ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

Asian Games 2026: ಭಾರತ 4x400ಮೀ ಮಹಿಳಾ ರಿಲೇ ತಂಡಕ್ಕೆ ಚಿನ್ನದ ಪದಕ!

ಕಿರಣ್ ಪಹಲ್, ಪೂವಮ್ಮ ಮಚ್ಚೆಟ್ಟಿರ, ಪ್ರಾಚಿ ಹಾಗೂ ವಿದ್ಯಾ ರಾಮರಾಜ್ ಅವರನ್ನೊಳಗೊಂಡ ಭಾರತ ಅಥ್ಲಿಟಿಕ್ಸ್‌ ತಂಡ ಏಷ್ಯನ್ ಗೇಮ್ಸ್ 2026ರ ಮಹಿಳೆಯರ 4x400 ಮೀಟರ್ ರಿಲೇಯಲ್ಲಿ ಚಿನ್ನ ಗೆದ್ದಿತು. 3:29.69 ನಿಮಿಷಗಳಲ್ಲಿ ಓಟ ಪೂರ್ಣಗೊಳಿಸಿ, ಬಹ್ರೇನ್ ಮತ್ತು ಚೀನಾ ತಂಡಗಳನ್ನು ಹಿಂದಿಕ್ಕಿತು. ಏಷ್ಯಾ ಗೇಮ್ಸ್‌ನಲ್ಲಿ ಅಥ್ಲೆಟಿಕ್ಸ್‌ನಲ್ಲಿ ಭಾರತಕ್ಕೆ ಇದು ಮೊದಲ ಚಿನ್ನದ ಪದಕವಾಗಿದೆ.

ಭಾರತ ಮಹಿಳಾ ರಿಲೇ ತಂಡಕ್ಕೆ ಚಿನ್ನದ ಪದಕ.

ನವದೆಹಲಿ: ಜಪಾನ್‌ ಆತಿಥ್ಯದಲ್ಲಿ ನಡೆಯುತ್ತಿರುವ 2026ರ ಏಷ್ಯಾ ಕ್ರೀಡಾಕೂಟದಲ್ಲಿ (Asian Games 2026) ಭಾರತೀಯ ಮಹಿಳಾ ಅಥ್ಲೆಟಿಕ್ಸ್ ತಂಡ (India's Women’s 4x400m relay team) ಐತಿಹಾಸಿಕ ಸಾಧನೆ ಮಾಡಿದೆ. ಮಹಿಳೆಯರ 4x400 ಮೀಟರ್ ರಿಲೇ ಸ್ಪರ್ಧೆಯಲ್ಲಿ ಕಿರಣ್ ಪಹಲ್, ಪೂವಮ್ಮ ಮಚ್ಚೆಟ್ಟಿರ, ಪ್ರಾಚಿ ಮತ್ತು ವಿದ್ಯಾ ರಾಮರಾಜ್ ಅವರನ್ನೊಳಗೊಂಡ ಭಾರತ ತಂಡ ಚಿನ್ನದ ಪದಕ ಗೆದ್ದಿದೆ. ಭಾರತ 3:29.69 ನಿಮಿಷಗಳಲ್ಲಿ ಓಟ ಪೂರ್ಣಗೊಳಿಸಿ ಅಗ್ರಸ್ಥಾನ ಪಡೆದಿದೆ. ಭಾರತದ ಈ ಗೆಲುವಿನೊಂದಿಗೆ 2026ರ ಏಷ್ಯನ್ ಗೇಮ್ಸ್ ಅಥ್ಲೆಟಿಕ್ಸ್ ವಿಭಾಗದಲ್ಲಿ ಮೊದಲ ಚಿನ್ನದ ಪದಕ ಒಲಿದಿದೆ. ಬಹ್ರೇನ್ ತಂಡ 3:30.21 ನಿಮಿಷಗಳಲ್ಲಿ ಓಟ ಮುಗಿಸಿ ಬೆಳ್ಳಿ ಪದಕ ಗೆದ್ದರೆ, ಚೀನಾ 3:31.02 ಸಮಯದೊಂದಿಗೆ ಕಂಚಿನ ಪದಕಕ್ಕೆ ತೃಪ್ತಿಪಟ್ಟಿತು.

ಓಟದ ಆರಂಭದಲ್ಲಿ ಕಿರಣ್ ಪಹಲ್ ಮೂರನೇ ಸ್ಥಾನದಲ್ಲಿ ಬ್ಯಾಟನ್ ಅನ್ನು ಹಸ್ತಾಂತರಿಸಿದರು. ಬಳಿಕ ಅನುಭವಿ ಪೂವಮ್ಮ ಮಚ್ಚೆಟ್ಟಿರ ಅತ್ಯುತ್ತಮ ಓಟದ ಮೂಲಕ ಭಾರತವನ್ನು ಮುನ್ನಡೆಗೆ ತಂದರು. ಪ್ರಾಚಿ ಕೂಡ ತಂಡದ ಮುನ್ನಡೆಯನ್ನು ಕಾಯ್ದುಕೊಂಡರು. ಅಂತಿಮ ಹಂತದಲ್ಲಿ ವಿದ್ಯಾ ರಾಮರಾಜ್ ಬ್ಯಾಟನ್ ಪಡೆದು ಬಹ್ರೇನ್‌ನ ಈದ್ ನಾಸರ್ ಅವರ ಸವಾಲನ್ನು ಹಿಮ್ಮೆಟ್ಟಿಸಿ ಭಾರತಕ್ಕೆ ಚಿನ್ನ ಖಚಿತಪಡಿಸಿದರು.

