ನವದೆಹಲಿ: ಭಾರತದ ಮಾಜಿ ನಾಯಕರಾದ ರೋಹಿತ್ ಶರ್ಮಾ(Rohit Sharma) ಮತ್ತು ವಿರಾಟ್ ಕೊಹ್ಲಿ(Virat Kohli) ಅವರು ಭಾರತಕ್ಕಾಗಿ ಅಂತರರಾಷ್ಟ್ರೀಯ ಕ್ರಿಕೆಟ್ ಆಡುವುದನ್ನು ಮುಂದುವರಿಸಲು ಬಯಸಿದರೆ ವಿಜಯ್ ಹಜಾರೆ ಟ್ರೋಫಿ(Vijay Hazare Trophy) ಪಂದ್ಯಗಳಲ್ಲಿ ಭಾಗವಹಿಸಬೇಕಾಗುತ್ತದೆ ಎಂದು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (BCCI) ಅವರಿಗೆ ಖಡಕ್ ಸೂಚನೆ ನೀಡಿದೆ.
ವಿರಾಟ್ ಮತ್ತು ರೋಹಿತ್ ಜೂನ್ 29, 2024 ರಂದು 20 ಐಗಳಿಂದ ನಿವೃತ್ತರಾದರು ಮತ್ತು ಮೇ 2025 ರಲ್ಲಿ ಟೆಸ್ಟ್ ಕ್ರಿಕೆಟ್‌ನಿಂದ ದೂರ ಸರಿದರು. ಅವರು ಈಗ ಕೊನೆಯದಾಗಿ ಏಕದಿನ ಪಂದ್ಯಗಳಲ್ಲಿ ಮಾತ್ರ ಸಕ್ರಿಯರಾಗಿದ್ದಾರೆ. ಕೊನೆಯ ಬಾರಿಗೆ ಅಕ್ಟೋಬರ್ 2025 ರಲ್ಲಿ ಆಸ್ಟ್ರೇಲಿಯಾ ವಿರುದ್ಧ ಮೆನ್ ಇನ್ ಬ್ಲೂ ಪರ ಆಡಿದ್ದರು. ಸರಣಿಯಲ್ಲಿ ಭಾರತ 1-2 ಅಂತರದಲ್ಲಿ ಸೋಲು ಕಂಡಿತ್ತು. ಮೂರು ಪಂದ್ಯಗಳ ಈ ಸರಣಿಯಲ್ಲಿ, ರೋಹಿತ್ ಎರಡನೇ ಪಂದ್ಯದಲ್ಲಿ ಅರ್ಧಶತಕ ಮತ್ತು ಮೂರನೇ ಪಂದ್ಯದಲ್ಲಿ ಅಜೇಯ ಶತಕ ಗಳಿಸಿದ್ದರು. ಆದರೆ ಕೊಹ್ಲಿ ಮೂರನೇ ಪಂದ್ಯದಲ್ಲಿ 50 ರನ್‌ಗಳ ಗಡಿ ದಾಟಿದ್ದರು. ಮೊದಲ ಎರಡು ಪಂದ್ಯಗಳಲ್ಲಿ ಶೂನ್ಯ ಸುತ್ತಿದ್ದರು.
"2027ರ ಏಕದಿನ ವಿಶ್ವಕಪ್ ತನಕ ಭಾರತಕ್ಕೆ ಸೀಮಿತ ಏಕದಿನ ಸರಣಿ ಮಾತ್ರ ಬಾಕಿ ಇದೆ. rರೋಹಿತ್ ಮತ್ತು ಕೊಹ್ಲಿ ಭಾರತ ಪರ ಆಡಲು ಬಯಸಿದರೆ, ದೇಶೀಯ ಕ್ರಿಕೆಟ್ ಆಡಲೇಬೇಕು ಎಂದು ಮಂಡಳಿ ಮತ್ತು ತಂಡದ ಆಡಳಿತ ಮಂಡಳಿ ಇಬ್ಬರಿಗೂ ತಿಳಿಸಿದೆ. ಅವರಿಬ್ಬರೂ ಎರಡು ಸ್ವರೂಪಗಳಿಂದ ನಿವೃತ್ತರಾಗಿರುವುದರಿಂದ, ಫಿಟ್ ಆಗಲು ದೇಶೀಯ ಕ್ರಿಕೆಟ್ ಆಡಲೇಬೇಕು" ಎಂದು ಬಿಸಿಸಿಐ ಮೂಲವೊಂದು ಇಂಡಿಯನ್ ಎಕ್ಸ್‌ಪ್ರೆಸ್‌ಗೆ ತಿಳಿಸಿದೆ.
