ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

World Championships: ಸೋಫಿಯಾ ನೋಬೆಲ್‌ ವಿರುದ್ಧ ಗೆದ್ದ ಪಿವಿ ಸಿಂಧೂಗೆ ಶುಭಾರಂಭ!

ಭಾರತದ ಸ್ಟಾರ್ ಬ್ಯಾಡ್ಮಿಂಟನ್ ಆಟಗಾರ್ತಿ ಪಿವಿ ಸಿಂಧು ಪ್ರಸ್ತುತ ನಡೆಯುತ್ತಿರುವ 2026ರ ಬ್ಯಾಡ್ಮಿಂಟನ್ ವಿಶ್ವ ಚಾಂಪಿಯನ್‌ಶಿಪ್ ಮೊದಲ ಸುತ್ತಿನಲ್ಲಿ ಅದ್ಭುತ ಪ್ರದರ್ಶನ ನೀಡಿದ್ದಾರೆ. ಐರ್ಲೆಂಡ್‌ನ ಸೋಫಿಯಾ ನೋಬಲ್ ಅವರನ್ನು ಮಣಿಸಿದ ಸಿಂಧು, ಟೂರ್ನಿಯ ರೌಂಡ್ ಆಫ್ 32 ಹಂತಕ್ಕೆ ಅರ್ಹತೆ ಪಡೆದಿದ್ದಾರೆ.

ಸೋಫಿಯಾ ನೋಬೆಲ್‌ ವಿರುದ್ಧ ಗೆದ್ದ ಪಿವಿ ಸಿಂಧೂಗೆ ಶುಭಾರಂಭ!

ವಿಶ್ವ ಬ್ಯಾಡ್ಮಿಂಟನ್‌ಷಿಪ್ಸ್‌ನಲ್ಲಿ ಪಿವಿ ಸಿಂಧೂಗೆ ಶುಭಾರಂಭ. -

Profile
Ramesh Kote Aug 17, 2026 10:40 PM

ನವದೆಹಲಿ: ಭಾರತದ ಸ್ಟಾರ್ ಶಟ್ಲರ್ ಪಿವಿ ಸಿಂಧೂ (PV Sindhu) 2026ರಲ್ಲಿ ಬ್ಯಾಡ್ಮಿಂಟನ್ ವಿಶ್ವ ಚಾಂಪಿಯನ್‌ಶಿಪ್ (Badminton World Championships) ಭರ್ಜರಿ ಆರಂಭ ಪಡೆದಿದ್ದಾರೆ. ಆಗಸ್ಟ್ 17ರಂದು ಇಲ್ಲಿನ ಇಂದಿರಾ ಗಾಂಧಿ ಒಳಾಂಗಣ ಕ್ರೀಡಾಂಗಣದಲ್ಲಿ ನಡೆದಿದ್ದ ಮೊದಲ ಸುತ್ತಿನ ಪಂದ್ಯದಲ್ಲಿ ಐರ್ಲೆಂಡ್‌ನ ಸೋಫಿಯಾ ನೋಬಲ್ (Sophia Noble) ಅವರನ್ನು ನೇರ ಗೇಮ್‌ಗಳಲ್ಲಿ ಮಣಿಸಿದರು. ಐದು ಬಾರಿ ವಿಶ್ವ ಚಾಂಪಿಯನ್‌ಶಿಪ್ ಪದಕ ಗೆದ್ದಿರುವ ಸಿಂಧೂ, ನೋಬಲ್ ವಿರುದ್ಧ 21-7, 21-11 ಅಂತರದಲ್ಲಿ ಗೆದ್ದು 32ನೇ ಹಂತಕ್ಕೆ ಲಗ್ಗೆ ಇಟ್ಟಿದ್ದಾರೆ.

ಕೇವಲ 29 ನಿಮಿಷಗಳಲ್ಲಿ ಪಂದ್ಯ ಮುಗಿಸಿದ ಸಿಂಧೂ ಆರಂಭದಿಂದಲೇ ಸಂಪೂರ್ಣ ಹಿಡಿತ ಸಾಧಿಸಿದರು. ಮೊದಲ ಗೇಮ್‌ನಲ್ಲಿ 8-0 ಮುನ್ನಡೆ ಪಡೆದ ಅವರು, ನಂತರವೂ ತಮ್ಮ ಪ್ರಾಬಲ್ಯವನ್ನು ಮುಂದುವರಿಸಿದರು. ವಿಶ್ವ ರ‍್ಯಾಂಕಿಂಗ್‌ನಲ್ಲಿ 141ನೇ ಸ್ಥಾನದಲ್ಲಿರುವ ನೋಬಲ್, ಸಿಂಧು ಅವರ ವೇಗ ಮತ್ತು ಆಟದ ಗುಣಮಟ್ಟಕ್ಕೆ ಮಣಿದರು. ಸಿಂಧೂ ಅವರ ತಾಳ್ಮೆ, ಸ್ಥಿರತೆ ಹಾಗೂ ಒತ್ತಡದ ಸಂದರ್ಭದಲ್ಲೂ ಪ್ರದರ್ಶಿಸಿದ ಮಾನಸಿಕ ದೃಢತೆ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿತು. ಈ ಸುಲಭ ಗೆಲುವಿನೊಂದಿಗೆ ಸಿಂಧೂ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ತಮ್ಮ ಪದಕದ ಬೇಟೆಯನ್ನು ಮುಂದುವರಿಸಿದ್ದಾರೆ.

