ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

WTL 2025: ವಿಶ್ವ ಟೆನಿಸ್ ಲೀಗ್ ಕಿರೀಟ ಮುಡಿಗೇರಿಸಿಕೊಂಡ ಆಸ್ಸಿ ಮ್ಯಾವೆರಿಕ್ಸ್ ಕೈಟ್ಸ್!

ಕಳೆದ ನಾಲ್ಕು ದಿನಗಳಿಂದ ಬೆಂಗಳೂರಿನ ಎಎಸ್‌ಎಂ ಕೃಷ್ಣ ಕ್ರೀಡಾಂಗಣದಲ್ಲಿ ನಡೆದದ್ದ 2025ರ ವಿಶ್ವ ಟೆನಿಸ್‌ ಲೀಗ್‌ ಟೂರ್ನಿಯು ಶನಿವಾರ ಅಂತ್ಯವಾಗಿದೆ. ಫೈನಲ್‌ ಹಣಾಹಣಿಯಲ್ಲಿ ಎಒಎಸ್‌ ಈಗಲ್ಸ್‌ ತಂಡವನ್ನು 22-19 ಅಂತರದಲ್ಲಿ ಮಣಿಸಿದ ಆಸ್ಸಿ ಮ್ಯಾವೆರಿಕ್ಸ್‌ ಕೈಟ್ಸ್‌ ತಂಡ ಚೊಚ್ಚಲ ಚಾಂಪಿಯನ್‌ ಆಗಿದೆ.

ಚೊಚ್ಚಲ ವಿಶ್ವ ಟೆನಿಸ್‌ ಲೀಗ್‌ ಗೆದ್ದ ಆಸ್ಸಿ ಮ್ಯಾವೆರಿಕ್ಸ್‌ ಕೈಟ್ಸ್‌.

ಬೆಂಗಳೂರು: ಐಕಾನಿಕ್ ಸ್ಪೋರ್ಟ್ಸ್ & ಈವೆಂಟ್ಸ್ ಪ್ರಸ್ತುತಪಡಿಸಿದ ಮತ್ತು ಸ್ಪೈಸ್‌ಜೆಟ್ ಪವರ್ಡ್ ಪಾರ್ಟ್ನರ್ ಆಗಿರುವ ವಿಶ್ವ ಟೆನಿಸ್ ಲೀಗ್ ( World Tennis League 2025) ಬೆಂಗಳೂರಿನಲ್ಲಿ ಶನಿವಾರ ಯಶಸ್ವಿಯಾಗಿ ಮುಕ್ತಾಯಗೊಂಡಿತು. ಶನಿವಾರ ಎಸ್.ಎಂ. ಕೃಷ್ಣ ಟೆನಿಸ್ ಸ್ಟೇಡಿಯಂನಲ್ಲಿ ನಡೆದಿದ್ದ ಫೈನಲ್ ಪಂದ್ಯದಲ್ಲಿ ಎಒಎಸ್‌ ಈಗಲ್ಸ್‌ (AOS Egles) ತಂಡವನ್ನು ಮಣಿಸಿ ಆಸ್ಸಿ ಮ್ಯಾವೆರಿಕ್ಸ್ ಕೈಟ್ಸ್ (Aussie Mavericks Kites) ತಂಡ, 2025ರ ವಿಶ್ವ ಟೆನಿಸ್ ಲೀಗ್ ಕಿರೀಟವನ್ನು ತನ್ನದಾಗಿಸಿಕೊಂಡಿತು. ಕಪಿಲ್‌ ದೇವ್ ಹಾಗೂ ಕೆ.ಎಲ್. ರಾಹುಲ್ ಸೇರಿದಂತೆ ಕ್ರಿಕೆಟ್ ದಿಗ್ಗಜರ ಸಮ್ಮುಖದಲ್ಲಿ ನಡೆದ ಫೈನಲ್‌ನಲ್ಲಿ ಆಸ್ಸಿ ಮ್ಯಾವೆರಿಕ್ಸ್ ಕೈಟ್ಸ್ ತಂಡವು, ಎಒಎಸ್‌ ಈಗಲ್ಸ್ ವಿರುದ್ಧ 22-19 ಅಂತರದಲ್ಲಿ ಜಯ ಸಾಧಿಸಿ ತನ್ನ ಮೊದಲ ಚೊಚ್ಚಲ ಪ್ರಶಸ್ತಿಯನ್ನು ಗೆದ್ದುಕೊಂಡಿತು.

