ಡಬ್ಲ್ಯುಪಿಎಲ್‌ನಲ್ಲಿ ಶತಕ ಬಾರಿಸಿ ಇತಿಹಾಸ ಸೃಷ್ಟಿಸಿದ ನ್ಯಾಟ್ ಸ್ಕಿವರ್-ಬ್ರಂಟ್
Nat Sciver-Brunt: ನ್ಯಾಟ್ ಸಿವರ್-ಬ್ರಂಟ್ ಅವರ ಶತಕಕ್ಕೂ ಮೊದಲು, WPL ಇತಿಹಾಸದಲ್ಲಿ ಅತ್ಯಧಿಕ ವೈಯಕ್ತಿಕ ಸ್ಕೋರ್ 99 ಆಗಿತ್ತು, ಮುಂಬೈನ ಬ್ರಬೋರ್ನ್ ಕ್ರೀಡಾಂಗಣದಲ್ಲಿ ಗುಜರಾತ್ ಜೈಂಟ್ಸ್ ವಿರುದ್ಧದ WPL 2023 ಪಂದ್ಯದಲ್ಲಿ RCB ಪರ ಸೋಫಿ ಡಿವೈನ್ 36 ಎಸೆತಗಳಲ್ಲಿ ಈ ಮೊತ್ತವನ್ನು ಗಳಿಸಿದ್ದರು.
Nat Sciver-Brunt -
ವಡೋದರಾ, ಜ.27: ಮಹಿಳಾ ಪ್ರೀಮಿಯರ್ ಲೀಗ್ (WPL 2026) ನಲ್ಲಿ ಶತಕ ಗಳಿಸಿದ ವಿಶ್ವದ ಮೊದಲ ಕ್ರಿಕೆಟ್ ಆಟಗಾರ್ತಿ ಎಂಬ ಹೆಗ್ಗಳಿಕೆಗೆ ಪಾತ್ರರಾಗುವ ಮೂಲಕ ಮಂಬೈ ತಂಡದ ನ್ಯಾಟ್ ಸ್ಕಿವರ್-ಬ್ರಂಟ್(Nat Sciver-Brunt) ಇತಿಹಾಸ ಪುಸ್ತಕಗಳಲ್ಲಿ ತಮ್ಮ ಹೆಸರನ್ನು ದಾಖಲಿಸಿದ್ದಾರೆ. ವಡೋದರಾದ ಬಿಸಿಎ ಕ್ರೀಡಾಂಗಣದಲ್ಲಿ ಸೋಮವಾರ ನಡೆದಿದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು(Royal Challengers Bengaluru) ಎದುರಿನ ಪಂದ್ಯದಲ್ಲಿ ಸಿಡಿಲಬ್ಬರ ಬ್ಯಾಟಿಂಗ್ ನಡೆಸಿದ ಸ್ಕಿವರ್-ಬ್ರಂಟ್ 57 ಎಸೆತಗಳಲ್ಲಿ ಶತಕ ಬಾರಿಸಿ ಈ ಸಾಧನೆಗೈದರು.
ನ್ಯಾಟ್ ಸಿವರ್-ಬ್ರಂಟ್ ಅವರ ಶತಕಕ್ಕೂ ಮೊದಲು, WPL ಇತಿಹಾಸದಲ್ಲಿ ಅತ್ಯಧಿಕ ವೈಯಕ್ತಿಕ ಸ್ಕೋರ್ 99 ಆಗಿತ್ತು, ಮುಂಬೈನ ಬ್ರಬೋರ್ನ್ ಕ್ರೀಡಾಂಗಣದಲ್ಲಿ ಗುಜರಾತ್ ಜೈಂಟ್ಸ್ ವಿರುದ್ಧದ WPL 2023 ಪಂದ್ಯದಲ್ಲಿ RCB ಪರ ಸೋಫಿ ಡಿವೈನ್ 36 ಎಸೆತಗಳಲ್ಲಿ ಈ ಮೊತ್ತವನ್ನು ಗಳಿಸಿದ್ದರು.
