ಬೆಂಗಳೂರು: ಒಂಬತ್ತರ ವಯಸ್ಸಿನ ಕಾರ್ಟಿಂಗ್ ರೇಸರ್ ಅರ್ಷಿ ಗುಪ್ತಾ, 2026ರ ಇಂಡಿಯನ್ ನ್ಯಾಷನಲ್ ಕಾರ್ಟಿಂಗ್ ಚಾಂಪಿಯನ್‌ಷಿಪ್ (Indian National Karting Championship) ಸ್ಪರ್ಧೆಯಲ್ಲಿ ಗಮನಾರ್ಹ ಪ್ರದರ್ಶನ ನೀಡಿದ್ದು, ಒಂದೇ ವಾರಾಂತ್ಯದಲ್ಲಿ ನಡೆದ ನಾಲ್ಕು ಮತ್ತು ಐದನೇ ಸುತ್ತಿಗಳನ್ನು ಗೆಲುವು ಸಾಧಿಸಿದ್ದಾರೆ. ಒಂದೇ ವಾರಾಂತ್ಯದಲ್ಲಿ ಚಾಂಪಿಯನ್‌ಶಿಪ್‌ನ ಎರಡು ಸುತ್ತುಗಳು ನಡೆದಿದ್ದರೂ, ಅರ್ಷಿ ಎರಡೂ ಸುತ್ತುಗಳಲ್ಲಿ ಅದ್ಭುತ ವೇಗ ಹಾಗೂ ಸ್ಥಿರತೆಯನ್ನು ಪ್ರದರ್ಶಿಸಿದರು. ಸತತ ಎರಡು ಗೆಲುವುಗಳನ್ನು ದಾಖಲಿಸುವ ಮೂಲಕ ದೇಶದ ಪ್ರಮುಖ ಯುವ ಕಾರ್ಟಿಂಗ್ ರೇಸರ್‌ಗಳ ಪೈಕಿ ತಮ್ಮ ಸ್ಥಾನವನ್ನು ಮತ್ತಷ್ಟು ಬಲಪಡಿಸಿಕೊಂಡಿದ್ದಾರೆ.
ಡಬಲ್‌ಹೆಡರ್‌ನ ಎರಡೂ ಸುತ್ತುಗಳಲ್ಲಿ ಅರ್ಷಿ ನಿರಂತರವಾಗಿ ಉತ್ತಮ ಪ್ರದರ್ಶನ ನೀಡಿದರು. ನಾಲ್ಕರ ಸುತ್ತಿನಲ್ಲಿ ಅವರು ಕ್ವಾಲಿಫೈಯಿಂಗ್, ಹೀಟ್ 1, ಹೀಟ್ 2, ಪ್ರಿ-ಫೈನಲ್ ಹಾಗೂ ಫೈನಲ್—ಪ್ರತಿ ಸೆಷನ್‌ನಲ್ಲೂ P1 ಸ್ಥಾನ ಪಡೆದರು.
ಅದೇ ವೇಗ ಮತ್ತು ಏಕಾಗ್ರತೆಯನ್ನು ರೌಂಡ್ 5ರಲ್ಲೂ ಮುಂದುವರಿಸಿದ ಅರ್ಷಿ, ಮತ್ತೊಂದು ರೇಸ್ ಗೆಲುವು ದಾಖಲಿಸುವುದರ ಜೊತೆಗೆ ಅತ್ಯಂತ ವೇಗದ ಲ್ಯಾಪ್ ಕೂಡ ದಾಖಲಿಸಿದರು. ಈ ವೇಳೆ ಅವರು ಸತತ ಎಂಟು ಫಾಸ್ಟೆಸ್ಟ್ ಲ್ಯಾಪ್‌ಗಳನ್ನು ದಾಖಲಿಸಿರುವುದು ವಿಶೇಷ. ರೌಂಡ್ 5ರಲ್ಲಿ ಅರ್ಷಿ ಗುಪ್ತಾ ಮೊದಲ ಸ್ಥಾನ ಪಡೆದರೆ, ಆರ್. ಕುಮಾರ್ ಎರಡನೇ ಹಾಗೂ ಎಸ್. ನೀಲ್ ಮೂರನೇ ಸ್ಥಾನ ಪಡೆದರು.
