ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

CWG 2026: ಚಿನ್ನದ ಪದಕ ಗೆದ್ದ ತನ್ನ ಪಯಣದಲ್ಲಿ ವಿರಾಟ್‌ ಕೊಹ್ಲಿಯ ಪಾತ್ರವನ್ನು ರಿವೀಲ್‌ ಮಾಡಿದ ಸಾಕ್ಷಿ ಚೌಧರಿ!

2026ರ ಕಾಮನ್‌ವೆಲ್ತ್‌ ಕ್ರೀಡಾಕೂಟದ 51 ಕೆಜಿ ಬಾಕ್ಸಿಂಗ್‌ ವಿಭಾಗದಲ್ಲಿ ಚಿನ್ನದ ಪದಕ ವಿಜೇತೆ ಸಾಕ್ಷಿ ಚೌಧರಿ ಅವರು ಆಧುನಿಕ ಕ್ರಿಕೆಟ್‌ ದಿಗ್ಗಜ ವಿರಾಟ್‌ ಕೊಹ್ಲಿಗೆ ಧನ್ಯವಾದವನ್ನು ಅರ್ಪಿಸಿದ್ದಾರೆ. ಏಕೆಂದರೆ ಈ ಮಹತ್ವದ ಕ್ರೀಡಾಕೂಟದಲ್ಲಿ ಚಿನ್ನದ ಪದಕ ಗೆದ್ದ ಪಯಣದಲ್ಲಿ ಕಿಂಗ್‌ ಕೊಹ್ಲಿ ಮಹತ್ವದ ಪಾತ್ರವನ್ನು ವಹಿಸಿದ್ದಾರೆಂದು ಅವರು ರಿವೀಲ್‌ ಮಾಡಿದ್ದಾರೆ.

ಭಾರತಕ್ಕೆ ಆಗಮಿಸಿದ ತಕ್ಷಣ ವಿರಾಟ್‌ ಕೊಹ್ಲಿಯ ಸಹಾಯವನ್ನು ನೆನೆದ ಸಾಕ್ಷಿ ಚೌಧರಿ.

ನವದೆಹಲಿ: ಕಳೆದ 2026ರ ಕಾಮನ್‌ವೆಲ್ತ್‌ ಕ್ರೀಡಾಕೂಟದಲ್ಲಿ (Commonwealth Games 2026) ಬಾಕ್ಸರ್‌ಗಳು ಭಾರತಕ್ಕೆ ಅದ್ಭುತ ಪ್ರದರ್ಶನ ನೀಡಿ 7 ಚಿನ್ನ ಸೇರಿದಂತೆ ಒಟ್ಟು 10 ಪದಕಗಳನ್ನು ಗೆದ್ದುಕೊಟ್ಟಿದ್ದಾರೆ. ಮಹಿಳೆಯರ 51 ಕೆಜಿ ವಿಭಾಗದಲ್ಲಿ ಸಾಕ್ಷಿ ಚೌಧರಿ (Sakshi Chaudhary) ಚಿನ್ನದ ಪದಕ ವಿಜೇತರಲ್ಲಿ ಒಬ್ಬರು. ಭಾರತಕ್ಕೆ ಮರಳಿದ ನಂತರು ಸಾಕ್ಷಿ ಚೌಧರಿ ಅವರು, ಕ್ರಿಕೆಟ್‌ ಐಕಾನ್‌ ವಿರಾಟ್ ಕೊಹ್ಲಿ (Virat Kohli) ತಮ್ಮ ಪ್ರಯಾಣದಲ್ಲಿ ವಹಿಸಿದ ಮಹತ್ವದ ಪಾತ್ರವನ್ನು ರಿವೀಲ್‌ ಮಾಡಿದ್ದಾರೆ ಹಾಗೂ ಟೀಮ್‌ ಇಂಡಿಯಾ ಮಾಜಿ ನಾಯಕನಿಗೆ ಧನ್ಯವಾದವನ್ನು ಅರ್ಪಿಸಿದ್ದಾರೆ.

