆಡೆಗೆ ಸ್ಥಳಾಂತರಿಸಿದ್ದಾರೆ.