ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

FIFA World Cup Final: ಲಿಯೋನೆಲ್‌ ಮೆಸ್ಸಿ ಮುರಿಯಬಹುದಾದ ಟಾಪ್‌ 5 ದಾಖಲೆಗಳು!

ಸ್ಪೇನ್‌ ವಿರುದ್ಧ 2026ರ ಫಿಫಾ ವಿಶ್ವಕಪ್ ಫೈನಲ್‌ ಪಂದ್ಯದಲ್ಲಿ ಆಡಲು ಅರ್ಜೆಂಟಿನಾ ಸಜ್ಜಾಗುತ್ತಿದೆ. ಇದರ ನಡುವೆ ದಿಗ್ಗಜ ಲಿಯೋನೆಲ್ ಮೆಸ್ಸಿ, ಫಿಫಾ ವಿಶ್ವಕಪ್ ಟೂರ್ನಿಯಲ್ಲಿ ನೂತನ ಮೈಲುಗಲ್ಲು ಸ್ಥಾಪಿಸುವ ಸನಿಹದಲ್ಲಿದ್ದಾರೆ. ಈ ಹೈವೋಲ್ಟೇಜ್‌ ಪಂದ್ಯದಲ್ಲಿ ಮೆಸ್ಸಿ ಹಲವು ಪ್ರಮುಖ ದಾಖಲೆಗಳನ್ನು ಮುರಿಯಲು ಎದುರು ನೋಡುತ್ತಿದ್ದಾರೆ.

ನವದೆಹಲಿ: ಬಹುನಿರೀಕ್ಷಿತ 2026ರ ಫಿಫಾ ವಿಶ್ವಕಪ್ ಫೈನಲ್‌ (FIFA World Cup 2026) ಪಂದ್ಯಕ್ಕೆ ಕೇವಲ ಒಂದು ದಿನ ಬಾಕಿ ಇದೆ. ಜುಲೈ 20 ರಂದು ನಡೆಯುವ ಹೈವೋಲ್ಟೇಜ್‌ ಪಂದ್ಯದಲ್ಲಿ ಅರ್ಜೆಂಟಿನಾ ಹಾಗೂ ಸ್ಪೇನ್ (ARG vs SPA) ತಂಡಗಳು ಕಾದಾಟ ನಡೆಸಲಿವೆ. ಈ ಪಂದ್ಯದಲ್ಲಿ ಫುಟ್ಬಾಲ್‌ ದಿಗ್ಗಜ ಲಿಯೋನೆಲ್ ಮೆಸ್ಸಿ (Lionel Messi) ತಮ್ಮ ವಿಶ್ವಕಪ್ ವೃತ್ತಿಜೀವನದ ಕೊನೆಯ ಪಂದ್ಯವನ್ನು ಆಡಬಹುದಾದ ಸಾಧ್ಯತೆ ಇದೆ. ತಮ್ಮ ಭವಿಷ್ಯದ ಬಗ್ಗೆ ಮೆಸ್ಸಿ ಇನ್ನೂ ಯಾವುದೇ ಅಧಿಕೃತ ಘೋಷಣೆ ಮಾಡಿಲ್ಲ. ಆದರೆ ಈಗಾಗಲೇ 39ನೇ ವಯಸ್ಸಿನಲ್ಲಿರುವ ಅವರು, 43ನೇ ವಯಸ್ಸಿನಲ್ಲಿ ಮತ್ತೊಂದು ವಿಶ್ವಕಪ್‌ನಲ್ಲಿ ಆಡುವ ಸಾಧ್ಯತೆ ಅತೀ ಕಡಿಮೆ ಎನ್ನಲಾಗುತ್ತಿದೆ.

