ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

2026ರ ಪುಣೆ ಗ್ರ್ಯಾಂಡ್ ಟೂರ್‌ಗೆ ಗುಡ್‌ವಿಲ್ ಅಂಬಾಸಿಡರ್ ಆಗಿ ಎಂಎಸ್ ಧೋನಿ ನೇಮಕ!

ಭಾರತ ಕ್ರಿಕೆಟ್‌ ತಂಡದ ಮಾಜಿ ನಾಯಕ ಎಂಎಸ್‌ ಧೋನಿ 2026ರ ಬಜಾಜ್‌ ಪುಣೆ ಗ್ರ್ಯಾಂಡ್‌ ಟೂರ್‌ ಅಂಬಾಸಿಟರ್‌ ಆಗಿ ನೇಮಕಗೊಂಡಿದ್ದಾರೆ. ಜನವರಿ 19 ರಿಂದ 23ರವರಗೆ ಈ ಸ್ಪರ್ಧೆ ನಡೆಯಲಿದೆ. ಈ ಸ್ಪರ್ಧೆಯ ಮೂಲಕ ಭಾರತೀಯ ಸೈಕ್ಲರ್‌ಗಳ ಬೆಳವಣಿಗೆಗೆ ನೆರವು ನೀಡಲಾಗುವುದು.

2026ರ ಪುಣೆ ಗ್ರ್ಯಾಂಡ್ ಟೂರ್‌ಗೆ ಎಂಎಸ್‌ ಧೋನಿ ರಾಯಭಾರಿ!

ಪುಣೆ ಗ್ರ್ಯಾಂಡ್‌ ಟೂರ್‌ಗೆ ಎಂಎಸ್‌ ಧೋನಿ ರಾಯಭಾರಿ. -

Profile
Ramesh Kote Jan 15, 2026 5:27 PM

ಬೆಂಗಳೂರು: ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿಯನ್ನು(MS Dhoni) ಬಹು ನಿರೀಕ್ಷಿತ ಬಜಾಜ್ ಪುಣೆ ಗ್ರ್ಯಾಂಡ್ ಟೂರ್ 2026ರ (Bajaj Pune Grand Tour 2026) ಗುಡ್‌ವಿಲ್ ಅಂಬಾಸಿಡರ್ ಆಗಿ ನೇಮಕ ಮಾಡಲಾಗಿದೆ. ಇದು ಭಾರತದ ಮೊದಲ ಅಂತಾರಾಷ್ಟ್ರೀಯ ಸೈಕ್ಲಿಂಗ್ ರೋಡ್ ರೇಸ್ ಆಗಿದ್ದು, ಜನವರಿ 19ರಿಂದ 23ರವರೆಗೆ ಪುಣೆಯಲ್ಲಿ ನಡೆಯಲಿದೆ. ಭಾರತ ಜಾಗತಿಕ ವೃತ್ತಿಪರ ಸೈಕ್ಲಿಂಗ್ ಕ್ಯಾಲೆಂಡರ್‌ಗೆ ಪ್ರವೇಶಿಸುತ್ತಿರುವ ಮಹತ್ವದ ಸಂದರ್ಭದಲ್ಲಿ ಧೋನಿಯ ಈ ಸಹಭಾಗಿತ್ವ ಬಂದಿದೆ. ಗುಡ್‌ವಿಲ್ ಅಂಬಾಸಿಡರ್ ಆಗಿ, ಬಜಾಜ್ ಪುಣೆ ಗ್ರ್ಯಾಂಡ್ ಟೂರ್ 2026ರ ಮಹತ್ವವನ್ನು ಹೆಚ್ಚಿಸುವುದರೊಂದಿಗೆ, ವಿಶೇಷವಾಗಿ ಯುವ ಕ್ರೀಡಾಪಟುಗಳಲ್ಲಿ ಸೈಕ್ಲಿಂಗ್ ಕುರಿತು ಆಸಕ್ತಿ ಮೂಡಿಸುವಲ್ಲಿ ಧೋನಿ ಪ್ರಮುಖ ಪಾತ್ರ ವಹಿಸಲಿದ್ದಾರೆ.

2026ರ ಬಜಾಜ್ ಪುಣೆ ಗ್ರ್ಯಾಂಡ್ ಟೂರ್ ಭಾರತದ ಮೊದಲ ಯುಸಿಐ 2.2 ವರ್ಗದ, ಐದು ದಿನಗಳ ಬಹು ಹಂತದ ಕಾಂಟಿನೆಂಟಲ್ ರಸ್ತೆ ಸೈಕ್ಲಿಂಗ್ ಸ್ಪರ್ಧೆಯಾಗಿದ್ದು, ಭಾರತವನ್ನು ಜಾಗತಿಕ ವೃತ್ತಿಪರ ಸೈಕ್ಲಿಂಗ್ ವಲಯದಲ್ಲಿ ದೃಢವಾಗಿ ಸ್ಥಾಪಿಸುವ ಉದ್ದೇಶ ಹೊಂದಿದೆ. ಐದು ದಿನಗಳ ಈ ರೇಸ್ 437 ಕಿಮೀ ಹೊಸ ಮಾರ್ಗವನ್ನು ಒಳಗೊಂಡಿದ್ದು, ತೀಕ್ಷ್ಣ ತಿರುವುಗಳು ಮತ್ತು ಸವಾಲಿನ ಏರುಭಾಗಗಳನ್ನು ಹೊಂದಿದೆ. ಈ ಸ್ಪರ್ಧೆಯಲ್ಲಿ 35 ದೇಶಗಳ 29 ತಂಡಗಳಿಂದ 171 ಸೈಕ್ಲಿಸ್ಟ್‌ಗಳು ಭಾಗವಹಿಸಲಿದ್ದಾರೆ.

