ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

IPL 2026: ಸಂಜು ಸ್ಯಾಮ್ಸನ್‌ or ಋತುರಾಜ್‌ ಗಾಯಕ್ವಾಡ್‌? ಸಿಎಸ್‌ಕೆಗೆ ಸೂಕ್ತ ನಾಯಕನನ್ನು ಆರಿಸಿದ ಎಬಿಡಿ!

AB De Villiers on CSK's Captaincy: 2026ರ ಇಂಡಿಯನ್‌ ಪ್ರೀಮಿಯರ್‌ ಲೀಗ್‌ ಟೂರ್ನಿಯಲ್ಲಿ ಚೆನ್ನೈ ಸೂಪರ್‌ ಕಿಂಗ್ಸ್‌ ತಂಡವನ್ನು ಯಾರು ಮುನ್ನಡೆಸಬಹುದು ಎಂಬ ಬಗ್ಗೆ ಚರ್ಚೆಗಳು ನಡೆಯುತ್ತಿವೆ. ಏಕೆಂದರೆ ಸಂಜು ಸ್ಯಾಮ್ಸನ್‌ ಮರಳುವಿಕೆಯಿಂದ ಸಂಜು ಸ್ಯಾಮ್ಸನ್‌ ಹಾಗೂ ಋತುರಾಜ್‌ ಗಾಯಕ್ವಾಡ್‌ ನಡುವೆ ಪೈಪೋಟಿ ನಡೆಯುತ್ತಿದೆ. ಈ ಬಗ್ಗೆ ಎಬಿ ಡಿ ವಿಲಿಯರ್ಸ್‌ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಚೆನ್ನೈ ಸೂಪರ್‌ ಕಿಂಗ್ಸ್‌ಗೆ ಸೂಕ್ತ ನಾಯಕನನ್ನು ಆರಿಸಿದ ಎಬಿಡಿ!

ಸಿಎಸ್‌ಕೆಗೆ ಸೂಕ್ತ ನಾಯಕನನ್ನು ಆರಿಸಿದ ಎಬಿಡಿ. -

Profile
Ramesh Kote Mar 17, 2026 7:21 PM

ನವದೆಹಲಿ: ಬಹುನಿರೀಕ್ಷಿತ 2026ರ ಇಂಡಿಯನ್‌ ಪ್ರೀಮಿಯರ್‌ ಲೀಗ್‌ (IPL 2026) ಟೂರ್ನಿಯ ನಿಮಿತ್ತ ಚೆನ್ನೈ ಸೂಪರ್‌ ಕಿಂಗ್ಸ್‌ (CSK) ತಂಡವನ್ನು ಯಾರು ಮುನ್ನಡೆಸಲಿದ್ದಾರೆಂಬ ಬಗ್ಗೆ ಸಾಕಷ್ಟು ಚರ್ಚೆಗಳು ನಡೆಯುತ್ತಿವೆ. ಋತುರಾಜ್‌ ಗಾಯಕ್ವಾಡ್‌ ಅನುಪಸ್ಥಿತಿಯಲ್ಲಿ 2025ರ ಐಪಿಎಲ್‌ ಟೂರ್ನಿಯಲ್ಲಿ ಎಂಎಸ್‌ ಧೋನಿ ಸಿಎಸ್‌ಕೆ ತಂಡವನ್ನು ಮುನ್ನಡೆಸಿದ್ದರು. ಆದರೆ, 2026 ರ ಐಪಿಎಲ್‌ ಟೂರ್ನಿಯಲ್ಲಿ ಸಿಎಸ್‌ಕೆ ತಂಡವನ್ನು ಮುನ್ನಡೆಸಲು ಇದೀಗ ಋತುರಾಜ್‌ ಗಾಯಕ್ವಾಡ್‌ ಜೊತೆಗೆ ಸಂಜು ಸ್ಯಾಮ್ಸನ್‌ ಕೂಡ ಇದ್ದಾರೆ. ಹಾಗಾಗಿ ಈ ಇಬ್ಬರ ಪೈಕಿ ಒಬ್ಬರು ತಂಡವನ್ನು ಮುನ್ನಡೆಸಬಹುದು. ಈ ಬಗ್ಗೆ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡದ ದಿಗ್ಗಜ ಎಬಿ ಡಿ ವಿಲಿಯರ್ಸ್‌ (AB De Villiers) ತಮ್ಮ ಪ್ರಾಮಾಣಿಕ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.

