ಕರಾಚಿ, ಸೆ.1: ಪಾಕಿಸ್ತಾನ ಕ್ರಿಕೆಟ್ ಮಂಡಳಿಯಲ್ಲಿ (ಪಿಸಿಬಿ) ಆತಂಕ ಮನೆ ಮಾಡಿದೆ. ಸೆಪ್ಟೆಂಬರ್ 9 ರಂದು ಎಡ್ಜ್‌ಬಾಸ್ಟನ್‌ನಲ್ಲಿ ಪ್ರಾರಂಭವಾಗುವ ಮೂರನೇ ಟೆಸ್ಟ್ ಪಂದ್ಯಕ್ಕೂ ಮುನ್ನ ಇಂಗ್ಲೆಂಡ್‌ನ ಮೂವರು ಹಿರಿಯ ಬ್ಯಾಟ್ಸ್‌ಮನ್‌ಗಳಾದ ಸಲ್ಮಾನ್ ಅಘಾ, ಮೊಹಮ್ಮದ್ ರಿಜ್ವಾನ್ ಮತ್ತು ಇಮಾಮ್-ಉಲ್-ಹಕ್ ಸೇರಿದಂತೆ ಏಳು ಆಟಗಾರರನ್ನು ಮನೆಗೆ ಕಳುಹಿಸಲಾಗಿದೆ.
ಆಟಗಾರರು ಮಾತ್ರವಲ್ಲದೆ ಮುಖ್ಯ ಕೋಚ್ ಸರ್ಫರಾಜ್ ಅಹ್ಮದ್ ಮತ್ತು ಬೌಲಿಂಗ್ ಕೋಚ್ ಉಮರ್ ಗುಲ್ ಅವರನ್ನು ಮನೆಗೆ ಕಳುಹಿಸಲಾಗಿದೆ. ವೈಟ್-ಬಾಲ್ ಕೋಚ್ ಮೈಕ್ ಹೆಸ್ಸನ್ ಅಂತಿಮ ಟೆಸ್ಟ್‌ಗೆ ತಂಡವನ್ನು ಮುನ್ನಡೆಸಲಿದ್ದಾರೆ. ಅಲಿ ಉಸ್ಮಾನ್, ಆಮೆರ್ ಜಮಾಲ್, ಅವೈಸ್ ಜಾಫರ್ ಮತ್ತು ಖುರ್ರಂ ಶಹಜಾದ್ ಕೂಡ ಮನೆಗೆ ತೆರಳುತ್ತಿದ್ದಾರೆ. ಇಂಗ್ಲೆಂಡ್ ವಿರುದ್ಧ ಸತತ ಎರಡು ಟೆಸ್ಟ್ ಪಂದ್ಯಗಳನ್ನು ಸೋತ ನಂತರ ಪಾಕ್ ಕ್ರಿಕೆಟ್ ಮಂಡಳಿ ಈ ನಿರ್ಧಾರ ಕೈಗೊಂಡಿದೆ.
ಬ್ಯಾಟ್ಸ್‌ಮನ್‌ಗಳಾದ ಸೈಮ್ ಅಯೂಬ್ ಮತ್ತು ಅಬ್ದುಲ್ಲಾ ಫಜಲ್ ಅವರನ್ನು ಬದಲಿ ಆಟಗಾರರನ್ನಾಗಿ ತಂಡಕ್ಕೆ ಸೇರಿಸಲಾಗಿದ್ದು ಅವರು ಶೀಘ್ರದಲ್ಲೇ ಲಂಡನ್‌ಗೆ ಪ್ರಯಾಣಿಸಲಿದ್ದಾರೆ. ಐದು ಹೊಸ ಆಟಗಾರರಾದ ಅರಾಫತ್ ಮಿನ್ಹಾಸ್, ಮೊಹಮ್ಮದ್ ಇಮ್ರಾನ್ ಜೂನಿಯರ್, ಸಾದ್ ಬೇಗ್, ಮೊಹಮ್ಮದ್ ಇಮ್ರಾನ್ ರಾಂಧವಾ ಮತ್ತು ರಜಾವುಲ್ಲಾ ಸಮಯಕ್ಕೆ ಸರಿಯಾಗಿ ತಮ್ಮ ಯುಕೆ ವೀಸಾಗಳನ್ನು ಪಡೆದುಕೊಂಡರೆ ಇಂಗ್ಲೆಂಡ್‌ಗೆ ಪ್ರಯಾಣಿಸುತ್ತಾರೆ. ಹೆಸ್ಸನ್ ಈಗಾಗಲೇ ತಂಡದೊಂದಿಗೆ ಸಂಪರ್ಕ ಹೊಂದಿದ್ದಾರೆಂದು ಹೇಳಲಾಗಿದೆ.
