ಫೋಟೋ ಗ್ಯಾಲರಿ ಬಜೆಟ್​ T20 ವಿಶ್ವಕಪ್​ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ವಿದೇಶ ಕ್ರೈಂ ಧಾರ್ಮಿಕ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

ಟಿ20 ವಿಶ್ವಕಪ್‌ ಫೈನಲ್‌ ಪಂದ್ಯಕ್ಕೆ ಭಾರತ-ಕಿವೀಸ್‌ ಸಂಭಾವ್ಯ ತಂಡಗಳು

Predicted India Playing XI vs New Zealand: ದುಬಾರಿಯಾಗುತ್ತಿರುವ ವರುಣ್‌ ಚಕ್ರವರ್ತಿ ಬದಲು ಚೈನಾಮನ್‌ ಸ್ಪಿನ್ನರ್‌ ಕುಲ್‌ದೀಪ್‌ ಯಾದವ್‌ ಅವರನ್ನು ಕಣಕ್ಕಿಳಿಸುವ ಸಾಧ್ಯತೆ ಅಧಿಕ. ಹಾಲಿ ಆವೃತ್ತಿಯಲ್ಲಿ ಪಾಕ್‌ ವಿರುದ್ಧ ಏಕೈಕ ಪಂದ್ಯ ಆಡಿದ್ದ ಅವರು 14 ರನ್‌ 3 ವಿಕೆಟ್‌ ಕಿತ್ತಿದ್ದರು. ಟೀಮ್‌ ಮ್ಯಾನೆಜ್‌ಮೆಂಟ್‌ ಇದೀಗ ಈ ಅಸ್ತ್ರವನ್ನು ಫೈನಲ್‌ನಲ್ಲಿ ಕಣಕ್ಕಿಳಿಸುವ ಯೋಜನೆಯಲ್ಲಿದೆ.

Predicted India Playing XI vs New Zealand

ಅಹಮದಾಬಾದ್, ಮಾ.7: ಹಾಲಿ ವಿಶ್ವ ಚಾಂಪಿಯನ್‌ ಎಂಬ ಪಟ್ಟವನ್ನು ಹೊತ್ತುಕೊಂಡಿರುವ ಟೀಂ ಇಂಡಿಯಾ ಈಗ ಮತ್ತೊಂದು ವಿಶ್ವಕಪ್‌ ಟೋಫ್ರಿ ಗೆಲ್ಲುವ ಸಮರಕ್ಕೆ ಸಜ್ಜಾಗಿದೆ. ಭಾನುವಾರ(ಮಾ.8) ನರೇಂದ್ರ ಮೋದಿ ಕ್ರಿಕೆಟ್‌ ಸ್ಟೇಡಿಯಂನಲ್ಲಿ ನಡೆಯುವ ನ್ಯೂಜಿಲೆಂಡ್‌(IND v NZ T20 World Cup Final) ವಿರುದ್ಧದ ಫೈನಲ್‌ ಪಂದ್ಯದಲ್ಲಿ ಪ್ರಶಸ್ತಿ ಕಾಳಗ ನಡೆಸಲಿದೆ. ಈ ಪಂದ್ಯಕ್ಕೆ ಭಾರತ ತಂಡದ ಆಡುವ ಬಳಗ ಹೇಗಿರಲಿದೆ(Predicted India Playing XI), ಯಾರು ತಂಡದಿಂದ ಹೊರಗುಳಿಯಲಿದ್ದಾರೆ ಎಂಬ ಮಾಹಿತಿ ಇಲ್ಲಿದೆ.

ಟೂರ್ನಿ ಆರಂಭಕ್ಕೂ ಮುನ್ನ ಪ್ರಚಂಡ ಫಾರ್ಮ್‌ನಲ್ಲಿದ್ದ ಅಭಿಷೇಕ್‌ ಶರ್ಮಾ, ಮತ್ತು ವರುಣ್‌ ಚಕ್ರವರ್ತಿ ಮೇಲೆ ಬೆಟ್ಟದಷ್ಟು ನಿರೀಕ್ಷೆ ಇರಿಸಲಾಗಿತ್ತು. ಆದರೆ ಈ ನಿರೀಕ್ಷೆ ಇದುವರೆಗೂ ಹುಸಿಯಾಗುತ್ತಲೇ ಬಂದಿದೆ. ಅಭಿಷೇಕ್‌ ಶರ್ಮ ಬ್ಯಾಟಿಂಗ್‌ ಮರೆತವರಂತೆ ಆಡುತ್ತಿದ್ದಾರೆ. ಲೀಗ್‌ ಪಂದ್ಯದಲ್ಲಿ ಮೂರು ಶೂನ್ಯ ಸುತ್ತಿದ್ದ ಅವರು ಇದುವರೆಗೂ 20 ಪ್ಲಸ್‌ ಮೊತ್ತ ಬಾರಿಸಿಲ್ಲ.

