MS Dhoni: ಭಾರತ-ಪಾಕ್ ಬಿಕ್ಕಟ್ಟಿನ ನಡುವೆಯೇ ಭಾರೀ ವೈರಲಾಯ್ತು MS ಧೋನಿ ಧರಿಸಿದ್ದ ಟೀ-ಶರ್ಟ್
India-Pak Conflict:ಎಂ.ಎಸ್ ಧೋನಿ ಕ್ರಿಕೆಟ್‌ನಲ್ಲಿ ಮಾತ್ರವಲ್ಲದೇ ಟೆರಿಟೋರಿಯಲ್ ಆರ್ಮಿಯ ಭಾಗವೂ ಆಗಿದ್ದಾರೆ. ಕೆಲ ದಿನಗಳ ಹಿಂದೆ ಭಾರತ ಮತ್ತು ಪಾಕಿಸ್ತಾನದ ನಡುವೆ ಯುದ್ಧದ ವಾತಾವರಣ ದಟ್ಟವಾಗಿದ್ದ ಸಂದರ್ಭದಲ್ಲಿ ಈ ಪ್ರಾದೇಶಿಕ ಸೇನೆಯನ್ನು ಕರೆಸಿಕೊಳ್ಳಲು ಸೇನೆ ಮುಂದಾಗಿತ್ತು. ಹೀಗಿರುವಾಗ ಧೋನಿಯ ಈ ಟೀ ಶರ್ಟ್ ಎಲ್ಲರ ಗಮನ ಸೆಳೆದಿದೆ.


ಚನ್ನೈ: ಭಾರತ ಮತ್ತು ಪಾಕಿಸ್ತಾನದ ನಡುವಿನ ಉದ್ವಿಗ್ನತೆ ನಡುವೆಯೇ ಕ್ರಿಕೆಟಿಗ ಎಂ. ಎಸ್. ಧೋನಿಯವರ(MS Dhoni) ವಿಡಿಯೊ ಎಲ್ಲೆಡೆ ವೈರಲ್ ಆಗಿದೆ. ಧೋನಿ ವಿಮಾನ ಹತ್ತುತ್ತಿರುವ ವಿಡಿಯೋದಲ್ಲಿ ಅವರು ಧರಿಸಿದ್ದ ಟೀ ಶರ್ಟ್ ಎಲ್ಲರ ಗಮನ ಸೆಳೆದಿದೆ. ಅವರ ಟೀ ಶರ್ಟ್ ಮೇಲೆ "ಡ್ಯೂಟಿ, ಹಾನರ್,ಕಂಟ್ರಿ"(Duty, Honor, Country)ಎಂದು ಬರೆದಿರುವುದನ್ನು ವಿಡಿಯೊದಲ್ಲಿ ಕಾಣಬಹುದಾಗಿದೆ. ವಿಮಾನದಲ್ಲಿದ್ದ ಪ್ರಯಾಣಿಕರೊಬ್ಬರು ಈ ದೃಶ್ಯ ಸೆರೆ ಹಿಡಿದು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದು ತುಂಬಾ ವೈರಲ್ ಆಗುತ್ತಿದೆ.
ಎಂ.ಎಸ್ ಧೋನಿ ಕ್ರಿಕೆಟ್‌ನಲ್ಲಿ ಮಾತ್ರವಲ್ಲದೇ ಟೆರಿಟೋರಿಯಲ್ ಆರ್ಮಿಯ ಭಾಗವೂ ಆಗಿದ್ದಾರೆ. ಕೆಲ ದಿನಗಳ ಹಿಂದೆ ಭಾರತ ಮತ್ತು ಪಾಕಿಸ್ತಾನದ ನಡುವೆ ಯುದ್ಧದ ವಾತಾವರಣ ದಟ್ಟವಾಗಿದ್ದ ಸಂದರ್ಭದಲ್ಲಿ ಈ ಪ್ರಾದೇಶಿಕ ಸೇನೆಯನ್ನು ಕರೆಸಿಕೊಳ್ಳಲು ಸೇನೆ ಮುಂದಾಗಿತ್ತು. ಹೀಗಿರುವಾಗ ಧೋನಿಯ ಈ ಟೀ ಶರ್ಟ್ ಎಲ್ಲರ ಗಮನ ಸೆಳೆದಿದೆ.
ಮತ್ತೊಂದೆಡೆ ಎಲ್ಬೋ ಗಾಯದಿಂದಾಗಿ( ರುತುರಾಜ್ ಗಾಯಕ್ವಾಡ್ ಈ ಸೀಸನ್‌ನಿಂದ ಹೊರಗುಳುಯುತ್ತಿದ್ದಂತೆ ಮುಂಬೈ ಯುವ ಆಟಗಾರ ಆಯುಶ್ ಮಾಥ್ರೆ(Ayush Mathre) ಅವರಿಗೆ ತಂಡದಲ್ಲಿ ಸ್ಥಾನ ನೀಡಲಾಗಿತ್ತು, ಆ ಬಳಿಕ ಎಮ್ ಎಸ್ ಧೋನಿ ಮತ್ತೆ ತಂಡದ ನಾಯಕತ್ವ ವಹಿಸಿಕೊಂಡಿದ್ದರು ಈ ಸೀಸನ್‌ನಲ್ಲಿ ತಂಡ ನಿರೀಕ್ಷಿತ ಪ್ರದರ್ಶನ ತೋರದಿದ್ದರೂ ಧೋನಿ ನಾಯಕತ್ವ ವಹಿಸಿದ ಮೇಲೆ ಮತ್ತೆ ಪ್ರೇಕ್ಷಕರ ಗಮನ ಸೆಳೆದಿದ್ದಾರೆ.
ವೈರಾಗ್ತಿರೋ ವಿಡಿಯೊ ಇಲ್ಲಿದೆ
Exclusive Video of MS Dhoni from Chennai 💛
— Chakri Dhoni (@ChakriDhonii) May 11, 2025
Duty
Honour
Country 🇮🇳 pic.twitter.com/1Ig6s2Wum5
ಐಪಿಲ್ ಪುನಾರಂಭ ಯಾವಾಗ?
ಈ ನಡುವೆ ಭಾರತ–ಪಾಕಿಸ್ತಾನ ನಡುವಿನ ಸಂಘರ್ಷದಿಂದ ಇಂಡಿಯನ್ ಪ್ರೀಮಿಯರ್ ಲೀಗ್ (IPL) ತಾತ್ಕಾಲಿಕವಾಗಿ ಸ್ಥಗಿತಗೊಂಡಿದೆ. ಶನಿವಾರ ಜಾರಿಯಾದ ಕದನ ವಿರಾಮ ಘೋಷಣೆಯ ನಂತರ ಟೂರ್ನಿಯ ಪುನರಾರಂಭದ ನಿರೀಕ್ಷೆಯಿದ್ದು, ಐಪಿಎಲ್ ಆಡಳಿತ ಮಂಡಳಿ ಶೀಘ್ರದಲ್ಲೇ ಮುಂದಿನ ತೀರ್ಮಾನ ಕೈಗೊಳ್ಳಲಿದೆ.