2026ರ ಐಪಿಎಲ್ ಹರಾಜಿಗೆ ಬಿಡುಗಡೆಯಾಗಬಲ್ಲ ಪಂಜಾಬ್‌ನ ಮೂವರು ಆಟಗಾರರು!
ಶ್ರೇಯಸ್ ಅಯ್ಯರ್ ನಾಯಕತ್ವದಲ್ಲಿ ಪಂಜಾಬ್ ಕಿಂಗ್ಸ್ ತಂಡ 2025ರ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ರನ್ನರ್ ಅಪ್ ಆಗಿತ್ತು. ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ ಫೈನಲ್‌ನಲ್ಲಿ ಸೋತರೂ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿತ್ತು. ಆದರೆ, ಮುಂಬರುವ ಐಪಿಎಲ್ ಟೂರ್ನಿಯ ಹರಾಜಿಗೆ ಮೂವರು ಸ್ಟಾರ್ ಆಟಗಾರರನ್ನು ಪಂಜಾಬ್ ಕೈ ಬಿಡುವ ಸಾಧ್ಯತೆ ಇದೆ.

ಪಂಜಾಬ್ ಕಿಂಗ್ಸ್ ರಿಲೀಸ್ ಮಾಡಲಿರುವ ಆಟಗಾರರು.

ನವದೆಹಲಿ: ಶ್ರೇಯಸ್ ಅಯ್ಯರ್ (Shreyas Iyer) ನಾಯಕಯತ್ವದಲ್ಲಿ ಪಂಜಾಬ್ ಕಿಂಗ್ಸ್ (Punjab Kings) ತಂಡ 2025ರ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ (IPL 2025) ಫೈನಲ್‌ಗೆ ಪ್ರವೇಶ ಮಾಡಿತ್ತು. ಆದರೆ, ಕಠಿಣ ಹೋರಾಟ ನಡೆಸಿದ ಬಳಿಕ ಪಂಜಾಬ್ ಕಿಂಗ್ಸ್ ತಂಡ, ರಜತ್ ಪಾಟಿದಾರ್ ನಾಯಕತ್ವದ ಪಂಜಾಬ್ ಕಿಂಗ್ಸ್ ವಿರುದ್ಧ ಸೋಲು ಅನುಭವಿಸುವ ಮೂಲಕ ರನ್ನರ್ ಅಪ್‌ಗೆ ತೃಪ್ತಿಪಟ್ಟುಕೊಂಡಿತ್ತು. ಕಳೆದ ಆವೃತ್ತಿಯಲ್ಲಿ ಪಂಜಾಬ್ ಕಿಂಗ್ಸ್ ತಂಡ ಅತ್ಯುತ್ತಮ ಪ್ರದರ್ಶನವನ್ನು ತೋರಿತ್ತು. ಇದೀಗ ಮುಂದಿನ ಸೀಸನ್‌ನಲ್ಲಿಯೂ ಉತ್ತಮ ಪ್ರದರ್ಶನವನ್ನು ತೋರಲು ಶ್ರೇಯಸ್ ಅಯ್ಯರ್ ಬಳಗ ಎದುರು ನೋಡುತ್ತಿದೆ.
2026ರ ಐಪಿಎಲ್ ಟೂರ್ನಿಯ ನಿಮಿತ್ತ ಪಂಜಾಬ್ ಕಿಂಗ್ಸ್ ತಂಡ ಇನ್ನಷ್ಟು ಬಲಿಷ್ಠ ತಂಡವನ್ನು ಕಟ್ಟಲು ಎದುರು ನೋಡುತ್ತಿದೆ. ಹಾಗಾಗಿ ಮುಂದಿನ ಹರಾಜಿನಲ್ಲಿ ಕೆಲ ಆಟಗಾರರನ್ನು ಕೈ ಬಿಟ್ಟು, ಬೇಡಿಕೆಗೆ ತಕ್ಕಂತೆ ಆಟಗಾರರನ್ನು ಖರೀದಿಸಲು ಎದುರು ನೋಡುತ್ತಿದೆ. ಅಂದ ಹಾಗೆ ಮುಂದಿನ ಹರಾಜಿಗೆ ಪ್ರಮುಖ ಮೂವರು ಆಟಗಾರರನ್ನು ಪಂಜಾಬ್ ಕಿಂಗ್ಸ್ ರಿಲೀಸ್ ಮಾಡಬಹುದು. ಅಂಥಾ ಆಟಗಾರರನ್ನು ಇಲ್ಲಿ ವಿವರಿಸಲಾಗಿದೆ.
