ವಕ್ಫ್​ ತಿದ್ದುಪಡಿ ಮಸೂದೆ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

LSG vs CSK: ಚೆನ್ನೈ-ಲಕ್ನೋ ಪಂದ್ಯ; ಫಿಕ್ಸಿಂಗ್ ಅನುಮಾನ ವ್ಯಕ್ತಪಡಿಸಿದ ನೆಟ್ಟಿಗರು

IPL 2025: ಪಂದ್ಯದಲ್ಲಿ ಉತ್ತಮ ಬೌಲಿಂಗ್‌ ಪ್ರದರ್ಶನ ತೋರುವ ಮೂಲಕ 2 ವಿಕೆಟ್‌ ಕಿತ್ತಿದ್ದ ರವಿ ಬಿಷ್ಣೋಯ್‌ಗೆ ಪಂತ್‌ ನಾಲ್ಕು ಓವರ್‌ ಬೌಲಿಂಗ್‌ ನೀಡದ್ದು ಸೇರಿ ಪಂದ್ಯದ ವೇಳೆ ನಡೆದ ಕೆಲ ಘಟನೆಗಳನ್ನು ಗಮನಿಸುವಾಗ ಮೇಲ್ನೋಟಕ್ಕೆ ಫಿಕ್ಸಿಂಗ್‌ ನಡೆದಂತೆ ಕಾಣುತ್ತಿದೆ. ಈ ಹಿಂದೆ ಫಿಕ್ಸಿಂಗ್‌ ಆರೋಪದ ಹಿನ್ನೆಲೆಯಲ್ಲಿ ಚೆನ್ನೈ ತಂಡ 2 ಕೂಟಕ್ಕೆ ನಿಷೇಧಗೊಂಡಿತ್ತು.

ಚೆನ್ನೈ-ಲಕ್ನೋ ಪಂದ್ಯ; ಫಿಕ್ಸಿಂಗ್ ಅನುಮಾನ ವ್ಯಕ್ತಪಡಿಸಿದ ನೆಟ್ಟಿಗರು

Profile Abhilash BC Apr 15, 2025 1:31 PM

ಲಕ್ನೋ: ಸೋಮವಾರ ನಡೆದಿದ್ದ ಐಪಿಎಲ್‌(IPL 2025)ನ ಚೆನ್ನೈ ಸೂಪರ್‌ ಕಿಂಗ್ಸ್‌ ಮತ್ತು ಲಕ್ನೋ ಸೂಪರ್‌ ಜೈಂಟ್ಸ್‌(LSG vs CSK) ವಿರುದ್ಧದ ಪಂದ್ಯದಲ್ಲಿ ಫಿಕ್ಸಿಂಗ್(lsg vs csk toss) ನಡೆದಿರುವ ಅನುಮಾನ ವ್ಯಕ್ತವಾಗಿದೆ. ಇದಕ್ಕೆ ಪುಷ್ಠಿ ನೀಡುವಂತೆ ಟಾಸ್‌ ಪ್ರಕ್ರಿಯೆಯ ವಿಡಿಯೊ ಕೂಡ ವೈರಲ್‌ ಆಗಿದೆ. ಸಾಮಾನ್ಯವಾಗಿ ಟಾಸ್ ವೇಳೆ ನಾಯಕರಾದವರು ಬಹಿರಂಗವಾಗಿಯೇ ತಮ್ಮ ನಿರ್ಧಾರವನ್ನು ಪ್ರಕಟಿಸುತ್ತಾರೆ. ಆದರೆ ಧೋನಿ, ರೆಫ್ರಿ ಬಳಿ ಗುಟ್ಟಾಗಿ ತಮ್ಮ ನಿರ್ಧಾರ ಹೇಳಿದ್ದೇಕೆ? ಇಲ್ಲೇನೋ ಮ್ಯಾಚ್ ಫಿಕ್ಸಿಂಗ್‌ ಆಗಿದೆ ಎಂದು ನೆಟ್ಟಿಗರು ಇದೀಗ ಸೋಷಿಯಲ್ ಜಾಲತಾಣದಲ್ಲಿ ಆರೋಪ ಮಾಡಿದ್ದಾರೆ.

ಏಕಾನ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ ಈ ಪಂದ್ಯದಲ್ಲಿ ಆತಿಥೇಯ ಲಕ್ನೋ ತಂಡದ ನಾಯಕ ರಿಷಭ್‌ ಪಂತ್‌ ನಾಣ್ಯ ಚಿಮ್ಮುಗೆ ಮಾಡುವ ವೇಳೆ ಧೋನಿ ತಮ್ಮ ನಿರ್ಧಾರವನ್ನು ರೆಫ್ರಿ ಬಳಿ ಗುಟ್ಟಾಗಿ ಹೇಳಿ ನಾಣ್ಯ ಕೆಳಗೆ ಬೀಳುವ ಮುನ್ನವೇ ಟಾಸ್‌ ನಾವೇ ಗೆಲ್ಲುತ್ತೇವೆ ಎಂದು ಪಂತ್‌ ಅವರನ್ನು ತಳ್ಳಿಕೊಂಡು ಟಾಸ್ ನಿರ್ವಾಹಕ ಮುರುಳಿ ಕಾರ್ತಿಕ್ ಬಳಿಕ ಧೋನಿ ಹೆಜ್ಜೆ ಹಾಕಿದರು.

