ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ISL 2024-25 Final: ಇಂದು ಐಎಸ್‌ಎಲ್‌ ಫೈನಲ್‌; 2ನೇ ಪ್ರಶಸ್ತಿ ನಿರೀಕ್ಷೆಯಲ್ಲಿ ಬೆಂಗಳೂರು

ಲೀಗ್ ಹಂತದ ಪಂದ್ಯಗಳಲ್ಲಿ ಬಾಗನ್‌ ತಂಡ ಅಗ್ರಸ್ಥಾನ ಪಡೆದಿತ್ತು. ಬೆಂಗಳೂರು ಮೂರನೇ ಸ್ಥಾನ ಪಡೆದಿತ್ತು. ನಂತರ ಪ್ಲೇ ಆಫ್‌ ಸವಾಲುಗಳನ್ನು ನಿಭಾಯಿಸಿ ಪ್ರಶಸ್ತಿ ಸುತ್ತಿಗೆ ಲಗ್ಗೆಯಿಟ್ಟಿದೆ. ಬೆಂಗಳೂರಿನ ತಂಡಕ್ಕೆ ಇದು ನಾಲ್ಕನೇ ಫೈನಲ್ ಆಗಿದೆ. ಬೆಂಗಳೂರು ತಂಡ ಇತ್ತೀಚಿನ ದಿನಗಳಲ್ಲಿ ಶ್ರೇಷ್ಠ ಪ್ರದರ್ಶನ ತೋರುವ ಮೂಲಕ ಉತ್ತಮ ಲಯದಲ್ಲಿದೆ. ಇದೇ ವಿಶ್ವಾಸದಲ್ಲಿ ಇಂದು ಫೈನಲ್‌ ಆಡುವ ಹುಮ್ಮಸ್ಸಿನಲ್ಲಿದೆ.

ಕೋಲ್ಕತಾ: ಉತ್ಸಾಹಿ ಬೆಂಗಳೂರು ಎಫ್‌ಸಿ ತಂಡವು, ಶನಿವಾರ ನಡೆಯಲಿರುವ ಇಂಡಿಯನ್‌ ಸೂಪರ್‌ ಲೀಗ್‌ (ಐಎಸ್‌ಎಲ್‌) ಫೈನಲ್‌ ಪಂದ್ಯದಲ್ಲಿ ಆತಿಥೇಯ ಮೋಹನ್‌ ಬಾಗನ್ ವಿರುದ್ಧ 2ನೇ ಪ್ರಶಸ್ತಿ ಗೆಲುವಿನ ಇರಾದೆಯೊಂದಿಗೆ ಕಣಕ್ಕಿಳಿಯಲಿದೆ. ಇತ್ತಂಡಗಳ ಈ ಫೈನಲ್‌ ಕದನಕ್ಕೆ ಸಾಲ್ಟ್ ಲೇಕ್‌ ಮೈದಾನ ಅಣಿಯಾಗಿದೆ. ಪಂದ್ಯ ರಾತ್ರಿ 7.30ಕ್ಕೆ ಆರಂಭವಾಗಲಿದೆ. 2018-19ರಲ್ಲಿ ಪ್ರಶಸ್ತಿ ಗೆದ್ದಿರುವ ಬೆಂಗಳೂರು 2022ರಲ್ಲಿ ಇದೇ ಮೋಹನ್‌ ಬಾಗನ್‌ ವಿರುದ್ಧ ಸೋತಿತ್ತು. ಅಂದು ನಡೆದಿದ್ದ ಫೈನಲ್‌ ಪಂದ್ಯ 2-2ರಿಂದ ಟೈ ಎನಿಸಿತ್ತು. ಶೂಟೌಟ್‌ನಲ್ಲಿ ಬಾಗಾನ್‌ 4-3ರಿಂದ ಗೆದ್ದಿತ್ತು. ಅಂದಿನ ಈ ಸೋಲಿಗೆ ಇದೀಗ ಸೇಡು ತೀರಿಸುವ ಅವಕಾಶ ಬೆಂಗಳೂರು ಎಫ್‌ಸಿ ತಂಡದ ಮುಂದಿದೆ.

ಲೀಗ್ ಹಂತದ ಪಂದ್ಯಗಳಲ್ಲಿ ಬಾಗನ್‌ ತಂಡ ಅಗ್ರಸ್ಥಾನ ಪಡೆದಿತ್ತು. ಬೆಂಗಳೂರು ಮೂರನೇ ಸ್ಥಾನ ಪಡೆದಿತ್ತು. ನಂತರ ಪ್ಲೇ ಆಫ್‌ ಸವಾಲುಗಳನ್ನು ನಿಭಾಯಿಸಿ ಪ್ರಶಸ್ತಿ ಸುತ್ತಿಗೆ ಲಗ್ಗೆಯಿಟ್ಟಿದೆ. ಬೆಂಗಳೂರಿನ ತಂಡಕ್ಕೆ ಇದು ನಾಲ್ಕನೇ ಫೈನಲ್ ಆಗಿದೆ. ಬೆಂಗಳೂರು ತಂಡ ಇತ್ತೀಚಿನ ದಿನಗಳಲ್ಲಿ ಶ್ರೇಷ್ಠ ಪ್ರದರ್ಶನ ತೋರುವ ಮೂಲಕ ಉತ್ತಮ ಲಯದಲ್ಲಿದೆ. ಇದೇ ವಿಶ್ವಾಸದಲ್ಲಿ ಇಂದು ಫೈನಲ್‌ ಆಡುವ ಹುಮ್ಮಸ್ಸಿನಲ್ಲಿದೆ.

ಪಂದ್ಯಕ್ಕೂ ಮುನ್ನ ನಡೆದಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಬಾಗನ್‌ ತಂಡದ ಕೋಚ್‌ ಮೊಲಿನಾ, 'ಈ ಹಿಂದಿನ ಪಂದ್ಯಗಳ ಬಗ್ಗೆ ತಲೆಕೆಡಿಸಿಕೊಳ್ಳುವುದಿಲ್ಲ. ಹಾಗಂತ ಎದುರಾಳಿ ತಂಡದ ಸವಾಲನ್ನು ಕಡೆಗಣಿಸಿದರೆ ಎಚ್ಚರಿಕೆಯಿಂದ ಮುಂದಡಿ ಇಟ್ಟು ಪಂದ್ಯ ಆಡಲಿದ್ದೇವೆ' ಎಂದರು.

ಇದನ್ನೂ ಓದಿ IPL 2025 Points Table: ಕೆಕೆಆರ್‌ ಗೆಲುವಿನಿಂದ ಅಂಕಪಟ್ಟಿಯಲ್ಲಿ ಕುಸಿತ ಕಂಡ ಆರ್‌ಸಿಬಿ

ಬೆಂಗಳೂರು ತಂಡದ ಕೋಚ್‌ ಜೆರಾರ್ಡ್‌ ಝಾರ್ಗೋಝಾ ಮಾತನಾಡಿ, ಫೈನಲ್ ಆಡಲು ತವಕದಿಂದ ಇದ್ದೇವೆ. ಕೋಲ್ಕತ್ತ ನಮಗೆ ಬಹುತೇಕ ಎರಡನೇ ತವರು ಇದ್ದಂತೆ. ಫೈನಲ್‌ ಆಡಲು ನಮ್ಮ ತಂಡ ತುದಿಗಾಲಲ್ಲಿ ನಿಂತಿದೆ' ಎಂದು ತಿಳಿಸಿದರು.