ಈ ಆವೃತ್ತಿಯಲ್ಲಿ ಧಕ್ಷಿಣೇಶ್ವರ್ ಸುರೇಶ್ ತಮ್ಮ ಅದ್ಭುತ ಪ್ರದರ್ಶನದಿಂದ ಗಮನ ಸೆಳೆದರು. 6 ಅಡಿ 5 ಇಂಚು ಎತ್ತರದ ಶಕ್ತಿಶಾಲಿ ಸರ್ವರ್ ಆಗಿರುವ ಸುರೇಶ್, ಡಾನಿಲ್ ಮೆಡ್ವೆಡೆವ್ ಸೇರಿದಂತೆ ಶ್ರೇಷ್ಠ ಆಟಗಾರರನ್ನು ಮಣಿಸುವ ಮೂಲಕ ದೊಡ್ಡ ವೇದಿಕೆಗೆ ತಕ್ಕ ಆಟಗಾರನೆಂಬುದನ್ನು ಸಾಬೀತುಪಡಿಸಿದರು. ಅಮೆರಿಕನ್ ಕಾಲೇಜ್ ಟೆನಿಸ್ ಮಾರ್ಗವನ್ನು ಆಯ್ದುಕೊಂಡಿರುವ 25 ವರ್ಷದ ಸುರೇಶ್, ಪ್ರಸ್ತುತ ವೇಕ್ ಫಾರೆಸ್ಟ್ ವಿಶ್ವವಿದ್ಯಾಲಯದ ವಿದ್ಯಾರ್ಥಿಯಾಗಿದ್ದಾರೆ. ಫೈನಲ್‌ನಲ್ಲಿ ತಮ್ಮ ಆಕ್ರಮಣಕಾರಿ ಆಟದ ಮೂಲಕ ಗುಂಪು ಹಂತದಲ್ಲಿ ಸುಮಿತ್ ನಾಗಲ್ ಎದುರಿಸಿದ ಸೋಲಿಗೆ ಪ್ರತೀಕಾರ ತೀರಿಸಿ, ನಿರ್ಣಾಯಕ ಪುರುಷರ ಸಿಂಗಲ್ಸ್ ಪಂದ್ಯವನ್ನು 7-6 ಅಂತರದಲ್ಲಿ ಗೆದ್ದರು.

WTL 2025: ಎಒಎಸ್‌ ಈಗಲ್ಸ್‌ಗೆ ಭರ್ಜರಿ ಗೆಲುವು-ಶ್ರೀವಲ್ಲಿ, ಸುಮಿತ್‌ ನಾಗಲ್ ಮಿಂಚು!

ಶನಿವಾರದ ಆರಂಭದಲ್ಲಿ ಮಾರ್ಟಾ ಕೋಸ್ತ್ಯೂಕ್ ಆಸ್ಸಿ ಮ್ಯಾವೆರಿಕ್ಸ್ ಕೈಟ್ಸ್‌ಗೆ ಉತ್ತಮ ಆರಂಭ ಒದಗಿಸಿದರು. ಅವರು ಶ್ರಿವಳ್ಳಿ ಭಾಮಿಡಿಪತಿಯನ್ನು 6-4ರಿಂದ ಸೋಲಿಸಿದರು. ಫೈನಲ್‌ಗೆ ಪ್ರವೇಶಿಸಿದ್ದ AOS ಈಗಲ್ಸ್ ತಂಡ ಮಿಶ್ರ ಡಬಲ್ಸ್‌ನಲ್ಲಿ ಶ್ರಿವಲ್ಲಿ ಭಾಮಿಡಿಪತಿ ಮತ್ತು ಗೆಲ್ ಮೊನ್ಫಿಲ್ಸ್ ಜೋಡಿಯ ಮೂಲಕ ಧಕ್ಷಿಣೇಶ್ವರ್ ಸುರೇಶ್–ಮಾರ್ಟಾ ಕೋಸ್ತ್ಯೂಕ್ ಜೋಡಿಯನ್ನು 6-3ರಿಂದ ಮಣಿಸಿ ಪೈಪೋಟಿಗೆ ಮರಳಿತು. ಆದರೆ ನಿಕ್ ಕಿರ್ಗಿಯೊಸ್, ಸುರೇಶ್ ಜೊತೆಯಾಗಿ ಆಡುತ್ತಾ, ಸುಮಿತ್ ನಾಗಲ್–ಗೆಲ್ ಮೊನ್ಫಿಲ್ಸ್ ಜೋಡಿಯನ್ನು 6-3ರಿಂದ ಸೋಲಿಸಿದರು.

