ಧರ್ಮಶಾಲಾ, ಮೇ 17: ಇಂದು ಮಧ್ಯಾಹ್ನ ನಡೆಯುವ ಐಪಿಎಲ್(IPL 2026) ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡವನ್ನು ಎದುರಿಸುವ ಮೂಲಕ ತಮ್ಮ ಪ್ಲೇಆಫ್ ಆಸೆಯನ್ನು ಜೀವಂತವಾಗಿರಿಸಿಕೊಳ್ಳಲು ಪಂಜಾಬ್ ಕಿಂಗ್ಸ್ (PBKS) ಎದುರು ನೋಡುತ್ತಿದೆ. ಸತತ ಐದು ಸೋಲುಗಳ ನಂತರ ಪಂಜಾಬ್ ಪಂದ್ಯಕ್ಕೆ ಪ್ರವೇಶಿಸುತ್ತಿದೆ, ಆದರೆ ಆರ್‌ಸಿಬಿ ಸತತ ಎರಡು ಗೆಲುವುಗಳೊಂದಿಗೆ ಮತ್ತು ಪ್ಲೇಆಫ್ ಪ್ರವೇಶಿಸುವ ಸನಿಹದಲ್ಲಿದೆ. ಪಂದ್ಯದ ಹವಾಮಾನ ವರದಿ ಹೀಗಿದೆ.
ಮಳೆ ಭೀತಿ ಇಲ್ಲ
ಬಂಗಾಳಕೊಲ್ಲಿಯ ನೈರುತ್ಯ ಭಾಗದಲ್ಲಿ ವಾಯುಭಾರ ಕುಸಿತ ಉಂಟಾಗಿದ ಪರಿಣಾಮ ದೇಶದ ಹಲವು ರಾಜ್ಯಗಳಲ್ಲಿ ಭಾರೀ ಮಳೆಯಾಗುತ್ತಿದೆ. ಆದರೆ ಧರ್ಮಶಾಲಾದಲ್ಲಿ ಯಾವುದೇ ಮಳೆ ಭೀತಿ ಎದುರಾಗಿಲ್ಲ. ಪಂದ್ಯವೂ ಕೂಡ ಮಧ್ಯಾಹ್ನ ನಡೆಯಲಿದೆ. ಹೀಗಾಗಿ ಯಾವುದೇ ಭೀತಿ ಇಲ್ಲ. ಅಕ್ಯೂವೆದರ್ ಪ್ರಕಾರ, ಧರ್ಮಶಾಲಾದಲ್ಲಿ ಮಧ್ಯಾಹ್ನ ಮೋಡ ಕವಿದ ಮತ್ತು ಬೆಚ್ಚಗಿನ ವಾತಾವರಣವಿರಲಿದೆ. ಗರಿಷ್ಠ ತಾಪಮಾನವು 26 ಡಿಗ್ರಿ ಸೆಲ್ಸಿಯಸ್ ಸುತ್ತಲೂ ಇರುವ ಸಾಧ್ಯತೆಯಿದೆ, ಗಾಳಿಯ ವಾತಾವರಣವೂ ಇರುತ್ತದೆ. ಹವಾಮಾನ ಮತ್ತು ಮಧ್ಯಾಹ್ನದ ಪರಿಸ್ಥಿತಿಗಳು ಬ್ಯಾಟ್ಸ್‌ಮನ್‌ಗಳಿಗೆ ಸ್ವಲ್ಪ ಕಷ್ಟಕರವಾದ ಸ್ಪರ್ಧೆಯನ್ನು ನೀಡಬಹುದು.
ಪಂಜಾಬ್ ತನ್ನ ಐಪಿಎಲ್ 2026 ಅಭಿಯಾನವನ್ನು ಪ್ರಭಾವಶಾಲಿ ರೀತಿಯಲ್ಲಿ ಪ್ರಾರಂಭಿಸಿತು, ಮೊದಲ ಏಳು ಪಂದ್ಯಗಳಿಂದ 13 ಅಂಕಗಳನ್ನು ಗಳಿಸಿತು. ಆದಾಗ್ಯೂ, ಮುಂದಿನ ಐದು ಪಂದ್ಯಗಳಲ್ಲಿ, ಪಂಜಾಬ್ ಸಂಪೂರ್ಣವಾಗಿ ಹಳಿತಪ್ಪಿದೆ. ಅವರು ಗೆಲ್ಲಲು ದಾರಿಗಳನ್ನು ಕಂಡುಕೊಳ್ಳಲು ಹೆಣಗಾಡಿದ್ದಾರೆ ಮತ್ತು ಅವರ ಕಳಪೆ ಪ್ರದರ್ಶನವು ರಾಜಸ್ಥಾನ ರಾಯಲ್ಸ್ ಮತ್ತು ಚೆನ್ನೈ ಸೂಪರ್ ಕಿಂಗ್ಸ್‌ನಂತಹ ತಂಡಗಳಿಗೆ ಪ್ಲೇಆಫ್ ಓಟವನ್ನು ಸ್ವಲ್ಪಮಟ್ಟಿಗೆ ತೆರೆಯಿತು.
