ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಕಂಚಿನ ಪದಕ ವಿಜೇತೆ ಶಿಲ್ಪಾಗೆ 15 ಲಕ್ಷ , ನೌಕರಿ
Shilpa Shyla: ಕ್ರೀಡೆ ಹಾಗೂ ಶಿಕ್ಷಕಿ ಹುದ್ದೆ, ಈ ಎರಡು ಒಟ್ಟಿಗೇ ಸಾಗಲು ಸಾಧ್ಯವಿಲ್ಲ ಎಂದು ಅರಿತ ಶಿಲ್ಪಾ ಅವರು 2024ರಲ್ಲಿ ತಮ್ಮ ವೃತ್ತಿ ತೊರೆದರು. ಜೊತೆಗೆ ಮೈಸೂರು ಬಿಟ್ಟು ಬೆಂಗಳೂರಿಗೆ ಬಂದ ಅವರು ಪೂರ್ಣ ಪ್ರಮಾಣದಲ್ಲಿ ಪ್ಯಾರಾ ಅಥ್ಲೆಟಿಕ್ಸ್‌ನಲ್ಲಿ ತೊಡಗಿಸಿಕೊಂಡಿದ್ದಾರೆ.
Shilpa Shyla -
ಬೆಂಗಳೂರು, ಆ. 7: ಸ್ಕಾಟ್ಲೆಂಡ್‌ನ ಗ್ಲಾಸ್ಗೋದಲ್ಲಿ ನಡೆದ ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಕಂಚಿನ ಪದಕ ಗೆದ್ದ ಕರ್ನಾಟಕದ ಪ್ಯಾರಾ ಅಥ್ಲೀಟ್ ಶಿಲ್ಪಾ ಕೆ.ಶೈಲಾ ಅವರಿಗೆ ತವರಿನಲ್ಲಿ ಭವ್ಯ ಸ್ವಾಗತ ಸಿಕ್ಕಿದೆ. ಮಾತ್ರವಲ್ಲದೆ ಈ ಹಿಂದೆ ಭರವಸೆ ನೀಡಿದಂತೆ ₹15 ಲಕ್ಷ ರು. ನಗದು ಬಹುಮಾನ ಹಾಗೂ ಗ್ರೂಪ್ ‘ಬಿ’ ಹುದ್ದೆ ನೀಡುವುದಾಗಿ ರಾಜ್ಯ ಸರ್ಕಾರ ಘೋಷಿಸಿದೆ.
ಗ್ಲಾಸ್ಗೊದಿಂದ ನಗರಕ್ಕೆ ಮರಳಿದ ಶಿಲ್ಪಾ, ಮುಖ್ಯ ಕೋಚ್ ಸತ್ಯನಾರಾಯಣ ಮತ್ತು ನೆರವು ಸಿಬ್ಬಂದಿಯನ್ನು ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ವತಿಯಿಂದ ಸ್ವಾಗತಿಸಲಾಯಿತು. ನಂತರ ಕಂಠೀರವ ಕ್ರೀಡಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿಯೂ ಗೌರವಿಸಲಾಯಿತು. ಗೌರವ ಸ್ವೀಕರಿಸಿದ ಶಿಲ್ಪಾ, ‘ನನಗೆ ಪ್ರೋತ್ಸಾಹ ನೀಡುತ್ತಿರುವ ಸರ್ಕಾರ ಮತ್ತು ಸಂಸ್ಥೆಗಳಿಗೆ, ತರಬೇತುದಾರರಿಗೆ ಆಭಾರಿಯಾಗಿದ್ದೇನೆ’ ಎಂದರು.
