Pakistan annual contracts: ಕೇಂದ್ರ ಗುತ್ತಿಗೆ ಪ್ರಕಟಿಸಿದ ಪಿಸಿಬಿ: ಬಾಬರ್, ರಿಜ್ವಾನ್‌ಗೆ ಹಿಂಬಡ್ತಿ
2023 ಮತ್ತು 2024 ರ ವಿಶ್ವಕಪ್‌ಗಳಂತಹ ಜಾಗತಿಕ ಪಂದ್ಯಾವಳಿಗಳ ಗುಂಪು ಹಂತಗಳಲ್ಲಿಯೇ ಹೊರಬಿದ್ದಿರುವ ಪಾಕಿಸ್ತಾನ, ವಿಶ್ವ ಕ್ರಿಕೆಟ್‌ನಲ್ಲಿ ಅತ್ಯಂತ ಶೋಚನೀಯ ಪ್ರದರ್ಶನ ನೀಡುತ್ತಿದೆ. ತನ್ನ ಸ್ಥಾನ ಮತ್ತು ಖ್ಯಾತಿಯನ್ನು ಪುನಃಸ್ಥಾಪಿಸಲು ತೀವ್ರವಾಗಿ ಪ್ರಯತ್ನಿಸುತ್ತಿರುವುದರಿಂದ ತಂಡವು ಅನೇಕ ನಾಯಕತ್ವ ಮತ್ತು ತರಬೇತಿ ಸಿಬ್ಬಂದಿ ಬದಲಾವಣೆಗಳನ್ನು ಕಂಡಿದೆ.

ಕರಾಚಿ: ಪಾಕಿಸ್ತಾನ ಕ್ರಿಕೆಟ್ ಮಂಡಳಿ (ಬಿಸಿಸಿಐ) 2025-26ರ ಋತುವಿಗಾಗಿ 'ಕೇಂದ್ರ ಗುತ್ತಿಗೆ' ಪಡೆದ ಆಟಗಾರರ ಪಟ್ಟಿಯನ್ನು(Pakistan annual contracts) ಪ್ರಕಟಿಸಿದೆ. ಆಟಗಾರರ ಕಳಪೆ ಪ್ರದರ್ಶನಕ್ಕೆ ಬ್ರೇಕ್ ಹಾಕುವ ನಿಟ್ಟಿನಲ್ಲಿ ಈ ಬಾರಿ ಯಾರಿಗೂ A ದರ್ಜೆ ನೀಡಿಲ್ಲ. ಈ ಹಿಂದೆ A ದರ್ಜೆಯಲ್ಲಿ ಸ್ಥಾನ ಪಡೆದಿದ್ದ ಅನುಭವಿ ಆಟಗಾರರಾದ ಬಾಬರ್ ಅಜಂ(Babar Azam) ಮತ್ತು ಮೊಹಮ್ಮದ್ ರಿಜ್ವಾನ್(Mohammad Rizwan) ಅವರನ್ನು ಈ ಬಾರಿ B ದರ್ಜೆಗೆ ಇಳಿಸಲಾಗಿದೆ. ಇತ್ತೀಚೆಗಷ್ಟೇ ಉಭಯ ಆಟಗಾರರನ್ನು ಏಷ್ಯಾ ಕಪ್‌ಗಾಗಿ ಪ್ರಕಟಿಸಿದ ಪಾಕ್ ತಂಡದಿಂದಲೂ ಕೈಬಿಡಲಾಗಿತ್ತು.
ಮುಂಬರುವ 2025–26ರ ಅಂತಾರಾಷ್ಟ್ರೀಯ ಋತುವಿಗಾಗಿ ಪಿಸಿಬಿ 30 ಪುರುಷ ಕ್ರಿಕೆಟಿಗರಿಗೆ ಕೇಂದ್ರ ಒಪ್ಪಂದಗಳನ್ನು ನೀಡಿದೆ. ಈ ಒಪ್ಪಂದಗಳು ಜುಲೈ 1, 2025 ರಿಂದ ಜೂನ್ 30, 2026 ರವರೆಗೆ ಜಾರಿಯಲ್ಲಿರುತ್ತವೆ. ಈ ಒಪ್ಪಂದಗಳಲ್ಲಿ ಮೂರು ಶ್ರೇಣಿಗಳಲ್ಲಿ ತಲಾ 10 ಆಟಗಾರರಂತೆ ವಿಂಗಡಿಸಲಾಗಿದೆ.
