ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

ನೊವಾಕ್‌ ಜೊಕೊವಿಕ್‌ಗೆ ಸೋಲು, ಆಸ್ಟ್ರೇಲಿಯಾ ಓಪನ್‌ ಮುಡಿಗೇರಿಸಿಕೊಂಡ ಕಾರ್ಲೋಸ್‌ ಆಲ್ಕರಾಝ್‌!

ವಿಶ್ವದ ಟಿನಿಸ್‌ ದಿಗ್ಗಜ ನೊವಾಕ್‌ ಜೊಕೊವಿಕ್‌ ಅವರು 2026ರ ಆಸ್ಟ್ರೇಲಿಯನ್‌ ಓಪನ್‌ ಟೂರ್ನಿಯಲ್ಲಿ ವಿಫಲರಾಗಿದ್ದಾರೆ. ಫೆಬ್ರವರಿ 1 ರಂದು ನಡೆದಿದ್ದ ಪುರುಷರ ಸಿಂಗಲ್ಸ್‌ ಫೈನಲ್‌ ಪಂದಲ್ಲಿ ಜೊಕೊವಿಕ್‌ ಅವರು, ಯುವ ಆಟಗಾರ ಕಾರ್ಲೋಸ್‌ ಆಲ್ಕರಾಝ್‌ ವಿರುದ್ಧ ಸೋಲು ಅನುಭವಿಸಿದ್ದಾರೆ. ಅಂದ ಹಾಗೆ ಕಾರ್ಲೋಸ್‌ ಪಾಲಿಗೆ ಮೊದಲ ಆಸ್ಟ್ರೇಲಿಯನ್‌ ಓಪನ್‌ ಪ್ರಶಸ್ತಿಯಾಗಿದೆ.

ಆಸ್ಟ್ರೇಲಿಯನ್‌ ಓಪನ್‌ ಗೆದ್ದ ಕಾರ್ಲೋಸ್‌ ಆಲ್ಕರಾಝ್‌!

ಆಸ್ಟ್ರೇಲಿಯನ್‌ ಓಪನ್‌ ಮುಡಿಗೇರಿಸಿಕೊಂಡ ಕಾರ್ಲೋಸ್‌ ಆಲ್ಕರಾಝ್‌. -

Profile
Ramesh Kote Feb 1, 2026 8:43 PM

ಮೆಲ್ಬೋರ್ನ್: ಇಲ್ಲಿನ ಮೆಲ್ಬೋರ್ನ್ ಪಾರ್ಕ್‌ನಲ್ಲಿ ನಡೆದಿದ್ದ ರೋಮಾಂಚಕ ಆಸ್ಟ್ರೇಲಿಯನ್ ಓಪನ್ (Australia Open 2026) ಪುರುಷರ ಸಿಂಗಲ್ಸ್‌ ಫೈನಲ್‌ನಲ್ಲಿ ಸ್ಪೇನ್‌ನ ಕಾರ್ಲೋಸ್‌ ಆಲ್ಕರಾಝ್‌(Carlos Alcaraz) ಅವರು, ಟೆನಿಸ್‌ ದಂತಕಥೆ ನೊವಾಕ್ ಜೊಕೊವಿಕ್(Novak Djokovic) ಅವರನ್ನು 2-6, 6-2, 6-3, 7-5 ಸೆಟ್‌ಗಳಿಂದ ಸೋಲಿಸಿದ್ದಾರೆ. ಆ ಮೂಲಕ ತಮ್ಮ ಮೊದಲ ಆಸ್ಟ್ರೇಲಿಯನ್ ಓಪನ್ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದ್ದಾರೆ. ಈ ಗೆಲುವಿನೊಂದಿಗೆ, 22ನೇ ವಯಸ್ಸಿನ ಕಾರ್ಲೋಸ್ ಆಲ್ಕರಾಝ್‌, ತಮ್ಮ ವೃತ್ತಿ ಜೀವನದಲ್ಲಿ ಗ್ರ್ಯಾಂಡ್ ಸ್ಲ್ಯಾಮ್ ಗೆದ್ದ ವಿಶ್ವದ ಅತ್ಯಂತ ಕಿರಿಯ ಆಟಗಾರ ಎಂಬ ದಾಖಲೆಯನ್ನು ಬರೆದಿದ್ದಾರೆ.

ಭಾನುವಾರ ಆಲ್ಕರಾಝ್ ಈಗ ಎಲ್ಲಾ ನಾಲ್ಕು ಗ್ರ್ಯಾಂಡ್ ಸ್ಲ್ಯಾಮ್ (ವಿಂಬಲ್ಡನ್, ಫ್ರೆಂಚ್ ಓಪನ್, ಯುಎಸ್ ಓಪನ್ ಮತ್ತು ಈಗ ಆಸ್ಟ್ರೇಲಿಯನ್ ಓಪನ್) ಗೆದ್ದ ವಿಶ್ವದ ಒಂಬತ್ತನೇ ಪುರುಷ ಆಟಗಾರ ಎನಿಸಿಕೊಂಡಿದ್ದಾರೆ. ಅವರು ಈಗ ವಿಂಬಲ್ಡನ್, ಫ್ರೆಂಚ್ ಓಪನ್ ಮತ್ತು ಯುಎಸ್ ಓಪನ್‌ನಲ್ಲಿ ತಲಾ ಎರಡು ಸೇರಿದಂತೆ ಒಟ್ಟು ಏಳು ಪ್ರಮುಖ ಪ್ರಶಸ್ತಿಗಳನ್ನು ಹೊಂದಿದ್ದಾರೆ. ಈ ಗೆಲುವು ಅಧಿಕೃತವಾಗಿ ಟೆನಿಸ್ ಜಗತ್ತಿನಲ್ಲಿ ಹೊಸ ಯುಗಕ್ಕೆ ನಾಂದಿ ಹಾಡಿದ್ದಾರೆ.

