ಸ್ವಾತಂತ್ರ್ಯೋತ್ಸವ ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Asia Cup 2025: ಏಷ್ಯಾಕಪ್‌ನಲ್ಲಿ ಅತ್ಯಧಿಕ ರನ್‌ ಗಳಿಸಿದ ಆಟಗಾರರು

Most Runs in Asia Cup History: ಭಾರತ ಕ್ರಿಕೆಟ್‌ ದಂತಕಥೆ ಸಚಿನ್‌ ತೆಂಡೂಲ್ಕರ್‌ ಅವರು ಏಷ್ಯಾಕಪ್‌ ಟೂರ್ನಿಯಲ್ಲಿ ಅತ್ಯಧಿಕ ರನ್‌ ಕಲೆಹಾಕಿದ ಮೂರನೇ ಮತ್ತು ಮೊದಲ ಭಾರತೀಯ ಎನಿಸಿಕೊಂಡಿದ್ದಾರೆ. ಸಚಿನ್‌ 1990-2012ತನಕ ಒಟ್ಟು 23 ಪಂದ್ಯ ಆಡಿ 971 ರನ್‌ ಗಳಿಸಿದ್ದಾರೆ. ಇದರಲ್ಲಿ 2 ಶತಕ ಮತ್ತು 7 ಅರ್ಧಶತಕ ಒಳಗೊಂಡಿದೆ.

ಬೆಂಗಳೂರು: ಮುಂದಿನ ತಿಂಗಳು ನಡೆಯಲಿರುವ ಏಷ್ಯಾ ಕಪ್‌(Asia Cup 2025) ಟೂರ್ನಿಗೆ ಎಲ್ಲ ತಂಡಗಳು ಸಿದ್ಧತೆ ಆರಂಭಿಸಿದೆ. ಈ ಬಾರಿ ವಿರಾಟ್‌ ಕೊಹ್ಲಿ, ರೋಹಿತ್‌ ಶರ್ಮ, ಶಕೀಬ್‌ ಅಲ್‌ ಹಸನ್‌, ಬಾಬರ್‌ ಅಜಂ ಸೇರಿ ಹಲವು ಅನುಭವಿ ಆಟಗಾರರ ಗೈರು ಟೂರ್ನಿಯಲ್ಲಿ ಎದ್ದು ಕಾಣಿಸಲಿದೆ. ಪಂದ್ಯಾವಳಿ ಸೆ. 9 ರಿಂದ 28ರವರೆಗೆ ಯುಎಇಯಲ್ಲಿ ನಡೆಯಲಿದೆ. ಇದಕ್ಕೂ ಮುನ್ನ ಇದುವರೆಗಿನ ಟೂರ್ನಿಯ ಇತಿಹಾಸದಲ್ಲಿ ಅತಿ ಹೆಚ್ಚು ರನ್‌(Most Runs in Asia Cup History) ಕಲೆಹಾಕಿದ ಆಟಗಾರರು ಯಾರು ಎಂಬ ಮಾಹಿತಿ ಇಲ್ಲಿದೆ.

ಸನತ್‌ ಜಯಸೂರ್ಯ

ಏಷ್ಯಾಕಪ್‌ ಟೂರ್ನಿಯ ಇದುವರೆಗಿನ ಇತಿಹಾಸದಲ್ಲಿ ಅತಿ ಹೆಚ್ಚು ರನ್‌ ಕಲೆಹಾಕಿ ದಾಖಲೆ ಶ್ರೀಲಂಕಾ ತಂಡದ ಮಾಜಿ ಆಟಗಾರ ಸನತ್‌ ಜಯಸೂರ್ಯ ಹೆಸರಿನಲ್ಲಿದೆ. ಅವರು ಒಟ್ಟು 25 ಪಂದ್ಯಗಳನ್ನು ಆಡಿ 1220 ರನ್‌ ಕಲೆಹಾಕಿದ್ದಾರೆ. ಇದರಲ್ಲಿ 6 ಶತಕ ಮತ್ತು 3 ಅರ್ಧಶತಕ ಒಳಗೊಂಡಿದೆ.

