ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

Spain vs Argentina ನಡುವೆ ಫಿಫಾ ವಿಶ್ವಕಪ್‌ ಗೆಲ್ಲುವ ನೆಚ್ಚಿನ ತಂಡ ಯಾವುದು?

2026ರ ಫಿಫಾ ವಿಶ್ವಕಪ್‌ ಟೂರ್ನಿಯು ನಿರ್ಣಾಯಕ ಹಂತವನ್ನು ತಲುಪಿದೆ. ಜುಲೈ 20 ರಂದು ಭಾನುವಾರ ತಡರಾತ್ರಿ ನಡೆಯುವ ಫೈನಲ್‌ ಪಂದ್ಯದಲ್ಲಿ ಅರ್ಜೆಂಟೀನಾ ಹಾಗೂ ಸ್ಪೇನ್‌ ತಂಡಗಳು ಪ್ರಶಸ್ತಿಗಾಗಿ ಕಾದಾಟ ನಡೆಸಲಿವೆ. ಈ ಮಹತ್ವದ ಪಂದ್ಯದಲ್ಲಿ ಹಾಲಿ ಚಾಂಪಿಯನ್ಸ್‌ ಎದುರು ಪ್ರಶಸ್ತಿ ಗೆಲ್ಲುವ ನೆಚ್ಚಿನ ಸ್ಪೇನ್‌ ಎಂದು ಹೇಳಲಾಗುತ್ತಿದೆ.

ಅರ್ಜೆಂಟೀನಾ ಎದುರು ಫೈನಲ್‌ ಗೆಲ್ಲುವ ನೆಚ್ಚಿನ ತಂಡ ಸ್ಪೇನ್‌!

2026ರ ಫಿಫಾ ವಿಶ್ವಕಪ್‌ ಫೈನಲ್‌ ಪ್ರೆಡಿಕ್ಷನ್‌. -

Profile
Ramesh Kote Jul 16, 2026 10:24 PM

ನವದೆಹಲಿ: ಹಾಲಿ ಯುರೋಪಿಯನ್ ಚಾಂಪಿಯನ್ ಸ್ಪೇನ್ (Spain), 2026ರ ಫಿಫಾ ವಿಶ್ವಕಪ್‌ (FIFA World Cup 2026) ಟೂರ್ನಿ ಆರಂಭವಾದ ದಿನದಂತೆಯೇ ಫೈನಲ್‌ಗೂ ಪ್ರಶಸ್ತಿ ಗೆಲ್ಲುವ ಪ್ರಮುಖ ಫೇವರಿಟ್ ತಂಡವಾಗಿ ಪ್ರವೇಶಿಸುತ್ತಿದೆ. ಅಮೆರಿಕದ ನ್ಯೂಜೆರ್ಸಿಯ ಈಸ್ಟ್ ಋದರ್‌ಫೋರ್ಡ್‌ನ ಮೆಟ್‌ಲೈಫ್ ಸ್ಟೇಡಿಯಂನಲ್ಲಿ ಭಾನುವಾರ ತಡರಾತ್ರಿ ನಡೆಯಲಿರುವ ಫೈನಲ್‌ ಪಂದ್ಯದಲ್ಲಿ ಸ್ಪೇನ್‌ ತಂಡದ ಪರ ಡಿಕೆ ಸ್ಪೋರ್ಟ್ಸ್ ಬೆಟ್ಟಿಂಗ್ ಸಂಸ್ಥೆ ದೊಡ್ಡ ಭವಿಷ್ಯ ನುಡಿದಿದೆ. ಸೆಮಿಫೈನಲ್‌ನಲ್ಲಿ ಇಂಗ್ಲೆಂಡ್ ವಿರುದ್ಧ 2-1 ಗೋಲುಗಳ ಅಂತರದಲ್ಲಿ ಹಿನ್ನಡೆಯಿಂದ ಚೇತರಿಸಿಕೊಂಡು ಗೆಲುವು ಸಾಧಿಸಿದ ಹಾಲಿ ವಿಶ್ವಚಾಂಪಿಯನ್ ಅರ್ಜೆಂಟೀನಾವನ್ನು +134 ಆಡ್ಸ್‌ನೊಂದಿಗೆ ಅಂಡರ್‌ಡಾಗ್ ತಂಡವಾಗಿ ಪರಿಗಣಿಸಲಾಗಿದೆ.