PBKS vs RCB: ಆರ್‌ಸಿಬಿ-ಪಂಜಾಬ್ ಪಂದ್ಯದ ಸಂಭಾವ್ಯ ಇಂಪ್ಯಾಕ್ಟ್ ಆಟಗಾರರಿವರು
ಮತ್ತೊಂದೆಡೆ, ಆರ್‌ಸಿಬಿ ಸ್ಥಿರವಾದ ಅಭಿಯಾನವನ್ನು ಹೊಂದಿದೆ, ಕೇವಲ ಒಂದು ಬಾರಿ ಮಾತ್ರ ಸತತ ಸೋಲು ಕಂಡಿದೆ. 12 ಪಂದ್ಯಗಳಲ್ಲಿ, ಆರ್‌ಸಿಬಿ +1.053 ನಿವ್ವಳ ರನ್ ದರದೊಂದಿಗೆ 16 ಅಂಕಗಳನ್ನು ಗಳಿಸಿದೆ. ಇಂದಿನ ಪಂದ್ಯ ಗೆದ್ದರೆ ಅಧಿಕೃತವಾಗಿ ಪ್ಲೇ ಆಫ್‌ಗೆ ಪ್ರವೇಶಿಸಿದ ಮೊದಲ ತಂಡವಾಗಲಿದೆ.
ಸಂಭಾವ್ಯ ಆಡುವ ಬಳಗ
ಪಂಜಾಬ್ ಕಿಂಗ್ಸ್ (PBKS): ಪ್ರಿಯಾಂಶ್ ಆರ್ಯ, ಶ್ರೇಯಸ್ ಅಯ್ಯರ್ (ನಾಯಕ), ಕೂಪರ್ ಕೊನೊಲಿ, ವಿಷ್ಣು ವಿನೋದ್ (ವಿ.ಕೀ.), ಸೂರ್ಯಾಂಶ್ ಶೆಡ್ಜ್, ಅಜ್ಮತುಲ್ಲಾ ಒಮರ್ಜಾಯ್, ಮಾರ್ಕೊ ಜಾನ್ಸೆನ್, ಕ್ಸೇವಿಯರ್ ಬಾರ್ಟ್ಲೆಟ್, ಅರ್ಶ್ದೀಪ್ ಸಿಂಗ್, ಯುಜ್ವೇಂದ್ರ ಚಹಾಲ್, ವಿಜಯ್ಕುಮಾರ್ ವೈಶಾಕ್.
ಇಂಪ್ಯಾಕ್ಟ್ ಆಟಗಾರ: ಪ್ರಭಾಸಿಮ್ರಾನ್ ಸಿಂಗ್.
ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB): ಜಾಕೋಬ್ ಬೆಥೆಲ್/ಫಿಲ್ ಸಾಲ್ಟ್, ವಿರಾಟ್ ಕೊಹ್ಲಿ, ರಜತ್ ಪಾಟಿದಾರ್ (ನಾಯಕ), ಜಿತೇಶ್ ಶರ್ಮಾ (ವಿ.ಕೀ.), ಕೃನಾಲ್ ಪಾಂಡ್ಯ, ಟಿಮ್ ಡೇವಿಡ್, ವೆಂಕಟೇಶ್ ಅಯ್ಯರ್, ರಾಸಿಖ್ ಸಲಾಂ, ಭುವನೇಶ್ವರ್ ಕುಮಾರ್, ಜೋಶ್ ಹ್ಯಾಜಲ್‌ವುಡ್, ಜಾಕೋಬ್ ಡಫಿ.
ಇಂಪ್ಯಾಕ್ಟ್ ಪ್ಲೇಯರ್: ದೇವದತ್ ಪಡಿಕ್ಕಲ್.