ಈ ವೇಳೆ ಗೊಂದಲಕ್ಕೀಡಾದ ಮುರಳಿ ಕಾರ್ತಿಕ್‌, ಧೋನಿಯವರನ್ನು ಉದ್ದೇಶಿಸಿ, ನೀವು ಟೇಲ್ಸ್ ಎಂದು ಹೇಳಿದಲ್ಲವೇ? ಎಂದು ಪ್ರಶ್ನೆ ಮಾಡಿದರು. ಆಗ ಮ್ಯಾಚ್ ರೆಫ್ರಿ ಆಗಿದ್ದ ನಾರಾಯಣ ಕುಟ್ಟಿ ಹೆಡ್ಸ್ ಎಂದು ಹೇಳುತ್ತಾರೆ. ಒಟ್ಟಾರೆ ಈ ಘಟನೆಯ ವಿಡಿಯೊ ಎಲ್ಲಡೆ ವೈರಲ್‌ ಆಗುತ್ತಿದ್ದು ಪಂದ್ಯ ಫಿಕ್ಸಿಂಗ್‌ ಆಗಿರುವುದು ಖಚಿತ ಎಂಬ ಆರೋಪ ಕೇಳಿ ಬಂದಿದೆ. ಈ ಹಿಂದೆ ಫಿಕ್ಸಿಂಗ್‌ ಆರೋಪದ ಹಿನ್ನೆಲೆಯಲ್ಲಿ ಚೆನ್ನೈ ತಂಡ 2 ಕೂಟಕ್ಕೆ ನಿಷೇಧಗೊಂಡಿತ್ತು.



ಪಂದ್ಯದಲ್ಲಿ ಉತ್ತಮ ಬೌಲಿಂಗ್‌ ಪ್ರದರ್ಶನ ತೋರುವ ಮೂಲಕ 2 ವಿಕೆಟ್‌ ಕಿತ್ತಿದ್ದ ರವಿ ಬಿಷ್ಣೋಯ್‌ಗೆ ಪಂತ್‌ ನಾಲ್ಕು ಓವರ್‌ ಬೌಲಿಂಗ್‌ ನೀಡದ್ದು. ಸೇರಿ ಪಂದ್ಯದ ವೇಳೆ ನಡೆದ ಕೆಲ ಘಟನೆಗಳನ್ನು ಗಮನಿಸುವಾಗ ಮೇಲ್ನೋಟಕ್ಕೆ ಫಿಕ್ಸಿಂಗ್‌ ನಡೆದಂತೆ ಕಾಣುತ್ತಿದೆ.

ಇದನ್ನೂ ಓದಿ IPL 2025: ಐಪಿಎಲ್‌ನಿಂದ ಹೊರಬೀಳುವ ಆತಂಕದಲ್ಲಿ ಫರ್ಗ್ಯುಸನ್‌

ಇಲ್ಲಿನ ಏಕನಾ ಕ್ರೀಡಾಂಗಣದಲ್ಲಿ ನಡೆದಿದ್ದ ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್‌ ನಡೆಸಿದ ಲಕ್ನೋ ತಂಡ ರಿಷಭ್‌ ಪಂತ್‌ ಅವರ ಅರ್ಧಶತಕದ ಬಲದಿಂದ ತನ್ನ ಪಾಲಿನ 20 ಓವರ್‌ಗಳಲ್ಲಿ 7 ವಿಕೆಟ್‌ಗಳ ನಷ್ಟಕ್ಕೆ 166 ರನ್‌ಗಳನ್ನು ಕಲೆ ಹಾಕಿತು. ಗುರಿ ಬೆನ್ನಟ್ಟಿದ ಚೆನ್ನೈ ಸೂಪರ್‌ ಕಿಂಗ್ಸ್‌, ರಚಿನ್‌ ರವೀಂದ್ರ (37), ಶಿವಂ ದುಬೆ (43*) ಹಾಗೂ ಎಂಎಸ್‌ ಧೋನಿ (26*) ಅವರ ಬ್ಯಾಟಿಂಗ್‌ ಬಲದಿಂದ 19.3 ಓವರ್‌ಗಳಿಗೆ 5 ವಿಕೆಟ್‌ಗಳ ನಷ್ಟಕ್ಕೆ 168 ರನ್‌ಗಳನ್ನು ಗಳಿಸಿ 5 ವಿಕೆಟ್‌ಗಳ ಗೆಲುವು ಪಡೆಯಿತು. ಈ ಮೂಲಕ ಸತತ 5 ಸೋಲಿನ ಬಳಿಕ ಮತ್ತೆ ಗೆಲುವಿನ ಹಳಿ ಏರುವಲ್ಲಿ ಯಶಸ್ವಿಯಾಯಿತು.