2026ರ ಫಿಫಾ ವಿಶ್ವಕಪ್‌ ಟೂರ್ನಿಯಲ್ಲಿ ಮೆಸ್ಸಿ ಈಗಾಗಲೇ ಅದ್ಭುತ ಪ್ರದರ್ಶನ ನೀಡಿ 8 ಗೋಲುಗಳನ್ನು ಬಾರಿಸಿದ್ದು, 4 ಗೋಲುಗಳಿಗೆ ನೆರವು ನೀಡಿದ್ದಾರೆ. ಫೈನಲ್ ಪಂದ್ಯದಲ್ಲಿ ಅವರು ಹಲವು ಐತಿಹಾಸಿಕ ದಾಖಲೆಗಳನ್ನು ಮುರಿಯುವ ಅವಕಾಶವನ್ನು ಹೊಂದಿದ್ದಾರೆ. ಅವರು ಫೈನಲ್‌ ಪಂದ್ಯದಲ್ಲಿ ಮುರಿಯಬಹುದಾದ ಅಗ್ರ 5 ದಾಖಲೆಗಳನ್ನು ಇಲ್ಲಿ ವಿವರಿಸಲಾಗಿದೆ.

ಲಮೀನ್‌ ಯಮಾಲ್‌: ಮೆಸ್ಸಿ ಕೈಲ್ಲಿದ್ದ ಮಗು, ಈಗ ಫುಟ್ಬಾಲ್‌ ಜಗತ್ತಿನ ತಾರೆ!

1.ಫಿಫಾ ವಿಶ್ವಕಪ್‌ ಫೈನಲ್‌ ಆಡಿದ ಅತ್ಯಂತ ಹಿರಿಯ ಔಟ್‌ಫೀಲ್ಡರ್‌

ಭಾನುವಾರ ನಡೆಯಲಿರುವ ಫಿಫಾ ವಿಶ್ವಕಪ್ ಫೈನಲ್‌ನಲ್ಲಿ ಲಿಯೋನೆಲ್ ಮೆಸ್ಸಿ ಕಣಕ್ಕಿಳಿದರೆ, ವಿಶ್ವಕಪ್ ಫೈನಲ್‌ನಲ್ಲಿ ಆಡಿದ ಅತ್ಯಂತ ಹಿರಿಯ ಔಟ್‌ಫೀಲ್ಡ್ ಆಟಗಾರ ಎಂಬ ದಾಖಲೆಯನ್ನು ಬರೆಯಲಿದ್ದಾರೆ. ಇದುವರೆಗೂ ವಿಶ್ವಕಪ್ ಫೈನಲ್‌ನಲ್ಲಿ ಆಡಿದ ಅತ್ಯಂತ ಹಿರಿಯ ಆಟಗಾರ ಎಂಬ ದಾಖಲೆ ಇಟಲಿಯ ಗೋಲ್‌ಕೀಪರ್ ಡಿನೋ ಝೋಫ್ ಹೆಸರಿನಲ್ಲಿದೆ. ಅವರು 1982ರ ವಿಶ್ವಕಪ್ ಫೈನಲ್‌ನಲ್ಲಿ ಪಶ್ಚಿಮ ಜರ್ಮನಿ ವಿರುದ್ಧ 40 ವರ್ಷ 133 ದಿನಗಳ ವಯಸ್ಸಿನಲ್ಲಿ ಆಡಿದ್ದರು. ಆದರೆ ಅವರು ಗೋಲ್‌ಕೀಪರ್ ಆಗಿದ್ದರಿಂದ, 39 ವರ್ಷ 25 ದಿನಗಳ ವಯಸ್ಸಿನಲ್ಲಿ ಫೈನಲ್‌ಗೆ ಕಣಕ್ಕಿಳಿಯಲಿರುವ ಮೆಸ್ಸಿ ಅತ್ಯಂತ ಹಿರಿಯ ಔಟ್‌ಫೀಲ್ಡ್ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗಲಿದ್ದಾರೆ.