90 ನಿಮಿಷಗಳ ಫೈನಲ್‌ ಪಂದ್ಯದ ಫಲಿತಾಂಶದ ಕುರಿತು ಡಿಕೆ ಸ್ಪೋರ್ಟ್ಸ್ ನೀಡಿದ ಲೆಕ್ಕಾಚಾರದ ಪ್ರಕಾರ ಸ್ಪೇನ್‌ಗೆ +125, ಡ್ರಾಗೆ +200 ಹಾಗೂ ಅರ್ಜೆಂಟೀನಾಗೆ +260 ನಿಗದಿಯಾಗಿದೆ. ಜೂನ್ 11ರಂದು ಟೂರ್ನಿ ಆರಂಭವಾಗುವ ವೇಳೆಯಲ್ಲಿಯೇ ಸ್ಪೇನ್ +450 ಆಡ್ಸ್‌ನೊಂದಿಗೆ ಪ್ರಶಸ್ತಿ ಗೆಲ್ಲುವ ಅಗ್ರ ಫೇವರಿಟ್ ಆಗಿತ್ತು. ಆಗ ಫ್ರಾನ್ಸ್ ಎರಡನೇ ಸ್ಥಾನದಲ್ಲಿತ್ತು. ಆದರೆ ಗುಂಪು ಹಂತದಲ್ಲಿ ಡಿಡಿಯರ್ ಡೆಶಾಂಪ್ ಅವರ ತಂಡ ನೀಡಿದ ಅದ್ಭುತ ಪ್ರದರ್ಶನದ ಬಳಿಕ, ನಾಕೌಟ್ ಹಂತ ಆರಂಭಕ್ಕೂ ಮುನ್ನ ಫ್ರಾನ್ಸ್ ಕ್ಷಣಿಕವಾಗಿ ಪ್ರಶಸ್ತಿ ಗೆಲ್ಲುವ ಪ್ರಮುಖ ಫೇವರಿಟ್ ತಂಡವಾಗಿ ಹೊರಹೊಮ್ಮಿತ್ತು.

FIFA World Cup 2026: ಸ್ಪೇನ್‌ vs ಅರ್ಜೆಂಟೀನಾ ನಡುವಣ ಮುಖಮುಖಿ ದಾಖಲೆ ಹೇಗಿದೆ?

ಮಂಗಳವಾರ ನಡೆದಿದ್ದ ಸೆಮಿಫೈನಲ್‌ನಲ್ಲಿ ಸ್ಪೇನ್ 2-0 ಗೋಲುಗಳ ಅಂತರದಲ್ಲಿ ಫ್ರಾನ್ಸ್‌ ತಂಡವನ್ನು ಮಣಿಸಿ ಫೈನಲ್‌ಗೆ ಪ್ರವೇಶಿಸಿತು. ಈ ಗೆಲುವಿನೊಂದಿಗೆ ಸ್ಪೇನ್ ಸತತ 37ನೇ ಜಯ ದಾಖಲಿಸಿ, ರಾಷ್ಟ್ರೀಯ ತಂಡವೊಂದು ದಾಖಲಿಸಿದ ಅತ್ಯಂತ ದೀರ್ಘ ಗೆಲುವಿನ ಸರಣಿಯ ಇಟಲಿಯ ವಿಶ್ವದಾಖಲೆಯನ್ನು ಸರಿಗಟ್ಟಿದೆ ಎಂದು ಇಎಸ್‌ಪಿಎನ್ ಗ್ಲೋಬಲ್ ರಿಸರ್ಚ್ ತಿಳಿಸಿದೆ.

2010ರ ಬಳಿಕ ಮೊದಲ ಬಾರಿ ವಿಶ್ವಕಪ್ ಫೈನಲ್‌ಗೆ ಪ್ರವೇಶಿಸಿರುವ ಸ್ಪೇನ್, ಅರ್ಜೆಂಟಿನಾ ವಿರುದ್ಧ ನಡೆದ ಕಳೆದ ಆರು ಮುಖಾಮುಖಿಗಳಲ್ಲಿ ನಾಲ್ಕರಲ್ಲಿ ಜಯ ಸಾಧಿಸಿದೆ. ಆದರೆ ಈ ಎರಡೂ ತಂಡಗಳು ಕೊನೆಯದಾಗಿ 2018ರಲ್ಲಿ ಪರಸ್ಪರ ಕಾದಾಟ ನಡೆಸಿದ್ದವು.

