ಐಸಿಸಿ ಟೆಸ್ಟ್ ಚಾಂಪಿಯನ್‌ಶಿಪ್; ಅಂಕಪಟ್ಟಿಯಲ್ಲಿ ಪಾತಾಳಕ್ಕೆ ಕುಸಿದ ಪಾಕಿಸ್ತಾನ
ICC WTC Points Table: ನವೀಕರಿಸಿದ WTC 2025-27 ಅಂಕಗಳ ಪ್ರಕಾರ, 2023 ರ ಚಾಂಪಿಯನ್ ಆಸ್ಟ್ರೇಲಿಯಾ ಅಗ್ರಸ್ಥಾನದಲ್ಲಿ ಮುನ್ನಡೆ ಸಾಧಿಸಿದೆ, ಹಾಲಿ ಚಾಂಪಿಯನ್ ದಕ್ಷಿಣ ಆಫ್ರಿಕಾ ಮತ್ತು ಉದ್ಘಾಟನಾ ಚಾಂಪಿಯನ್ ನ್ಯೂಜಿಲೆಂಡ್ ಎರಡನೇ ಮತ್ತು ಮೂರನೇ ಸ್ಥಾನಗಳಲ್ಲಿ ಆಸೀಸ್ ತಂಡವನ್ನು ಬೆನ್ನಟ್ಟುತ್ತಿವೆ.
Ollie Robinson -
ಲಂಡನ್, ಸೆ.1: ಪ್ರವಾಸಿ ಪಾಕಿಸ್ತಾನ ವಿರುದ್ಧದ ಮೂರು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಎರಡು ಟೆಸ್ಟ್ ಪಂದ್ಯಗಳನ್ನು ಗೆದ್ದಿರುವ ಇಂಗ್ಲೆಂಡ್ ತಂಡ ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಅಂಕಪಟ್ಟಿಯಲ್ಲಿ ಆರನೇ ಸ್ಥಾನಕ್ಕೇರಿದೆ. ಸೋಲು ಕಂಡ ಪಾಕಿಸ್ತಾನ ಕೊನೆಯ ಸ್ಥಾನವನ್ನೇ ಗಟ್ಟಿ ಮಾಡಿಕೊಂಡಿದೆ.
ಲಾರ್ಡ್ಸ್‌ನಲ್ಲಿ ನಡೆದ ಎರಡನೇ ಟೆಸ್ಟ್‌ನಲ್ಲಿ ಪಾಕಿಸ್ತಾನದ ವಿರುದ್ಧ 194 ರನ್ ಭರ್ಜರಿ ಜಯ ಸಾಧಿಸಿದ ಇಂಗ್ಲೆಂಡ್, WTC ಸೈಕಲ್‌ನಲ್ಲಿ ತಮ್ಮ ಅಂಕಗಳ ಶೇಕಡಾವಾರು ಪ್ರಮಾಣವನ್ನು 34.44 ಕ್ಕೆ ಏರಿಸಿಕೊಂಡಿತು. ಈ ಹಿಂದೆ ಆರನೇ ಸ್ಥಾನಿಯಾಗಿದ್ದ ಶ್ರೀಲಂಕಾ (33.33 ಅಂಕಗಳು) ಪಟ್ಟಿಯಲ್ಲಿ ಏಳನೇ ಸ್ಥಾನಕ್ಕೆ ಕುಸಿಯಿತು.
WTC ಸೈಕಲ್‌ನ ತನ್ನ ಎಂಟನೇ ಪಂದ್ಯದಲ್ಲಿ ಆರನೇ ಸೋಲನ್ನು ಅನುಭವಿಸಿದ ಪಾಕಿಸ್ತಾನ, ಕೇವಲ 16.67 ಅಂಕಗಳ ಶೇಕಡಾವಾರು ಅಂಕಗಳೊಂದಿಗೆ ಪಾಯಿಂಟ್‌ಗಳ ಪಟ್ಟಿಯಲ್ಲಿ ಕೊನೆಯ ಸ್ಥಾನದಲ್ಲಿದೆ.
ನವೀಕರಿಸಿದ WTC 2025-27 ಅಂಕಗಳ ಪ್ರಕಾರ, 2023 ರ ಚಾಂಪಿಯನ್ ಆಸ್ಟ್ರೇಲಿಯಾ ಅಗ್ರಸ್ಥಾನದಲ್ಲಿ ಮುನ್ನಡೆ ಸಾಧಿಸಿದೆ, ಹಾಲಿ ಚಾಂಪಿಯನ್ ದಕ್ಷಿಣ ಆಫ್ರಿಕಾ ಮತ್ತು ಉದ್ಘಾಟನಾ ಚಾಂಪಿಯನ್ ನ್ಯೂಜಿಲೆಂಡ್ ಎರಡನೇ ಮತ್ತು ಮೂರನೇ ಸ್ಥಾನಗಳಲ್ಲಿ ಆಸೀಸ್ ತಂಡವನ್ನು ಬೆನ್ನಟ್ಟುತ್ತಿವೆ.