BWF World Championships: ವಿಶ್ವದ ನಂ 1 ಶಿ ಯುಕಿಗೆ ಚಳ್ಳೆ ಹಣ್ಣು ತಿನ್ನಿಸಿದ ಕನ್ನಡಿಗ ಆಯುಷ್‌ ಶೆಟ್ಟಿ!

ಬ್ಯಾಡ್ಮಿಂಟನ್ ವಿಶ್ವ ಚಾಂಪಿಯನ್‌ಶಿಪ್ ಆರಂಭಕ್ಕೂ ಮುನ್ನ ಭಾರತದ ಸ್ಟಾರ್ ಶಟ್ಲರ್ ಪಿವಿ ಸಿಂಧೂ ತಮ್ಮ ಗುರಿ ಮತ್ತು ಆಶಯಗಳ ಬಗ್ಗೆ ಮಾತನಾಡಿದ್ದಾರೆ. ವೃತ್ತಿಜೀವನದ ಕೊನೆಯ ಹಂತದಲ್ಲಿದ್ದರೂ ತಮ್ಮ ಗೆಲುವಿನ ಹಸಿವು ಇನ್ನೂ ಕಡಿಮೆಯಾಗಿಲ್ಲ ಎಂದು ಸಿಂಧೂ ಹೇಳಿದ್ದಾರೆ. ಟೂರ್ನಿಯಲ್ಲಿ ಸಂಪೂರ್ಣವಾಗಿ ಮುನ್ನಡೆದು ಮತ್ತೊಮ್ಮೆ ವಿಶ್ವ ಚಾಂಪಿಯನ್‌ಶಿಪ್ ಪ್ರಶಸ್ತಿ ಗೆಲ್ಲುವ ಗುರಿಯನ್ನು ಅವರು ಹೊಂದಿದ್ದಾರೆ.

“ಇದು ಭಾರತದಲ್ಲಿ ನಡೆಯುತ್ತಿರುವುದರಿಂದ ಖಂಡಿತವಾಗಿಯೂ ನನಗೆ ತುಂಬಾ ವಿಶೇಷವಾಗಿದೆ. ನಾನು 2019ರಲ್ಲಿ ವಿಶ್ವ ಚಾಂಪಿಯನ್‌ಶಿಪ್ ಗೆದ್ದಿದ್ದೆ. ಇದಾದ ಬಳಿಕ ಸುಮಾರು ಏಳು ವರ್ಷಗಳಾಗಿವೆ. ಜಪಾನ್ ಓಪನ್ ನನಗೆ ಸಾಕಷ್ಟು ಆತ್ಮವಿಶ್ವಾಸ ನೀಡಿದೆ. ಆ ಆತ್ಮವಿಶ್ವಾಸವನ್ನು ಇಲ್ಲಿಯೂ ಮುಂದುವರಿಸಿಕೊಂಡು ಹೋಗಲು ಆಶಿಸುತ್ತೇನೆ. ಎಲ್ಲವೂ ಉತ್ತಮವಾಗಿ ಸಾಗುತ್ತಿದೆ. ನನ್ನ ಪಾಲಿಗೆ ಸದ್ಯಕ್ಕೆ ಒಂದು ಪಂದ್ಯ, ಒಂದು ಸಮಯ ಎಂಬುದಷ್ಟೇ ಮುಖ್ಯ,” ಎಂದು ಸಿಂಧು ರೆವ್‌ಸ್ಪೋರ್ಟ್ಸ್‌ಗೆ ತಿಳಿಸಿದ್ದಾರೆ.

ಮಹಿಳಾ ಹಾಕಿ ವಿಶ್ವಕಪ್; ಉದ್ಘಾಟನಾ ಪಂದ್ಯದಲ್ಲಿ ಚೀನಾ ವಿರುದ್ಧ 2-2 ಅಂತರದ ಡ್ರಾ ಸಾಧಿಸಿದ ಭಾರತ

ವಿಶ್ವ ಚಾಂಪಿಯನ್‌ಶಿಪ್ ಭಾರತದಲ್ಲಿ ನಡೆಯುತ್ತಿರುವುದಕ್ಕೆ ಸಂತಸ ವ್ಯಕ್ತಪಡಿಸಿರುವ ಪಿ.ವಿ. ಸಿಂಧು, ತವರಿನ ಪ್ರೇಕ್ಷಕರಿಂದ ಉತ್ತಮ ಬೆಂಬಲ ದೊರೆಯುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

“ಭಾರತೀಯ ಪ್ರೇಕ್ಷಕರಿಂದ ನನಗೆ ಸಾಕಷ್ಟು ಬೆಂಬಲ ಸಿಗುತ್ತದೆ ಎಂದು ಆಶಿಸುತ್ತೇನೆ. ವಿಶ್ವ ಚಾಂಪಿಯನ್‌ಶಿಪ್ ಭಾರತದಲ್ಲಿ ನಡೆಯುತ್ತಿರುವುದು ಮತ್ತು ತವರಿನ ನೆಲದಲ್ಲೇ ಆಡಲು ಅವಕಾಶ ಸಿಕ್ಕಿರುವುದು ನನಗೆ ತುಂಬಾ ಸಂತೋಷ ತಂದಿದೆ. ಇಲ್ಲಿಯೂ ನಾನು ಪದಕ ಗೆಲ್ಲಲು ಸಾಧ್ಯವಾಗುತ್ತದೆ ಎಂದು ಆಶಿಸುತ್ತೇನೆ,” ಎಂದು ಸಿಂಧೂ ಹೇಳಿದ್ದಾರೆ.