ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

JSW ಇಂಡಿಯನ್ ಓಪನ್ ಸ್ಕ್ವಾಷ್ ಸಂಭ್ರಮ; ಮುಂಬೈನಲ್ಲಿ ಹೈ-ವೋಲ್ಟೇಜ್ ಪಂದ್ಯ!

ಮುಂಬೈನ ಸಿಸಿಐ ಬ್ರಬೋರ್ನ್ ಸ್ಟೇಡಿಯಂನಲ್ಲಿ ಮಾರ್ಚ್ 18 ರಂದು ಎರಡನೇ ಆವೃತ್ತಿಯ ಜೆಎಸ್‌ಡಬ್ಲ್ಯು ಇಂಡಿಯನ್ ಓಪನ್ ಆರಂಭವಾಗಲಿದ್ದು, ಐದು ದಿನಗಳ ಕಾಲ ಉನ್ನತ ಮಟ್ಟದ ಸ್ಕ್ವಾಷ್ ಪಂದ್ಯಗಳಿಗೆ ವೇದಿಕೆ ಸಿದ್ಧವಾಗಿದೆ. 2028ರ ಲಾಸ್ ಏಂಜಲೀಸ್ ಒಲಿಂಪಿಕ್ಸ್‌ನಲ್ಲಿ ಸ್ಕ್ವಾಷ್ ಪದಾರ್ಪಣೆ ಮಾಡುತ್ತಿರುವುದರಿಂದ ಭಾರತದಲ್ಲಿ ಈ ಕ್ರೀಡೆಗೆ ಉತ್ತಮ ಪರಿಸರ ಸೃಷ್ಟಿಸುವುದು ಇದರ ಹಿಂದಿನ ಉದ್ದೇಶವಾಗಿದೆ.

ಜೆಎಸ್‌ಡಬ್ಲ್ಯು ಇಂಡಿಯನ್ ಓಪನ್ ಸ್ಕ್ವಾಷ್

ಬೆಂಗಳೂರು: ಮುಂಬೈನ ಐತಿಹಾಸಿಕ ಸಿಸಿಐ (CCI) ಬ್ರಬೋರ್ನ್ ಸ್ಟೇಡಿಯಂನಲ್ಲಿ ನಾಳೆಯಿಂದ (ಮಾರ್ಚ್ 18) ಎರಡನೇ ಆವೃತ್ತಿಯ JSW ಇಂಡಿಯನ್ ಓಪನ್ ಆರಂಭವಾಗಲಿದ್ದು, ಐದು ದಿನಗಳ ಕಾಲ ಉನ್ನತ ಮಟ್ಟದ ಸ್ಕ್ವಾಷ್ ಪಂದ್ಯಗಳಿಗೆ ವೇದಿಕೆ ಸಿದ್ಧವಾಗಿದೆ. ಭಾರತದ ಪ್ರಮುಖ ಆಟಗಾರರು ಮತ್ತು ಅಂತಾರಾಷ್ಟ್ರೀಯ ಸ್ಪರ್ಧಿಗಳನ್ನೊಳಗೊಂಡ ಈ ಟೂರ್ನಿಯಲ್ಲಿ ಪುರುಷರ ಮತ್ತು ಮಹಿಳೆಯರ ವಿಭಾಗಗಳಲ್ಲಿ ಒಟ್ಟು 30 ಪಂದ್ಯಗಳು ನಡೆಯಲಿವೆ. ಆಟಗಾರರು ಪಿಎಸ್‌ಎ (PSA) ಶ್ರೇಯಾಂಕದ ಅಂಕಗಳು ಮತ್ತು ಪ್ರತಿಷ್ಠಿತ ಪ್ರಶಸ್ತಿಗಾಗಿ ಸೆಣಸಾಡಲಿದ್ದಾರೆ.

ಈ ಟೂರ್ನಿಯಲ್ಲಿ ಅಗ್ರ ಶ್ರೇಯಾಂಕದ ಮತ್ತು ಹಾಲಿ ಚಾಂಪಿಯನ್ ಅನಾಹತ್ ಸಿಂಗ್ ಅವರ ಮೇಲೆ ಎಲ್ಲರ ಕಣ್ಣು ನೆಟ್ಟಿದೆ. ಇವರೊಂದಿಗೆ ಭಾರತದ ಪ್ರಮುಖ ಆಟಗಾರರಾದ ರಮಿತ್ ಟಂಡನ್, ವೀರ್ ಚೋತ್ರಾನಿ, ಅಭಯ್ ಸಿಂಗ್ ಮತ್ತು ಹಿರಿಯ ಆಟಗಾರ್ತಿ ಜೋಷ್ನಾ ಚಿನಪ್ಪ ಅವರು ತಾಯ್ನಾಡಿನ ಪ್ರೇಕ್ಷಕರ ಮುಂದೆ ಉತ್ತಮ ಪ್ರದರ್ಶನ ನೀಡಲು ಸಜ್ಜಾಗಿದ್ದಾರೆ.