ಐಸಿಸಿ ಟೆಸ್ಟ್ ಚಾಂಪಿಯನ್‌ಶಿಪ್; ಅಂಕಪಟ್ಟಿಯಲ್ಲಿ ಪಾತಾಳಕ್ಕೆ ಕುಸಿದ ಪಾಕಿಸ್ತಾನ
ಪಾಕಿಸ್ತಾನದ ಆಂತರಿಕ ಸಚಿವರೂ ಆಗಿರುವ ಪಿಸಿಬಿ ಅಧ್ಯಕ್ಷ ಮೊಹ್ಸಿನ್ ನಖ್ವಿ, ಇಂಗ್ಲೆಂಡ್‌ನಲ್ಲಿ ತಂಡದ ಪ್ರದರ್ಶನದ ಬಗ್ಗೆ ತಮ್ಮ ರಾಜಕೀಯ ಹಿರಿಯರಿಂದ ತೀವ್ರ ಟೀಕೆ ಎದುರಿಸುತ್ತಿದ್ದಾರೆ ಎಂಬ ವರದಿಗಳ ಮಧ್ಯೆ ಈ ನಿರ್ಧಾರ ಬಂದಿದೆ. ಲೀಡ್ಸ್‌ನಲ್ಲಿ ನಡೆದ ಮೊದಲ ಟೆಸ್ಟ್‌ನಲ್ಲಿ ಪ್ರವಾಸಿ ತಂಡವು ಇನ್ನಿಂಗ್ಸ್ ಮತ್ತು 103 ರನ್‌ಗಳಿಂದ ಮತ್ತು ಲಾರ್ಡ್ಸ್‌ನಲ್ಲಿ ನಡೆದ ಎರಡನೇ ಪಂದ್ಯದಲ್ಲಿ 194 ರನ್‌ಗಳಿಂದ ಸೋತಿತು, ನಾಲ್ಕು ಇನ್ನಿಂಗ್ಸ್‌ಗಳಲ್ಲಿ ಯಾವುದರಲ್ಲೂ 200 ರನ್‌ಗಳ ಗಡಿ ದಾಟಲು ವಿಫಲವಾಯಿತು.
ಎರಡು ಟೆಸ್ಟ್‌ಗಳಲ್ಲಿ ರಿಜ್ವಾನ್ ಕೇವಲ 61 ರನ್‌ಗಳನ್ನು ಮಾತ್ರ ಗಳಿಸಿದ್ದರು. ವಿಪರ್ಯಾಸವೆಂದರೆ, ಅವರು ಪಾಕಿಸ್ತಾನದ ಪರ ನಾಲ್ಕನೇ ಅತಿ ಹೆಚ್ಚು ರನ್ ಗಳಿಸಿದ ಆಟಗಾರರಾಗಿದ್ದರು. ಅವರ ಶಾಟ್ ಆಯ್ಕೆಗಳು ದೊಡ್ಡ ಟೀಕೆಗೆ ಗುರಿಯಾದವು.
ಬರ್ಮಿಂಗ್ಹ್ಯಾಮ್ ಟೆಸ್ಟ್‌ಗೆ ಪಾಕಿಸ್ತಾನ ಪರೀಷ್ಕೃತ ತಂಡ
ಬಾಬರ್ ಅಜಮ್ (ನಾಯಕ), ಅಬ್ದುಲ್ಲಾ ಫಜಲ್, ಅರಾಫತ್ ಮಿನ್ಹಾಸ್, ಅಜಾನ್ ಅವಾಯಿಸ್, ಮೊಹಮ್ಮದ್ ಅಬ್ಬಾಸ್, ಮೊಹಮ್ಮದ್ ಅಲಿ, ಮುಹಮ್ಮದ್ ಇಮ್ರಾನ್, ಮೊಹಮ್ಮದ್ ಇಮ್ರಾನ್ ಜೂನಿಯರ್, ಮುಹಮ್ಮದ್ ಗಾಜಿ ಘೋರಿ (ವಿ.ಕೀ.), ರಝಾವುಲ್ಲಾ, ಸಾದ್ ಬೇಗ್, ಸೈಮ್ ಅಯೂಬ್, ಸಾಜಿದ್ ಖಾನ್, ಸೌದ್ ಶಕೀಲ್, ಶಾನ್ ಮಸೂದ್ ಮತ್ತು ಉಬೈದ್ ಶಾ.