Bengaluru, Karnataka: On winning bronze in the women's shot put F57 event at the Glasgow 2026 Commonwealth Games, Para athlete Shilpa K. Shaila says, ''I would like to express my heartfelt gratitude to everyone. From the moment I landed at the airport, everyone gave me such a… pic.twitter.com/D7PznT6DGX
— IANS (@ians_india) August 6, 2026
ಶಾಟ್‌ಪುಟ್, ಡಿಸ್ಕಸ್ ಎಸೆತದಲ್ಲಿ ರಾಷ್ಟ್ರೀಯ ಮಟ್ಟದಲ್ಲಿ ಸಾಧನೆ ಮಾಡಿದ್ದ ಶಿಲ್ಪಾ ಕಾಮನ್‌ವೆಲ್ತ್‌ನಲ್ಲಿ ಮಹಿಳೆಯರ ಶಾಟ್‌ಪುಟ್ ಎಫ್57 ವಿಭಾಗದಲ್ಲಿ ವೈಯಕ್ತಿಕ ದಾಖಲೆ 7.26 ಮೀಟರ್ ದಾಖಲಿಸಿ ಕಂಚು ಗೆದ್ದರು.
ಭಾರತ ಮಹಿಳಾ ತಂಡದ ದಕ್ಷಿಣ ಆಫ್ರಿಕಾ ಪ್ರವಾಸದ ಪರಿಷ್ಕೃತ ವೇಳಾಪಟ್ಟಿ ಪ್ರಕಟ
ತಮ್ಮ 4ನೇ ವಯಸ್ಸಿನಲ್ಲೇ ಭೀಕರ ಅಪಘಾತಕ್ಕೆ ತುತ್ತಾಗಿದ್ದ ಅವರು ತಮ್ಮ ಕಾಲನ್ನು ಕಳೆದುಕೊಂಡಿದ್ದು ಮಾತ್ರವಲ್ಲದೇ, ಬಡತನದಲ್ಲಿದ್ದ ಕುಟುಂಬಕ್ಕೂ ಹೊರೆಯಾಗಿದ್ದರು. ಆದರೆ ಸಾಧಿಸುವ ಛಲ ಬಿಡದ ಶಿಲ್ಪಾ ಕಲಿಕೆಯಲ್ಲಿ ಹಿಂದೆ ಬೀಳಲಿಲ್ಲ. ಕಲಿತು ಶಿಕ್ಷಕಿಯಾದ ಅವರು, ಕ್ರೀಡೆಯಲ್ಲೂ ಛಾಪು ಮೂಡಿಸಿದರು. ತಮ್ಮ ಮೊದಲ ಕಾಮನ್‌ವೆಲ್ತ್ ಕೂಟದಲ್ಲೇ ಪದಕ ಗೆದ್ದಿರುವ ಅವರು, ಕೂಟದ ಇತಿಹಾಸದಲ್ಲೇ ಪದಕ ಗೆದ್ದ ಕರ್ನಾಟಕದ ಮೊದಲ ಪ್ಯಾರಾ ಅಥ್ಲೀಟ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
Bengaluru, Karnataka: Government of Karnataka, felicitates Karnataka para-athlete Shilpa K. Shyla, who won the bronze medal in the women’s F57 shot put event at the 2026 Commonwealth Games. pic.twitter.com/i3jSH2OAqb
— IANS (@ians_india) August 6, 2026
ಕ್ರೀಡೆ ಹಾಗೂ ಶಿಕ್ಷಕಿ ಹುದ್ದೆ, ಈ ಎರಡು ಒಟ್ಟಿಗೇ ಸಾಗಲು ಸಾಧ್ಯವಿಲ್ಲ ಎಂದು ಅರಿತ ಶಿಲ್ಪಾ ಅವರು 2024ರಲ್ಲಿ ತಮ್ಮ ವೃತ್ತಿ ತೊರೆದರು. ಜೊತೆಗೆ ಮೈಸೂರು ಬಿಟ್ಟು ಬೆಂಗಳೂರಿಗೆ ಬಂದ ಅವರು ಪೂರ್ಣ ಪ್ರಮಾಣದಲ್ಲಿ ಪ್ಯಾರಾ ಅಥ್ಲೆಟಿಕ್ಸ್‌ನಲ್ಲಿ ತೊಡಗಿಸಿಕೊಂಡಿದ್ದಾರೆ. 2 ವರ್ಷಗಳಿಂದ ಕಂಠೀರವ ಕ್ರೀಡಾಂಗಣದಲ್ಲಿ ಈಶಾನ್ ಎಸ್.ಡಿ. ಅವರ ಮಾರ್ಗದರ್ಶನದಲ್ಲಿ ತರಬೇತಿ ಪಡೆಯುತ್ತಿದ್ದಾರೆ.