Asian Games 2026: 5000 ಮೀಟರ್‌ ಓಟದಲ್ಲಿ ಕಂಚು, ಗುಲ್ವೀರ್‌ ಸಿಂಗ್‌ ಹ್ಯಾಟ್ರಿಕ್‌ ಸಾಧನೆ!

ವಿದ್ಯಾ ರಾಮರಾಜ್ ಅವರಿಗೆ ಈ ಚಿನ್ನದ ಪದಕ ವಿಶೇಷ ಸಾಧನೆಯಾಗಿದೆ. ಇದಕ್ಕೂ ಮೊದಲು ಅವರು ಮಿಶ್ರ 4x400 ಮೀಟರ್ ರಿಲೇಯಲ್ಲಿ ಬೆಳ್ಳಿ ಮತ್ತು ಮಹಿಳೆಯರ 400 ಮೀಟರ್ ಹರ್ಡಲ್ಸ್‌ನಲ್ಲಿ ಕಂಚಿನ ಪದಕ ಗೆದ್ದಿದ್ದರು. ಹರ್ಡಲ್ಸ್‌ನಲ್ಲಿ 54.75 ಸೆಕೆಂಡ್‌ಗಳ ಸಮಯದೊಂದಿಗೆ ಓಡಿ ಪಿಟಿ ಉಷಾ ಅವರ 42 ವರ್ಷಗಳ ರಾಷ್ಟ್ರೀಯ ದಾಖಲೆಯನ್ನು ಮುರಿದಿದ್ದರು. ಇದೀಗ 4x400 ಮೀಟರ್ ರಿಲೇಯಲ್ಲಿ ಚಿನ್ನ ಗೆದ್ದು ಈ ಕ್ರೀಡಾಕೂಟದಲ್ಲಿ ತಮ್ಮ ಮೂರನೇ ಪದಕವನ್ನು ಸಂಪಾದಿಸಿದ್ದಾರೆ.



ಅನುಭವಿ ಪೂವಮ್ಮ ಮಚ್ಚೆಟ್ಟಿರ ಅವರಿಗೂ ಈ ಚಿನ್ನ ವಿಶೇಷವಾಗಿದೆ. ಅವರು ಈ ಹಿಂದೆ 2014 ಮತ್ತು 2018ರ ಏಷ್ಯನ್ ಗೇಮ್ಸ್‌ನಲ್ಲಿ ಮಹಿಳೆಯರ 4x400 ಮೀಟರ್ ರಿಲೇಯಲ್ಲಿ ಚಿನ್ನ ಗೆದ್ದಿದ್ದರು. ಇದೀಗ ಮತ್ತೊಮ್ಮೆ ಭಾರತ ತಂಡದ ಭಾಗವಾಗಿ ಚಿನ್ನದ ಪದಕ ಗೆದ್ದು ತಮ್ಮ ಸಾಧನೆಗೆ ಮತ್ತೊಂದು ಅಧ್ಯಾಯ ಸೇರಿಸಿದ್ದಾರೆ. ಮಹಿಳೆಯರ ರಿಲೇ ತಂಡದ ಈ ಗೆಲುವಿನಿಂದ ಭಾರತವು 2026ರ ಏಷ್ಯನ್ ಗೇಮ್ಸ್‌ನಲ್ಲಿ ಅಥ್ಲೆಟಿಕ್ಸ್ ವಿಭಾಗದ ಚಿನ್ನದ ಪದಕಕ್ಕಾಗಿ ಕಾಯುತ್ತಿದ್ದ ನಿರೀಕ್ಷೆಗೆ ಅಂತ್ಯ ಹಾಡಿದೆ.

ಏಷ್ಯನ್‌ ಗೇಮ್ಸ್‌ ಶೂಟಿಂಗ್‌; ಕೂಟ ದಾಖಲೆಯೊಂದಿಗೆ ಚಿನ್ನ ಗೆದ್ದ ನೀರೂ ಧಂಡಾ

ಏಷ್ಯಾ ಕ್ರೀಡಾಕೂಟದಲ್ಲಿ ಗುಲ್ವೀರ್‌ ಸಿಂಗ್‌ ಹ್ಯಾಟ್ರಿಕ್‌ ಪದಕ

ಭಾರತದ ಪ್ರಮುಖ ಓಟಗಾರ ಗುಲ್ವೀರ್‌ ಸಿಂಗ್‌ ಅವರು ಪ್ರಸ್ತುತ ನಡೆಯುತ್ತಿರುವ 2026ರ ಏಷ್ಯಾ ಕ್ರೀಡಾಕೂಟದಲ್ಲಿ ಹ್ಯಾಟ್ರಿಕ್‌ ಪದಕಗಳ ಸಾಧನೆ ಮಾಡಿದ್ದಾರೆ. ಅವರು ಮಂಗಳವಾರ ಪುರುಷರ 5000 ಮೀಟರ್‌ನಲ್ಲಿ ಮೂರನೇ ಸ್ಥಾನ ಪಡೆದು ಕಂಚಿನ ಪದಕವನ್ನು ತನ್ನದಾಗಿಸಿಕೊಂಡಿದ್ದಾರೆ.