ಕ್ರಿಕೆಟ್ ಪಂಡಿತರು ಚೆನ್ನೈ ಸೂಪರ್‌ ಕಿಂಗ್ಸ್‌ ತಂಡದ ಸೂಕ್ತ ನಾಯಕ ಯಾರು ಎಂಬ ಬಗ್ಗೆ ಚರ್ಚೆಗಳನ್ನು ನಡೆಸುತ್ತಿದ್ದಾರೆ. ಇದೀಗ ಈ ಚರ್ಚೆಗೆ ದಕ್ಷಿಣ ಆಫ್ರಿಕಾ ದಿಗ್ಗಜ ಎಬಿ ಡಿ ವಿಲಿಯರ್ಸ್‌ ಕೂಡ ಸೇರ್ಪಡೆಯಾಗಿದ್ದಾರೆ. ಅವರು ಋತುರಾಜ್‌ ಗಾಯಕ್ವಾಡ್‌ 2026ರ ಐಪಿಎಲ್ ಟೂರ್ನಿಯಲ್ಲಿ ಸಿಎಸ್‌ಕೆ ತಂಡವನ್ನು ಮುನ್ನಡೆಸಲು ಪರಿಪೂರ್ಣ ನಾಯಕ ಎಂದು ಅಭಿಪ್ರಾಯಪಟ್ಟಿದ್ದಾರೆ. ಎಬಿಡಿ ಹೇಳುವಂತೆ ಕಳೆದ ಕೆಲವು ವರ್ಷಗಳಿಂದ ಸಿಎಸ್‌ಕೆಎ, ಗಾಯಕ್ವಾಡ್‌ ಅವರನ್ನು ನಾಯಕನಾಗಿ ರೂಪಿಸಿಕೊಂಡಿದ್ದು, ಈಗ ತಂಡವು ಅವರ ಮೇಲೆಯೇ ನಂಬಿಕೆ ಇಟ್ಟು ಮುಂದುವರಿಯಬೇಕು ಎಂದು ಹೇಳಿದ್ದಾರೆ.

IPL 2026: ರೋಹಿತ್‌ ಶರ್ಮಾ ಅಲ್ಲ! ಬೆಸ್ಟ್‌ ಟಿ20 ಓಪನರ್‌ ಆರಿಸಿದ ವಿರಾಟ್‌ ಕೊಹ್ಲಿ!

ಋತುರಾಜ್‌ ಗಾಯಕ್ವಾಡ್‌ರನ್ನೇ ಮುಂದುವರಿಸಬೇಕು: ಎಬಿಡಿ

“ನನಗೆ ಅನಿಸಿದ ಹಾಗೆ ಅವರಿಗೆ (ಸಿಎಸ್‌ಕೆ) ಸರಿಯಾದ ನಾಯಕ ಈಗಾಗಲೇ ಇದ್ದಾರೆ. ಸಂಜು ಸ್ಯಾಮ್ಸನ್‌ ಅವರನ್ನು ನಾಯಕನನ್ನಾಗಿ ಪರಿಗಣಿಸುವ ಮನಸ್ಥಿತಿ ತಂಡದಲ್ಲಿಲ್ಲ. ಕಳೆದ ಕೆಲವು ವರ್ಷಗಳಲ್ಲಿ ಅವರು ಋತುರಾಜ್‌ ಗಾಯಕ್ವಾಡ್‌ ಅವರ ಮೇಲೆ ವಿಶ್ವಾಸವಿಟ್ಟು ಬೆಳೆಸಿದ್ದಾರೆ. ಆದ್ದರಿಂದ ಒಬ್ಬ ನಾಯಕನನ್ನೇ ಹಿಡಿದುಕೊಂಡು ಮುಂದುವರಿಯಬೇಕು. ‘ಸಂಜು ನಾಯಕನಾಗುತ್ತಾನಾ?’ ಎಂಬ ಮಾಧ್ಯಮ ಚರ್ಚೆಗಳಿಗೆ ಅವಕಾಶ ನೀಡಬಾರದು. ಸಿಎಸ್‌ಕೆ ತಂಡದ ವ್ಯವಸ್ಥೆಯಲ್ಲಿ ಅದಕ್ಕೆ ಯಾವುದೇ ಅಗತ್ಯವಿಲ್ಲ,” ಎಂದು ಎಬಿ ಡಿ ವಿಲಿಯರ್ಸ್‌ ಸ್ಟಾರ್‌ ಸ್ಪೋರ್ಟ್ಸ್‌ಗೆ ನೀಡಿದ ಸಂದರ್ಶನದಲ್ಲಿ ತಿಳಿಸಿದ್ದಾರೆ.

