6 ವರ್ಷಗಳ ನಂತರ ವಿಶ್ವ ಅಥ್ಲೆಟಿಕ್ಸ್‌ನಲ್ಲಿ ಪದಕವಿಲ್ಲದೆ ಮರಳಿದ ಭಾರತ
World Athletics Championships: 2023ರ ಬುಡಾಪೆಸ್ಟ್‌ನಲ್ಲಿ ನಡೆದಿದ್ದ ಕೂಟದಲ್ಲಿ ಲಾಂಗ್ ಜಂಪ್‌ನಲ್ಲಿ ಜೆಸ್ವಿನ್, ಜಾವೆಲಿನ್‌ನಲ್ಲಿ ನೀರಜ್, ಮನು ಮತ್ತು ಕಿಶೋರ್, 3 ಸಾವಿರ ಮೀಟರ್ ಸ್ಟೀಪಲ್ ಚೇಸ್‌ನಲ್ಲಿ ಪಾರುಲ್ ಮತ್ತು ಪುರುಷರ 4x400 ಮೀಟರ್ ರಿಲೇ ತಂಡ ಸೇರಿದಂತೆ ಆರರಿಂದ ಏಳು ಕ್ರೀಡಾಪಟುಗಳನ್ನು ಫೈನಲ್ ಪ್ರವೇಶಿಸಿದ್ದರು.

-

ನವದೆಹಲಿ: ಟೋಕಿಯೊ(Tokyo)ದಲ್ಲಿ ನಡೆದ ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್‌ಷಿಪ್‌ನಲ್ಲಿ(World Athletics Championships) ನೀರಸ ಪ್ರದರ್ಶನ ತೋರಿದ ಭಾರತ, ಆರು ವರ್ಷಗಳಲ್ಲಿ ಮೊದಲ ಬಾರಿಗೆ ಪೋಡಿಯಂ ಫಿನಿಶ್ ಇಲ್ಲದೆ ತವರಿಗೆ ಮರಳಿದೆ. ಜಾವೆಲಿನ್‌ನಲ್ಲಿ ಹಾಲಿ ಚಾಂಪಿಯನ್ ಆಗಿದ್ದ ನೀರಜ್ ಚೋಪ್ರಾ(Neeraj Chopra) ಅವರ ಮೇಲೆ ಭಾರತ ಕನಿಷ್ಠ ಒಂದು ಪದಕದ ನಿರೀಕ್ಷೆ ಮಾಡಿತ್ತು. ಆದರೆ ಅವರು 8ನೇ ಸ್ಥಾನ ಪಡೆಯುವ ಮೂಲಕ ನಿರೀಕ್ಷೆಯನ್ನು ಹುಸಿಯಾಗಿಸಿದರು.
ನಾಲ್ಕನೇ ಸ್ಥಾನ ಪಡೆದ ಜಾವೆಲಿನ್ ಎಸೆತಗಾರ ಸಚಿನ್ ಯಾದವ್ ಮತ್ತು ಹೈ ಜಂಪ್‌ನಲ್ಲಿ ಸರ್ವೇಶ್ ಕುಶಾರೆ ಐದನೇ ಸ್ಥಾನ ಗಳಿಸಿದ್ದೇ ಭಾರತದ ಪಾಲಿನ ಶ್ರೇಷ್ಠ ಸಾಧನೆ ಎನಿಸಿತು. ದಾಖಲೆಯ ಕ್ರೀಡಾಪಟುಗಳನ್ನು ಕಳುಹಿಸಿತ್ತು. ಅದರಂತೆ ಭಾರತವು ಎಲ್ಲಾ ವಿಭಾಗಗಳಲ್ಲಿಯೂ ಉತ್ತಮ ಪ್ರದರ್ಶನ ನೀಡುವ ನಿರೀಕ್ಷೆ ಹೊಂದಿತ್ತು. ಆದರೆ ಟೋಕಿಯೊ ಅಭಿಯಾನವು ಬಹುತೇಕ ತಪ್ಪುಗಳು ಮತ್ತು ಅನಿರೀಕ್ಷಿತ ಹಿನ್ನಡೆಗಳಿಂದ ನಿರೂಪಿಸಲ್ಪಟ್ಟಿತು. ಯಾರೊಬ್ಬರು ಪದಕ ಗೆಲ್ಲಲು ಸಾಧ್ಯವಾಗಲಿಲ್ಲ.
2023ರ ಬುಡಾಪೆಸ್ಟ್‌ನಲ್ಲಿ ನಡೆದಿದ್ದ ಕೂಟದಲ್ಲಿ ಲಾಂಗ್ ಜಂಪ್‌ನಲ್ಲಿ ಜೆಸ್ವಿನ್, ಜಾವೆಲಿನ್‌ನಲ್ಲಿ ನೀರಜ್, ಮನು ಮತ್ತು ಕಿಶೋರ್, 3 ಸಾವಿರ ಮೀಟರ್ ಸ್ಟೀಪಲ್ ಚೇಸ್‌ನಲ್ಲಿ ಪಾರುಲ್ ಮತ್ತು ಪುರುಷರ 4x400 ಮೀಟರ್ ರಿಲೇ ತಂಡ ಸೇರಿದಂತೆ ಆರರಿಂದ ಏಳು ಕ್ರೀಡಾಪಟುಗಳನ್ನು ಫೈನಲ್ ಪ್ರವೇಶಿಸಿದ್ದರು. ಈ ಬಾರಿ ಕೇವಲ 3 ಮಂದಿ ಮಾತ್ರ ಫೈನಲ್ ಪ್ರವೇಶ ಪಡೆಯುವಲ್ಲಿ ಯಶಸ್ವಿಯಾದರು.