ಹರಿಯಾಣದ ಭಿವಾನಿಯಲ್ಲಿ ಐಎನ್‌ಎಸ್‌ ಜೊತೆ ಮಾತನಾಡಿದ ಸಾಕ್ಷಿ ಚೌಧರಿ, "ವಿಜೇಂದರ್ ಸಿಂಗ್ ಅವರನ್ನು ನೋಡಿದ ನಂತರ ನಾನು ಬಾಕ್ಸಿಂಗ್ ಅನ್ನು ಪ್ರಾರಂಭಿಸಿದೆ. ವಿರಾಟ್ ಕೊಹ್ಲಿ ಕೂಡ ಈ ಪ್ರಯಾಣದುದ್ದಕ್ಕೂ ನನಗೆ ಅಪಾರ ಬೆಂಬಲ ನೀಡಿದ್ದಾರೆ. ಅವರು ನನ್ನ ಪ್ರಾಯೋಜಕರಾಗಿದ್ದಾರೆ ಮತ್ತು ನಾನು ಅವರಿಗೆ ಧನ್ಯವಾದ ಹೇಳಲು ಬಯಸುತ್ತೇನೆ," ಎಂದಿದ್ದಾರೆ.

ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಕಂಚಿನ ಪದಕ ವಿಜೇತೆ ಶಿಲ್ಪಾಗೆ 15 ಲಕ್ಷ , ನೌಕರಿ

ವಿರಾಟ್‌ ಕೊಹ್ಲಿ ಕೇವಲ ಆರ್ಥಿಕ ಸಹಾಯಕ್ಕೆ ಮಾತ್ರ ಬೆಂಬಲ ನೀಡಲಿಲ್ಲ; ಅವರು ತಮ್ಮ ಮನೋಸ್ಥೈರ್ಯವನ್ನು ಹೆಚ್ಚಿಸಿದರು ಎಂದು ಅವರು ಉಲ್ಲೇಖಿಸಿದ್ದಾರೆ. ವಿರಾಟ್ ಯಾವಾಗಲೂ ಒತ್ತಡದಿಂದ ದೂರವಿರಲು ಮತ್ತು ಅವರ ಪ್ರದರ್ಶನದ ಮೇಲೆ ಮಾತ್ರ ಗಮನಹರಿಸಲು ಸಲಹೆ ನೀಡುತ್ತಿದ್ದರು ಎಂದು ಗೋಲ್ಡನ್‌ ಗರ್ಲ್‌ ಸಾಕ್ಷಿ ರಿವೀಲ್‌ ಮಾಡಿದ್ದಾರೆ.

ರೂಬಿ ವೈಟ್‌ ಅವರನ್ನು ಸೋಲಿಸಿ ಚಿನ್ನದ ಪದಕ ಗೆದ್ದಿದ್ದ ಚೌಧರಿ

ಗ್ಲಾಸ್ಗೋದಲ್ಲಿ ನಡೆದಿದ್ದ ಕಾಮನ್‌ವೆಲ್ತ್ ಕ್ರೀಡಾಕೂಟದಲ್ಲಿ ಸಾಕ್ಷಿ ಮಹಿಳೆಯರ 51 ಕೆಜಿ ವಿಭಾಗದ ಫೈನಲ್‌ನಲ್ಲಿ ಇಂಗ್ಲೆಂಡ್‌ನ ರೂಬಿ ವೈಟ್ ಅವರನ್ನು 5-0 ಅಂತರದಿಂದ ನಿರ್ಣಾಯಕವಾಗಿ ಸೋಲಿಸುವ ಮೂಲಕ ಚಿನ್ನದ ಪದಕವನ್ನು ಮುಡಿಗೇರಿಸಿಕೊಂಡಿದ್ದರು. ಇದು ಅವರ ಮೊದಲ ಕಾಮನ್‌ವೆಲ್ತ್ ಕ್ರೀಡಾಕೂಟದ ಪದಕವಾಗಿತ್ತು. ಗಾಯದಿಂದಾಗಿ ಅವರು 2022ರ ಕ್ರೀಡಾಕೂಟವನ್ನು ತಪ್ಪಿಸಿಕೊಂಡಿದ್ದರು.