"ಚೆನ್ನೈ ಸೂಪರ್‌ ಕಿಂಗ್ಸ್‌ ತಂಡಕ್ಕೆ ಬೇರೆ ಯಾವುದೇ ಸ್ಟಾರ್‌ ಆಟಗಾರ ಬಂದರೂ, ಸಿಎಸ್‌ಕೆ ತಮ್ಮ ನಾಯಕ ಋತುರಾಜ್‌ ಗಾಯಕ್ವಾಡ್‌ ಮಾತ್ರ ಎಂಬ ನಿಲುವಿನಲ್ಲಿ ಸ್ಪಷ್ಟತೆ ಇರಬೇಕು. ಹೊಸ ನಾಯಕತ್ವದ ಬಗ್ಗೆ ಯಾವುದೇ ಚರ್ಚೆಗಳು ಅಗತ್ಯವಿಲ್ಲ. ಅದರಂತೆ ಸಿಎಸ್‌ಕೆ ಕೂಡ ಈ ಕೆಲಸವನ್ನು ಎಂದಿಗೂ ಮಾಡುವುದಿಲ್ಲ. ಸಂಜು, ಎಂಎಸ್‌ ಧೋನಿ ಸೇರಿದಂತೆ ಇತರೆ ಆಟಗಾರರು ಹಿರಿಯ ಆಟಗಾರರ ರೀತಿ ಆಡಬೇಕು," ಎಂದು ಆರ್‌ಸಿಬಿ ದಿಗ್ಗಜ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

IPL 2026: ಡೆಲ್ಲಿ ಕ್ಯಾಪಿಟಲ್ಸ್‌ ತಂಡದ ಮೆಂಟರ್‌ ಹುದ್ದೆಯನ್ನು ತೊರೆದ ಕೆವಿನ್‌ ಪೀಟರ್ಸನ್‌!

ಬಲಿಷ್ಠವಾಗಿರುವ ಸಿಎಸ್‌ಕೆ ತಂಡ

ಋತುರಾಜ್‌ ಗಾಯಕ್ವಾಡ್‌ ಅವರನ್ನು 2024ರ ಐಪಿಎಲ್‌ ಟೂರ್ನಿಯಲ್ಲಿ ನಾಯಕನಾಗಿ ನೇಮಿಸಲಾಗಿತ್ತಾದರೂ ಅವರು ಹೆಚ್ಚಿನ ಪ್ರಭಾವ ಬೀರುವಲ್ಲಿ ವಿಫಲರಾಗಿದ್ದರು ಮತ್ತು ಆ ಸೀಸನ್‌ನಲ್ಲಿ ಸಿಎಸ್‌ಕೆ ಐದನೇ ಸ್ಥಾನದಲ್ಲಿ ತನ್ನ ಅಭಿಯಾನವನ್ನು ಮುಗಿಸಿತ್ತು. 2025ರ ಐಪಿಎಲ್ ಮಧ್ಯದಲ್ಲಿ ಗಾಯಗೊಂಡ ಕಾರಣ ಗಾಯಕ್ವಾಡ್‌, ಟೂರ್ನಿಯಿಂದ ಹೊರಬಿದ್ದರು, ಬಳಿಕ ಎಂಎಸ್‌ ಧೋನಿ ಮತ್ತೆ ನಾಯಕತ್ವ ವಹಿಸಿಕೊಂಡಿದ್ದರು. ಇದೀಗ, ಈ ಸೀಸನ್‌ನಲ್ಲಿ ಗಾಯಕ್ವಾಡ್‌ ಅವರಿಗೆ ಬಲಿಷ್ಠ ತಂಡ ಸಿಕ್ಕಿದೆ. ಸರ್ಫರಾಝ್‌ ಖಾನ್‌, ಸಂಜು ಸ್ಯಾಮ್ಸನ್‌ ಸೇರಿದಂತೆ ಹಲವು ಆಟಗಾರರ ಸೇರ್ಪಡೆಯಿಂದ ಸಿಎಸ್‌ಕೆ ಬಹುತೇಕ ಎಲ್ಲಾ ವಿಭಾಗಗಳನ್ನು ಬಲಪಡಿಸಿಕೊಂಡಿದ್ದು, ಇದೀಗ ಬಲಿಷ್ಠ ತಂಡವಾಗಿ ಕಣಕ್ಕೆ ಇಳಿಯಲಿದೆ.