ವಿನೇಶ ಫೋಗಟ್‌ಗೆ ಟ್ರಯಲ್ಸ್‌ನಲ್ಲಿ ಭಾಗವಹಿಸಲು ಅವಕಾಶ ನೀಡಿ: ಪಿಎಂ ಮೋದಿಗೆ ಸಾಕ್ಷಿ ಮಲಿಕ್ ಮನವಿ!
ಉತ್ತರ ಪ್ರದೇಶದ ಗೊಂಡಾದಲ್ಲಿ ಪ್ರಸ್ತುತ ನಡೆಯುತ್ತಿರುವ ರಾಷ್ಟ್ರೀಯ ಓಪನ್ ಶ್ರೇಯಾಂಕ ಕುಸ್ತಿ ಟೂರ್ನಿಯಲ್ಲಿ ಭಾಗವಹಿಸಲಿ ವಿನೇಶ್ ಫೋಗಟ್‌ಗೆ ಅವಕಾಶ ಕಲ್ಪಿಸಬೇಕೆಂದು ಒಲಿಂಪಿಕ್ಸ್ ಕಂಚಿನ ಪದಕ ವಿಜೇತೆ ಸಾಕ್ಷಿ ಮಲಿಕ್, ಪ್ರಧಾನಿ ನರೇಂದ್ರ ಮೋದಿ ಹಾಗೂ ಕ್ರೀಡಾ ಸಚಿವರಿಗೆ ಮನವಿ ಮಾಡಿದ್ದಾರೆ. ಅವರು ಹಂಚಿಕೊಂಡಿರುವ ವಿಡಿಯೊದಲ್ಲಿ ಮನವಿ ಮಾಡಿಕೊಂಡಿದ್ದಾರೆ. ಆದರೆ, ವಿನೇಶ್ ಫೋಗಟ್ ಅವರು ಸದ್ಯ ನಿಷೇಧದ ಶಿಕ್ಷೆಗೆ ಗುರಿಯಾಗಿದ್ದಾರೆ.
ವಿನೇಶ್ ಫೋಗಟ್ ಪರ ಬ್ಯಾಟ್ ಬೀಸಿದ ಸಾಕ್ಷಿ ಮಲಿಕ್. -
ನವದೆಹಲಿ: ಮಾಜಿ ಕುಸ್ತಿಪಟು ಸಾಕ್ಷಿ ಮಲಿಕ್ ಅವರು ಭಾರತೀಯ ಕುಸ್ತಿ ಒಕ್ಕೂಟ (WFI) ವಿನೇಶ್ ಫೋಗಟ್ ಅವರಿಗೆ ಕಳುಹಿಸಿರುವ 'ಶೋ-ಕಾಸ್ ನೋಟಿಸ್' ಹಾಗೂ ಜೂನ್ 26 ರವರೆಗೆ ಸ್ಪರ್ಧಿಸದಂತೆ ನಿಷೇಧ ಹೇರಿರುವ ಬಗ್ಗೆ ಹೇಳಿಕೆ ನೀಡಿದ್ದಾರೆ. ವಿನೇಶ್ ಅವರು ಟ್ರಯಲ್ಸ್‌ಗೆ ಹಾಜರಾಗುವುದನ್ನು ತಡೆಯದಂತೆ ನೋಡಿಕೊಳ್ಳುವಂತೆ ಸಾಕ್ಷಿ ಮಲಿಕ್ ಅವರು, ಪ್ರಧಾನಿ ನರೇಂದ್ರ ಮೋದಿ ಮತ್ತು ಕ್ರೀಡಾ ಸಚಿವರಿಗೆ ಮನವಿ ಮಾಡಿಕೊಂಡಿದ್ದಾರೆ.