IPL 2025: ಲಕ್ನೋ ತಂಡ ತೊರೆಯಲು ನಿರ್ಧರಿಸಿದ ಮೆಂಟರ್ ಜಹೀರ್ ಖಾನ್
ಯುಜ್ವೇಂದ್ರ ಚಹಲ್
2025ರ ಐಪಿಎಲ್ ಮೆಗಾ ಹರಾಜಿನಲ್ಲಿ ಅತ್ಯಂತ ದುಬಾರಿ ಆಟಗಾರರ ಪೈಕಿ ಯುಜ್ವೇಂದ್ರ ಚಹಲ್ ಕೂಡ ಒಬ್ಬರಾಗಿದ್ದಾರೆ. ಅವರನ್ನು ಪಂಜಾಬ್ ಕಿಂಗ್ಸ್ 18 ಕೋಟಿ ರೂ. ಗಳಿಗೆ ಖರೀದಿಸಿತ್ತು. ಆದರೆ, ಅವರಿಂದ ನಿರೀಕ್ಷಿತ ಪ್ರದರ್ಶನ ಮೂಡಿಬಂದಿರಲಿಲ್ಲ.
ಅವರು 14 ಪಂದ್ಯಗಳಿಂದ 9.56ರ ಎಕಾನಮಿ ರೇಟ್‌ನಲ್ಲಿ 16 ವಿಕೆಟ್‌ಗಳನ್ನು ಕಬಳಿಸಿದ್ದರು. ಆದರೆ, ಅತ್ಯಂತ ಹೆಚ್ಚಿನ ಮೊತ್ತವನ್ನು ಚಹಲ್‌ಗೆ ನೀಡಲಾಗಿದ್ದು, ಮುಂದಿನ ಸೀಸನ್‌ಗೆ ಅವರನ್ನು ಕೈ ಬಿಟ್ಟು ಇದೇ ಮೊತ್ತದಲ್ಲಿ ತಂಡದ ಸಂಯೋಜನೆಗೆ ಸೂಕ್ತವಾಗುವ ಆಟಗಾರರನ್ನು ಖರೀದಿಸಲು ಪಂಜಾಬ್ ಕಿಂಗ್ಸ್ ಬಯಸುತ್ತಿದೆ.
IPL 2025 jerseys: ಬಿಸಿಸಿಐ ಕಚೇರಿಯಿಂದ 6.5 ಲಕ್ಷ ರೂ. ಮೌಲ್ಯದ ಐಪಿಎಲ್ ಜೆರ್ಸಿ ಕಳವು
ಆರೋನ್ ಹಾರ್ಡಿ
ಆರೋನ್ ಹಾರ್ಡಿ ವಿಶ್ವದ ಅತ್ಯುತ್ತಮ ಆಲ್‌ರೌಂಡರ್‌ಗಳಲ್ಲಿ ಒಬ್ಬರೆಂದು ಪರಿಗಣಿಸಲಾಗಿದೆ, ಆದರೆ ಐಪಿಎಲ್ ಟೂರ್ನಿಯಲ್ಲಿ ದೊಡ್ಡ ಹೆಸರು ಮಾಡುವ ಎಲ್ಲಾ ಸಾಮರ್ಥ್ಯ ಇವರಲ್ಲಿದೆ. ಆಸ್ಟ್ರೇಲಿಯನ್ ಆಟಗಾರ ಸ್ಪಿನ್ ಎದುರು ದೌರ್ಬಲ್ಯವನ್ನು ಹೊಂದಿದ್ದಾರೆ. ಹಾಗಾಗಿ ಕೆಲ ಓವರ್‌ಗಳಲ್ಲಿ ಅವರನ್ನು ನಂಬಲು ಸಾಧ್ಯವಿಲ್ಲ.