ಕುಮಾರ ಸಂಗಕ್ಕರ

ಶ್ರೀಲಂಕಾದ ಮತ್ತೋರ್ವ ಮಾಜಿ ನಾಯಕ ಹಾಗೂ ಆಟಗಾರ ಕುಮಾರ ಸಂಗಕ್ಕರ ಈ ಪಟ್ಟಿಯಲ್ಲಿ ದ್ವಿತೀಯ ಸ್ಥಾನದಲ್ಲಿದ್ದಾರೆ. ಸಂಗಕ್ಕರ 24 ಪಂದ್ಯಗಳನ್ನಾಡಿ 1075 ರನ್‌ ಗಳಿಸಿದ್ದಾರೆ. ಈ ವೇಳೆ ನಾಲ್ಕು ಶತಕ ಕೂಡ ಬಾರಿಸಿದ್ದಾರೆ. ಜಯಸೂರ್ಯ ಮತ್ತು ಸಂಗಕ್ಕರ ಹೊರತುಪಡಿಸಿ ಯಾವುದೇ ಆಟಗಾರರು ಟೂರ್ನಿಯಲ್ಲಿ ಸಾವಿರ ರನ್‌ ಪೂರೈಸಿಲ್ಲ.

ಸಚಿನ್‌ ತೆಂಡೂಲ್ಕರ್‌

ಭಾರತ ಕ್ರಿಕೆಟ್‌ ದಂತಕಥೆ ಸಚಿನ್‌ ತೆಂಡೂಲ್ಕರ್‌ ಅವರು ಏಷ್ಯಾಕಪ್‌ ಟೂರ್ನಿಯಲ್ಲಿ ಅತ್ಯಧಿಕ ರನ್‌ ಕಲೆಹಾಕಿದ ಮೂರನೇ ಮತ್ತು ಮೊದಲ ಭಾರತೀಯ ಎನಿಸಿಕೊಂಡಿದ್ದಾರೆ. ಸಚಿನ್‌ 1990-2012ತನಕ ಒಟ್ಟು 23 ಪಂದ್ಯ ಆಡಿ 971 ರನ್‌ ಗಳಿಸಿದ್ದಾರೆ. ಇದರಲ್ಲಿ 2 ಶತಕ ಮತ್ತು 7 ಅರ್ಧಶತಕ ಒಳಗೊಂಡಿದೆ.

ರೋಹಿತ್‌ ಶರ್ಮ

ಹಿಟ್‌ಮ್ಯಾನ್‌ ಖ್ಯಾತಿಯ ರೋಹಿತ್‌ ಶರ್ಮ ಅವರು 28 ಪಂದ್ಯಗಳಿಂದ 939 ರನ್‌ ಗಳಿಸಿ ಏಷ್ಯಾಕಪ್‌ ಟೂರ್ನಿಯಲ್ಲಿ ಅತ್ಯಧಿಕ ರನ್‌ ಕಲೆಹಾಕಿದ ಬ್ಯಾಟರ್‌ಗಳ ಪೈಕಿ ನಾಲ್ಕನೇ ಸ್ಥಾನಿಯಾಗಿದ್ದಾರೆ. ಅವರು ಟಿ20 ಕ್ರಿಕೆಟ್‌ಗೆ ನಿವೃತ್ತ ಹೇಳಿರುವ ಕಾರಣ ಈ ಬಾರಿಯ ಏಷ್ಯಾಕಪ್‌ ಆಡುತ್ತಿಲ್ಲ.

ಮುಶ್ಫಿಕರ್‌ ರಹೀಂ

ಬಾಂಗ್ಲಾದೇಶ ತಂಡದ ಹಿರಿಯ ಆಟಗಾರ ಮುಶ್ಫಿಕರ್‌ ರಹೀಂ ಅವರು ಈ ಯಾದಿಯಲ್ಲಿ 5ನೇ ಸ್ಥಾನದಲ್ಲಿದ್ದಾರೆ. ಅವರು 25 ಪಂದ್ಯಗಳನ್ನಾಡಿ ಒಟ್ಟು 830 ರನ್‌ ಕಲೆಹಾಕಿದ್ದಾರೆ. 2 ಶತಕ ಮತ್ತು 3 ಅರ್ಧಶತಕ ಒಳಗೊಂಡಿದೆ.

ಇದನ್ನೂ ಓದಿ Asia Cup 2025: ಭಾರತ ತಂಡದ ಪ್ಲೇಯಿಂಗ್‌ XI ಆರಿಸಿದ ಸುನೀಲ್‌ ಗವಾಸ್ಕರ್‌!