ಸಾಮಾಜಿಕ ಮಾಧ್ಯಮದಲ್ಲಿ ವಿಡಿಯೊ ಹಂಚಿಕೊಂಡಿರುವ ಸಾಕ್ಷಿ, "ಕಳೆದ ಕೆಲವು ದಿನಗಳಿಂದ ವಿನೇಶ್ ಅವರ ಟ್ರಯಲ್ಸ್‌ಗೆ ಸಂಬಂಧಿಸಿದ ವಿವಾದದ ಕುರಿತು ಮಾಧ್ಯಮಗಳು ನನ್ನ ಅಭಿಪ್ರಾಯವನ್ನು ಕೇಳುತ್ತಿವೆ. ಕಳೆದ ಎರಡು ಅಥವಾ ಮೂರು ದಿನಗಳಿಂದ ನಾನು ಈ ವಿಷಯದ ಬಗ್ಗೆ ಚರ್ಚಿಸುತ್ತಿದ್ದೇನೆ, ಮುಖ್ಯವಾಗಿ ವಿನೇಶ್ ರಾಜಕೀಯ ಪಕ್ಷವನ್ನು ಪ್ರತಿನಿಧಿಸುವ ಶಾಸಕಿ, ಆದರೆ ನನಗೆ ಯಾವುದೇ ರಾಜಕೀಯ ಪಕ್ಷದೊಂದಿಗೆ ಯಾವುದೇ ಸಂಬಂಧವಿಲ್ಲ. ಇತರ ದೇಶಗಳಲ್ಲಿನ ಕ್ರೀಡಾ ಒಕ್ಕೂಟಗಳು ತಮ್ಮ ಕ್ರೀಡಾಪಟುಗಳಿಗಾಗಿ ತಮ್ಮ ನಿಯಮಗಳನ್ನು ಸಡಿಲಗೊಳಿಸಿರುವ ಹಲವಾರು ಉದಾಹರಣೆಗಳನ್ನು ನಾನು ಉಲ್ಲೇಖಿಸಬಹುದು, ಇದರಿಂದಾಗಿ ಮಹಿಳೆಯರು ತಾಯಂದಿರಾದ ನಂತರವೂ ತಮ್ಮ ರಾಷ್ಟ್ರಕ್ಕಾಗಿ ಸ್ಪರ್ಧಿಸುವುದನ್ನು ಮುಂದುವರಿಸಲು ಮತ್ತು ಪದಕಗಳನ್ನು ಗೆಲ್ಲಲು ಅನುವು ಮಾಡಿಕೊಡುತ್ತದೆ," ಎಂದರು.
ರೋಮ್ ಡೈಮಂಡ್ ಲೀಗ್‌ನಿಂದ ಹೊರಗುಳಿದ ನೀರಜ್ ಚೋಪ್ರಾ; ಸಚಿನ್ ಯಾದವ್ ಪದಾರ್ಪಣೆ
"ಇದರ ನಡುವೆ, ವಿನೇಶ್ ಫೋಗರ್ ಮತ್ತೆ ಬರದಂತೆ ತಡೆಯಲು ನಮ್ಮ ಫೆಡರೇಶನ್ ಕೇವಲ ಎರಡು ದಿನಗಳ ಹಿಂದೆ ನಿಯಮಗಳನ್ನು ಜಾರಿಗೆ ತಂದಿತು. ವಿನೇಶ್ ಕೂಡ ಪದಕ ಗೆದ್ದು ರಾಷ್ಟ್ರಕ್ಕೆ ಕೀರ್ತಿ ತರುವಂತೆ ವಿನೇಶ್‌ಗಾಗಿ ಟ್ರಯಲ್ ನಡೆಸುವಂತೆ ನಾನು ಪ್ರಧಾನಿ, ಕ್ರೀಡಾ ಸಚಿವರು ಮತ್ತು ಫೆಡರೇಶನ್‌ಗೆ ಮನವಿ ಮಾಡುತ್ತೇನೆ. ಇದಲ್ಲದೆ, ನಮ್ಮ ದೇಶದಲ್ಲಿಯೂ ಮಹಿಳೆಯರು ತಾಯಂದಿರಾದ ನಂತರವೂ ಕ್ರೀಡೆಗಳಲ್ಲಿ ಸ್ಪರ್ಧಿಸುವುದನ್ನು ಮುಂದುವರಿಸಬಹುದು ಮತ್ತು ರಾಷ್ಟ್ರವನ್ನು ಗೌರವಿಸಲು ಪದಕಗಳನ್ನು ಗೆಲ್ಲಬಹುದು ಎಂಬುದನ್ನು ಪ್ರದರ್ಶಿಸಲು ಇದು ಅವರಿಗೆ ಒಂದು ಉದಾಹರಣೆಯಾಗಲು ಅನುವು ಮಾಡಿಕೊಡುತ್ತದೆ," ಎಂದು ಸಾಕ್ಷಿ ಮಲಿಕ್ ತಿಳಿಸಿದ್ದಾರೆ.