ವಿರಾಟ್‌ ಕೊಹ್ಲಿ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿದ್ದ ಸಂಜಯ್‌ ಮಾಂಜ್ರೇಕರ್‌ರನ್ನು ಟೀಕಿಸಿದ ಹರ್ಭಜನ್‌ ಸಿಂಗ್‌!

ತಮ್ಮ ಸಹಭಾಗಿತ್ವದ ಬಗ್ಗೆ ಪ್ರತಿಕ್ರಿಯಿಸಿದ ಎಂಎಸ್ ಧೋನಿ, “ಈ ಕ್ರೀಡೆಯನ್ನು ಉತ್ತೇಜಿಸುವ ಸಲುವಾಗಿ ಪುಣೆ ಗ್ರ್ಯಾಂಡ್ ಟೂರ್ ಜೊತೆ ಸಂಬಂಧ ಹೊಂದಿರುವುದಕ್ಕೆ ನನಗೆ ಸಂತೋಷವಾಗಿದೆ. ಪುಣೆ ಗ್ರ್ಯಾಂಡ್ ಟೂರ್ ಮೂಲಕ ಭಾರತ, ವೃತ್ತಿಪರ ಸೈಕ್ಲಿಂಗ್‌ನಲ್ಲಿ ಹೊಸ ಅಧ್ಯಾಯಕ್ಕೆ ಪದಾರ್ಪಣೆ ಮಾಡುತ್ತಿದೆ. ಎಲ್ಲಾ ಸ್ಪರ್ಧಿಗಳಿಗೆ ನಾನು ಶುಭಾಶಯಗಳನ್ನು ಕೋರುತ್ತೇನೆ,” ಎಂದು ಹೇಳಿದರು.

ಅಂತಾರಾಷ್ಟ್ರೀಯ ಸ್ಪರ್ಧೆಯಲ್ಲಿ ಸ್ಪೇನ್‌ನ ಪ್ರೊ ತಂಡ ಬರ್ಗೋಸ್ ಬರ್ಪೆಲೆಟ್ ಬಿಹೆಚ್ (ಯುಸಿಐ ರ್ಯಾಂಕಿಂಗ್‌ನಲ್ಲಿ 25ನೇ ಸ್ಥಾನ) ಅಗ್ರಸ್ಥಾನದಲ್ಲಿದ್ದು, ಚೀನಾದ ಲಿ ನಿಂಗ್ ಸ್ಟಾರ್ (36ನೇ ಸ್ಥಾನ) ಮತ್ತು ಮಲೇಷಿಯಾದ ತೆರೆಂಗಾನು ಸೈಕ್ಲಿಂಗ್ ತಂಡ (37ನೇ ಸ್ಥಾನ)ಗಳು ನಂತರದ ಸ್ಥಾನಗಳಲ್ಲಿ ಇವೆ.

ʻಬಿಗ್‌ಬ್ಯಾಷ್‌ ಲೀಗ್‌ನಲ್ಲಿ ಮೊಹಮ್ಮದ್‌ ರಿಝ್ವಾನ್‌ಗೆ ಅವಮಾನʼ: ಕಮ್ರಾನ್‌ ಅಕ್ಮಲ್‌ ಆಕ್ರೋಶ!

ಭಾರತೀಯ ಸವಾಲಿಗೆ ದೇಶದ ಅತ್ಯಂತ ಪ್ರಶಸ್ತಿ ಪಡೆದ ಸೈಕ್ಲಿಸ್ಟ್ ನವೀನ್ ಜಾನ್ ನೇತೃತ್ವ ವಹಿಸಲಿದ್ದಾರೆ. ಆತಿಥೇಯ ರಾಷ್ಟ್ರ ಭಾರತ ತನ್ನ ಎರಡನೇ ತಂಡವಾದ ಇಂಡಿಯನ್ ಡೆವಲಪ್‌ಮೆಂಟ್ ತಂಡವನ್ನೂ ಕಣಕ್ಕಿಳಿಸಲಿದೆ. ಈ ಮೂಲಕ ನಾಲ್ಕು ಬದಲಿ ಆಟಗಾರರನ್ನು ಸೇರಿಸಿ ಒಟ್ಟು 12 ಭಾರತೀಯ ಸವಾರರಿಗೆ, ಭಾರತದ ಮೊದಲ ಯುಸಿಐ 2.2 ಸ್ಪರ್ಧೆಯಲ್ಲಿ ಗೃಹ ಪರಿಸ್ಥಿತಿಗಳಲ್ಲೇ ತಮ್ಮ ಸಾಮರ್ಥ್ಯವನ್ನು ಸಾಬೀತುಪಡಿಸುವ ಅವಕಾಶ ದೊರೆಯಲಿದೆ.