5 ವರ್ಷಗಳ ಬಳಿಕ ಭಾರತ ಕ್ರಿಕೆಟ್ ತಂಡಕ್ಕೆ ಆರ್‌ಸಿಬಿ ಸ್ಟಾರ್ ಕೃಣಾಲ್ ಪಾಂಡ್ಯಗೆ ಕಮ್‌ಬ್ಯಾಕ್?
ತಿಂಗಳ ಆರಂಭದಲ್ಲಿ ಆಸ್ಟ್ರೇಲಿಯಾ ವಿರುದ್ಧದ ಭರ್ಜರಿ ಗೆಲುವಿನಿಂದಾಗಿ ಬಾಂಗ್ಲಾದೇಶ ನಾಲ್ಕನೇ ಸ್ಥಾನದಲ್ಲಿದೆ. ಶ್ರೀಲಂಕಾ ವಿರುದ್ಧದ ಎರಡು ಪಂದ್ಯಗಳ ಟೆಸ್ಟ್ ಸರಣಿಯನ್ನು 1-0 ಅಂತರದಿಂದ ಗೆದ್ದ ನಂತರ ಭಾರತ 51.52 ಶೇಕಡಾ ಅಂಕಗಳೊಂದಿಗೆ ಐದನೇ ಸ್ಥಾನದಲ್ಲಿದೆ. ಇಂಗ್ಲೆಂಡ್, ಶ್ರೀಲಂಕಾ, ವೆಸ್ಟ್ ಇಂಡೀಸ್ ಮತ್ತು ಪಾಕಿಸ್ತಾನ ತಂಡಗಳು ಕ್ರಮವಾಗಿ ಆರು, ಏಳು, ಎಂಟನೇ ಮತ್ತು ಒಂಬತ್ತನೇ ಸ್ಥಾನಗಳಲ್ಲಿವೆ.
34.44% ಅಂಕಗಳಿಸಿರುವ ಇಂಗ್ಲೆಂಡ್ ತಂಡಕ್ಕೆ ಇನ್ನು ಉಳಿದಿರುವ ನಾಲ್ಕು ಟೆಸ್ಟ್‌ಗಳನ್ನು ಗೆದ್ದರೂ ಕೇವಲ 48.25% ಅಂಕ ಮಾತ್ರ ಸಿಗಲಿದೆ. ಇಂಗ್ಲೆಂಡ್ ಅರ್ಹತಾ ಓಟದಿಂದ ಬಹುತೇಕ ಹೊರಗಿದೆ. ಇಂಗ್ಲೆಂಡ್ ವಿರುದ್ಧ ಸತತ ಎರಡನೇ ಭಾರಿ ಸೋಲಿನ ನಂತರ ಪಾಕಿಸ್ತಾನ ಎಂಟು ಟೆಸ್ಟ್‌ಗಳಿಂದ 16 ಅಂಕಗಳೊಂದಿಗೆ ಮತ್ತು ಶೇಕಡಾ 16.67 ರಷ್ಟು ಪಿಸಿಟಿಯೊಂದಿಗೆ ಪಟ್ಟಿಯಲ್ಲಿ ಕೊನೆಯ ಸ್ಥಾನದಲ್ಲಿದೆ. ಅವರಿಗೆ ಐದು ಟೆಸ್ಟ್‌ಗಳು ಉಳಿದಿವೆ - ಇಂಗ್ಲೆಂಡ್ ವಿರುದ್ಧ ಒಂದು, ಶ್ರೀಲಂಕಾ ವಿರುದ್ಧ ಎರಡು ಮತ್ತು ನ್ಯೂಜಿಲೆಂಡ್ ವಿರುದ್ಧ ಎರಡು. ಉಳಿದಿರುವ ಐದು ಟೆಸ್ಟ್‌ಗಳಲ್ಲಿ ಗೆದ್ದರೂ ಪಾಕಿಸ್ತಾನ ಶೇಕಡಾ 48.72 ಕ್ಕೆ ಏರಲಿದೆ. ಆದರೂ ಫೈನಲ್ ಪ್ರವೇಶಕ್ಕೆ ಇದು ಸಾಕಾಗುವುದಿಲ್ಲ.