ಶನಿವಾರ, ಭಾರತೀಯ ಕುಸ್ತಿ ಒಕ್ಕೂಟ (WFI) ವಿನೇಶ್ ಫೋಗಟ್‌ಗೆ ಶೋ-ಕಾಸ್ ನೋಟಿಸ್ ನೀಡಿದೆ. ನೋಟಿಸ್‌ನಲ್ಲಿ ಡಬ್ಲ್ಯುಎಫ್‌ಐ ವಿನೇಶ್ ಅಶಿಸ್ತು ಮತ್ತು ಡೋಪಿಂಗ್ ವಿರೋಧಿ ನಿಯಮಗಳ ಉಲ್ಲಂಘನೆಗಾಗಿ ಆರೋಪಿಸಿದೆ, ನಾಲ್ಕು ನಿರ್ದಿಷ್ಟ ಆರೋಪಗಳಿಗೆ ಪ್ರತಿಕ್ರಿಯೆ ನೀಡುವಂತೆ ಕೋರಿದೆ. ಆದೇಶ ಹೊರಡಿಸುವಾಗ, WFI ಜೂನ್ 26, 2026 ರವರೆಗೆ ಯಾವುದೇ ದೇಶಿ ಟೂರ್ನಿಗಳಲ್ಲಿ ಭಾಗವಹಿಸದಂತೆ ವಿನೇಶ್ ಅವರನ್ನು ನಿಷೇಧಿಸಲಾಗುವುದು ಎಂದು ಹೇಳಿದೆ.
Olympic Medalist Sakshi Malik on Vinesh Phogat
— The Khel India (@TheKhelIndia) May 12, 2026
"I would request the Prime Minister, the Sports Minister and the WFI to take Vinesh's trial so that she can also win medals for the country and be an example for women by winning medals after becoming a mother,” pic.twitter.com/TMr4M7NvSI
ವಿನೇಶ್ ಫೊಗಟ್ ಡೋಪಿಂಗ್ ವಿರೋಧಿ ನಿಯಮಗಳನ್ನು ಪಾಲಿಸಲು ವಿಫಲರಾಗಿದ್ದಾರೆ; ಪರಿಣಾಮವಾಗಿ, ನಿವೃತ್ತಿಯಿಂದ ಹಿಂತಿರುಗುವ ಕುಸ್ತಿಪಟು ಕಡ್ಡಾಯವಾಗಿ ಆರು ತಿಂಗಳ ನೋಟಿಸ್ ಅವಧಿಯನ್ನು ಪೂರ್ಣಗೊಳಿಸಬೇಕಾಗುತ್ತದೆ, ಈ ಅವಧಿಯಲ್ಲಿ ಅವರು ಯಾವುದೇ ಟೂರ್ನಿಗಳಲ್ಲಿ ಭಾಗವಹಿಸಲು ಅನರ್ಹರಾಗುತ್ತಾರೆ. ಭಾರತೀಯ ಕುಸ್ತಿ ಒಕ್ಕೂಟದ ನಿರ್ಧಾರದ ಪರಿಣಾಮವಾಗಿ, ಉತ್ತರ ಪ್ರದೇಶದ ಗೊಂಡಾದಲ್ಲಿ ಪ್ರಸ್ತುತ ನಡೆಯುತ್ತಿರುವ ರಾಷ್ಟ್ರೀಯ ಓಪನ್ ಶ್ರೇಯಾಂಕ ಕುಸ್ತಿ ಟೂರ್ನಿಯಲ್ಲಿ ವಿನೇಶ್ ಸ್ಪರ್ಧಿಸಲು ಸಾಧ್ಯವಾಗುವುದಿಲ್ಲ. ಈ ಟೂರ್ನಿಯು ವಿನೇಶ್ ಅವರ ಮರಳುವಿಕೆಯನ್ನು ಗುರುತಿಸುತ್ತದೆ ಎಂದು ವ್ಯಾಪಕವಾಗಿ ನಿರೀಕ್ಷಿಸಲಾಗಿತ್ತು.