ಕಾಬೂಲ್ ಆಸ್ಪತ್ರೆಯ ಮೇಲೆ ಪಾಕ್ ವೈಮಾನಿಕ ದಾಳಿಗೆ ಭಾರೀ ಸಾವು ನೋವು; ಅಫ್ಘಾನಿಸ್ತಾನ ಕ್ರಿಕೆಟಿಗರ ಖಂಡನೆ

ಅಂತಾರಾಷ್ಟ್ರೀಯ ಮಟ್ಟದ ಪ್ರಬಲ ಆಟಗಾರರಾದ ಯಾಹ್ಯಾ ಎಲ್ನಾವಾಸ್ನಿ, ನದೀನ್ ಎಲ್ಹಮ್ಮಮ್ ಮತ್ತು ಎನೋರಾ ವಿಲ್ಲಾರ್ಡ್ ಕೂಡ ಪಾಲ್ಗೊಳ್ಳುತ್ತಿದ್ದು, ವಾರದ ಉದ್ದಕ್ಕೂ ರೋಚಕ ಪಂದ್ಯಗಳು ನಡೆಯಲಿವೆ.

ಈ ಟೂರ್ನಿಯ ಬಗ್ಗೆ ಮಾತನಾಡಿದ ರಮಿತ್ ಟಂಡನ್, "ಭಾರತದ ಸಂಸ್ಕೃತಿ ಮತ್ತು ಆತಿಥ್ಯದ ಕಾರಣದಿಂದಾಗಿ ಆಟಗಾರರು ಇಲ್ಲಿಗೆ ಬರಲು ಇಷ್ಟಪಡುತ್ತಾರೆ. ಕಳೆದ ವರ್ಷದ ಈ ಟೂರ್ನಿಯು ವರ್ಷದ ಅತ್ಯುತ್ತಮ ಈವೆಂಟ್‌ಗಳಲ್ಲಿ ಒಂದಾಗಿತ್ತು ಎಂದು ಅನೇಕ ಆಟಗಾರರು ನನಗೆ ತಿಳಿಸಿದ್ದರು," ಎಂದರು.

ಡಿಫೆಂಡಿಂಗ್ ಚಾಂಪಿಯನ್ ಅನಾಹತ್ ಸಿಂಗ್ ಮಾತನಾಡಿ "ಈ ಟೂರ್ನಿಗಾಗಿ ನಾನು ಕಠಿಣ ತರಬೇತಿ ನಡೆಸಿದ್ದೇನೆ. ಸ್ಥಿರತೆಯನ್ನು ಕಾಯ್ದುಕೊಳ್ಳುವುದು ಮತ್ತು ಪ್ರತಿ ಪಂದ್ಯವನ್ನೂ ಅದೇ ಮಾನಸಿಕತೆಯೊಂದಿಗೆ ಎದುರಿಸುವುದು ನನ್ನ ಗುರಿ. ಮುಂದಿನ ಒಲಿಂಪಿಕ್ ಕ್ರೀಡಾಕೂಟದಲ್ಲಿ ಸ್ಕ್ವಾಷ್ ಸೇರ್ಪಡೆಯಾಗುತ್ತಿರುವುದರಿಂದ, ಅಂತಹ ದೊಡ್ಡ ಗುರಿಯತ್ತ ಸಾಗಲು ಇಂತಹ ಟೂರ್ನಿಗಳು ಪ್ರಮುಖ ಹಂತಗಳಾಗಿವೆ," ಎಂದು ಹೇಳಿದ್ದಾರೆ.

IPL 2026: ಸಂಜು ಸ್ಯಾಮ್ಸನ್‌ or ಋತುರಾಜ್‌ ಗಾಯಕ್ವಾಡ್‌? ಸಿಎಸ್‌ಕೆಗೆ ಸೂಕ್ತ ನಾಯಕನನ್ನು ಆರಿಸಿದ ಎಬಿಡಿ!

2028ರ ಲಾಸ್ ಏಂಜಲೀಸ್ ಒಲಿಂಪಿಕ್ಸ್‌ನಲ್ಲಿ ಸ್ಕ್ವಾಷ್ ಪದಾರ್ಪಣೆ ಮಾಡುತ್ತಿರುವುದರಿಂದ, ಭಾರತದಲ್ಲಿ ಕ್ರೀಡೆಯ ಪರಿಸರ ವ್ಯವಸ್ಥೆಯನ್ನು ಬಲಪಡಿಸಲು ಈ ಟೂರ್ನಿ ಸಹಕಾರಿಯಾಗಿದೆ. ಮಾರ್ಚ್ 18 ಮೊದಲ ಸುತ್ತಿನ ಪಂದ್ಯಗಳು (ಮಧ್ಯಾಹ್ನ 12:00 ರಿಂದ), ಮಾರ್ಚ್ 19, ಎರಡನೇ ಸುತ್ತು-ಮಾರ್ಚ್ 20 ಕ್ವಾರ್ಟರ್ ಫೈನಲ್ಸ್, ಮಾರ್ಚ್ 21ಸೆಮಿಫೈನಲ್ಸ್ ಮತ್ತು ಮಾರ್ಚ್ 22 ರಂದು ಫೈನಲ್‌ ನಡೆಯಲಿದೆ.