ಅಟ್ಲಾಂಟ: ಕ್ರಿಸ್ಟಿಯನ್ ರೊಮೆರೊ (79ನೇ ನಿಮಿಷ), ಲಿಯೊನೆಲ್ ಮೆಸ್ಸಿ (83ನೇ ನಿಮಿಷ) ಹಾಗೂ ಎನ್‌ಝೋ ಫರ್ನಾಂಡೀಸ್ (90+2 ನಿಮಿಷ) ಅವರ ಗೋಲುಗಳ ನೆರವಿನಿಂದ ಎರಡನೇ ಅವಧಿಯಲ್ಲಿ ಅದ್ಭುತವಾಗಿ ಕಮ್‌ಬ್ಯಾಕ್ ಮಾಡಿದ ಅರ್ಜೆಂಟೀನಾ (Argentina) ತಂಡ, ಈಜಿಪ್ಟ್ (Egypt) ಎದುರು 3-2 ಅಂತರದಲ್ಲಿ ರೋಚಕ ಗೆಲುವು ಸಾಧಿಸಿತು. ಆ ಮೂಲಕ 2026ರ ಫಿಫಾ ವಿಶ್ವಕಪ್ ಟೂರ್ನಿಯ (FIFA World Cup 2026) ಕ್ವಾರ್ಟರ್‌ಫೈನಲ್ಸ್‌ಗೆ ಮೆಸ್ಸಿ ನಾಯಕತ್ವದ ತಂಡ ಪ್ರವೇಶ ಮಾಡಿತು. ಇನ್ನು ಮೊದಲ ಅವಧಿಯಲ್ಲಿ ಅದ್ಭುತವಾಗಿ ಅಟವಾಡಿ 2-0 ಮುನ್ನಡೆಯ ಹೊರತಾಗಿಯೂ ಈಜಿಪ್ಟ್ ತಂಡ, ಅಂತಿಮ ಹಂತದಲ್ಲಿ ಎಡವಿದ ಕಾರಣ ಸೋಲು ಅನುಬವಿಸಿ ಟೂರ್ನಿಯಲ್ಲಿ ತನ್ನ ಪಯಣವನ್ನು ಮುಗಿಸಿತು.
ಜುಲೈ 7 ರಂದು ತಡರಾತ್ರಿ (ಭಾರತೀಯ ಕಾಲಮಾನ) ನಡೆದಿದ್ದ ಈ ಪಂದ್ಯ, ಎರಡೂ ತಂಡಗಳ ನಡುವೆ ತೀವ್ರ ಪೈಪೋಟಿಗೆ ಸಾಕ್ಷಿಯಾಯಿತು. ಕೊನೆಯವರೆಗೂ ಫಲಿತಾಂಶ ಅನಿಶ್ಚಿತವಾಗಿತ್ತು. ಒಂದು ಹಂತದಲ್ಲಿ ಎರಡು ಗೋಲುಗಳಿಂದ ಹಿಂದುಳಿದಿದ್ದ ಅರ್ಜೆಂಟೀನಾ, ಅಂತಿಮ ನಿಮಿಷಗಳಲ್ಲಿ ಉತ್ತುಂಗಕ್ಕೇರಲು ಅದ್ಭುತವಾದ ಕಮ್‌ಬ್ಯಾಕ್ ಮಾಡಿತು. ಈ ಐತಿಹಾಸಿಕ ಗೆಲುವು ಪ್ರಪಂಚದಾದ್ಯಂತದ ಅರ್ಜೆಂಟೀನಾ ಅಭಿಮಾನಿಗಳನ್ನು ಸಂಭ್ರಮಕ್ಕೆ ಕಾರಣವಾಯಿತು.
ಆರಂಭಿಕ ಮುನ್ನಡೆ ಸಾಧಿಸಿದ್ದ ಈಜಿಪ್ಟ್
ಈಜಿಪ್ಟ್ ಪಂದ್ಯದಲ್ಲಿ ಅದ್ಭುತವಾದ ಆರಂಭವನ್ನು ಪಡೆಯಿತು. 15ನೇ ನಿಮಿಷದಲ್ಲಿ ಯಾಸರ್ ಇಬ್ರಾಹಿಂ ಅದ್ಭುತ ಗೋಲು ಗಳಿಸಿ ತಮ್ಮ ತಂಡಕ್ಕೆ ಆರಂಭಿಕ 1-0 ಮುನ್ನಡೆಯನ್ನು ನೀಡಿದರು. ಈ ಹಿನ್ನಡೆಯನ್ನು ಅನುಭವಿಸಿದರೂ, ಅರ್ಜೆಂಟೀನಾ ಫಾವರ್ಡ್ ಆಟಗಾರರು, ಪ್ರತಿದಾಳಿ ನಡೆಸಲು ಸಾಕಷ್ಟು ಪ್ರಯತ್ನಗಳನ್ನು ಮಾಡಿದರೂ ಈಜಿಪ್ಟ್ ರಕ್ಷಣಾ ಪಡೆ ಗೋಲು ಗಳಿಸಲು ಅವಕಾಶವನ್ನು ನೀಡಲಿಲ್ಲ.