ಈ ಚಾನೆಲ್‌ನಲ್ಲಿ ಪ್ರಸಾರಗೊಳ್ಳಲಿದೆ ಭಾರತ-ಜಪಾನ್ ಸುಜುಕಿ ಕಪ್ ಟಿ20 ಪಂದ್ಯ
‘ಡಬಲ್ ಗೆಲುವು ನಮಗೆ ವಿಶೇಷ ಕ್ಷಣ’
ಸತತ ಎರಡು ರೌಂಡ್‌ಗಳಲ್ಲಿ ಗೆಲುವು ಸಾಧಿಸಿದ ಕುರಿತು ಅರ್ಷಿ ಅವರ ತಾಯಿ ಡಾ. ದೀಪ್ತಿ ಗುಪ್ತಾ ಸಂತಸ ವ್ಯಕ್ತಪಡಿಸಿದ್ದಾರೆ. “ಒಂದೇ ವಾರಾಂತ್ಯದಲ್ಲಿ ರೌಂಡ್ 4 ಮತ್ತು ರೌಂಡ್ 5 ಎರಡನ್ನೂ ಗೆದ್ದಿರುವುದು ನಮಗೆ ಬಹಳ ವಿಶೇಷ ಕ್ಷಣ. ಇಡೀ ವಾರಾಂತ್ಯದಲ್ಲಿ ಅರ್ಷಿ ತೋರಿದ ಸ್ಥಿರ ಪ್ರದರ್ಶನ ನನಗೆ ವಿಶೇಷವಾಗಿ ಹೆಮ್ಮೆ ತಂದಿದೆ. ರೌಂಡ್ 4ರ ಕ್ವಾಲಿಫೈಯಿಂಗ್‌ನಿಂದ ಪ್ರತಿಯೊಂದು ರೇಸ್ ಸೆಷನ್‌ವರೆಗೆ ಹಾಗೂ ರೌಂಡ್ 5ರಲ್ಲಿ ಗೆಲುವಿಗೆ ಅಗತ್ಯವಿದ್ದ ವೇಗ ಮತ್ತು ಏಕಾಗ್ರತೆಯನ್ನು ಕಾಪಾಡಿಕೊಂಡಿರುವುದು ಗಮನಾರ್ಹ,” ಎಂದು ಅವರು ಹೇಳಿದ್ದಾರೆ.
“ಈ ವಯಸ್ಸಿನಲ್ಲಿ ಪ್ರತಿಯೊಂದು ರೇಸ್ ಕೂಡ ಕಲಿಕೆಯ ಅವಕಾಶವಾಗಿದೆ. ಪ್ರತಿಯೊಂದು ರೇಸ್ ಅನ್ನೂ ದೃಢಸಂಕಲ್ಪ ಮತ್ತು ಸಂಯಮದಿಂದ ಎದುರಿಸುತ್ತಿರುವ ಆಕೆಯನ್ನು ನೋಡುವುದೇ ನಮಗೆ ಅತ್ಯಂತ ಸಂತೋಷದ ಸಂಗತಿ,” ಎಂದು ದೀಪ್ತಿ ಗುಪ್ತಾ ಹೇಳಿದ್ದಾರೆ.
ಭಾರತ ತಂಡಕ್ಕೆ ತರಬೇತಿ ನೀಡುವ ಮಹತ್ವಾಕಾಂಕ್ಷೆ ಇಲ್ಲ: ಆಶಿಶ್ ನೆಹ್ರಾ
F1 ಅಕಾಡೆಮಿಗೆ ಆಯ್ಕೆಯಾದ ಕಿರಿಯ ರೇಸರ್
ಅರ್ಷಿ ಗುಪ್ತಾ F1 Academyಗೆ ಆಯ್ಕೆಯಾದ ಅತ್ಯಂತ ಕಿರಿಯ ರೇಸರ್ ಆಗಿದ್ದಾರೆ. ಅಲ್ಲದೆ, ಏಷ್ಯಾದ ಏಕೈಕ ರಾಷ್ಟ್ರೀಯ ಮಹಿಳಾ ಚಾಂಪಿಯನ್ ಎಂಬ ಹೆಗ್ಗಳಿಕೆಯನ್ನೂ ಹೊಂದಿದ್ದಾರೆ. ರೌಂಡ್ 4 ಮತ್ತು ರೌಂಡ್ 5ರಲ್ಲಿ ಸತತ ಗೆಲುವು ಸಾಧಿಸಿರುವುದು ಅವರ ಬೆಳೆಯುತ್ತಿರುವ ಕಾರ್ಟಿಂಗ್ ವೃತ್ತಿಜೀವನದ ಮತ್ತೊಂದು ಮಹತ್ವದ ಮೈಲುಗಲ್ಲಾಗಿದೆ. ರಾಷ್ಟ್ರೀಯ ಮಟ್ಟದಲ್ಲಿ ಸ್ಪರ್ಧಿಸುತ್ತಿರುವ ಆರ್ಷಿ ತಮ್ಮ ಕೌಶಲ ಮತ್ತು ಸಾಮರ್ಥ್ಯವನ್ನು ನಿರಂತರವಾಗಿ ಅಭಿವೃದ್ಧಿಪಡಿಸಿಕೊಳ್ಳುತ್ತಿದ್ದಾರೆ.
ಅಕ್ಟೋಬರ್ 17-18ರಂದು ಅಂತಿಮ ಸುತ್ತು
ಚಾಂಪಿಯನ್‌ಶಿಪ್‌ನ ಆರನೇ ಹಾಗೂ ಅಂತಿಮ ಸುತ್ತು 2026ರ ಅಕ್ಟೋಬರ್ 17 ಮತ್ತು 18ರಂದು ನಡೆಯಲಿದೆ. ಯಶಸ್ವಿ ಡಬಲ್‌ಹೆಡರ್ ವಾರಾಂತ್ಯದ ಬಳಿಕ ಇದೀಗ ಚಾಂಪಿಯನ್‌ಶಿಪ್‌ನ ಮುಂದಿನ ಸುತ್ತುಗಳತ್ತ ಗಮನ ಹರಿಸಿರುವ ಅರ್ಷಿ, ಇದೇ ವೇಗ ಮತ್ತು ಲಯವನ್ನು ಮುಂದುವರಿಸುವ ಗುರಿ ಹೊಂದಿದ್ದಾರೆ.