ಫಿಫಾ ವಿಶ್ವಕಪ್ ಗೆಲ್ಲುವ ಪ್ರಮುಖ ನೆಚ್ಚಿನ ತಂಡಗಳಲ್ಲಿ ಒಂದಾಗಿ +950 ಆಡ್ಸ್‌ನೊಂದಿಗೆ ಟೂರ್ನಿಗೆ ಕಾಲಿಟ್ಟಿದ್ದ ಅರ್ಜೆಂಟೀನಾ, ಅಮೆರಿಕದ ಬೆಟ್ಟಿಂಗ್ ಮಾರುಕಟ್ಟೆಗೆ ಭಾರೀ ಉತ್ತೇಜನ ನೀಡಿದೆ. ಕೆಲವು ಬೆಟ್ಟಿಂಗ್ ಸಂಸ್ಥೆಗಳಲ್ಲಿ ಒಟ್ಟು ಪಣಕ್ಕಿಟ್ಟಿರುವ ಮೊತ್ತದ ದೃಷ್ಟಿಯಿಂದ, ಅಮೆರಿಕದ ಎರಡು ಅತ್ಯಂತ ಜನಪ್ರಿಯ ಬೆಟ್ಟಿಂಗ್ ಸ್ಪರ್ಧೆಗಳಾದ NCAA ಪುರುಷರ ಬಾಸ್ಕೆಟ್‌ಬಾಲ್ ಟೂರ್ನಿ ಮತ್ತು ಸೂಪರ್ ಬೌಲ್‌ನ್ನೂ ವಿಶ್ವಕಪ್ ಮೀರಿಸಿದೆ.

ಫುಟ್ಬಾಲ್‌ ಫೀವರ್‌ಗೆ ಸರ್ಕಾರದ ವಿಶೇಷ ಗಿಫ್ಟ್‌; ವಿಶ್ವಕಪ್‌ ಫೈನಲ್‌ಗೆ ಮಿಡ್‌ನೈಟ್ ಸಂಭ್ರಮಕ್ಕೆ ಅವಕಾಶ

ಪ್ರೆಡಿಕ್ಷನ್‌ ಮಾರುಕಟ್ಟೆಯಾದ ಕಾಲ್ಶಿ (Kalshi)ನಲ್ಲಿ ವಿಶ್ವಕಪ್‌ಗೆ ಸಂಬಂಧಿಸಿದಂತೆ ಒಟ್ಟಾರೆ 12 ಬಿಲಿಯನ್ ಡಾಲರ್‌ಗಿಂತ ಹೆಚ್ಚು ವಹಿವಾಟು ನಡೆದಿದೆ. ಇದರಲ್ಲಿ ವಿಶ್ವಕಪ್ ಟ್ರೋಫಿ ಗೆಲ್ಲುವ ಸಾಧ್ಯತೆಗಳ ಮೇಲೆಯೇ ಸುಮಾರು 1.2 ಬಿಲಿಯನ್ ಡಾಲರ್‌ಗಳಷ್ಟು ವಹಿವಾಟು ದಾಖಲಾಗಿದೆ.

ಸೀಸರ್ಸ್ ಸ್ಪೋರ್ಟ್ಸ್‌ಬುಕ್ (Caesars Sportsbook) ತಿಳಿಸಿರುವಂತೆ, ಸೆಮಿಫೈನಲ್ ಹಂತ ಪ್ರವೇಶಿಸಿದ್ದ ಉಳಿದ ನಾಲ್ಕು ತಂಡಗಳಲ್ಲಿ ಫ್ರಾನ್ಸ್ ಮೇಲೆ ಮಾತ್ರ ಸಂಸ್ಥೆಗೆ ಹೆಚ್ಚಿನ ಪಾವತಿ ಹೊಣೆಗಾರಿಕೆ (ಲಯಬಿಲಿಟಿ) ಇತ್ತು. ಇದೇ ವೇಳೆ, ಬುಧವಾರ ಇಂಗ್ಲೆಂಡ್ ವಿರುದ್ಧದ ಪಂದ್ಯದಲ್ಲಿ ಲಿಯೋನೆಲ್ ಮೆಸ್ಸಿ ಗೋಲು ಗಳಿಸುವರೆಂಬ ಆಯ್ಕೆಯೇ ಇದುವರೆಗೆ ವಿಶ್ವಕಪ್‌ನಲ್ಲಿ ಅತ್ಯಂತ ಜನಪ್ರಿಯ ಪಾರ್ಲೇ ಬೆಟ್ಟಿಂಗ್ ಆಯ್ಕೆಯಾಗಿತ್ತು ಎಂದು ಸ್ಪೋರ್ಟ್ಸ್‌ಬುಕ್ ತಿಳಿಸಿದೆ.

ಅರ್ಜೆಂಟೀನಾದ ಗೆಲುವಿನಲ್ಲಿ ಲಿಯೋನೆಲ್ ಮೆಸ್ಸಿ ಗೋಲು ದಾಖಲಿಸಲು ವಿಫಲರಾದರೂ, ತಂಡದ ಎರಡೂ ಗೋಲುಗಳಿಗೆ ಅಸಿಸ್ಟ್ ನೀಡಿ ಪ್ರಮುಖ ಪಾತ್ರ ವಹಿಸಿದ್ದರು.