2023 ಮತ್ತು 2024 ರ ವಿಶ್ವಕಪ್‌ಗಳಂತಹ ಜಾಗತಿಕ ಪಂದ್ಯಾವಳಿಗಳ ಗುಂಪು ಹಂತಗಳಲ್ಲಿಯೇ ಹೊರಬಿದ್ದಿರುವ ಪಾಕಿಸ್ತಾನ, ವಿಶ್ವ ಕ್ರಿಕೆಟ್‌ನಲ್ಲಿ ಅತ್ಯಂತ ಶೋಚನೀಯ ಪ್ರದರ್ಶನ ನೀಡುತ್ತಿದೆ. ತನ್ನ ಸ್ಥಾನ ಮತ್ತು ಖ್ಯಾತಿಯನ್ನು ಪುನಃಸ್ಥಾಪಿಸಲು ತೀವ್ರವಾಗಿ ಪ್ರಯತ್ನಿಸುತ್ತಿರುವುದರಿಂದ ತಂಡವು ಅನೇಕ ನಾಯಕತ್ವ ಮತ್ತು ತರಬೇತಿ ಸಿಬ್ಬಂದಿ ಬದಲಾವಣೆಗಳನ್ನು ಕಂಡಿದೆ.
ಶ್ರೇಣಿಗಳು
ಗ್ರೇಡ್ ಬಿ : ಅಬ್ರಾರ್ ಅಹ್ಮದ್, ಬಾಬರ್ ಅಜಮ್, ಫಖರ್ ಜಮಾನ್, ಹ್ಯಾರಿಸ್ ರೌಫ್, ಹಸನ್ ಅಲಿ, ಮೊಹಮ್ಮದ್ ರಿಜ್ವಾನ್, ಸೈಮ್ ಅಯೂಬ್, ಸಲ್ಮಾನ್ ಅಲಿ ಅಘಾ, ಶಾದಾಬ್ ಖಾನ್ ಮತ್ತು ಶಾಹೀನ್ ಶಾ ಆಫ್ರಿದಿ.
ಗ್ರೇಡ್ ಸಿ: ಅಬ್ದುಲ್ಲಾ ಶಫೀಕ್, ಫಹೀಮ್ ಅಶ್ರಫ್, ಹಸನ್ ನವಾಜ್, ಮೊಹಮ್ಮದ್ ಹ್ಯಾರಿಸ್, ಮೊಹಮ್ಮದ್ ನವಾಜ್, ನಸೀಮ್ ಶಾ, ನೋಮನ್ ಅಲಿ, ಸಾಹಿಬ್ಜಾದಾ ಫರ್ಹಾನ್, ಸಾಜಿದ್ ಖಾನ್ ಮತ್ತು ಸೌದ್ ಶಕೀಲ್.
ಗ್ರೇಡ್ ಡಿ: ಅಹ್ಮದ್ ದಾನಿಯಾಲ್, ಹುಸೇನ್ ತಲತ್, ಖುರ್ರಂ ಶಹಜಾದ್, ಖುಶ್ದಿಲ್ ಶಾ, ಮೊಹಮ್ಮದ್ ಅಬ್ಬಾಸ್, ಮೊಹಮ್ಮದ್ ಅಬ್ಬಾಸ್ ಅಫ್ರಿದಿ, ಮೊಹಮ್ಮದ್ ವಾಸಿಂ ಜೂನಿಯರ್, ಸಲ್ಮಾನ್ ಮಿರ್ಜಾ, ಶಾನ್ ಮಸೂದ್ ಮತ್ತು ಸುಫ್ಯಾನ್ ಮೊಕಿಮ್.