2.ಫಿಫಾ ವಿಶ್ವಕಪ್‌ ಫೈನಲ್‌ನಲ್ಲಿ ಗೋಲು ಗಳಿಸಿದ ಹಿರಿಯ ಆಟಗಾರ

ಫಿಫಾ ವಿಶ್ವಕಪ್ ಫೈನಲ್‌‌ ಪಂದ್ಯದಲ್ಲಿ ಮೆಸ್ಸಿ ಗೋಲು ದಾಖಲಿಸಿದರೆ, ವಿಶ್ವಕಪ್ ಫೈನಲ್‌ನಲ್ಲಿ ಗೋಲು ಗಳಿಸಿದ ಅತ್ಯಂತ ಹಿರಿಯ ಆಟಗಾರ ಎಂಬ ಮತ್ತೊಂದು ಐತಿಹಾಸಿಕ ದಾಖಲೆಯನ್ನೂ ತಮ್ಮದಾಗಿಸಿಕೊಳ್ಳಲಿದ್ದಾರೆ. ಈ ದಾಖಲೆಯು ಪ್ರಸ್ತುತ ಸ್ವೀಡನ್‌ನ ನಿಲ್ಸ್ ಲೀಡ್ಹೋಮ್ ಹೆಸರಿನಲ್ಲಿದ್ದು, ಅವರು 1958ರ ವಿಶ್ವಕಪ್ ಫೈನಲ್‌ನಲ್ಲಿ ಬ್ರೆಜಿಲ್ ವಿರುದ್ಧ 35 ವರ್ಷ 264 ದಿನಗಳ ವಯಸ್ಸಿನಲ್ಲಿ ಗೋಲು ದಾಖಲಿಸಿದ್ದರು.

ಅರ್ಜೆಂಟೀನಾ vs ಸ್ಪೇನ್ ಫಿಫಾ ವಿಶ್ವಕಪ್ ಫೈನಲ್ ಪಂದ್ಯದ ಬಗ್ಗೆ ನೀವು ತಿಳಿದುಕೊಳ್ಳಬೇಕಾದದ್ದು

3.ಅತಿ ಹೆಚ್ಚು ವಿಶ್ವಕಪ್‌ ಫೈನಲ್ಸ್‌

2026ರ ಫೈನಲ್‌ ಲಿಯೋನೆಲ್‌ ಮೆಸ್ಸಿ ಅವರ ಪಾಲಿಗೆ ಮೂರನೇ ಫಿಫಾ ವಿಶ್ವಕಪ್‌ ಫೈನಲ್‌ ಆಗಲಿದೆ. 2022ರ ಫಿಫಾ ವಿಶ್ವಕಪ್‌ ಫೈನಲ್‌ ಪಂದ್ಯದಲ್ಲಿ ಅರ್ಜೆಂಟೀನಾ ತಂಡವನ್ನು ಲಿಯೋನೆಲ್‌ ಮೆಸ್ಸಿ ಮುನ್ನಡೆಸಿದ್ದರು ಹಾಗೂ ಇಲ್ಲಿ ಪ್ರಶಸ್ತಿಯನ್ನು ಗೆದ್ದಿದ್ದರು. ಇದಕ್ಕೂ ಮುನ್ನ 2014ರಲ್ಲಿ ಜರ್ಮನಿ ವಿರುದ್ಧ ಫಿಫಾ ವಿಶ್ವಕಪ್‌ ಟೂರ್ನಿಯ ಫೈನಲ್‌ನಲ್ಲಿ ಕಣಕ್ಕೆ ಇಳಿದಿದ್ದರು ಆ ಮೂಲಕ ಬ್ರೆಜಿಲ್‌ನ ಕಾಫು ಅವರ ಬಳಿಕ ಮೂರು ಬಾರಿ ಫೈನಲ್ಸ್‌ ಆಡಿದ ಎರಡನೇ ಆಟಗಾರ ಎನಿಸಿಕೊಂಡಿದ್ದರು ಮೆಸ್ಸಿ.