2025ರಲ್ಲಿ ಅವರು ವಿಶ್ವ ಬಾಕ್ಸಿಂಗ್ ಕಪ್‌ನಲ್ಲಿ 54 ಕೆಜಿ ವಿಭಾಗದಲ್ಲಿ ಚಿನ್ನದ ಪದಕವನ್ನು ಗೆದಿದ್ದರು. ಅದೇ ವರ್ಷದ ಆರಂಭದಲ್ಲಿ ಸಾಕ್ಷಿ 54 ಕೆಜಿ ವಿಭಾಗದಲ್ಲಿ ಬದಲಾಗಿ 51 ಕೆಜಿ ವಿಭಾಗದಲ್ಲಿ ಸ್ಪರ್ಧಿಸಲು ನಿರ್ಧರಿಸಿದರು. ಇದು ಅಪಾಯಕಾರಿ ನಿರ್ಧಾರವಾಗಿತ್ತು, ಆದರೂ ತೂಕ ಬದಲಿದ ಬಳಿಕ ಎದುರಾದ ಕಠಿಣ ಸವಾಲುಗಳನ್ನು ಗಟ್ಟಿಯಾಗಿ ಎದುರಿದ ಸಾಕ್ಷಿ, ಚಿನ್ನದ ಪದಕ ಗೆಲ್ಲುವಲ್ಲಿ ಯಶಸ್ವಿಯಾದರು.

ರಾಷ್ಟ್ರೀಯ ಟ್ರಯಲ್ಸ್‌ನಲ್ಲಿ ಸ್ಟಾರ್‌ ಬಾಕ್ಸರ್‌ಗಳನ್ನು ಮಣಿಸಿದ್ದ ಸಾಕ್ಷಿ

51 ಕೆಜಿ ವಿಭಾಗದ ರಾಷ್ಟ್ರೀಯ ಟ್ರಯಲ್ಸ್‌ನಲ್ಲಿ ಅವರು 2022 ರ ಕಾಮನ್‌ವೆಲ್ತ್ ಕ್ರೀಡಾಕೂಟದ ಚಿನ್ನದ ಪದಕ ವಿಜೇತೆ ನಿಖತ್ ಜರೀನ್ ಮತ್ತು 2025ರ ವಿಶ್ವ ಬಾಕ್ಸಿಂಗ್ ಚಾಂಪಿಯನ್‌ಶಿಪ್ ಚಿನ್ನದ ಪದಕ ವಿಜೇತೆ ಮೀನಾಕ್ಷಿ ಹೂಡಾ ಅವರನ್ನು ಸೋಲಿಸುವ ಮೂಲಕ ಕಾಮನ್‌ವೆಲ್ತ್ ಕ್ರೀಡಾಕೂಟಕ್ಕಾಗಿ ಭಾರತೀಯ ತಂಡದಲ್ಲಿ ತಮ್ಮ ಸ್ಥಾನವನ್ನು ಭದ್ರಪಡಿಸಿಕೊಂಡಿದ್ದರು. ಕಾಮನ್‌ವೆಲ್ತ್ ಕ್ರೀಡಾಕೂಟದಲ್ಲಿ ಸಾಕ್ಷಿ ಚೌಧರಿ ನಾಲ್ಕು ಪಂದ್ಯಗಳಲ್ಲಿ ಸ್ಪರ್ಧಿಸಿದರು ಮತ್ತು 5-0 ಸ್ಕೋರ್‌ಲೈನ್‌ನೊಂದಿಗೆ ಎಲ್ಲವನ್ನೂ ಏಕಪಕ್ಷೀಯವಾಗಿ ಗೆದ್ದು ಬೀಗಿದ್ದರು.