ದ್ವಿತೀಯಾರ್ಧದಲ್ಲಿಯೂ ಈಜಿಪ್ಟ್ ತನ್ನ ಪ್ರಾಬಲ್ಯವನ್ನು ಕಾಯ್ದುಕೊಂಡಿತು; 67ನೇ ನಿಮಿಷದಲ್ಲಿ ಮೊಸ್ತಫಾ ಜಿಕೊ ತಂಡಕ್ಕೆ ಎರಡನೇ ಗೋಲು ತಂದುಕೊಟ್ಟರು. ಆ ಮೂಲಕ ಈಜಿಪ್ಟ್ 2-0 ಮುನ್ನಡೆ ಸಾಧಿಸಿತು. ಇದರೊಂದಿಗೆ ಲಿಯೊನೆಲ್ ಮೆಸ್ಸಿ ನಾಯಕತ್ವದ ಅರ್ಜೆಂಟೀನಾ ತಂಡದ ಒತ್ತಡವನ್ನು ಹೆಚ್ಚಿಸಿತು.
ಅರ್ಜೇಂಟಿನಾಗೆ ರೊಮೆರೊ, ಮೆಸ್ಸಿ ಆಸರೆ
ಎರಡು ಗೋಲುಗಳ ಹಿನ್ನಡೆಯಲ್ಲಿದ್ದ ಅರ್ಜೆಂಟೀನಾ, ತಮ್ಮ ಆಕ್ರಮಣಶೀಲತೆಯನ್ನು ಹೆಚ್ಚಿಸಿತು ಮತ್ತು ಉತ್ಸಾಹಭರಿತವಾಗಿ ಕಮ್‌ಬ್ಯಾಕ್ ಮಾಡಿತು. 79 ನೇ ನಿಮಿಷದಲ್ಲಿ ಕ್ರಿಸ್ಟಿಯನ್ ರೊಮೆರೊ ತಂಡಕ್ಕೆ ಮೊದಲ ಗೋಲು ತಂದುಕೊಟ್ಟರು. ಬಳಿಕ ಕೇವಲ ನಾಲ್ಕು ನಿಮಿಷಗಳ ನಂತರದಲ್ಲಿ ಅಂದರೆ, 83ನೇ ನಿಮಿಷದಲ್ಲಿ ಸ್ಟಾರ್ ಆಟಗಾರ ಲಿಯೊನೆಲ್ ಮೆಸ್ಸಿ ಅದ್ಭುತ ಗೋಲು ಗಳಿಸುವ ಮೂಲಕ ತಮ್ಮ ಮಾಂತ್ರಿಕ ಅನುಭವವನ್ನು ಪ್ರದರ್ಶಿಸಿದರು. ಆ ಮೂಲಕ ಅರ್ಜೆಂಟೀನಾ 2-2 ಅಂತರದಲ್ಲಿ ಸಮಬಲ ಸಾಧಿಸಿತು.
FIFA World Cup 2026: ಸ್ಪೇನ್ ಎದುರು ಸೋಲಿನ ಬೆನ್ನಲ್ಲೆ ಮೈದಾನದಲ್ಲಿಯೇ ಕಣ್ಣೀರಾಕಿದ ಕ್ರಿಸ್ಟಿಯಾನೊ ರೊನಾಲ್ಡೊ!
ಅರ್ಜೆಂಟೀನಾಗೆ ಗೆಲುವು ಖಚಿತಪಡಿಸಿದ ಫೆರ್ನಾಂಡೀಸ್
ಪಂದ್ಯದ ನಿಗದಿತ ಅವಧಿಯ ಮುಕ್ತಾಯಕ್ಕೆ ತಂಡಗಳು ಸಮಬಲ ಸಾಧಿಸಿದ್ದವು. ಪಂದ್ಯದ ಫಲಿತಾಂಶವನ್ನು ನಿರ್ಧರಿಸಲು ಹೆಚ್ಚುವರಿ ಸಮಯವನ್ನು ತೆಗೆದುಕೊಳ್ಳಬೇಕಾಯಿತು. ಹೆಚ್ಚುವರಿ ಸಮಯದಲ್ಲಿ ಎನ್‌ಝೋ ಫೆರ್ನಾಂಡಿಸ್ ಸ್ಟಾಪೇಜ್ ಸಮಯದಲ್ಲಿ (90+2 ನೇ ನಿಮಿಷ) ಬುದ್ದವಂತಿಕೆಯಿಂದ ಗೋಲು ಗಳಿಸಿದರು. ಆ ಮೂಲಕ ಹಾಲಿ ಚಾಂಪಿಯನ್ಸ್‌ಗೆ ಗೆಲುವು ಖಾತ್ರಿಗೊಳಿಸಿದರು.