ರಿಕಿ ಪಾಂಟಿಂಗ್ ಹಾಗೂ ಆರೋನ್ ಹಾರ್ಡಿ ಇಬ್ಬರೂ ಆಸ್ಟ್ರೇಲಿಯನ್ ಆಟಗಾರರಾಗಿದ್ದಾರೆ. ಈ ಕಾರಣದಿಂದ ಅವರು ಪಂಜಾಬ್ ಕಿಂಗ್ಸ್‌ಗೆ ಬರಲು ಸಾಧ್ಯವಾಗಿತ್ತು. 2026ರ ಐಪಿಎಲ್ ಟೂರ್ನಿಗಿಂತ ಮೊದಲು ತಮ್ಮ ವಿದೇಶಿ ವಿಭಾಗವನ್ನು ಬಲಪಡಿಸಲು ಬಯಸುತ್ತದೆ. ಅಜ್ಮತ್‌ವುಲ್ಲಾ ಒಮರ್ಜಾಯ್, ಮಾರ್ಕಸ್ ಸ್ಟೋಯ್ನಿಸ್ ಮತ್ತು ಮಿಚೆಲ್ ಓವನ್ ಅವರಂತಹ ಹೆಸರುಗಳು ತಮ್ಮ ಶ್ರೇಯಾಂಕದಲ್ಲಿ ಇರುವುದರಿಂದ, ಪಿಬಿಕೆಎಸ್ ಆ ವಿದೇಶಿ ಆಟಗಾರರ ಸ್ಥಾನಗಳಲ್ಲಿ ಬದಲಾವಣೆ ಮಾಡಬಹದು.
IPL 2025: ಸಿಎಸ್‌ಕೆಯನ್ನು ಹಿಂದಿಕ್ಕಿ ಅತ್ಯಂತ ಮೌಲ್ಯಯುತ ಫ್ರಾಚೈಸಿ ಎನಿಸಿಕೊಂಡ ಆರ್‌ಸಿಬಿ!
ಮಾರ್ಕಸ್ ಸ್ಟೋಯ್ನಿಸ್
2025ರ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಪಂಜಾಬ್ ಕಿಂಗ್ಸ್ ತಂಡದಲ್ಲಿ ಮಾರ್ಕಸ್ ಸ್ಟೋಯ್ನಿಸ್ ಕೆಲ ಪ್ರಭಾವಯುತ ಪ್ರದರ್ಶನವನ್ನು ತೋರಿದ್ದರು. ಆದರೆ, ಅವರು ತಮ್ಮ ಶ್ರೇಷ್ಠ ಆಲ್‌ರೌಂಡರ್ ಸಾಮರ್ಥ್ಯವನ್ನು ಸಾಬೀತುಪಡಿಸುವಲ್ಲಿ ವಿಫಲರಾಗಿದ್ದರು. ಅವರು ಬೌಲಿಂಗ್‌ನಲ್ಲಿಯೂ ಇತ್ತೀಚೆಗೆ ಉತ್ತಮ ಫಾರ್ಮ್‌ನಲ್ಲಿ ಇರುವಂತೆ ಕಂಡಿಲ್ಲ.
ಕಳೆದ ಮೆಗಾ ಹರಾಜಿನಲ್ಲಿ ಸ್ಟೋಯ್ನಿಸ್ 11 ಕೋಟಿ ರೂ. ಗಳನ್ನು ಪಡೆದಿದ್ದರು. ಕಿಂಗ್ಸ್ ಪರ ಅವರು ಎದುರಿಸುವ ಎಸೆತಗಳ ಸಂಖ್ಯೆಯನ್ನು ನೋಡಿದರೆ, ಅವರು ಹಣಕ್ಕೆ ತಕ್ಕ ಆಟಗಾರನಲ್ಲದಿರಬಹುದು. ಶಶಾಂಕ್ ಸಿಂಗ್ ಮತ್ತು ಮಾರ್ಕೊ ಯೆನ್ಸನ್ ಕೆಳ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡುವ ಸಾಮರ್ಥ್ಯವನ್ನು ಸಾಬೀತುಪಡಿಸಿದ್ದಾರೆ ಮತ್ತು ಕ್ಯಾಮೆರಾನ್ ಗ್ರೀನ್‌ನಂತಹವರನ್ನು - ಹಿಟ್-ದಿ-ಡೆಕ್ ಬೌಲಿಂಗ್‌ನಲ್ಲಿಯೂ ಸಹ - ಆಯ್ಕೆ ಮಾಡುವುದು ಫ್ರಾಂಚೈಸಿಗೆ ಉತ್ತಮ ಉಪಾಯವಾಗಿದೆ.