‘ದಿ ಗ್ರೇಟೆಸ್ಟ್ ಶೋ ಆನ್ ಕೋರ್ಟ್!’ ಎಂದು ಬ್ರ್ಯಾಂಡ್ ಮಾಡಲಾದ WTL ತನ್ನ ಮೊದಲ ಆವೃತ್ತಿಯಲ್ಲೇ ಭಾರತೀಯ ಟೆನಿಸ್ ಅಭಿಮಾನಿಗಳಿಗೆ ವಿಶ್ವದ ಶ್ರೇಷ್ಠ ಆಟಗಾರರನ್ನು ಹತ್ತಿರದಿಂದ ನೋಡುವ ಅಪೂರ್ವ ಅವಕಾಶ ನೀಡಿತು. AOS ಈಗಲ್ಸ್, ಆಸ್ಸಿ ಮ್ಯಾವೆರಿಕ್ಸ್ ಕೈಟ್ಸ್, ಗೇಮ್ ಚೇಂಜರ್ಸ್ ಫಾಲ್ಕನ್ಸ್ ಮತ್ತು VB ರಿಯಾಲ್ಟಿ ಹಾಕ್ಸ್ ತಂಡಗಳು 2025ರ ಪ್ರಶಸ್ತಿಗಾಗಿ ಪೈಪೋಟಿ ನಡೆಸಿದವು.

World Tennis League: ಎಒಎಸ್‌ ಈಗಲ್ಸ್‌ಗೆ ಭರ್ಜರಿ ಜಯ; ಮಿಂಚಿದ ಸುಮಿತ್ ನಾಗಲ್!

ಹಿಂದಿನ ಯುಎಸ್ ಓಪನ್ ಚಾಂಪಿಯನ್ ಡ್ಲ್ಯಾನಿಲ್‌ ಮೆಡ್ವೆಡೆವ್ ನೇತೃತ್ವದ ತಾರಾಗಣದಲ್ಲಿ ಫ್ರೆಂಚ್ ಆಟಗಾರ ಗೆಲ್ ಮೊನ್ಫಿಲ್ಸ್, ಶೋಮ್ಯಾನ್ ನಿಕ್ ಕಿರ್ಗಿಯೊಸ್, ಡೆನಿಸ್ ಶಪೊವಾಲೊವ್, 2025 ಆಸ್ಟ್ರೇಲಿಯನ್ ಓಪನ್ ಸೆಮಿಫೈನಲಿಸ್ಟ್ ಪೌಲಾ ಬಾಡೋಸಾ ಹಾಗೂ ಮಾಜಿ ವಿಶ್ವ ನಂ.3 ಎಲಿನಾ ಸ್ವಿಟೋಲಿನಾ ಸೇರಿದ್ದರು. ಇವರೊಂದಿಗೆ ಎರಡು ಬಾರಿ ಗ್ರ್ಯಾಂಡ್ ಸ್ಲ್ಯಾಮ್ ಡಬಲ್ಸ್ ಚಾಂಪಿಯನ್ ಆಗಿರುವ ಹಾಗೂ ಅತಿದೊಡ್ಡ ವಯಸ್ಸಿನಲ್ಲಿ ಡಬಲ್ಸ್ ವಿಶ್ವ ನಂ.1 ಸ್ಥಾನ ಪಡೆದ ರೋಹನ್ ಬೋಪಣ್ಣ, ಯುಕಿ ಭಾಂಬ್ರಿ, ಸುಮಿತ್ ನಾಗಲ್ ಮತ್ತು ಒಲಿಂಪಿಯನ್ ಅಂಕಿತಾ ರೈನಾ ಕೂಡ ಕೋರ್ಟ್ ಹಂಚಿಕೊಂಡರು.

ಈ ಟೂರ್ನಿ ಧಕ್ಷಿಣೇಶ್ವರ್ ಸುರೇಶ್, ಶ್ರಿವಲ್ಲಿ ಭಾಮಿಡಿಪತಿ, ಸಹಜ ಯಮಲಪಲ್ಲಿ ಮತ್ತು ಮಾಯಾ ರಾಜೇಶ್ವರನ್ ರೇವತಿ ಸೇರಿದಂತೆ ಯುವ ಭಾರತೀಯ ಪ್ರತಿಭೆಗಳಿಗೆ ತಮ್ಮ ಹೀರೋಗಳೊಂದಿಗೆ ಸಂವಾದ ನಡೆಸುವ ಅಪೂರ್ವ ಅವಕಾಶವನ್ನು ನೀಡಿತು.