ಬಿಗ್​ಬಾಸ್ ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ಬೆಂಗಳೂರಿನ ಪಿಇಎಸ್‌ ವಿದ್ಯಾರ್ಥಿ ನವೀನ್‌ಗೆ ರಾಷ್ಟ್ರೀಯ ಪ್ಯಾರಾ ಈಜು ಸ್ಪರ್ಧೆಯಲ್ಲಿ ಚಿನ್ನ!

ಬೆಂಗಳೂರಿನಲ್ಲಿರುವ ಪಿಇಎಸ್‌ ವಿಶ್ವವಿದ್ಯಾನಿಲಯದ ಎಂಬಿಎ ವಿದ್ಯಾರ್ಥಿ ನವೀನ್‌ ವೆಂಕಟೇಶ್‌ ಅವರು ಹೈದರಾಬಾದ್‌ನ ಗಚ್ಚಿಬೋಲಿಯಲ್ಲಿ ನಡೆದಿದ್ದ 25ನೇ ರಾಷ್ಟ್ರೀಯ ಪ್ಯಾರಾ ಈಜು ಸ್ಪರ್ಧೆಯಲ್ಲಿ ಚಿನ್ನದ ಪದಕವನ್ನು ಗೆದ್ದುಕೊಂಡಿದ್ದಾರೆ. ಚಿನ್ನ ಸೇರಿದಂತೆ ಒಟ್ಟು ಮೂರು ಪದಕಗಳನ್ನು ತನ್ನದಾಗಿಸಿಕೊಂಡಿದ್ದಾರೆ.

ನವೀನ್‌ಗೆ ರಾಷ್ಟ್ರೀಯ ಪ್ಯಾರಾ ಈಜು ಸ್ಪರ್ಧೆಯಲ್ಲಿ  ಚಿನ್ನ!

25ನೇ ರಾಷ್ಟ್ರೀಯ ಪ್ಯಾರಾ ಈಜು ಸ್ಪರ್ಧೆಯಲ್ಲಿ ನವೀನ್‌ಗೆ ಚಿನ್ನ. -

Profile
Ramesh Kote Nov 24, 2025 9:09 PM

ಬೆಂಗಳೂರು: ನಗರದ ಪಿಇಎಸ್‌ ವಿಶ್ವವಿದ್ಯಾಲಯದ ವಿದ್ಯಾರ್ಥಿ ನವೀನ್‌ ವೆಂಕಟೇಶ್‌ (Naveen Venkatesh) ಅವರು 25ನೇ ರಾಷ್ಟ್ರೀಯ ಪ್ಯಾರಾ ಈಜು ಸ್ಪರ್ಧೆಯಲ್ಲಿ (25th National Para Swimming Championship) ಒಟ್ಟು ಮೂರು ಪದಕಗಳನ್ನು ಗೆದ್ದಿದ್ದಾರೆ. ಇದರಲ್ಲಿ ಅವರು ಒಂದು ಚಿನ್ನ, ಒಂದು ಬೆಳ್ಳಿ ಹಾಗೂ ಒಂದು ಕಂಚಿನ ಪದಕವನ್ನು ತನ್ನದಾಗಿಸಿಕೊಂಡಿದ್ದಾರೆ. ಹೈದರಾಬಾದ್‌ನ ಗಚಿಬೋಲಿಯಲ್ಲಿ ನಡೆದಿದ್ದ ಈ ಸ್ಪರ್ಧೆಯಲ್ಲಿ ಕನ್ನಡಿಗ ಈ ಸಾಧನೆ ಮಾಡಿದ್ದಾರೆ. 200 ಮೀಟರ್‌ ವೈಯಕ್ತಿಕ ಮೆಡ್ಲೆ ವಿಭಾಗದಲ್ಲಿ ಚಿನ್ನದ ಪದಕವನ್ನು ಗೆದ್ದಿದ್ದಾರೆ. 100 ಮೀಟರ್‌ ಬಟರ್‌ಪ್ಲೇ ಸ್ಪರ್ಧೆಯಲ್ಲಿ ಬೆಳ್ಳಿ ಪದಕ ಮತ್ತು 50 ಮೀಟರ್‌ ಬಟರ್‌ಪ್ಲೇನಲ್ಲಿ ಕಂಚಿನ ಪದಕವನ್ನು ತನ್ನದಾಗಿಸಿಕೊಂಡಿದ್ದಾರೆ.

ರಾಷ್ಟ್ರೀಯ ಪ್ಯಾರಾ ಈಜು ಸ್ಪರ್ಧೆಯಲ್ಲಿ ಮೂರು ಪದಕಗಳನ್ನು ಗೆದ್ದಿರುವ ಪಿಇಎಸ್‌ ವಿಶ್ವವಿದ್ಯಾಲಯದ ಎಂಬಿಎ ಎರಡನೇ ವರ್ಷದ ವಿದ್ಯಾರ್ಥಿ ನವೀನ್‌ ವೆಂಕಟೇಶ್‌ ಅವರನ್ನು ಪಿಇಎಸ್‌ನ ಗೌರವಾನ್ವಿತ ಕುಲಪತಿ ಪ್ರೊ. ಜವಾಹರ್ ದೊರೆಸ್ವಾಮಿ ಮತ್ತು ಕುಲಪತಿ ಪ್ರೊ. ಜೆ. ಸೂರ್ಯ ಪ್ರಸಾದ್ ಅವರು ಅಭಿನಂದಿಸಿದ್ದಾರೆ. ಇದು ಅವರ ಯಶಸ್ವಿ ಪ್ರಯಾಣದಲ್ಲಿ ಒಂದು ಮೈಲುಗಲ್ಲು ಎಂದು ಗುರುತಿಸಿದ್ದಾರೆ.