WPL 2026 ರಲ್ಲಿ, ನ್ಯಾಟ್ ಸ್ಕಿವರ್-ಬ್ರಂಟ್ ಮುಂಬೈ ಇಂಡಿಯನ್ಸ್ ಪರ ಆರು ಪಂದ್ಯಗಳಲ್ಲಿ 319 ರನ್ ಗಳಿಸಿದ್ದಾರೆ. ಈ ವರ್ಷ WPL ನಲ್ಲಿ ಅತಿ ಹೆಚ್ಚು ರನ್ ಗಳಿಸಿದ ಬ್ಯಾಟ್ಸ್‌ಮನ್‌ಗಳ ಪಟ್ಟಿಯಲ್ಲಿ ಅವರು ಅಗ್ರಸ್ಥಾನದಲ್ಲಿದ್ದಾರೆ. WPL 2026 ರಲ್ಲಿ, ಅವರು ಹಾಲಿ ಚಾಂಪಿಯನ್‌ಗಳ ಪರ ಒಂದು ಶತಕ ಮತ್ತು ಮೂರು ಅರ್ಧಶತಕಗಳನ್ನು ಗಳಿಸಿದ್ದಾರೆ. ನಾಯಕಿ ಹರ್ಮನ್‌ಪ್ರೀತ್ ಕೌರ್ ಆರೆಂಜ್ ಕ್ಯಾಪ್ ರೇಸ್‌ನಲ್ಲಿ ಎರಡನೇ ಸ್ಥಾನದಲ್ಲಿದ್ದಾರೆ. ಇದುವರೆಗೆ ಆಡಿದ ಏಳು ಪಂದ್ಯಗಳಲ್ಲಿ ಹರ್ಮನ್ 260 ರನ್ ಗಳಿಸಿದ್ದಾರೆ.
The moment 📸
— Women's Premier League (WPL) (@wplt20) January 26, 2026
The ball 💯
The celebration 🥳
Natalie Sciver-Brunt, forever etched in the history books 🫡
Updates ▶️ https://t.co/yUHXkzVIZw #TATAWPL | #KhelEmotionKa | #RCBvMI | @mipaltan pic.twitter.com/i2xECl5jyB
ಕೋತಂಬಿ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಮುಂಬೈ ತಂಡವು 20 ಓವರ್‌ಗಳಲ್ಲಿ 4 ವಿಕೆಟ್‌ಗಳಿಗೆ 199 ರನ್ ಗಳಿಸಿತು. ಗುರಿಯನ್ನು ಬೆನ್ನಟ್ಟಿದ ಆರ್‌ಸಿಬಿ ತಂಡವು ಆರಂಭದಲ್ಲೇ ಕುಸಿತ ಕಂಡಿತು. ಆದರೆ ಮಧ್ಯಮ ಕ್ರಮಾಂಕದಲ್ಲಿ ವಿಕೆಟ್ ಕೀಪರ್ ರಿಚಾ ಘೋಷ್ (90)ಏಕಾಂಗಿ ಹೋರಾಟ ನಡೆಸಿದರೂ 9 ವಿಕೆಟ್‌ಗೆ 184 ರನ್ ಗಳಿಸಲಷ್ಟೇ ಶಕ್ತವಾಯಿತು. ಈ ಗೆಲುವಿನೊಂದಿಗೆ ಎರಡು ಬಾರಿಯ ಚಾಂಪಿಯನ್ ಮುಂಬೈ ತಂಡವು ಪ್ಲೇ ಆಫ್ ಕನಸನ್ನು ಜೀವಂತವಾಗಿ ಇರಿಸಿಕೊಂಡಿತು. ಮುಂಬೈ ಪರ ಹೀಲಿ ಮ್ಯಾಥ್ಯೂಸ್ 3 ವಿಕೆಟ್ ಗಳಿಸಿದರೆ, ಶಬ್ನಿಮ್ ಇಸ್ಮಾಯಿಲ್ ಮತ್ತು ಅಮೇಲಿಯಾ ತಲಾ 2 ವಿಕೆಟ್ ಕಬಳಿಸಿದರು.
ಅಚ್ಚರಿಯ ಪ್ರವೇಶ ನಂತರ T20 ವಿಶ್ವಕಪ್‌ಗೆ ತಂಡ ಪ್ರಕಟಿಸಿದ ಸ್ಕಾಟ್ಲೆಂಡ್
ಮುಂಬೈ ಇಂಡಿಯನ್ಸ್: 20 ಓವರ್‌ಗಳಲ್ಲಿ 4 ವಿಕೆಟ್‌ಗಳಿಗೆ 199 (ಹೇಯಲಿ ಮ್ಯಾಥ್ಯೂಸ್ 56, ನ್ಯಾಟ್ ಶಿವರ್ ಬ್ರಂಟ್ ಔಟಾಗದೇ 100, ಲಾರೆನ್ ಬೆಲ್ 21ಕ್ಕೆ2).
ರಾಯಲ್ ಚಾಲೆಂಜರ್ಸ್ ಬೆಂಗಳೂರು: 20 ಓವರ್‌ಗಳಲ್ಲಿ 9 ವಿಕೆಟ್‌ಗೆ 184 (ರಿಚಾ ಘೋಷ್ 90, ನದೀನ್ ಡಿ ಕ್ಲರ್ಕ್ 28 ಶಬ್ನಿಮ್ ಇಸ್ಮಾಯಿಲ್ 25ಕ್ಕೆ 2, ಮ್ಯಾಥ್ಯೂಸ್ 10ಕ್ಕೆ 3, ಅಮೇಲಿಯಾ ಕೆರ್ 37ಕ್ಕೆ 2).