4.ಏಕೈಕ ವಿಶ್ವಕಪ್ ಆವೃತ್ತಿಯಲ್ಲಿ ಅತಿ ಹೆಚ್ಚು ಗೋಲು ಹಾಗೂ ಅಸಿಸ್ಟ್ ದಾಖಲೆ

2026ರ ಫಿಫಾ ವಿಶ್ವಕಪ್‌ ಟೂರ್ನಿಯಲ್ಲಿ ಲಿಯೋನೆಲ್ ಮೆಸ್ಸಿ ಈಗಾಗಲೇ 8 ಗೋಲುಗಳು ಹಾಗೂ 4 ಅಸಿಸ್ಟ್‌ಗಳನ್ನು ದಾಖಲಿಸಿದ್ದಾರೆ. ಇನ್ನೂ ಕೇವಲ ಎರಡು ಗೋಲು ಅಥವಾ ಅಸಿಸ್ಟ್‌ಗಳನ್ನು ಸೇರಿಸಿದರೆ, ಒಂದೇ ವಿಶ್ವಕಪ್ ಆವೃತ್ತಿಯಲ್ಲಿ ಅತಿ ಹೆಚ್ಚು ಗೋಲುಗಳಲ್ಲಿ ನೇರ ಪಾತ್ರವಹಿಸಿದ ಆಟಗಾರ ಎಂಬ ಐತಿಹಾಸಿಕ ದಾಖಲೆಯನ್ನು ತಮ್ಮದಾಗಿಸಿಕೊಳ್ಳಲಿದ್ದಾರೆ. ಈ ದಾಖಲೆಯು ಪ್ರಸ್ತುತ ಪಶ್ಚಿಮ ಜರ್ಮನಿಯ ದಿಗ್ಗಜ ಗರ್ಡ್ ಮುಲ್ಲರ್ ಹೆಸರಿನಲ್ಲಿದ್ದು, ಅವರು 1970ರ ವಿಶ್ವಕಪ್‌ನಲ್ಲಿ ಒಟ್ಟು 13 ಗೋಲು ಹಾಗೂ ಅಸಿಸ್ಟ್‌ಗಳ ಮೂಲಕ ಈ ಸಾಧನೆ ಮಾಡಿದ್ದರು.

Spain vs Argentina ನಡುವೆ ಫಿಫಾ ವಿಶ್ವಕಪ್‌ ಗೆಲ್ಲುವ ನೆಚ್ಚಿನ ತಂಡ ಯಾವುದು?

5.ವಿಶ್ವಕಪ್ ಫೈನಲ್‌ನಲ್ಲಿ ಅತಿ ಹೆಚ್ಚು ಗೋಲುಗಳ ದಾಖಲೆ

2022ರ ಫಿಫಾ ವಿಶ್ವಕಪ್ ಫೈನಲ್‌ನಲ್ಲಿ ಲಿಯೋನೆಲ್ ಮೆಸ್ಸಿ ಎರಡು ಗೋಲುಗಳನ್ನು ದಾಖಲಿಸಿದ್ದರು. 2026ರ ಫೈನಲ್‌ನಲ್ಲಿ ಸ್ಪೇನ್ ವಿರುದ್ಧವೂ ಅವರು ಅದೇ ಸಾಧನೆಯನ್ನು ಪುನರಾವರ್ತಿಸಿದರೆ, ವಿಶ್ವಕಪ್ ಫೈನಲ್‌ಗಳಲ್ಲಿ ಅತಿ ಹೆಚ್ಚು ಗೋಲುಗಳನ್ನು ದಾಖಲಿಸಿದ ಆಟಗಾರ ಎಂಬ ಕಿಲಿಯನ್ ಎಂಬಾಪೆ ಅವರ ದಾಖಲೆಯನ್ನು ಸರಿಗಟ್ಟಲಿದ್ದಾರೆ.

ಇದೇ ವೇಳೆ, ಮೆಸ್ಸಿ ಫೈನಲ್‌ನಲ್ಲಿ ಫ್ರೀ ಕಿಕ್ ಮೂಲಕ ಗೋಲು ಗಳಿಸಿದರೆ, ವಿಶ್ವಕಪ್ ಇತಿಹಾಸದಲ್ಲಿ ಫ್ರೀ ಕಿಕ್‌ನಿಂದ ಅತಿ ಹೆಚ್ಚು ಗೋಲುಗಳನ್ನು ದಾಖಲಿಸಿದ ಆಟಗಾರ ಎಂಬ ಹೊಸ ದಾಖಲೆಯನ್ನೂ ನಿರ್ಮಿಸಲಿದ್ದಾರೆ. ಪ್ರಸ್ತುತ ಅವರ ಖಾತೆಯಲ್ಲಿ ವಿಶ್ವಕಪ್‌ ಟೂರ್ನಿಯಲ್ಲಿ ಫ್ರೀ ಕಿಕ್ ಮೂಲಕ ಎರಡು ಗೋಲುಗಳಿವೆ.