Australia Open: ಮಹಿಳೆಯರ ಸಿಂಗಲ್ಸ್‌ನಲ್ಲಿ ಆಸ್ಟ್ರೇಲಿಯನ್‌ ಓಪನ್‌ ಗೆದ್ದ ಎಲೆನಾ ರೈಬಾಕಿನಾ!

ಆರಂಭಿಕ ಹಿನ್ನಡೆಯ ನಂತರ ಅಲ್ಕರಾಜ್ ಕಮ್‌ಬ್ಯಾಕ್‌

ಪಂದ್ಯದ ಆರಂಭದಲ್ಲಿ 38 ವರ್ಷದ ಜೊಕೊವಿಕ್ ತಮ್ಮ ಅನುಭವವನ್ನು ಪ್ರದರ್ಶಿಸಿದರು, ಮೊದಲ ಸೆಟ್ ಅನ್ನು ಸುಲಭವಾಗಿ 6-2 ಅಂತರದಿಂದ ಗೆದ್ದರು. ಅವರ ಸರ್ವ್ ಎಷ್ಟು ನಿಖರವಾಗಿತ್ತೆಂದರೆ, ಆಲ್ಕರಾಝ್‌, ರಿಟರ್ನ್ಸ್‌ನಲ್ಲಿ ಕೇವಲ ಎರಡು ಅಂಕಗಳನ್ನು ಮಾತ್ರ ಪಡೆದರು. ಆದಾಗ್ಯೂ, ಆಲ್ಕರಾಝ್‌ ಎರಡನೇ ಸೆಟ್‌ನಿಂದ ತಮ್ಮ ವಿಧಾನವನ್ನು ಬದಲಾಯಿಸಿದರು. ಮಾಂತ್ರಿಕ ಡ್ರಾಪ್ ಶಾಟ್‌ಗಳು ಮತ್ತು ತೀಕ್ಷ್ಣವಾದ ಚಲನೆಯಿಂದ, ಅವರು ಜೊಕೊವಿಕ್‌ರನ್ನು ಬೇಸ್‌ಲೈನ್‌ನಲ್ಲಿ ದಣಿಸಿದರು ಮತ್ತು ಮುಂದಿನ ಸೆಟ್ ಅನ್ನು 6-2 ಅಂತರದಿಂದ ಗೆಲ್ಲುವ ಮೂಲಕ ಪಂದ್ಯವನ್ನು ಸಮಗೊಳಿಸಿದರು.



ಜೊಕೊವಿಕ್ ಅವರ ಹೋರಾಟ ವ್ಯರ್ಥ

ಮೂರನೇ ಸೆಟ್‌ನಲ್ಲಿ ಕಠಿಣ ಹೋರಾಟದ ನಂತರ ಕಾರ್ಲೋಸ್‌ 6-3 ಅಂತರದಿಂದ ಗೆದ್ದರು. ನಾಲ್ಕನೇ ಸೆಟ್‌ನಲ್ಲಿ ಜೊಕೊವಿಕ್ ಪುನರಾಗಮನ ಮಾಡಲು ತಮ್ಮ ಅತ್ಯುತ್ತಮ ಪ್ರಯತ್ನ ಮಾಡಿದರು ಮತ್ತು ಒಂಬತ್ತನೇ ಗೇಮ್‌ನಲ್ಲಿ ಆಲ್ಕರಾಝ್‌ ಅವರ ಸರ್ವ್ ಅನ್ನು ಮುರಿಯುವ ಹತ್ತಿರ ಬಂದರು, ಆದರೆ ಯುವ ಸ್ಪೇನ್ ಆಟಗಾರ ಒತ್ತಡದಲ್ಲಿ ಶಾಂತರಾಗಿದ್ದರು. ಪಂದ್ಯದ ಅತಿದೊಡ್ಡ ತಿರುವು 12ನೇ ಗೇಮ್‌ನಲ್ಲಿ ಬಂದಿತು, ಜೊಕೊವಿಕ್ ಮಾಡಿದ ತಪ್ಪಿನಿಂದ ಆಲ್ಕರಾಝ್‌ಗೆ ಎರಡು ಚಾಂಪಿಯನ್‌ಶಿಪ್ ಪಾಯಿಂಟ್‌ಗಳು ದೊರೆತವು. ಜೊಕೊವಿಕ್ ಮೊದಲ ಅವಕಾಶದಲ್ಲೇ ಚೆಂಡನ್ನು ಹೊಡೆದರು ಮತ್ತು ಸ್ಪನ್‌ ಆಟಗಾರ, ತಮ್ಮ ಮೊದಲ ಆಸ್ಟ್ರೇಲಿಯನ್ ಓಪನ್ ಟ್ರೋಫಿಗೆ ಮುತ್ತಿಕ್ಕಿದರು.