ಮತ್ತೊಂದೆಡೆ ಮಿಸ್ಟರಿ ಸ್ಪಿನ್ನರ್‌ ವರಣ್‌ ಚಕ್ರವರ್ತಿ ಸ್ಪಿನ್‌ ಮೋಡಿ ನಡೆಯತ್ತಿಲ್ಲ. ಒಂದೆರಡು ಪಂದ್ಯ ಬಿಟ್ಟರೆ ಉಳಿದ ಪಂದ್ಯದಲ್ಲಿ ವಿಕೆಟ್‌ ಲೆಸ್‌ ಜತೆಗೆ ದುಬಾರಿಯಾಗಿದ್ದರು. ಸೂಪರ್ 8 ಹಂತದಿಂದ ಕೇವಲ 4 ವಿಕೆಟ್‌ಗಳನ್ನು ಮಾತ್ರ ಪಡೆದಿದ್ದಾರೆ ಮತ್ತು ಪ್ರತಿ ಓವರ್‌ಗೆ 11.62 ರನ್‌ಗಳನ್ನು ಬಿಟ್ಟುಕೊಡುತ್ತಿದ್ದಾರೆ. ಹೀಗಾಗಿ ಭಾರತ ಅಂತಿಮ ಪಂದ್ಯಕ್ಕೆ ತನ್ನ ಆಡುವ ಬಳಗದಲ್ಲಿ ಬದಲಾವಣೆ ಬಗ್ಗೆ ಚಿಂತಿಸುವ ಅಗತ್ಯವಿದೆ. ಅಭಿಷೇಕ್‌ ಶರ್ಮ ವೈಫಲ್ಯ ಕಂಡರೂ ಅವರನ್ನು ಫೈನಲ್‌ ಪಂದ್ಯದಿಂದ ಕೈಬಿಡುವ ಸಾಧ್ಯತೆ ಕಡಿಮೆ. ಆದರೆ ಬೌಲಿಂಗ್‌ ವಿಭಾಗದಲ್ಲಿ ಮಾತ್ರ ಬದಲಾವಣೆ ಖಚಿತ.

ಕುಲ್‌ದೀಪ್‌ಗೆ ಅವಕಾಶ

ದುಬಾರಿಯಾಗುತ್ತಿರುವ ವರುಣ್‌ ಚಕ್ರವರ್ತಿ ಬದಲು ಚೈನಾಮನ್‌ ಸ್ಪಿನ್ನರ್‌ ಕುಲ್‌ದೀಪ್‌ ಯಾದವ್‌ ಅವರನ್ನು ಕಣಕ್ಕಿಳಿಸುವ ಸಾಧ್ಯತೆ ಅಧಿಕ. ಹಾಲಿ ಆವೃತ್ತಿಯಲ್ಲಿ ಪಾಕ್‌ ವಿರುದ್ಧ ಏಕೈಕ ಪಂದ್ಯ ಆಡಿದ್ದ ಅವರು 14 ರನ್‌ 3 ವಿಕೆಟ್‌ ಕಿತ್ತಿದ್ದರು. ಟೀಮ್‌ ಮ್ಯಾನೆಜ್‌ಮೆಂಟ್‌ ಇದೀಗ ಈ ಅಸ್ತ್ರವನ್ನು ಫೈನಲ್‌ನಲ್ಲಿ ಕಣಕ್ಕಿಳಿಸುವ ಯೋಜನೆಯಲ್ಲಿದೆ. ಒಂದೊಮ್ಮೆ ಅರ್ಶ್‌ದೀಪ್‌ ಸಿಂಗ್‌ ಬದಲು ಮೊಹಮ್ಮದ್‌ ಸಿರಾಜ್‌ ಅವರನ್ನು ಆಡಿಸಿದರೂ ಅಚ್ಚರಿಯಿಲ್ಲ. ಸಿರಾಜ್‌ ಐಪಿಎಲ್‌ನಲ್ಲಿ ಗುಜರಾತ್‌ ತಂಡದ ಪರ ಆಡುವ ಕಾರಣ ಅವರಿಗೆ ಈ ಪಿಚ್‌ನಲ್ಲಿ ಆಡಿದ ಅಪಾರ ಅನುಭವವೂ ಇದೆ.

ಭಾರತ-ನ್ಯೂಜಿಲೆಂಡ್‌ ಟಿ20 ವಿಶ್ವಕಪ್‌ ಫೈನಲ್‌ ಪಂದ್ಯದ ಅಂಪೈರ್‌ಗಳ ಪಟ್ಟಿ ಪ್ರಕಟ

ಫೈನಲ್‌ ಪಂದ್ಯಕ್ಕೆ ಸಂಭಾವ್ಯ ತಂಡಗಳು

ಭಾರತ: ಅಭಿಷೇಕ್‌ ಶರ್ಮ, ಸಂಜು ಸ್ಯಾಮ್ಸನ್ (ವಿ.ಕೀ.), ಇಶಾನ್ ಕಿಶನ್, ಸೂರ್ಯಕುಮಾರ್ ಯಾದವ್ (ನಾಯಕ), ಶಿವಂ ದುಬೆ, ಹಾರ್ದಿಕ್ ಪಾಂಡ್ಯ, ತಿಲಕ್ ವರ್ಮಾ, ಅಕ್ಷರ್ ಪಟೇಲ್, ಅರ್ಶ್ದೀಪ್ ಸಿಂಗ್/ಮೊಹಮ್ಮದ್‌ ಸಿರಾಜ್‌, ಜಸ್ಪ್ರೀತ್ ಬುಮ್ರಾ, ವರುಣ್ ಚಕ್ರವರ್ತಿ/ಕುಲದೀಪ್ ಯಾದವ್.

ನ್ಯೂಜಿಲೆಂಡ್‌: ಟಿಮ್ ಸೀಫರ್ಟ್ (ವಿ.ಕೀ.), ಫಿನ್ ಅಲೆನ್, ರಾಚಿನ್ ರವೀಂದ್ರ, ಗ್ಲೆನ್ ಫಿಲಿಪ್ಸ್, ಮಾರ್ಕ್ ಚಾಪ್ಮನ್, ಡ್ಯಾರಿಲ್ ಮಿಚೆಲ್, ಜೇಮ್ಸ್ ನೀಶಮ್, ಮಿಚೆಲ್ ಸ್ಯಾಂಟ್ನರ್ (ನಾಯಕ), ಕೋಲ್ ಮೆಕ್‌ಕೊಂಚಿ, ಮ್ಯಾಟ್ ಹೆನ್ರಿ, ಲಾಕಿ ಫರ್ಗುಸನ್.