Chinnaswamy Stadium: ಚಿನ್ನಸ್ವಾಮಿ ಕ್ರೀಡಾಂಗಣ ಸ್ಟ್ಯಾಂಡ್‌ಗಳಿಗೆ ದಿಗ್ಗಜರ ನಾಮಫಲಕ ಅನಾವರಣ
ಮಹಿಳಾ ಕ್ರಿಕೆಟ್ ದಂತಕಥೆ ಶಾಂತಾ ರಂಗಸ್ವಾಮಿ ಅವರ ಹೆಸರನ್ನೂ ಸ್ಟ್ಯಾಂಡ್‌ಗೆ ಇಡಬೇಕು ಎಂದು ಹಲವು ಮಹಿಳಾ ಕ್ರಿಕೆಟಿಗರು ಒತ್ತಾಯಿಸಿದ್ದರು. ಆದರೆ ಅವರ ಹೆಸರಿಡುವ ಬಗ್ಗೆ ಈ ವರೆಗೂ ನಿರ್ಧಾರ ಕೈಗೊಂಡಿಲ್ಲ. ಮುಂದೆ ಪ್ರಸ್ತಾವ ಬಂದರೆ ನೋಡೋಣ ಎಂದು ಕೆಎಸ್‌ಸಿಎ ಅಧ್ಯಕ್ಷ ರಘುರಾಮ್ ಭಟ್ ಹೇಳಿದ್ದಾರೆ.


ಬೆಂಗಳೂರು: ಭಾರತ ಹಾಗೂ ಕರ್ನಾಟಕ ಕ್ರಿಕೆಟ್‌ಗೆ ಅಭೂತಪೂರ್ವ ಕೊಡುಗೆ ನೀಡಿರುವ ರಾಜ್ಯದ 10 ದಿಗ್ಗಜ ಆಟಗಾರರ ಹೆಸರನ್ನು ಚಿನ್ನಸ್ವಾಮಿ ಕ್ರೀಡಾಂಗಣದ(Chinnaswamy Stadium) ವಿವಿಧ ಸ್ಟ್ಯಾಂಡ್‌ಗಳಿಗೆ ಅನಾವರಣ ಮಾಡಲಾಗಿದೆ. ಇತ್ತೀಚೆಗೆ ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ (ಕೆಎಸ್‌ಸಿಎ) ಸರ್ವಸದಸ್ಯರ ಸಭೆಯಲ್ಲಿ ಹತ್ತು ಜನ ದಿಗ್ಗಜರ ಹೆಸರುಗಳನ್ನು ಕ್ರೀಡಾಂಗಣದ ಬೇರೆಬೇರೆ ಸ್ಟ್ಯಾಂಡ್‌ಗಳಿಗೆ ನಾಮಕರಣ ಮಾಡಲು ನಿರ್ಧಾರ ಕೈಗೊಳ್ಳಲಾಗಿತ್ತು. ಇಂಉ ಬೆಂಗಳೂರಿನಲ್ಲಿ ಆರಂಭವಾಗಲಿರುವ ಡಬ್ಲ್ಯುಪಿಎಲ್ ಚರಣದ ಪಂದ್ಯದ ವೇಳೆ ನಾಮಫಲಕವನ್ನು ಕಾಣಬಹುದು.