ರೋಹಿತ್ ಶರ್ಮ ಅವರು ಮುಂಬರುವ ವಿಜಯ್ ಹಜಾರೆ ಟ್ರೋಫಿಗೆ ಮುಂಬೈ ಕ್ರಿಕೆಟ್ ಅಸೋಸಿಯೇಷನ್ (ಎಂಸಿಎ)ಗೆ ಲಭ್ಯರಿರುವುದನ್ನು ದೃಢಪಡಿಸಿದ್ದಾರೆ, ಆದರೆ ಕೊಹ್ಲಿ ಭಾಗವಹಿಸುವಿಕೆಯ ಬಗ್ಗೆ ಯಾವುದೇ ಸ್ಪಷ್ಟತೆ ಇಲ್ಲ.
50 ಓವರ್‌ಗಳ ಮಾದರಿಯ ಕ್ರಿಕೆಟ್‌ನಲ್ಲಿ ಎರಡನೇ ಅತಿ ಹೆಚ್ಚು ರನ್ ಗಳಿಸಿದ ಆಟಗಾರರಾಗಿರುವ ಕೊಹ್ಲಿ, 2010 ರಲ್ಲಿ ಸರ್ವಿಸಸ್ ವಿರುದ್ಧ ದೆಹಲಿ ಪರ ವಿಜಯ್ ಹಜಾರೆ ಟ್ರೋಫಿಯಲ್ಲಿ ಕೊನೆಯ ಬಾರಿಗೆ ಆಡಿದ್ದರು. ಆ ಪಂದ್ಯದಲ್ಲಿ ಅವರು ದೆಹಲಿಯನ್ನು ಮುನ್ನಡೆಸಿದರು ಮತ್ತು ಪ್ರಸ್ತುತ ಬಿಸಿಸಿಐ ಅಧ್ಯಕ್ಷ ಮಿಥುನ್ ಮನ್ಹಾಸ್, ಭಾರತದ ಮಾಜಿ ಆರಂಭಿಕ ಆಟಗಾರ ಶಿಖರ್ ಧವನ್ ಅವರೊಂದಿಗೆ ದೆಹಲಿಯ ಆಡುವ XI ತಂಡದ ಭಾಗವಾಗಿದ್ದರು.
ವಾಸ್ತವವಾಗಿ, ನವೆಂಬರ್ 26 ರಂದು ಪ್ರಾರಂಭವಾಗಲಿರುವ ಸೈಯದ್ ಮುಷ್ತಾಕ್ ಅಲಿ ಟಿ 20 ಪಂದ್ಯಾವಳಿಗೂ ಸಹ ತಾನು ಲಭ್ಯವಿರುವುದಾಗಿ ರೋಹಿತ್ ಎಂಸಿಎಗೆ ತಿಳಿಸಿದ್ದಾರೆ ಎಂದು ವರದಿಯಾಗಿದೆ.
ಇದನ್ನೂ ಓದಿ Virat Kohli: 2025ರ ವಿಂಬಲ್ಡನ್ ವಿಜೇತರ ಭವಿಷ್ಯ ನುಡಿದ ವಿರಾಟ್ ಕೊಹ್ಲಿ
ಆದಾಗ್ಯೂ, ನವೆಂಬರ್ 30 ರಂದು ರಾಂಚಿಯಲ್ಲಿ ಪ್ರಾರಂಭವಾಗಲಿರುವ ಭಾರತ-ದಕ್ಷಿಣ ಆಫ್ರಿಕಾ ಏಕದಿನ ಸರಣಿಯಲ್ಲಿ ರೋಹಿತ್ ಸೇರ್ಪಡೆಯಾಗಿರುವುದರಿಂದ ಮುಷ್ತಾಕ್ ಅಲಿ ಟೂರ್ನಿಯಲ್ಲಿ ಆಡುವ ಸಾಧ್ಯತೆಗಳು ತುಂಬಾ ಕಡಿಮೆ. ಬಿಸಿಸಿಐ ಆಯ್ಕೆದಾರರು ದಕ್ಷಿಣ ಆಫ್ರಿಕಾ ವಿರುದ್ಧದ ಮೂರು ಪಂದ್ಯಗಳ ಏಕದಿನ ಸರಣಿಗೆ ಭಾರತದ ತಂಡವನ್ನು ಇನ್ನೂ ಘೋಷಿಸದಿದ್ದರೂ, ಆಸ್ಟ್ರೇಲಿಯಾದಲ್ಲಿ ಸರಣಿ ಶ್ರೇಷ್ಠ ಪ್ರಶಸ್ತಿ ಮತ್ತು ವಿಶ್ವದ ನಂ. 1 ಏಕದಿನ ಬ್ಯಾಟ್ಸ್‌ಮನ್ ಆದ ನಂತರ, ರೋಹಿತ್ ಅವರನ್ನು ತವರು ಸರಣಿಗೆ ಕಡೆಗಣಿಸುವ ಸಾಧ್ಯತೆ ಬಹುತೇಕ ಕಡಿಮೆ.