ಎರಪಳ್ಳಿ ಪ್ರಸನ್ನ (ಪಿ1 ಸ್ಟ್ಯಾಂಡ್), ಜಿ.ಆರ್. ವಿಶ್ವನಾಥ್ (ಪಿ2 ಸ್ಟ್ಯಾಂಡ್), ಬಿ.ಎಸ್. ಚಂದ್ರಶೇಖರ್ (ಪಿ ಟೆರೆಸ್) ಸೈಯದ್ ಕಿರ್ಮಾನಿ (ಪಿ ಕಾರ್ಪೋರೆಟ್), ಬ್ರಿಜೇಶ್ ಪಟೇಲ್ (ಎಂ1 ಸ್ಟ್ಯಾಂಡ್), ರೋಜರ್ ಬಿನ್ನಿ (ಎಂ2 ಸ್ಟ್ಯಾಂಡ್), ಅನಿಲ್ ಕುಂಬ್ಳೆ (ಡೈಮಂಡ್ ಬಾಕ್ಸ್), ರಾಹುಲ್ ದ್ರಾವಿಡ್ (ಎನ್ ಸ್ಟ್ಯಾಂಡ್), ಜಾವಗಲ್ ಶ್ರೀನಾಥ್ (ಪಿ1 ಎ ಸ್ಟ್ಯಾಂಡ್) ಮತ್ತು ವೆಂಕಟೇಶ್ ಪ್ರಸಾದ್ (ಪಿ4 ಸ್ಟ್ಯಾಂಡ್) ಅವರ ಹೆಸರುಗಳ ಫಲಕಗಳನ್ನು ಅಳವಡಿಸಲಾಗಿದೆ.
ಇದನ್ನೂ ಓದಿ ಇಂದು ಆರ್‌ಸಿಬಿಗೆ ಮುಂಬೈ ಸವಾಲು; ಮೆಟ್ರೋ ಸೇವೆ ವಿಸ್ತರಣೆ
ಪುರುಷರ ಹೆಸರನ್ನು ಇಡಲಾಗುವುದು ಎಂದು ಸುದ್ದಿಯಾಗಿದ್ದ ವೇಳೆ ಮಹಿಳಾ ಕ್ರಿಕೆಟ್ ದಂತಕಥೆ ಶಾಂತಾ ರಂಗಸ್ವಾಮಿ ಅವರ ಹೆಸರನ್ನೂ ಸ್ಟ್ಯಾಂಡ್‌ಗೆ ಇಡಬೇಕು ಎಂದು ಹಲವು ಮಹಿಳಾ ಕ್ರಿಕೆಟಿಗರು ಒತ್ತಾಯಿಸಿದ್ದರು. ಆದರೆ ಅವರ ಹೆಸರಿಡುವ ಬಗ್ಗೆ ಈ ವರೆಗೂ ನಿರ್ಧಾರ ಕೈಗೊಂಡಿಲ್ಲ. ಮುಂದೆ ಪ್ರಸ್ತಾವ ಬಂದರೆ ನೋಡೋಣ ಎಂದು ಕೆಎಸ್‌ಸಿಎ ಅಧ್ಯಕ್ಷ ರಘುರಾಮ್ ಭಟ್ ಹೇಳಿದ್ದಾರೆ.
ಕರ್ನಾಟಕ ತಂಡವು 1974ರಲ್ಲಿ ಮೊದಲ ಬಾರಿಗೆ ರಣಜಿ ಟ್ರೋಫಿ ಜಯಿಸಿತ್ತು. ಅಂದು ಪ್ರಶಸ್ತಿ ಗೆದ್ದ ತಂಡದ ನಾಯಕರಾಗಿದ್ದ ಪ್ರಸನ್ನ, ಸ್ಪಿನ್ನರ್ ಬಿ.ಎಸ್. ಚಂದ್ರಶೇಖರ್, ವಿಕೆಟ್‌ಕೀಪರ್ ಸೈಯದ್ ಕಿರ್ಮಾನಿ ಮತ್ತು ಬ್ಯಾಟರ್ ಜಿ.ಆರ್. ವಿಶ್ವನಾಥ್, ಬ್ರಿಜೇಶ್ ಪಟೇಲ್ ಅವರ ಹೆಸರುಗಳನ್ನು ಸುವರ್ಣ ಸಂಭ್ರಮದ ಸಂದರ್ಭದಲ್ಲಿ ಸ್ಟ್ಯಾಂಡ್‌ಗಳಿಗೆ ಇಡಬೇಕು ಎಂದು ಇತಿಹಾಸಕಾರ ರಾಮಚಂದ್ರ ಗುಹಾ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದಿದ್ದರು.